ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 27/04/2021

ಯಾದಗಿರ ಮಹಿಳಾ ಪೊಲೀಸ್ ಠಾಣೆ :- 31/2021 ಕಲಂ: 498(ಎ), 323, 504, 506,354 (ಎ), ಸಂ 149 ಐ.ಪಿ.ಸಿ : ಇಂದು ದಿನಾಂಕ: 26.04.2021 ರಂದು ಸಂಜೆ 5: 30 ಗಂಟೆಗೆ ಪಿರ್ಯಾದಿ ಶ್ರೀಮತಿ ಅನಿತಾ ಗಂಡ ಆಂಜನೇಯ ದಾಸರ್ ವಯಾ- 29 ಉ- ಕೂಲಿ ಕೆಲಸ ಜಾ- ದಾಸರ್ ಸಾ- ಹೆಡಗಿಮದ್ರಾ ತಾ- ಜಿ- ಯಾದಗಿರಿ ಹಾ.ವ ಕಲ್ಲದೇವನಳ್ಳಿ. ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂದರೆ 10 ವರ್ಷಗಳ ಹಿಂದೆ ಆಚಿಜನೇಯ ದಾಸರ್ ಈತನೊಂದಿಗೆ ಮದುವೆಯಾಗಿದ್ದು 8 ವರ್ಷದ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಮದುವೆಯಗಿ 2 ವರ್ಷ ನನ್ನ ಗಂಡ ಮತ್ತು ಗಂಡನ ಮನೆಯವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುವುದು ಹೊಡೆ ಬಡೆ ಮಾಡುವುದು ಅವಾಚ್ಯವಾಗಿ ಬೈಯಿವುದು ಮಾಡುತ್ತಿದ್ದರು ನನ್ನ ಮೈದುನಾ ನನ್ನ ಕೈ ಹಿಡಿದು ಬಾ ಅಂತಾ ಕರೆಯುತ್ತಿದ್ದನು ನಾನು ಕಿರುಕುಳದಿಂದ ಬೆಸತ್ತು 4 ವರ್ಷಗಳಿಂದ ತವರು ಮನೆಯಲ್ಲಿರುತ್ತೇನೆ. ದಿನಾಂಕ: 15.02.2021 ರಂದು ಬೆಳಿಗ್ಗೆ 11 ಗಂಟೆಗೆ ಈ ವಿಷಯವಾಗಿ ನಮ್ಮ ಹಿರಿಯರು ನ್ಯಾಯಾ ಪಂಚಾಯಿತಿ ಮಾಡಿದ್ದು ಆದರೆ ನನ್ನ ಗಂಡ ಮತ್ತು ಗಂಡ ಮನೆಯವರು ಇಲ್ಲಿಯವರೆಗು ಕರೆದುಕೊಂಡು ಹೋಗಿರುವುದಿಲ್ಲಾ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಖಿ ಕೈ ಹಿಡಿದು ಎಳೆದು ಅಪಮಾನ ಮಾಡಿದ ನನ್ನ ಗಂಡ ಮತ್ತು ಗಂಡ ಮನೆಯವರಿಗೆ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಠಾಣೆಯ ಗುನ್ನೆ ನಂ: 31/2021 ಕಲಂ: 498(ಎ), 323, 504, 506,354 (ಎ), ಸಂ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ :- 48/2021 ಕಲಂ:279,337, ಐಪಿಸಿ : ಇಂದು ದಿನಾಂಕ:26/04/2021 ರಂದು 2:30 ಪಿಎಮ್ ಕ್ಕೆ ಪಿಯರ್ಾದಿದಾರದ ಶ್ರೀ ಮರೆಪ್ಪ ತಂದೆ ಶಿವಪ್ಪ ಹೊಸಳ್ಳಿ, ವ:45, ಜಾ:ಬೇಡರು, ಉ:ಗೌಂಡಿಕೆಲಸ ಸಾ:ಹತ್ತಿಕುಣಿ, ತಾ/ಜಿಲ್ಲೆ: ಯಾದಗಿರಿ ಇದ್ದು, ಪೋಲಿಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿ ಸಲ್ಲಿಸಿದ ದೂರು ಅಜರ್ಿಯೇನಂದರೆ, ನಾನು ಗೌಂಡಿಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ದಿನಾಂಕ: 24/04/2021 ರಂದು 10:30 ಗಂಟೆ ಸುಮಾರಿಗೆ ಗುರುಸಣಗಿ ಕ್ರಾಸ ಹತ್ತಿರ ಇರುವ ಮಾರುತಿ ಶೋ ರೂಮ್ನಲ್ಲಿ ಕೂಲಿ ಕೆಲಸ ಮಾಡುವುದಕ್ಕೆ ನಮ್ಮೂರಿನಿಂದ ನನ್ನ ಮೋಟರ ಸೈಕಲ್ ನಂಬರ : ಕೆಎ: 33.ಆರ್ .1119 ನೇದ್ದರ ಮೇಲೆ ನಾನು ಮತ್ತು ನಮ್ಮೂರಿನ ದೇವಿಂದ್ರಪ್ಪ ತಂದೆ ಮಾಳಪ್ಪ ಇಬ್ಬರೂ ಹೋಗುತ್ತಿದ್ದವು. ನಾನು ಮೋಟರ ಸೈಕಲನು ಚಲಾಯಿಸಿಕೊಂಡು ಹೋಗುವಾಗ ನನ್ನ ಹತ್ತಿರ ಕೂಲಿ ಕೆಲಸ ಮಾಡುತ್ತಿದ್ದ ರವಿ ತಂದೆ ಇಂದ್ರದೇವ ಮತ್ತು ಮಹಾದೇವಪ್ಪ ತಂದೆ ಶಿವಣ್ಣ ಕರಡಿ ಇವರು ಗುರುಸಣಗಿ ಕ್ರಾಸ ಬಸ ನಿಲ್ದಾಣದ ಹತ್ತಿರ ನಿಂತಿದ್ದು ನಾನು ಅವರ ಬಳಿ 11-25 ಎಎಮ್ ಸುಮಾರಿಗೆ ಮಾತಾಡುತ್ತಾ ಕೂಲಿ ಕೆಲಸದ ಹಣ ಕೊಡುತ್ತಿದ್ದಾಗ ಯಾದಗಿರಿ-ಶಹಾಪೂರ ಮೇನ ರೋಡ ಗುರಸಣಗಿ ಕ್ರಾಸ ಹತ್ತಿರ ಶಹಾಪೂರು ಕಡೆಯಿಂದ ಬಂದ ಲಾರಿ ನಂಬರ ಕೆಎ-32-ಸಿ-8843 ನೇದ್ದರ ಚಾಲಕನಾದ ಬಸವರಾಜ ತಂದೆ ಸಿದ್ದಮಲ್ಲಯ್ಯಮಠ ಸಾ:ಕಡಲವಾಡ. ತಾ:ಸಿಂದಗಿ ಈತನು ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮಲೇ ಎಡಕ್ಕೆ ಕಟ್ ಹೊಡೆದರಿಂದ ಎಡ ಸೈಡಿಗೆ ನಿಂತಿದ್ದ ನನ್ನ ಮೋಟರ ಸೈಕಲ್ ನಂಬರ ಕೆಎ:33.ಆರ್.1119 ನೇದಕ್ಕೆ ಢಿಕ್ಕಿಪಡಿಸಿದರಿಂದ ಮೋಟರ ಸೈಕಲ್ನ ಎರಡು ಗಾಲಿಗಳು ಜಖಂಗೊಡಿರುತ್ತೆವೆ. ಅಪಘಾತದಲ್ಲಿ ನನಗೆ ಎಡಕಾಲಿಗೆ ಮತ್ತು ಬೆನ್ನಿಗೆ ತರಚಿದ ಸಣ್ಣಪುಟ್ಟ ಗಾಯಗಳು ಆಗಿದ್ದವು. ನನ್ನ ಜೊತೆ ಮಾತಾಡುತ್ತಾ ನಿಂತಿದ್ದ ರವಿ ತಂದೆ ಇಂದ್ರದೇವನಿಗೆ ಎರಡು ಕಾಲಿನ ಹಿಮ್ಮಡಿಗಳಿಗೆ ಮತ್ತು ಬಲಗೈಗೆ ತರಚಿದ ರಕ್ತ ಗಾಯಗಳು ಆಗಿದ್ದವು. ದೇವಿಂದ್ರ ತಂದೆ ಮಲ್ಲಪ್ಪ ನಾಟೇಕಾರ ಈತನಿಗೆ ಎಡಗಾಲಿನ ಹಿಮ್ಮಡಿಗೆ ಮತ್ತು ಎಡಗೈಗೆ ತರಚಿದ ರಕ್ತಗಾಯ ಹಾಗೂ ಬೆನ್ನಗೆ ಒಳಪೆಟ್ಟಾಗಿದ್ದವು. ಮತ್ತು ಮಹಾದೇವಪ್ಪ ತಂದೆ ಶಿವಪ್ಪ ಕರಡಿ ಈತನಿಗೆ ಬಲಗಾಲಿನ ಹಿಮ್ಮಡಿ ಮತ್ತು ಎರಡು ಕಾಲಿಗೆ ತರಚಿದ ರಕ್ತ ಗಾಯಗಳು ಆಗಿದವು. ನಂತರ ಅವರು ಮೂರು ಜನ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇಲ್ಲಿನ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ಕೇಸು ಕೊಡುವುದಿದ್ದರೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಲಾರಿಯನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿಪಡಿಸಿ ಸಾದಾ ಗಾಯಗಳನ್ನು ಮಾಡಿದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 48/2021 ಕಲಂ:279,337, ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ :- 42/2020 498(ಎ), 323, 307, 504, 506 ಸಂ: 34 ಐಪಿಸಿ : ಇಂದು ದಿನಾಂಕ: 26/04/2021 ರಂದು 07.30 ಪಿಎಂ ಕ್ಕೆ ಶ್ರೀಮತಿ ಸುಶಿಲಾಬಾಯಿ ಗಂಡ ರೂಪಸಿಂಗ್ ಚವ್ಹಾಣ ವಯಾ:35 ವರ್ಷ ಉ: ಕೂಲಿ ಕೆಲಸ ಜಾ: ಲಂಬಾಣಿ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಲಿಖಿತ ದೂರು ಅಜರ್ಿ ಹಾಜರ ಪಡೆಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಾನು ಸುಶಿಲಾಬಾಯಿ ಗಂಡ ರೂಪಸಿಂಗ್ ಚವ್ಹಾಣ ವಯಾ:35 ವರ್ಷ ಉ: ಕೂಲಿ ಕೆಲಸ ಜಾ: ಲಂಬಾಣಿ ಸಾ:ಹೋಸ್ಕೇರಾ ಟಾಕಿ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಇದ್ದು ಈ ಮೂಲಕ ಅಜರ್ಿ ನೀಡುವುದೇನಂದರೆ, ನನ್ನ ತವರು ಮನೆ ಕನ್ಯಾಕೋಳೂರ ಮಾನಸಿಂಗ್ನಾಯ್ಕ ತಾಂಡಾದಲ್ಲಿ ಇದ್ದು, ನನಗೆ ಸುಮಾರು 15 ವರ್ಷಗಳ ಹಿಂದೆ ಹೋಸ್ಕೆರಾ ಟಾಕಿ ತಾಂಡಾದ ರೂಪಸಿಂಗ್ ತಂದೆ ತಿಪ್ಪಣ್ಣ ಚವ್ಹಾಣ ಇವರೊಂದಿಗೆ ಮದುವೆ ಮಾಡಿ ಕೊಟ್ಟಿದ್ದು, ನನಗೆ ಐಶ್ವರ್ಯ 10 ವರ್ಷ, ಆರತಿ 8 ವರ್ಷ, ದರ್ಶನ 6 ವರ್ಷ ಮತ್ತು ಅಜರ್ುನ 4 ವರ್ಷ, ಹೀಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನ ಮನೆಯಲ್ಲಿ ನನ್ನ ಗಂಡ ರೂಪಸಿಂಗ್, ಮೈದುನ ಗುರುನಾಥ, ಇನ್ನೊಬ್ಬ ಮೈದುನ ಕುಮಾರ, ಅತ್ತೆಯಾದ ಸೋನಾಬಾಯಿ, ನಾದನಿಯಾದ ಲಕ್ಷ್ಮೀಬಾಯಿ ಎಲ್ಲರೂ ಕೂಡಿ ಇದ್ದು, ನನ್ನ ಗಂಡನು ಸ್ವಲ್ಪ ಎಥಾರ್ತ ಇರುತ್ತಾನೆ. ನನ್ನ ನಾದನಿ ಮತ್ತು ಮೈದುನ ಹಾಗೂ ನಮ್ಮ ಅತ್ತೆಯವರು ನನಗೆ ಇತ್ತಿಚಗೆ ಸುಮ್ಮ ಸುಮ್ಮನೆ ಬೈಯುವದು, ನೀನು ಏನು ಸಂಸಾರ ಮಾಡತಿ ರಂಡಿ ಅಂತಾ ನಮ್ಮ ನಾದನಿ ಮತ್ತು ಮೈದನರು ನನಗೆ ಬೈಯುತ್ತಿದ್ದರು. ಅದಕ್ಕೆ ನಾನು ನಿಮ್ಮ ಕಾಟ ಸಾಕಾಗಿದೆ ಅಂತಾ 15 ದಿನಗಳಿಂದ ನಾನು ನನ್ನ ಗಂಡ ನಮ್ಮ ಇದ್ದ ಮನೆಯಲ್ಲಿಯೇ ಬೇರೆ ಅಡುಗೆ ಮಾಡಿ ಊಟ ಮಾಡುತ್ತಿದ್ದೆವು. ಹೀಗಿದ್ದು ದಿನಾಂಕ:24/04/2021 ರಂದು ಸಾಯಂಕಾಲ 06.00 ಪಿಎಂ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನಮ್ಮ ಅತ್ತೆ ಸೋನಾಬಾಯಿ ಗಂಡ ತಿಪ್ಪಣ್ಣ ಮತ್ತು ನಮ್ಮ ನಾದನಿ ಲಕ್ಷ್ಮೀಬಾಯಿ ಗಂಡ ರಾಮು ಇವರುಗಳು ನನಗೆ ಬೋಸಡಿ ಈಗ ಯಾಕೆ ಅಡುಗೇ ಮಾಡುತ್ತಿ ನಾವು ಮಾಡಿದ ಮೇಲೆ ಮಾಡಿಕೊ ಸೂಳಿ ಅಂತಾ ಬೈಯತೊಡಗಿದರು, ಆಗ ನಾನು ನನ್ನ ಸಣ್ಣ ಮಕ್ಕಳು ಹಸಿದಿದ್ದಾವ ಅದಕ್ಕೆ ನಾನು ಮೊದಲು ಅಡುಗೆ ಮಾಡಿಕೊಳ್ಳುತ್ತೇನೆ ಅಂತಾ ಅಂದು ಅಡುಗೆ ಮಾಡುತ್ತಿದ್ದಾಗ, ನನ್ನ ಅತ್ತೆ ಸೂನಾಬಾಯಿ ಇವಳು ಬೋಸಡಿ ಇವಳದು ಬಹಳ ಆಗಿದೆ ಅನ್ನುತ್ತಿದ್ದಾಗ ಲಕ್ಷ್ಮೀ ಮತ್ತು ಕುಮಾರ ಇವರು ನನಗೆ ಕೈಯಿಂದ ಬೆನ್ನಿಗೆ ಹೊಡೆದರು. ಆಗ ನನ್ನ ಇನ್ನೊಬ್ಬ ಮೈದುನನಾದ ಗುರುನಾಥ ಈತನು ರಂಡಿ ನೀನು ಏನು ಗಳಸೀದಿ ಅಂತಾ ಬೇರೆ ಸಂಸಾರ ಮಾಡುತ್ತಿ ಅಂತಾ ನನಗೆ ಕೈಯಿಂದ ಬೆನ್ನಿಗೆ ಹೊಡೆಯ ತೊಡಗಿದ ಆಗ ನಾನು ಏಳಬೇಕು ಅಂತಾ ಏಳುತ್ತಿದ್ದಾಗ ನನಗೆ ಕೊಲೆ ಮಾಡುವ ಉದ್ದೇಶದಿಂದ ಗುರುನಾಥ ಈತನು ಉರಿಯುತ್ತಿರುವ ಒಲೆಯಲ್ಲಿ ದಬ್ಬಿದನು, ಆಗ ನನ್ನ ಮೈಗೆ ಬೆಂಕಿ ಹತ್ತಿ ನನ್ನ ಎಡಗೆಡೆಯ ಬೆನ್ನು ಮತ್ತು ಬುಜಕ್ಕೆ ಸುಟ್ಟ ಗಾಯವಾಯಿತು. ನಾನು ಅಳುತ್ತಾ ನಮ್ಮ ಮನೆಯಲ್ಲಿ ಬೆಂಕಿ ಆರಿಸಿಕೊಂಡೆನು. ಆಗ ನನ್ನ ನಾದನಿ ಲಕ್ಷ್ಮೀ ನಮ್ಮ ಅತ್ತೆ ಸೋನಿಬಾಯಿ ಮತ್ತು ನನ್ನ ಇನ್ನೊಬ್ಬ ಮೈದುನ ಕುಮಾರ ಇವರುಗಳು ನೀನು ಚಿರಾಡುವದು ಮಾಡದೆ ಸುಮ್ಮನೆ ಮನೆಯಲ್ಲಿ ಇರು ಇಲ್ಲ ಅಂದರೆ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿದರು ಅದಕ್ಕೆ ಅಂಜಿ ಸುಮ್ಮನಿದ್ದೇನು. ನನಗೆ ಸುಟ್ಟ ಗಾಯ ಬಹಳ ತ್ರಾಸ್ ಆಗಿದ್ದರಿಂದ ಇಂದು ದಿನಾಂಕ:26/04/2021 ರಂದು ನನ್ನ ತಾಯಿ ಸೋನಿಬಾಯಿ ಗಂಡ ಶಂಕರ ರಾಠೋಡ, ನನ್ನ ತಂದೆಯಾದ ಶಂಕರ ತಂದೆ ರತ್ನುನಾಯ್ಕ ರಾಠೊಡ ಇವರಿಗೆ ಪೋನ ಮಾಡಿ ಘಟನೆಯ ವಿಷಯ ತಿಳಿಸಿದೆನು. ನಂತರ ನನ್ನ ತಾಯಿ, ನನ್ನ ತಂದೆಯವರು ಮತ್ತು ನಮ್ಮ ಚಿಕ್ಕಪ್ಪ ತಾರಾಸಿಂಗ್ ತಂದೆ ರತ್ನುನಾಯ್ಕ ರಾಠೋಡ, ಮತ್ತು ಚಿಕ್ಕಪ್ಪನ ಮಗ ಸಂಗಪ್ಪ ತಂದೆ ತಾರಾಸಿಂಗ್ ರಾಠೋಡ ಇವರುಗಳು ಬಂದು ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಸೇರಿಕೆ ಮಾಡಿದರು. ನನಗೆ ನಮ್ಮ ಅತ್ತೆ, ನಾದನಿ, ಮೈದುನರು ಜೀವಧ ಭಯ ಹಾಕಿದ್ದರಿಂದ ಅಂಜಿ ತಡವಾಗಿ ನಮ್ಮ ತಂದೆಯವರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಇಂದು ದಿನಾಂಕ: 26/04/2021 ರಂದು 07.30 ಪಿಎಂ ಕ್ಕೆ ಗೋಗಿ ಪೊಲೀಸ್ ಠಾಣೆಗೆ ಬಂದು ಈ ದೂರು ಅಜರ್ಿ ನಿಡಿರುತ್ತೇವೆ. ಕಾರಣ ನನಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆದು, ಕೀರುಕುಳ ನೀಡಿ, ಕೊಲೆ ಮಾಡುವ ಉದ್ದೇಶದಿಂದ ಬೆಂಕಿಯಲ್ಲಿ ದಬ್ಬಿ ಕೋಲೆ ಮಾಡಲು ಪ್ರಯತ್ನಿಸಿ, ಜೀವ ಭಯ ಹಾಕಿದ ನನ್ನ ಅತ್ತೆ, ಮೈದನರು ಮತ್ತು ನಾದನಿಯ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಾನ್ಯರವರಲ್ಲಿ ವಿನಂತಿ ಆಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 42/2021 ಕಲಂ: 498(ಎ), 323, 307, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 26/2021 ಕಲಂ 279 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 26/04/2021 ರಂದು 10-30 ಪಿ.ಎಂ.ಕ್ಕೆ ಫಿಯರ್ಾದಿ ಶ್ರೀ ಮಹಮದ್ ಏಜಾಜ್ ತಂದೆ ಮಹಮದ್ ಅಖ್ತರ್ ದಜರ್ಿ ವಯ;29 ವರ್ಷ, ಜಾ;ಮುಸ್ಲಿಂ, ಉ;ವ್ಯಾಪಾರ, ಸಾ;ಡಬೀರ ಕಾಲನಿ, ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ಪಿಯರ್ಾದು ಕೊಟ್ಟಿದ್ದು, ಪಿಯರ್ಾದಿ ನೀಡಿದ ಅಜರ್ಿಯ ಸಾರಾಂಶವೇನೆಂದರೆ ನಾನು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ಇಂದು ದಿನಾಂಕ 26/04/2021 ರಂದು ಸಾಯಂಕಾಲ 8-30 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತನಾದ ಎಂ.ಡಿ. ಅಲ್ಲಾವುದ್ದೀನ್ ತಂದೆ ಮಹಮದ್ ನೂರುದ್ದೀನ್ ಇಬ್ಬರು ಸೇರಿಕೊಂಡು ಹತ್ತಿಕುಣಿ ಕ್ರಾಸ್ ಹತ್ತಿರ ಎಂ.ಡಿ.ಅಲ್ಲಾವುದ್ದೀನ್ ಇವರಿಗೆ ಸೇರಿದ ಕಾರ್ ನಂಬರ ಕೆಎ-33, ಎ-9676 ನೇದ್ದರ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ನನ್ನ ಸ್ನೇಹಿತನಾದ ಮುಜೀಬ ರೆಹಮಾನ್ ತಂದೆ ಮಹಮದ್ ಇಬ್ರಾಹಿಂ ಚೌದ್ರಿ ಸಾ;ಯಾದಗಿರಿ ಇವರು ಬಂದು ನಮಗೆ ತಿಳಿಸಿದ್ದೇನೆಂದರೆ ನಮ್ಮ ಅಂಗಡಿಗೆ ಸಿಮೆಂಟ್ ಬರುವ ಲಾರಿ ರಾಮಸಮುದ್ರಕ್ಕೆ ಬಂದಿದ್ದು, ಅಲ್ಲಿಂದ ಲಾರಿಯನ್ನು ಯಾದಗಿರಿಗೆ ಕರೆತರಲು ನಾನು ಇಬ್ಬರು ಲೇಬರನ್ನು ಕರೆದುಕೊಂಡು ರಾಮಸಮುದ್ರಕ್ಕೆ ಹೋಗಿ ಲಾರಿ ಹತ್ತಿರ ಬಿಟ್ಟು ಬಂದಲ್ಲಿ ಅಲ್ಲಿಂದ ಲಾರಿಯನ್ನು ಕರೆದುಕೊಂಡು ನಮ್ಮ ಅಂಗಡಿಗೆ ಬರುತ್ತಾರೆ ನಡೀರಿ ನಿಮ್ಮ ಕಾರನ್ನು ತೆಗೆದುಕೊಂಡು ಹೋಗಿ ನಮ್ಮ ಲೇಬರನ್ನು ಅಲ್ಲಿ ಬಿಟ್ಟು ಬರೋಣ ಅಂತಾ ಅಂದಾಗ ಅದಕ್ಕೆ ನಾವಿಬ್ಬರು ಎಂ.ಡಿ. ಅಲ್ಲಾವುದ್ದೀನ್ ಇವರ ಕಾರ್ ನಂಬರ ಕೆಎ-33, ಎ-9676 ನೇದ್ದನ್ನು ತೆಗೆದುಕೊಂಡು ಅವರ ಇಬ್ಬರ ಲೇಬರನ್ನು ಅದೇ ಕಾರಿನಲ್ಲಿ ಕರೆದುಕೊಂಡು ಹೊರಟೆವು. ಕಾರನ್ನು ಎಂ.ಡಿ.ಅಲ್ಲಾವುದದ್ದೀನ್ ಈತನು ಚಾಲನೆ ಮಾಡಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ ಮೈಲಾಪುರ ಅಗಸಿ ದಾಟಿದ ನಂತರ ರಾಯಚೂರುಕರ್ ಆಸ್ಪತ್ರೆ ಹತ್ತಿರ ನಾವು ನೋಡು ನೋಡುತ್ತಿದ್ದಂತೆ ರಾಯಚೂರಕರ್ ಆಸ್ಪತ್ರೆ ಕಡೆಗೆ ಹೋಗುವ ರಸ್ತೆಯಿಂದ ಒಂದು ಟ್ರ್ಯಾಕ್ಟರ್ ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನಲ್ಲಿ ಪುಲ್ ಉಸುಕು ಲೋಡನ್ನು ತುಂಬಿಕೊಂಡು ಟ್ರ್ಯಾಕರನ್ನು ಮುಖ್ಯ ರಸ್ತೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಕಾರಿಗೆ ಡಿಕ್ಕಿಪಡಿಸಿದ್ದು ಈ ಅಪಘಾತದಲ್ಲಿ ನಮ್ಮ ಕಾರಿನಲ್ಲಿದ್ದವರಿಗೆ ಮತ್ತು ಟ್ರ್ಯಾಕ್ಟರನಲ್ಲಿದ್ದ 3-4 ಜನರಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ. ನಮ್ಮ ಕಾರ್ ಮುಂಭಾಗ ಜಖಂ ಆಗಿರುತ್ತದೆ. ಈ ಅಪಘಾತವು ಇಂದು ದಿನಾಂಕ 26/04/2021 ರಂದು ರಾತ್ರಿ 9 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ನಮಗೆ ಅಪಘಾತಪಡಿಸಿದ ಟ್ರ್ಯಾಕ್ಟರ್ ಇಂಜಿನ್ ನಂಬರ ಕೆಎ-33, ಟಿಎ-1846 ಹಾಗೂ ಅದರ ಟ್ರ್ಯಾಲಿ ನಂಬರ ಕೆಎ-33, ಟಿ-1847 ನೇದ್ದು ಅದರ ಚಾಲಕನು ಅಪಘಾತದ ನಂತರ ನಮ್ಮನ್ನು ನೋಡಿ ಓಡಿ ಹೋಗಿರುತ್ತಾನೆ. ಆತನನ್ನು ನಾವು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಹೀಗಿದ್ದು ಇಂದು ದಿನಾಂಕ 26/04/2021 ರಂದು ರಾತ್ರಿ 9 ಪಿ.ಎಂ.ಕ್ಕೆ ಯಾದಗಿರಿ ನಗರದ ಗಾಂಧಿಚೌಕ್-ಗಂಜ್ ಮುಖ್ಯ ರಸ್ತೆಯ ಮೇಲೆ ಬರುವ ರಾಯಚೂರುಕರ್ ಆಸ್ಪತ್ರೆಯ ಸಮೀಪ ಮುಖ್ಯ ರಸ್ತೆ ಮೇಲೆ ಟ್ರ್ಯಾಕ್ಟರ್ ಇಂಜಿನ್ ನಂಬರ ಕೆಎ-33, ಟಿಎ-1846 ಹಾಗೂ ಅದರ ಟ್ರ್ಯಾಲಿ ನಂಬರ ಕೆಎ-33, ಟಿ-1847 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನಮ್ಮ ಕಾರ್ ನಂಬರ ಕೆಎ-33, ಎ-9676 ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಆತನ ಮೇಲೆ ಕಾನುನು ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 26/2021 ಕಲಂ 279 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 28-04-2021 01:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080