Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/03/2021

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:- ಪಿ.ಎ.ಆರ್.ನಂ: 08/2021 ಕಲಂ 151, 110 (ಎ) ಸಿ.ಆರ್.ಪಿ.ಸಿ : ದಿನಾಂಕ 27-03-2021 ರಂದು ಮಧ್ಯರಾತ್ರಿ 3-15 ಗಂಟೆಸುಮಾರಿಗೆ ಫಿರ್ಯಾಧಿದಾರರು ರಾತ್ರಿ ಗಸ್ತ ಚಕ್ಕಿಂಗ್ ಕರ್ತವ್ಯದಲ್ಲಿದ್ದ ಸಮಯದಲ್ಲಿ ಮುಂಡ್ರಗಿ ಸಕ್ರ್ಯಾ ನಾಯಕ ತಾಂಡಾಕ್ಕೆ ಬೇಟಿ ಕೊಟ್ಟಾಗ ಆ ವೇಳೆಯಲ್ಲಿ ಹಳೇ ಗುನ್ನೆಗಾರನಾದ ಆರೋಪಿ ಚಿನ್ನ್ಯಾ ತಂದೆ ಸಕ್ರ್ಯಾ ಚವ್ಯಾಣ ವಯಾ: 45 ಉ:ಕೂಲಿ ಜಾ: ಲಂಬಾಣಿ ಸಾ: ಮುಂಡ್ರಗಿ ಸಕ್ರ್ಯಾ ನಾಯಕ ತಾಂಡಾ ಇತನು ತಾಂಡಾದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಅವನಿಗೆ ಯಾಕೇ ತಿರುಗಾಡುತ್ತಿದ್ದಿ ಅಂತಾ ವಿಚಾರಿಸಿದಾಗ ಅವನು ಸಮಂಜಸವಾದ ಉತ್ತರ ಕೊಡದೇ ಇದ್ದಾಗ ಮತ್ತು ಇವನು ಈ ಮೊದಲು ಸ್ವತ್ತಿನ ಗುನ್ನೆಯಲ್ಲಿ ಭಾಗಿಯಾಗಿದ್ದರಿಂದ ಅವನು ವಿರುದ್ದ ಠಾಣೆಯಲ್ಲಿ ಎಮ್.ಓ.ಬಿ ಕಾರ್ಡ ತೆರೆದಿಟ್ಟಿದ್ದು ಅವನ ಚಟುವಟಿಗೆಳ ಮೇಲೆ ನಿಗಾ ಇಡುತ್ತಾ ಬಂದಿದ್ದು ಇರುತ್ತದೆ. ಇವನನ್ನು ಹೀಗೆ ಬಿಟ್ಟಲ್ಲಿ ಮತ್ತೆ ಯಾವುದಾದರೂ ಸ್ವತ್ತಿನ ಅಪರಾಧ ಮಾಡುತ್ತಾನೆ ಮತ್ತು ಇವನು ಚಾಳಿ ಬಿದ್ದ ಆರೋಪಿತನಿದ್ದಾನೆ ಅಂತಾ ಬಲವಾದ ಸಂಶಯ ಬಂದಿದ್ದರಿಂದ ಅವನನ್ನು ಮುನ್ನಚ್ಚರಿಕೆ ಕ್ರಮಕ್ಕಾಗಿ ನಮ್ಮ ವಷಕ್ಕೆ ಪಡೆದುಕೊಂಡು ಬೆಳಗಿನ ಜಾವ 4-15 ಎ.ಎಮ್ ಕ್ಕೆ ಠಾಣೆಗೆ ಬಂದು ಠಾಣೆ ಪಿ.ಎ.ಆರ್ ನಂ: 08/2021 ಕಲಂ 151, 110 (ಎ) ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂ:41/2021 ಕಲಂ; 420, ಐಪಿಸಿ: ಇಂದು ದಿನಾಂಕ;27/03/2021 ರಂದು 12-30 ಪಿಎಮ್ ಕ್ಕೆ ಶ್ರೀ ಹೊನ್ನಪ್ಪ@ ಸಣ್ಣ ಹೊನ್ನಪ್ಪ ತಂದೆ ತಿಮ್ಮಯ್ಯ ನಾಟೇಕಾರ ವ;56 ಜಾ; ಹೊಲೆಯ ಉ; ಒಕ್ಕಲುತನ ಸಾ; ಯಡ್ಡಳ್ಳಿ ತಾ; ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಜನೇವರಿ/2021 ನೇ ತಿಂಗಳ ದಿನಪತ್ರಿಕೆಯಲ್ಲಿ ಆರ್.ಟಿ.ಸಿ ಲೋನ ಕೊಡಿಸುವುದಾಗಿ ನೀಡಿದ ಜಾಹಿರಾತಿನಲ್ಲಿರುವ ಮೊಬೈಲ ನಂಬರ.9353794878 ನೇದ್ದಕ್ಕೆ ನಾನು ದಿನಾಂಕ; 12/01/2021 ರಂದು ಫೋನ ಮಾಡಿದಾಗ ಫೋನಿನಲ್ಲಿ ಮಾತನಾಡಿದ ವ್ಯಕ್ತಿಯು ನಾನು ಶಶಿಕುಮಾರ ಬಿಸಿನೆಸ್ ಡೆವಲಪಮೆಂಟ್ ಆಫೀಸರ್ ಅಂತಾ ಇದ್ದು ವಿವಿಧ ತರಹದ ಲೋನಗಳನ್ನು ಕೊಡುತ್ತೇವೆ ಅಂತಾ ತಿಳಿಸಿದನು. ನಾನು ಕ್ರಾಪ ಲೋನ ಬಗ್ಗೆ ವಿಚಾರಿಸಲು 5,00,000/-ರೂ ದಿಂದ 10,00,000/-ರೂ. ವರೆಗೆ ಲೋನ ಕೊಡುತ್ತೇವೆಂದು ಹೇಳಿ ದಾಖಲಾತಿಗಳನ್ನು ಕಳಿಸುವಂತೆ ತಿಳಿಸಿದ್ದರಿಂದ ಮೊಬೈಲ ಮುಖಾಂತರ ಆರ್.ಟಿ.ಸಿ ಮತ್ತು ಎಲ್ಲಾ ದಾಖಲಾತಿಗಳನ್ನು ಕಳಿಸಿರುತ್ತೇವೆ. ನಂತರ ಲೋನ ಮಂಜೂರಾತಿಗಾಗಿ ಬಾಂಡ್ ಮತ್ತು ಈತರೆ ಖಚರ್ಿಗಾಗಿ ಅವರು ಹೇಳಿದಂತೆ ಆಗಾಗ ಯಾದಗಿರಿಯ ಕಾಪರ್ೋರೇಷನ್ ಬ್ಯಾಂಕದಿಂದ ಒಟ್ಟು 69,430/-ರೂ. ಗಳನ್ನು ಕೋಟೆಕ್ ಮಹಿಂದ್ರಾ ಬ್ಯಾಂಕಗೆ ಓಇಈಖಿ ಮುಖಾಂತರ ಜಮಾ ಮಾಡಿರುತ್ತೇನೆ. ನಂತರ ಮೊಬೈಲ ನಂ.8860034231, 9019074935 ನೇದ್ದವುಗಳಿಂದ ಮಹಾದೇವ ತಂದೆ ಅಂಕಯ್ಯ ಇವರು ಫೋನ ಮಾಡಿ ನಾನು ಪ್ರಧಾನಮಂತ್ರಿ ಜನಧನ್ ಯೋಜನೆಯ ಕಸ್ಟಮರ್ ಎಗ್ಜಿಕ್ಯೂಟಿವ್ ಆಫೀಸರ್ ಇದ್ದು ನಿಮ್ಮ ಕ್ರಾಪಲೋನ ಬೇಗ ಮಾಡಿಸುತ್ತೇನೆ ಜನಧನ ಯೋಜನೆಯ ಬಾಂಡ ಮತ್ತು ಈತರೆ ಖಚರ್ಿಗಾಗಿ 49,000/- ರೂ. ಗಳನ್ನು ಐಸಿಐಸಿಐ ಬ್ಯಾಂಕ ಖಾತೆಗೆ ಜಮಾ ಮಾಡಿರುತ್ತೇನೆ. ಒಟ್ಟು 1,18,430/-ರೂ. ಗಳನ್ನು ಜಮಾ ಮಾಡಿರುತ್ತೇವೆ. ನಂತರ ಶಶಿಕುಮಾರ ಈತನು ನಿಮ್ಮ ಫಾಸಬುಕ್ ಮತ್ತು ಎ.ಟಿ.ಎಮ್ ಗಳನ್ನು ಹುಬ್ಬಳ್ಳಿಗೆ ಕಳಿಸುವಂತೆ ತಿಳಿಸಿದ್ದರಿಂದ ನಾನು ದಿನಾಂಕ; 12/03/2021 ರಂದು ನನ್ನ ಬ್ಯಾಂಕ್ ಫಾಸಬುಕ್ ಮತ್ತು ಎ.ಟಿ.ಎಮ್ ಗಳನ್ನು ಕಳಿಸಿಕೊಟ್ಟಿರುತ್ತೇನೆ. ದಿನಾಂಕ; 13/03/2021 ರಂದು ಫಾಸಬುಕ್ ಮತ್ತು ಎ.ಟಿ.ಎಮ್ ತೆಗೆದುಕೊಂಡು ಎ.ಟಿ.ಎಮ್ ಪೀನ ನಂಬರ ಕೇಳಿದನು. ಆಗ ನಾನು ಎ.ಟಿ.ಎಮ್ ಪೀನ ನಂಬರ ಕೊಡುವುದಿಲ್ಲ ಅಂತಾ ತಿಳಿಸಿದೆನು. ನಂತರ 2-3 ದಿನಗಳ ಆದ ಮೇಲೆ ನಾನು ಶಶಿಕುಮಾರ ಈತನಿಗೆ ಫೋನ ಮಾಡಲು ಆತನ ಮೊಬೈಲ ನಂಬರ ಸ್ವೀಚಆಫ್ ಆಗಿತ್ತು. ದಿನಾಂಕ;24/03/2021 ರಂದು ಹುಬ್ಬಳ್ಳಿ ಸೈಬರ ಕ್ರೈಂ ಪೊಲೀಸರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮ ಠಾಣೆಯಲ್ಲಿ ಗುನ್ನೆ ನಂ.49/2021 ಪ್ರಕರಣ ದಾಖಲಾಗಿದ್ದು ಈ ಪ್ರಕರಣದಲ್ಲಿಯ ಆರೋಪಿತನ ಹತ್ತಿರ ನಿಮ್ಮ ಫಾಸಬುಕ್ ಮತ್ತು ಎ.ಟಿ.ಎಮ್ ಕಾರ್ಡ ಸಿಕ್ಕಿರುತ್ತವೆ ಅಂತಾ ತಿಳಿಸಿರುತ್ತಾರೆ. ಆಗ ನನಗೆ ತಿಳಿದು ಬಂದಿದ್ದೆನಂದರೆ, ನನಗೆ ಕ್ರಾಪ ಲೋನ ಮಾಡಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದ ಇದೇ ವ್ಯಕ್ತಿಯ ವಿರುದ್ದ ಹುಬ್ಬಳ್ಳಿ ಸೈಬರ ಕ್ರೈಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆದ ಕಾರಣ ನನಗೆ ಕ್ರಾಪ ಲೋನ ಕೊಡಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದುಕೊಂಡು ಮೋಸ ಮಾಡಿದ ಶಶಿಕುಮಾರ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.41/2021 ಕಲಂ.420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ :- ಗುನ್ನೆ ನಂ: 42/2021 ಕಲಂ 78(3) ಕೆ.ಪಿ ಎಕ್ಟ್ 1963 :ಇಂದು ದಿನಾಂಕ; 27/03/2021 ರಂದು 3-30 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.27/03/2021 ರಂದು 1-45 ಪಿಎಂಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಲ್ಮೀಕಿ ನಗರದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಇಂದು ದಿನಾಂಕ. 27/03/2021 ರಂದು 3-15 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 3-30 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.42/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಆರೋಪಿತರಿಂದ 1)7200-00 ರೂ. ನಗದು ಹಣ. 2) ಮೂರು ಮಟಕಾ ಚೀಟಿ ಅಂ.ಕಿ.00=00 ರೂ. 3) ಮೂರು ಬಾಲಪೆನ ಅಂ.ಕಿ.00=00 ರೂ. ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :- 50/2021 ಕಲಂ. 143. 147, 323, 341, 354, 504, 506 ಸಂಗಡ 149 ಐಪಿಸಿ:ಇಂದು ದಿನಾಂಕ 27.03.2021 ರಂದು ಮಧ್ಯಾಹ್ನ 01.00 ಗಂಟೆಗೆ ಶ್ರೀಮತಿ ಲಕ್ಷ್ಮೀ ಗಂಡ ಅಂಜಪ್ಪ ರಾಮಕ್ಕೋಲ್ ವಯ|| 35 ವರ್ಷ, ಜಾ|| ಮಾದಿಗ ಉ|| ಕೂಲಿಕೆಲಸ ಸಾ|| ಇಡ್ಲೂರ ತಾ|| ಗುರುಮಠಕಲ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿ ಸಾರಾಂಶವೇನೆಂದರೆ, ದಿನಾಂಕ. 22.03.2021 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಆಕೆಯ ಚಿಕ್ಕಮ್ಮ ಕಿಷ್ಟಮ್ಮಳಿಗೆ ಆರೋಪಿತರೆಲ್ಲರೂ ಸೇರಿಕೊಂಡು ಬಾಯಿಗೆ ಬಂದಂತೆ ರಂಡೇರೇ, ಸೂಳೇರೇ ಅಂತ ಬೈದಿರುವದಲ್ಲದೇ, ಫಿಯರ್ಾದಿಗೆ ಜಾಡಿಸಿ ದಬ್ಬಿಸಿಕೊಟ್ಟಿದ್ದು, ಬಲಗಣ್ಣಿನ ಹತ್ತಿರ, ಹಣೆಗೆ, ಎಡಗೈ ಅಂಗೈ ಕೆಳಗೆ ರಕ್ತಗಾಯಪಡಿಸಿದ್ದು, ಕಿಷ್ಟಮ್ಮಳಿಗೆ ತಡೆದು ನಿಲ್ಲಿಸಿ, ಕೈಹಿಡಿದು ಎಳೆದಾಡಿ ಅವಮಾನ ಮಾಡಿ ದಬ್ಬಿಸಿಕೊಟ್ಟಿದ್ದು, ಬಲಗಾಲಿನ ಮೊಳಕಾಲಿಗೆ ಪೆಟ್ಟು ಮಾಡಿದ್ದು, ಅಲ್ಲಿಂದ ಎಲ್ಲರೂ ಹೋಗುವಾಗ ಇವತ್ತು ನಮ್ಮ ಕೈಯಲ್ಲಿ ಉಳಿದಿದ್ದೀರಿ ಸೂಳೇರೆ ಇನ್ನೊಮ್ಮೆ ಸಿಕ್ಕರೇ ಇಲ್ಲಿಯೇ ಖಲಾಸ ಮಾಡುತ್ತೇವೆ ಅಂತ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ಸಾರಾಂಶ ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ:- ಗುನ್ನೆ ನಂ. 46/2021 ಕಲಂ 379 ಐಪಿಸಿ ಪಿಸಿ : ಇಂದು ದಿನಾಂಕ 27.03.2021 ರಂದು ಸಮಯ ಬೆಳಿಗ್ಗೆ 9:00 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ 1]ಮಹಿಂದ್ರ ಭೂಮಿಪುತ್ರ ಟ್ರ್ಯಾಕ್ಟರ ಇಂಜನ ನೊಂದಣಿ ಸಂಖ್ಯೆ ಟಿ.ಎಸ್-06-ಇ.ಡಿ- 6596 ಮತ್ತು ಟ್ರ್ಯಾಲಿ ನಂಬರ ಟಿ.ಎಸ್-06-ಇ.ಡಿ-6557 ರ ಚಾಲಕನು ಮತ್ತು 2]ಮಹಿಂದ್ರ ಭೂಮಿಪುತ್ರ ಟ್ರ್ಯಾಕ್ಟರ ಇಂಜನ್ ನೊಂದಣಿ ಸಂಖ್ಯೆ ಟಿ.ಎಸ್-06-ಇ.ಎಲ್-4542 ಮತ್ತು ಟ್ರ್ಯಾಲಿ ನಂಬರ ಎ.ಪಿ-27-ಡಿ-2640 ರ ಚಾಲಕನು ತಮ್ಮ-ತಮ್ಮ ಟ್ರ್ಯಾಲಿಗಳಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತರು ಸದರಿ ಟ್ರ್ಯಾಕ್ಟರಗಳನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಎರಡೂ ಟ್ರ್ಯಾಕ್ಟರಗಳನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಎರಡು ಟ್ರ್ಯಾಕ್ಟರಗಳ ಚಾಲಕರು ಮತ್ತು ಸಂಬಂಧಪಟ್ಟ ಮಾಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 46/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:- ಗುನ್ನೆ ನಂ. 47/2021 ಕಲಂ 379 ಐಪಿಸಿ:ಇಂದು ದಿನಾಂಕ 27.03.2021 ರಂದು ಸಮಯ ಮಧ್ಯಾಹ್ನ 12:40 ಗಂಟೆಗೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಟಿಪ್ಪರ ನಂಬರ ಕೆಎ-33-ಎ-9720 ನೇದ್ದರ ನೇದ್ದರಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟಿಪ್ಪರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟಿಪ್ಪರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 47/2021 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:- ಗುನ್ನೆ ನಂ 67/2021.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ: ಇಂದು ದಿನಾಂಕ 27/03/2021 ರಂದು 14-00 ಗಂಟೆಗೆ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ. ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 27/03/2021 ರಂದು ಬೆಳಿಗ್ಗೆ 10-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ, ಸಂಗನಬಸವ ಹೆಚ್.ಸಿ.02 ರವರಿಗೆ ಬಂದ ಮಾಹಿತಿ ನನಗೆ ತಿಳಿಸಿದ್ದೆನೆಂದರೆ. ಸಗರ (ಬಿ) ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಪಾನ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ಸಂಗನಬಸವ ಹೆಚ್.ಸಿ.02. ಜೀಪಚಾಲಕ ನಾಗರೆಡ್ಡಿ ಎ.ಎಚ್.ಸಿ. 25. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ಸಂಗನಬಸವ ಹೆಚ್.ಸಿ.02. ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿ ಕಳುಹಿಸಿದಂತೆ ಸದರಿಯವರು ಇಬ್ಬರು ನಗದಲ್ಲಿ ಹೋಗಿ ಪಂಚರಾದ 1] ಶ್ರೀ ಶರಣಬಸಪ್ಪ ತಂದೆ ಮಹಾದೇವಪ್ಪ ಹಡಪದ ವ|| 28 ಜಾ|| ಹಡಪದ ಉ|| ವ್ಯಾಪಾರ ಸಾ|| ಸಗರ (ಬಿ) 2) ದೇವಿಂದ್ರಪ್ಪ ತಂದೆ ಈರಪ್ಪ ಬಳಗಾರ ವ|| 38 ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಸಗರ (ಬಿ) ಇವರಿಗೆ ಕರೆದುಕೊಂಡು ಬಂದು 10-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33 ಜಿ-0138 ನೇದ್ದರಲ್ಲಿ ಕುಳಿತುಕೊಂಡು 10-30 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 11-00 ಗಂಟೆಗೆ ಸಗರ (ಬಿ) ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸ್ವಲ್ಪ ದುರದಲ್ಲಿ ಹೋಗಿ ಜೀಪನಿಲ್ಲಿಸಿ, ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಮನೆಗಳು ಮತ್ತು ಹೋಟೆಲ್ಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ತನ್ನ ಪಾನ ಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನು ನೋಡಿ ಖಚಿತ ಪಡಿಸಿಕೊಂಡು 11-20 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಪ್ಪ ತಂದೆ ಸಂಗಣ್ಣ ಗುಳಗಿ ವ|| 55 ಜಾ|| ಲಿಂಗಾಯತ ಉ|| ವ್ಯಾಪಾರ ಸಾ|| ಸಗರ (ಬಿ) ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಸಗರ (ಬಿ) ಗ್ರಾಮದ ತನ್ನ ಪಾನ ಡೆಬ್ಬಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 90 ಎಂ.ಎಲ್.ನ ಒಟ್ಟು 11 ಯು.ಎಸ್. ವಿಸ್ಕಿ ಪ್ಲಾಸ್ಟೀಕ್ ಬಾಟಲ್ಗಳು ಇದ್ದು ಒಂದು ಪಾಕೇಟ್ನ ಕಿಮ್ಮತ್ತು 35.13 ರೂ ಅಂತಾ ಇದ್ದು, ಒಟ್ಟು 11 ಯು.ಎಸ್. ವಿಸ್ಕಿ ಪ್ಲಾಸ್ಟೀಕ್ ಬಾಟಲ್ಗಳು ಕಿಮ್ಮತ್ತು 386-43 ರೂ ಗಳಾಗುತ್ತಿದ್ದು, 2] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 90 ಎಂ.ಎಲ್.ನ 2 ಯು.ಎಸ್. ವಿಸ್ಕಿ ಖಾಲಿ ಪ್ಲಾಸ್ಟೀಕ್ ಬಾಟಲ್ಗಳು ಇದ್ದವು. ಅ:ಕಿ: 00=00 ರೂ, ಒಟ್ಟು 11 ಮದ್ಯದ ಪಾಕೇಟ್ಗಳಲ್ಲಿ 90 ಎಂ.ಎಲ್.ನ 1 ಯು.ಎಸ್. ವಿಸ್ಕಿ ಪ್ಲಾಸ್ಟೀಕ್ ಬಾಟಲ್ ಪಂಚರ. ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 11-30 ಗಂಟೆಯಿಂದ 12-30 ಗಂಟೆಯವರೆಗೆೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 13-10 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 14-00 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 67/2021 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

Last Updated: 28-03-2021 10:32 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080