ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/04/2021

ಗುರಮಿಠಕಲ್ ಪೊಲೀಸ್ ಠಾಣೆ :- 62/2021 ಕಲಂ 279, 337, 338 ಐಪಿಸಿ 187 ಐಎಮ್ವಿ ಎಕ್ಟ್ : ಇಂದು ದಿನಾಂಕ 27.04.2021 ರಂದು ಸಾಯಂಕಾಲ 5:30 ಪಿರ್ಯಾಧಿ ಎಮ್ ಎಲ್ ಸಿ ವಿಚಾರಣೆ ಕುರಿತು ಹೋಗಿದ್ದ ಹಣಮಂತ ಎಎಸ್ಐ ರವರು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಹಾಜರ ಪಡಿಸಿದ್ದ ಪಿರ್ಯಾಧಿ ಹೇಳಿಕೆಯ ಸಾರಾಂಶವೆಂದರೆ ಪಿರ್ಯಾಧಿಯು ನಿನ್ನೆ ದಿನಾಂಕ:26.04.2021 ರಂದು 7:30 ಗಂಟೆಯ ಸುಮಾರಿಗೆ ಮೊಟರ್ ಸೈಕಲ್ ನಂ:ಕೆಎ-53 ಹೆಚ್.ಸಿ-6903 ನೇದ್ದರಲ್ಲಿ ಯಾದಗಿರಿ ದಿಂದ ಗುರುಮಠಕಲ್ಗೆ ಬರುವ ಮುಖ್ಯ ರಸ್ತೆಯ ಮೇಲೆ ಗಣಪೂರ ಬ್ರ್ರಿಡ್ಜ ಹತ್ತಿರ ಹೋಗುತ್ತಿರುವಾಗ ಎದರುಗಡೆಯಿಂದ ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂದು ಬಂದು ಡಿಕ್ಕಿ ಪಡಿಸಿದ್ದರಿಂದ ಪಿರ್ಯಾಧಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿ ಉಪಚಾರಕ್ಕಾಗಿ ಜಿಲ್ಲಾ ಆಸ್ಪತ್ರೆ ಯಾದಗರಿಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರಕ್ಕಾಗಿ ಕಾಮರೆಡ್ಡಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿದ್ದಾಗಿ ಈ ಅಫಘಾತ ಪಡಿಸಿದ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಇರುತ್ತದೆ.

ಕೆಂಭಾವಿ ಠಾಣೆ ಯಾದಗಿರಿ :- 57/2021 ಕಲಂ: 279,3337,338 ಐ.ಪಿ.ಸಿ : ಇಂದು ದಿನಾಂಕ 27.04.2021 ರಂದು 6.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಶರಣಬಸಪ್ಪ ತಂದೆ ಬಸಲಿಂಗಪ್ಪ ಕಂಗಳ ಸಾ|| ಪೇಠ ಅಮ್ಮಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ: 25.04.2021 ರಂದು ನಮ್ಮ ತಮ್ಮನಾದ ಸೂಗುರೇಶ ಈತನ ಮದುವೆಯು ಏವೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಇದ್ದುದರಿಂದ ನಮ್ಮ ಸ್ಕಾಪರ್ಿಯೋ ವಾಹನ ನಂ ಕೆಎ 33 ಎಮ್ 4023 ನೇದ್ದರಲ್ಲಿ ನಾನು, ನಮ್ಮ ಅಕ್ಕಳಾದ ಸುವಣರ್ಾ ಗಂಡ ನಿಂಗಣ್ಣ ಬಳಿ ಸಾ|| ಹುಣಸಗಿ, ನಮ್ಮ ತಾಯಿ ಬಸಮ್ಮ ಗಂಡ ಬಸಲಿಂಗಪ್ಪ ಕಂಗಳ್ ಹಾಗೂ ನನ್ನ ತಂಗಿಯಾದ ಗೀತಾ ಗಂಡ ದಯಾನಂದ ಪೊಲೀಸ್ ಪಾಟೀಲ ಸಾ|| ರೋಡಗಿ ತಾ|| ಇಂಡಿ ಎಲ್ಲರೂ ಕೂಡಿ ಬೆಳಿಗ್ಗೆ ಪೇಠ ಅಮ್ಮಾಪುರದಿಂದ ಏವೂರಕ್ಕೆ ಹೋರಟಿದ್ದು, ಸದರಿ ವಾಹನವನ್ನು ಚಾಲಕನಾದ ಭೀಮರೆಡ್ಡಿ ತಂದೆ ಸುಭಾಸರೆಡ್ಡಿ ಕೋಳಿಹಾಳ ಸಾ|| ಪೇಠ ಅಮ್ಮಾಪುರ ಈತನು ನಡೆಸುತ್ತಿದ್ದನು. ನಾವು ಮದುವೆಗೆ ಹೋಗಿ ಮರಳಿ ಊರಿಗೆ ಬರುವ ಕುರಿತು ಗೌಡಗೇರಾ ಗ್ರಾಮ ದಾಟಿ ಸುರಪುರ ಕೆಂಭಾವಿ ಮುಖ್ಯ ರಸ್ತೆಯ ಸಮೀಪ ಇರುವ ರೆಡ್ಡಿ ಕ್ಯಾಂಪ್ ಹತ್ತಿರ 3.20 ಪಿಎಮ್ ಸುಮಾರಿಗೆ ಸ್ಕಾಪರ್ಿಯೋ ವಾಹನ ನಂ ಕೆಎ 33 ಎಮ್ 4023 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಎಡಕ್ಕೆ ಕಟ್ ಮಾಡಿ ರೋಡಿನ ಎಡಮಗ್ಗಲಿಗೆ ಇರುವ ಹೊಲದಲ್ಲಿನ ಲೈಟಿನ ಕಂಭಕ್ಕೆ ಡಿಕ್ಕಿಪಡಿಸಿದ್ದು, ಸದರಿ ಅಪಘಾತದಲ್ಲಿ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ ನಂತರ ನಮ್ಮ ಅಕ್ಕಳಾದ ಸುವಣರ್ಾ ಇವಳಿಗೆ ನೋಡಲಾಗಿ ಎಡಗೈ ಮೊಳಕೈ ಹತ್ತಿರ ಕೈಮುರಿದಂತಾಗಿದ್ದು, ಗದ್ದ್ಕಕೆ ರಕ್ತಗಾಯವಾಗಿರುತ್ತದೆ. ನಮ್ಮ ತಾಯಿ ಬಸಮ್ಮ ಇವಳಿಗೆ ನೋಡಲಾಗಿ ಟೊಂಕಕ್ಕೆ ಬಲಗಡೆ ಹಾಗೂ ಎದೆಗೆ ಒಳಪೆಟ್ಟಾಗಿರುತ್ತದೆ ಹಾಗೂ ತಂಗಿ ಗೀತಾ ಇವಳಿಗೆ ನೋಡಲಾಗಿ ಎಡಭುಜಕ್ಕೆ ಒಳಪೆಟ್ಟಾಗಿರುತ್ತದೆ. ನಂತರ ಚಾಲಕ ಭೀಮರೆಡ್ಡಿ ಈತನಿಗೆ ನೋಡಲಾಗಿ ಅವನಿಗೆ ಯಾವುದೆ ಗಾಯಗಳಾಗಿರುವದಿಲ್ಲ. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಮೂರು ಜನರಿಗೆ ಉಪಚಾರ ಕುರಿತು ಬಾಗಲಕೋಟದ ಡಾ|| ಕಟ್ಟಿ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಚಾಲಕ ಭೀಮರೆಡ್ಡಿ ತಂದೆ ಸುಭಾಸರೆಡ್ಡಿ ಕೋಳಿಹಾಳ ಸಾ|| ಪೇಠ ಅಮ್ಮಾಪುರ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 57/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ :- 91/2021 ಕಲಂ: 427 ಐ.ಪಿ.ಸಿ. ಮತ್ತು ಕಲಂ 3 , 4 ಪ್ರಿವೆನ್ಷನ್ ಆಫ ಡ್ಯಾಮೇಜ ಟು ಪಬ್ಲಿಕ್ ಪ್ರಾಪಟರ್ಿ ಆಕ್ಟ 1984 : ಇಂದು ದಿನಾಂಕ: 27-04-2021 ರಂದು 6:15 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಆನಂದ ಕುಮಾರ ಕೆ. ಸಹಾಯಕ ಅಭೀಯಂತರರು ಲೋಕೋಪಯೋಗಿ ಇಲಾಖೆ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇಂದರೆ ಶಹಾಪುರ ತಾಲೂಕಿನ ಮರಕಲ್- ಕೊಳ್ಳೂರ-ಬಿಳ್ಹಾರ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ. 14.00 ಹೈಯಾಳ ಬಿ ಹತ್ತಿರ ಸೇತುವೆ ತಡೆಗೋಡೆಯನ್ನು ನಮ್ಮ ಇಲಾಖೆಯ ವತಿಯಿಂದ ನಿಮರ್ಿಸಲಾಗಿದ್ದು ಇದೆ. ಸದರಿ ಸೇತುವೆ ತಡೆಗೋಡೆಯನ್ನು ನಾನು ಈಗ ಸುಮಾರು ಒಂದು ತಿಂಗಳ ಹಿಂದೆ ಕರ್ತವ್ಯದ ಮೇಲೆ ಹೋದಾಗ ನೋಡಿದ್ದು ಸರಿಯಾಗಿ ಇತ್ತು ಇಂದು ದಿನಾಂಕ: 27-04-2021 ರಂದು ಪೂವರ್ಾಹ್ನ 11:00 ಗಂಟೆಗೆ ರಸ್ತೆಯ ಮೇಲೆ ಹೋದಾಗ ಸದರಿ ಸೇತುವೆ ತಡೆಗೋಡೆ ಹಾಳಾಗಿದ್ದು ಇದೆ ಸದರಿ ತಡೆಗೋಡೆಯನ್ನು ಪರಿಶೀಲಿಸಲಾಗಿ ಯಾರೋ ದುಷ್ಕಮರ್ಿಗಳು ಉದ್ದೇಶ ಪೂರ್ವಕವಾಗಿ ಒಡೆದು ಕೆಡುವಿ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿರುತ್ತಾರೆ. ಸದರಿ ಘಟನೆಯು ಒಂದು ತಿಂಗಳು ಹಿಂದೆ ಆಗಿರಬಹುದು. ಆದ್ದರಿಂದ ಹೈಯಾಳ ಬಿ ಹತ್ತಿರ ಜಿಲ್ಲಾ ಮುಖ್ಯ ರಸ್ತೆಯ ಸೇತುವೆ ತಡೆಯನ್ನು ಯಾರೋ ದುಷ್ಕಮರ್ಿಗಳು ಒಡೆದು ಕೆಡುವು ಹಾಳುಮಾಡಿ ಸಾರ್ವಜಿನಿಕ ಆಸ್ತಿ ನಾಶಮಾಡಿದ್ದು ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 91/2021 ಕಲಂ 427 ಐ.ಪಿ.ಸಿ. ಕಲಂ 3 , 4 ಪ್ರಿವೆನ್ಷನ್ ಆಫ ಡ್ಯಾಮೇಜ ಟು ಪಬ್ಲಿಕ್ ಪ್ರಾಪಟರ್ಿ ಆಕ್ಟ 1984 ಅಡಿಯಲ್ಲಿ ಪ್ರಕಣ ಧಾಖಲಿಸಿ ತನಿಖೆ ಕೈಗೊಂಡೆನು..

ಶಹಾಪೂರ ಪೊಲೀಸ್ ಠಾಣೆ :- 92/2021 ಕಲಂ 78 (3) ಕೆ.ಪಿ ಆಕ್ಟ್: ಇಂದು ದಿನಾಂಕ 27/04/2021 ರಂದು, ರಾತ್ರಿ 20-15 -ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 27/04/2021 ರಂದು, ಸಾಯಂಕಾಲ 19-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಪಾಪುಲರ್ ಬೇಕರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 27/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು ಇಂದು ರಾತ್ರಿ 20-00 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 92/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 2060 ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.

ಭೀಗುಡಿ ಪೊಲೀಸ್ ಠಾಣೆ :-. 39/2021 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 27/04/2021 ರಂದು 06:00 ಪಿ.ಎಮ್.ಕ್ಕೆ ಶಿರವಾಳ ಸೀಮಾಂತರದ ಕೊರಮ್ಮದೇವಿ ಗುಡಿ ಹಿಂದೆ ಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಸಿಪಿಐ ಸಾಹೇಬರ ನೇತೃತ್ವದಲ್ಲಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 8.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 02 ಜನಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 71,000/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 28-04-2021 01:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080