Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28-05-2021

ಕೊಡೇಕಲ್ಲ ಪೊಲೀಸ್ ಠಾಣೆ :- 33/2021 ಕಲಂ: 323, 324, 504, 506, ಸಂಗಡ 34 ಐಪಿಸಿ:ಇಂದು ದಿನಾಂಕ:27.05.2021 ರಂದು ಮಧ್ಯಾಹ್ನ 4:00 ಗಂಟೆಗೆ ಪಿರ್ಯಾಧಿ ಶ್ರೀ ಹಯ್ಯಾಳಪ್ಪ ತಂದೆ ನಂದಪ್ಪ ಇಸಾಕಿ ವ||50 ವರ್ಷ ಜಾ||ಹಿಂದೂ ಕುರುಬರ ಉ|| ಒಕ್ಕಲುತನ ಸಾ||ಮಂಜಲಾಪುರ ತಾ|| ಸುರಪೂರ ಜಿ|| ಯಾದಗಿರ ಇವರು ಠಾಣೆಗೆ ಬಂದು ತನ್ನ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೇಂದರೆ ನಮ್ಮ ತಂದೆ ತಾಯಿಯವರಿಗೆ ಪರಮಣ್ಣ, ನಾನು ಮತ್ತು ಮಾಳಪ್ಪ ಅಂತ ಮೂವರು ಗಂಡು ಮಕ್ಕಳು ಹಾಗೂ ಅಂಬ್ರವ್ವ, ಅಯ್ಯಮ್ಮ ಮತ್ತು ನಾಗಮ್ಮ ಅಂತ ಮೂವರು ಹೆಣ್ಣು ಮಕ್ಕಳಿದ್ದು ನಮ್ಮೆಲ್ಲರದೂ ಮದುವೆಯಾಗಿದ್ದು ನಮ್ಮನಮ್ಮ ಕುಟುಂಬದೊಂದಿಗೆ ಬೇರೆಬೇರೆ ಇರುತ್ತೇವೆ. ನನಗೆ ನಂದಪ್ಪ, ಯಲ್ಲಮ್ಮ, ನೀಲಮ್ಮ ಮತ್ತು ಮೋನೇಶ ಅಂತ 4 ಜನ ಮಕ್ಕಳು ಇರುತ್ತಾರೆ. ನಾವು ಅಣ್ಣತಮ್ಮಂದಿರು ಕೂಡಿ ಇರುವಾಗಲೇ ಹುಣಸಗಿ ಸೀಮಾಂತರದಲ್ಲಿ 40 ಎಕರೆ ಜಮೀನು ತೆಗೆದುಕೊಂಡಿದ್ದು ಮತ್ತು ಮಂಜಲಾಪೂರದಲ್ಲಿ ನಮ್ಮ ಹಿರಿಯರಿಂದ ಬಂದ ಆಸ್ತಿ 24 ಎಕರೆ ಜಮೀನು ಇದ್ದು ಈಗ 5-6 ವರ್ಷಗಳ ಹಿಂದೆ ನಾವು ಅಣ್ಣತಮ್ಮಂದಿರು ಬೇರೆಬೇರೆಯಾಗಿದ್ದು ನಮ್ಮ ಪಾಲಿಗೆ ಬಂದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಇರುತ್ತೇವೆ. ನಮ್ಮ ನಮ್ಮ ಹೊಲಗಳನ್ನು ಅಳೆದು ಕಲ್ಲನ್ನು ಹಾಕಿಕೊಂಡಿದ್ದು ಇರುತ್ತದೆ. ಈಗ 2-3 ವರ್ಷಗಳಿಂದ ನನ್ನ ತಮ್ಮನಾದ ಮಾಳಪ್ಪ ಮತ್ತು ಅವನ ಮಕ್ಕಳು ಹೊಲದ ವಿಚಾರವಾಗಿ ನನ್ನೊಂದಿಗೆ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಸದ್ಯ ನಾನು ನನ್ನ ಕುಟುಂಬದೊಂದಿಗೆ ಹುಣಸಗಿಯಲ್ಲಿ ವಾಸವಿರುತ್ತೇನೆ. ಹೀಗಿದ್ದು ದಿನಾಂಕ 27.05.2021 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ನಾನು ಹುಣಸಗಿಯಿಂದ ನಮ್ಮ ಮಂಜಲಾಪೂರದಲ್ಲಿಯ ನನ್ನ ಪಾಲಿಗೆ ಬಂದ ಹೊಲದ ಜಮೀನು ಸವರ್ೆ ನಂ:92 ಗದ್ದಗೆರ ಹೊಲ ಅಂತ ಹೆಸರಿನ ಹೊಲಕ್ಕೆ ಹೋದಾಗ ನಾನು ನನ್ನ ಜಮೀನಿನ ಡ್ವಾಣದ ಹತ್ತಿರ ಹೋಗಿ ನೋಡಲಾಗಿ ನನ್ನ ತಮ್ಮನಾದ ಮಾಳಪ್ಪನ ಮಕ್ಕಳು ನನ್ನ ಜಮೀನಿನ ಡ್ವಾಣದ ಕಲ್ಲನ್ನು ಕಿತ್ತಿ ಹಾಕಿದ್ದು ಆಗ ನಾನು ನಮ್ಮ ಹೊಲದ ಡ್ವಾಣದ ಹತ್ತಿರ ನಿಂತುಕೊಂಡು ಏಕೆ ನಮ್ಮ ಕಲ್ಲನ್ನು ಕಿತ್ತಿ ಹಾಕಿದ್ದಿರಿ ಅಂತ ಜೋರಾಗಿ ಒದರಾಡ ಹತ್ತಿದಾಗ ಅಲ್ಲಿಯೇ ನಮ್ಮ ಹೊಲದ ಪಕ್ಕದಲ್ಲಿ ಅವರ ಹೊಲದಲ್ಲಿನ ಮನೆಯಲ್ಲಿದ್ದ ನಿಂಗಪ್ಪ, ದೇವಪ್ಪ ಮತ್ತು ಯಲ್ಲಪ್ಪ ಮೂವರು ನಾನು ಒದರಾಡುವ ದ್ವನಿ ಕೇಳಿ ನಾನು ಇದ್ದಲ್ಲಿಗೆ ಬಂದು ನನಗೆ ಏನೋ ಸೂಳೆ ಮಗನೇ ನಮ್ಮ ಹೊಲದಲ್ಲಿನ ಕಲ್ಲನ್ನು ನಾವು ಕಿತ್ತಿ ಹಾಕಿದ್ದೇವೆ ನೀನೇನು ಕೇಳುತ್ತೀ ಅಂತ ಅಂದವರೆ ನನಗೆ ಲೇ ಸೂಳೆ ಮಗನೇ ಹಯ್ಯಾಳ್ಯಾ ನಿಂದು ಬಾಳ ಆಗಿದೆ ಅಂತ ನಿಂಗಪ್ಪನು ನನ್ನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದನು ಮತ್ತು ಯಲ್ಲಪ್ಪನು ಬಂದು ನನ್ನ ಸೊಂಟದ ಮೇಲೆ ತನ್ನ ಕಾಲಿನಿಂದ ಜೋರಾಗಿ ಒದ್ದನು ಇದರಿಂದ ನನಗೆ ಸೊಂಟಕ್ಕೆ ಒಳಪೆಟ್ಟಾಗಿದ್ದು, ದೇವಪ್ಪನು ಬಂದವನೇ ನನ್ನ ತಲೆಗೆ ಕಟ್ಟಿಗೆಯಿಂದ ಜೋರಾಗಿ ಹೊಡೆದಿದ್ದು ಇದರಿಂದ ನನಗೆ ತಲೆಗೆ ಒಳಪೆಟ್ಟಾಗಿದ್ದು, ಅದೇ ಸಮಯಕ್ಕೆ ನನ್ನ ತಮ್ಮ ಮಾಳಪ್ಪನು ತನ್ನ ಮನೆಯಿಂದ ಹೊರಗೆ ಬಂದವನೇ ತನ್ನ ಮಕ್ಕಳಿಗೆ ಈ ಸೂಳೆ ಮಗನಿಗೆ ಇವತ್ತು ಬಿಡಬೇಡಿರಿ ಚೆನ್ನಾಗಿ ಹೊಡೆಯಿರಿ ಅಂತ ಅಂದನು. ಆಗ ಮೂವರು ಸೇರಿ ನನಗೆ ಹೊಡೆಯುವಾಗ ನಾನು ನನಗೆ ಉಳಿಸಿರಪ್ಪೋ ಅಂತ ಚೀರಾಡಲು ಅಲ್ಲಿಯೇ ನಮ್ಮ ಹೊಲದ ಪಕ್ಕದಲ್ಲಿ ತಮ್ಮ ಹೊಲದಲ್ಲಿದ್ದ ನನ್ನ ಅಣ್ಣನಾದ ಪರಮಣ್ಣ ತಂದೆ ನಂದಪ್ಪ ಇಸಾಕಿ, ಮತ್ತು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪರಮಣ್ಣ ತಂದೆ ಬಸಣ್ಣ ಗದ್ದಗಿ, ಹಯ್ಯಾಳಪ್ಪ ತಂದೆ ಬಸಣ್ಣ ದೊಡಮನಿ ಸಾ|| ಮಂಜಲಾಪೂರ ಮತ್ತು ನನ್ನ ಜೊತೆ ನಮ್ಮ ಹೊಲಕ್ಕೆ ಬಂದಿದ್ದ ಹುಣಸಗಿಯ ಮಲ್ಲಪ್ಪ ತಂದೆ ನಾಗಪ್ಪ ಕರೆಕಲ್ಲರ ಸಾ||ಹುಣಸಗಿ ರವರು ಬಂದು ನನಗೆ ಹೊಡೆಯುವದನ್ನು ಬಿಡಿಸಿದ್ದು, ಅವರೆಲ್ಲರೂ ಹೋಗುವಾಗ ನನಗೆ ಲೇ ಸೂಳೆ ಮಗನೇ ಹಯ್ಯಾಳ್ಯಾ ಇವತ್ತು ನಮ್ಮ ಕೈಯಲ್ಲಿ ನೀನು ಉಳಿದುಕೊಂಡಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ನಾನು ನನಗೆ ಗಾಯಗಳಾಗಿದ್ದರಿಂದ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಹೊಂದಿ ತಮ್ಮ ಠಾಣೆಗೆ ಬಂದು ನನಗೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ನಿಂಗಪ್ಪ, ದೇವಪ್ಪ, ಯಲ್ಲಪ್ಪ ಮತ್ತು ಮಾಳಪ್ಪ ಇವರ ಮೇಲೆ ದೂರು ಕೊಡುತ್ತಿದ್ದು ಈ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.33/2021 ಕಲಂ: 323, 324, 504, 506 ಖ/ಘ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಗುರುಮಠಕಲ್ ಪೊಲೀಸ್ ಠಾಣೆ :- ಗುನ್ನೆ ನಂ: 72/2021 ಕಲಂ: 143, 147, 148, 323, 324, 504, 506 ಸಂ.149 ಐಪಿಸಿ : ದೇವರಳ್ಳಿ ಗ್ರಾಮ ಸೀಮೆಯಲ್ಲಿ ಫಿರ್ಯಾದಿಗೆ ಸೇರಿದ ಸವರ್ೇ ನಂ:95 ನೇದ್ದರ ಜಮೀನು ಇದ್ದು ಅದಕ್ಕೆ ಹೊಂದಿಕೊಂಡು ಆರೋಪಿತರಿಗೆ ಸೇರಿದ ಸವರ್ೇ ನಂ: 94 ರ ಜಮೀನು ಇರುತ್ತದೆ. ಆರೋಪಿತರು ತಮಗೆ ಫಿರ್ಯಾದಿದಾರಿಗೆ ಸೇರಿದ ಜಮೀನಿನಲ್ಲಿ 2 ಎಕ್ಕರೆ ಜಮೀನು ಬರುತ್ತದೆ ಅಂತಾ ವಿನಾ ಕಾರಣ ಜಗಳ ಮಾಡುತ್ತಿದ್ದು ಅದೇ ವಿಚಾರವಾಗಿ ಇಂದು ದಿನಾಂಕ 27.05.2021 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಆರೋಪಿತರೆಲ್ಲಾರು ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆಗಳನ್ನು ಹಿಡಿದುಕೊಂಡು ಬಂದು ಫಿರ್ಯಾದಿದಾರ ಮನೆಯ ಮುಂದಿನ ರೋಡಿನ ಮೆಲೆ ನಿಂತಿ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೇ ಜೀವದ ಲೇ ಸೂಳೆ ಮಕ್ಕಳೆ ನೀವು ನಮಗೆ ಕೊಡಬೇಕಾದ 2 ಎಕ್ಕರೆ ಹೊಲ ಕೊಡಲಿಲ್ಲ ಅಂದ್ರೇ ನಿಮಗೆ ಜೀವ ಸಹಿತ ಬಿಡೋದಿಲ್ಲ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಮನೆಯಲ್ಲಿ ವಿಚಾರ ಮಾಡಿದ ನಂತರ ಬೆಳಿಗ್ಗೆ 10:00 ಗಂಟೆಗೆ ಠಾಣೆಗೆ ಬಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 72/2021 ಕಲಂ: 143, 147, 148, 323, 324, 504, 506 ಸಂ.149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ :-. ಗುನ್ನೆ ನಂ: 73/2021 ಕಲಂ 143 147 148 341 323 324 504 506 ಸಂ 149 ಐಪಿಸಿ: ಇಂದು ದಿನಾಂಕ: 27.05.2021 ರಂದು ಮದ್ಯಾಹ್ನ 3:00 ಪಿ.ಎಮ್.ಕ್ಕೆ ಠಾಣೆಗೆ ಪಿರ್ಯಾಧಿ ಖುದ್ದಾಗಿ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಅಜರ್ಿಯ ಸಾರಾಂಶವೆನೆಂದರೆ ಪಿರ್ಯಾಧಿಗೆ ಪಿರ್ಯಾಧಿ ದೊಡ್ಡಮ್ಮಳಿಗೆ ಸಂಬಂಧಿಸಿ ಜಮೀನು ಸವರ್ೆ ನಂ;94 ರಲ್ಲಿ ಜಮೀನು ಸವರ್ೇನಂ 95 ನೇದ್ದವರು ಹೊತ್ತುವರಿ ಮಾಡಿಕೊಂಡಿದ್ದು.ಈ ಬಗ್ಗೆ ಇಬ್ಬರಲ್ಲಿ ವೈಮನಸ್ಸು ಇದ್ದು. ಈ ದಿವಸ ಪಿರ್ಯಾಧಿಯು ಸವರ್ೇ ನಂ94 ರಲ್ಲಿ ಗಳೆ ಹೊಡೆಯಲು ತನ್ನ ತಮ್ಮಂದಿರನ್ನು ಕಳುಹಿಸಿದ್ದು ಇದೇ ಸಿಟ್ಟಿನಿಂದು ಇಂದು ದಿನಾಂಕ27.05.2021 ರಂದು ಬೆಳಿಗ್ಗೆ 6:00 ಗಂಟೆಗೆ ಪಿರ್ಯಾಧಿಯು ಎತ್ತುಗಳಿಗೆ ಮೇವು ಹಾಕಿ ಮನೆಗೆ ಹೋಗುತ್ತಿರುವಾಗ ಪಿರ್ಯಾಧಿಯ ಮನೆಯ ಮುಂದಿನ ಸಿಸಿ ರಸ್ತೆಯ ಮೇಲೆ ಆರೋಪಿತರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾಧಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದು ಬೈದು ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಇರುತ್ತದೆ.

ಗುರುಮಠಕಲ್ ಪೊಲೀಸ್ ಠಾಣೆ :- ಯು.ಡಿ.ಆರ್ ನಂ. 08/2021 ಕಲಂ: 174 ಸಿ.ಆರ್.ಪಿ.ಸಿ : ನಿನ್ನ ದಿನಾಂಕ 26.05.2021 ರಂದು ಸಂಜೆ 04:00 ಗಂಟೆಯ ಸುಮಾರಿಗೆ ಫಿರ್ಯಾದಿದಾರ ನನಗೆ ಫೋನ್ ಮಾಡಿ ಕೊಂಕಲ್ ಸೀಮಾಂತರದ ತನ್ನ ಹೊಲದಲ್ಲಿ ಅಪರಿಚಿತ ಗಂಡಸ್ಸಿನ ಮೃತ ದೇಹವಿದ್ದು ಅಂದಾಜು ವಯಸ್ಸು 70-75 ವರ್ಷ ಇರುತ್ತದೆ ಅಂತಾ ಮಾಹಿತಿ ನೀಡಿದನು. ಕೂಡಲೇ ನಾನು ಸ್ಥಳಕ್ಕೆ ಹೋಗಿ ಫಿರ್ಯಾದಿಗೆ ವಿಚಾರಿಸಿದಾಗ ಮಧ್ಯಾಹ್ನ 03:00 ಗಂಟೆಯ ಸುಮಾರಿಗೆ ಹೊಲದಲ್ಲಿರುವ ಕಸ-ಕಡ್ಡಿಯನ್ನು ತೆಯಲು ಹೋದಾಗ ಈ ಮೃತ ದೇಹ ಕಂಡಿರುತ್ತದೆ ಅಂತಾ ತಿಳಿಸಿದನು. ನಂತರ ನಾನು ಮೃತ ದೇಹವನ್ನು ವಾರಸುದಾರರ ಪತ್ತೆಗಾಗಿ ಸಮುದಾಯ ಆರೋಗ್ಯ ಕೇಂದ್ರ ಗುರುಮಠಕಲ್ ಶವಗಾರ ಕೋಣೆಗೆ ರವಾನಿಸಿ ಮೃತ ದೇಹ ಇದ್ದ ಬಗ್ಗೆ ಮಾಹಿತಿಯನ್ನು ವಾಟ್ಸಪ್ ವಿವಿಧ ಗುಂಪಿನ ಮುಖಾಂತರ ಹರಿಬಿಟ್ಟನು. ಆದರೂ ಸಹ ಮೃತ ದೇಹಕ್ಕೆ ಸಂಬಂದಿಸಿದಂತೆ ಯಾರೂ ವಾರಸುದಾರರು ಬರದೇ ಇರುವುದರಿಂದ ಇಂದು ದಿನಾಂಕ: 27.05.2021 ರಂದು ಬೆಳಿಗ್ಗೆ 11:00 ಗಂಟೆಗೆ ಫೀರ್ಯಾದಿದಾರ ಠಾಣೆಗೆ ಹಾಜರಾಗಿ ಅಪರಿಚಿತ ಮೃತ ಗಂಡಸ್ಸಿನ ಬಗ್ಗೆ ಫಿರ್ಯಾದಿ ನೀಡಿದ್ದು ಆ ಬಗ್ಗೆ ಗುರುಮಠಕಲ್ ಪೊಲೀಸ್ ಠಾಣೆ ಯು.ಡಿ.ಆರ್ ನಂ.08/2021 ಕಲಂ 174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ

ನಾರಾಯಣಪೂರ ಪೊಲೀಸ್ ಠಾಣೆ:- ಗುನ್ನೆ ನಂ. 41/2021 ಕಲಂ: 15(ಎ), 32(3) ಕೆ.ಇ ಆಕ್ಟ್: ದಿನಾಂಕ: 27/05/2021 ರಂದು 8:45 ಎ.ಎಂ.ಕ್ಕೆ ಸಕರ್ಾರಿ ತಫರ್ೇಯು ಠಾಣೆಯಲ್ಲಿ ಇದ್ದಾಗ ಲಿಂಗಸ್ಗೂರ-ಮುದ್ದೆಭೀಹಾಳ ರಸ್ತೆಯ ಮೇಲಿನಗಡ್ಡಿ ಕ್ರಾಸನಲ್ಲಿ ಇರುವ ಕೋರಿಕೆಯ ಬಸ್ ನಿಲ್ದಾಣದ ಪಕ್ಕದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ ಮಾಡಲು ನಿಷೇಧ ಇರುವ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರಾಯಿ ಸೇವನೆ ಮಾಡುತ್ತ ಕುಳಿತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಕುರಿತು 9:30 ಎ.ಎಮ್ಕ್ಕೆ ಠಾಣೆಯಿಂದ ಹೊರಟು ನಾವುಗಳು ಲಿಂಗಸ್ಗೂರ-ಮುದ್ದೆಭೀಹಾಳ ರಸ್ತೆಯ ಮೇಲೆ ಮೇಲಿನಗಡ್ಡಿ ಕ್ರಾಸದಿಂದ ಸ್ವಲ್ಪ ದೂರದಲ್ಲಿ 9:50 ಎ.ಎಮ್.ಕ್ಕೆ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ನೋಡಲಾಗಿ ಮೇಲಿನಗಡ್ಡಿ ಕ್ರಾಸ್ನಲ್ಲಿ ಇರುವ ಕೋರಿಕೆಯ ಬಸ್ ನಿಲ್ದಾಣದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರಾಯಿ ಸೇವನೆ ಮಾಡಲು ನಿಷೇಧ ಇರುವ ಸ್ಥಳದಲ್ಲಿ ಸಾರಾಯಿ ಸೇವನೆ ಮಾಡುತ್ತಾ ಕುಳಿತುಕೊಂಡಿರುವುದನ್ನು ಖಚಿತಪಡಿಸಿಕೊಂಡು ನಾನು ಸಿಬ್ಬಂದಿಯವರೊಂದಿಗೆ 9:55 ಎ.ಎಮ್ಕ್ಕೆ ದಾಳಿ ಕುರಿತು ಸಾರಾಯಿ ಸೇವನೆ ಮಾಡುವವನ ಹತ್ತಿರ ಹೋಗಿ ಹಿಡಿದುಕೊಂಡು ವಿಚಾರಿಸಲಾಗಿ ತನ್ನ ಹೆಸರು ಮತ್ತು ವಿಳಾಸ ರಮೇಶ ತಂದೆ ಚನ್ನಬಸು ಈಳಿಗೇರ ವ|| 34ವರ್ಷ ಜಾ|| ಹಿಂದೂ ಈಳಿಗೇರ ಉ|| ಕೂಲಿಕೆಲಸ ಸಾ|| ಹವರ್ಾಪೂರ ತಾ|| ಮಸ್ಕಿ ಜಿ|| ರಾಯಚೂರ ಅಂತಾ ತಿಳಿಸಿದನು. ಪರಿಶೀಲಿಸಲಾಗಿ ಸ್ಥಳದಲ್ಲಿ 180ಎಮ್ಎಲ್ದ ಒಂದು ಇಂಪೆರಿಯಲ್ ಬ್ಲ್ಯೂ ತುಂಬಿದ ಬಾಟಲಿ ಹಾಗೂ ಇನ್ನೊಂದು 180ಎಮ್ಎಲ್ದ ಇಂಪೆರಿಯಲ್ ಬ್ಲ್ಯೂ ಅರ್ದ ಸಾರಾಯಿ ಕುಡಿದು ಇನ್ನೂ ಅರ್ದ ಸಾರಾಯಿ ಉಳಿದಿರುವ ಬಾಟಲಿ ಇರುತ್ತದೆ. 180ಎಮ್ಎಲ್ದ ಇಂಪೆರಿಯಲ್ ಬ್ಲ್ಯೂ ಒಂದು ಬಾಟಲಿಯ ಎಮ್.ಆರ್.ಪಿ. ದರ 198.21/-ರೂ ಇರುತ್ತದೆ. 2ಘಿ198.21 = 396.42/- ಆಗುತ್ತದೆ. ರಾಸಾಯನಿಕ ತಜ್ಞರ ಪರಿಕ್ಷೆಗೆ ಒಳಪಡಿಸುವ ಕುರಿತು ಪ್ರತ್ಯೇಕವಾಗಿ ಸಾರಾಯಿ ಬಾಟಲಿಗಳನ್ನು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಅರಗಿನಿಂದ ಎನ್ ಎಂಬ ಅಕ್ಷರದ ಶೀಲ್ನಿಂದ ಶೀಲ್ಮಾಡಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ದಿನಾಂಕ:27/05/2021 ರಂದು 10:00 ಎ.ಎಮ್. ದಿಂದ 11:00 ಎ.ಎಮ್ ವರೆಗೆ ಕೈಕೊಂಡಿದ್ದು ಇರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ ಮಾಡಲು ನಿಷೇಧ ಇರುವ ಸ್ಥಳದಲ್ಲಿ ಸೇವನೆ ಮಾಡುತ್ತಿದ್ದ ಸದರ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 41/2021 ಕಲಂ :15(ಎ), 32(3) ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ :- 75/2021 ಕಲಂ 15[ಎ],32[3] ಕೆ. ಇ ಯಾಕ್ಟ: ಇಂದು ದಿನಾಂಕ:27/05/2021 ರಂದು 07.30 ಪಿಎಮ್ಕ್ಕೆ ಶ್ರೀ ಸೋಮಲಿಂಗ ಒಡೆಯರ್ ಪಿಎಸ್ಐ ಪ್ರಭಾರ ಕೆಂಭಾವಿ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಂಶವೇನೆಂದರೆ, ಇಂದು ದಿನಾಂಕ: 27.05.2021 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಒಂದು ಅಂಗಡಿಯ ಪಕ್ಕದಲ್ಲಿ ಮಂಜುನಾಥ ತಂದೆ ಹಣಮಂತ ಮೇದಾರ ಸಾ|| ಕೆಂಭಾವಿ ಈತನು ಸಾರ್ವಜನಿಕ ಸ್ಥಳದಲ್ಲಿ ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಮೇರೆಗೆ ನಾನು ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 37 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ಠಾಣೆಯಲ್ಲಿದ್ದ ಹೆಚ್ಸಿ 33 ಶಂಕರಗೌಡ, ಪಿಸಿ 214 ಪೆದ್ದಪ್ಪಗೌಡ ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-0228 ನೇದ್ದರಲ್ಲಿ ಠಾಣೆಯಿಂದ 06.15 ಪಿಎಮ್ಕ್ಕೆ ಹೊರಟು 06.20 ಪಿಎಮ್ಕ್ಕೆ ಕೆಂಭಾವಿ ಪಟ್ಟಣದ ಹಳೆ ಬಸ್ ನಿಲ್ದಾಣ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡುವದನ್ನು ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಆತನ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಮಂಜುನಾಥ ತಂದೆ ಹಣಮಂತ ಮೇದಾರ ವಯಾ|| 30 ವರ್ಷ ಜಾ|| ಹಿಂದೂ ಮೇದಾರ ಉ|| ವ್ಯಾಪಾರ ಸಾ|| ಕೆಂಭಾವಿ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 90 ಎಮ್ಎಲ್ನ ಹೈವರಡ್ಸ್ ಚಿಯರ್ಸ್ ವಿಸ್ಕಿ ಪೌಚು ಒಟ್ಟು 15 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 35.13 ಪೈಸೆ ಅಂತ ಇದ್ದು ಒಟ್ಟು 15 ಪೌಚ್ಗಳ ಬೆಲೆ 526.95/- ರೂ ಆಗುತ್ತಿದ್ದು ನಂತರ ಮಂಜುನಾಥ ಈತನನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 90 ಎಮ್ಎಲ್ನ 15 ಪೌಚ್ಗಳನ್ನು 06:25 ಪಿಎಮ್ದಿಂದ 07.25 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು ನಂತರ ಮೇಲ್ಕಂಡ ಆರೋಪಿಯನ್ನು 07:30 ಪಿಎಮ್ಕ್ಕೆ ಠಾಣೆಗೆ ಕರೆದುಕೊಂಡು ಬಂದು ಸದರಿ ಆರೋಪಿತನ ವಿರುದ್ದ ಕಲಂ: 15(ಎ), 32(3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ವರದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:75/2021 ಕಲಂ: 15(ಎ), 32(3) ಕೆಇ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ :- 57/2021 ಕಲಂ 323, 354, 504, 506 ಸಂ: 34 ಐಪಿಸಿ : ಇಂದು ದಿನಾಂಕ: 27/05/2021 ರಂದು 08.30 ಪಿಎಂ ಕ್ಕೆ ಶ್ರೀಮತಿ ಶಾಣಮ್ಮ ಗಂಡ ಚಂದಪ್ಪ ಬೇವಿನಗಿಡ ವಯಾ:65 ವರ್ಷ ಉ: ಕೂಲಿ ಜಾ: ಪರಿಶಿಷ್ಟ ಜಾತಿ ಉ: ಕೂಲಿ ಸಾ: ಗೋಗಿ (ಕೆ) ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಹೇಳಿಕ ನೀಡಿದ್ದರ ಸಾರಂಶ ಏನಂದರೆ, ನಮ್ಮ ಪಕ್ಕದ ಮನೆಯವರಾದ ಶರಣಪ್ಪ @ ಮುದಕಪ್ಪ ತಂದೆ ಚಂದಪ್ಪ ಹಲಗಿ, ಸುಬಾಷ ತಂದೆ ಚಂದಪ್ಪ ಹಲಗಿ, ಈಶಪ್ಪ ಹಲಗಿ ಎಲ್ಲರೂ ಜಾ: ಪರಿಶಿಷ್ಟ ಜಾತಿ ಸಾ: ಗೋಗಿ ಕೆ ಈ ಮೂರು ಜನರು ಆಗಾಗ ನನ್ನ ಮತ್ತು ನನ್ನ ಸೋಸೆಯ ಜೋತೆಯಲ್ಲಿ ಬಟ್ಟೆ ತೋಳೆಯುವ ಜಾಗದ ವಿಷಯದಲ್ಲಿ ಜಗಳ ಮಾಡುತ್ತಾ ಇದ್ದರು, ಆದರೂ ನಾವು ಸುಮ್ಮನೆ ಇದ್ದೇವು,ಹೀಗಿದ್ದು, ನಿನ್ನೆ ದಿನಾಂಕ:26/05/2021 ರಂದು 11.00 ಎಎಂ ಸುಮಾರಿಗೆ ನಾನು ಮತ್ತು ನನ್ನ ಸೋಸೆಯಾದ ರೇಣುಕಾ ಗಂಡ ರಮೇಶ ಇಬ್ಬರು ನಮ್ಮ ಮನೆಯ ಮುಂದೆ ಬಟ್ಟೆ ತೋಳೆಯುತ್ತಿದ್ದಾಗ, ಶರಣಪ್ಪ @ ಮುದಕಪ್ಪ ತಂದೆ ಚಂದಪ್ಪ ಹಲಗಿ, ಸುಬಾಷ ತಂದೆ ಚಂದಪ್ಪ ಹಲಗಿ, ಈಶಪ್ಪ ಹಲಗಿ ಜನರು ಬಂದು ನಮ್ಮ ಜಾಗದಲ್ಲಿ ಯಾಕೆ ಬಟ್ಟೆ ತೋಳೆಯುತ್ತಿದ್ದಿರಿ ಅಂತಾ ಜಗಳ ತಗೆದರು, ಆಗ ನಾನು ಇದು ನಮ್ಮ ಮನೆಯೆ ಮುಂದಿನ ಜಾಗ. ಇದು ನಮ್ಮ ಜಾಗ ಇದೆ, ಇಲ್ಲಿ ನಿಮ್ಮ ಜಾಗ ಎಲ್ಲಿದೆ ಅಂದಿದ್ದಕ್ಕೆ ಶರಣಪ್ಪ ಈತನು ಏನಲೆ ಮುದಕಿ ನಿಂದು ಬಹಳ ಆಗಿದೆ ಸೂಳಿ ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ನನ್ನ ಕುತ್ತಿಗೆ ಹಿಂದೆ ಹಿಡಿದು ಎಡಗೈ ಕೈತಿರುವಿ ನಿನಗೆ ಒಂದು ಒದ್ದರೆ ಇಲ್ಲೆ ಖಲಾಸ್ ಆಗತಿ ಅಂತಾ ನಿಂದಿಸಿದನು. ಆಗ ನನ್ನ ಸೊಸೆ ರೇಣುಕಾ ಇವಳು ಬಿಡಿಸಿಕೊಳ್ಳಲು ಬಂದಾಗ ಸುಭಾಷ ಈತನು ರಂಡೆರ್ಯಾ ನಿಮಗ ಕಡದು (ಕತ್ತರಿಸಿ) ಬುಟ್ಟಿ ತುಂಬಿದರು ಯಾರು ಕೇಳೋರ ಇಲ್ಲಾ ನೀವು ನಮಗೆ ಎದರು ಮಾತಾಡುತ್ತೀರಿ ಅಂತಾ ಕೈಯಿಂದ ನನ್ನ ಸೊಸೆ ರೇಣುಕಾ ಇವಳ ಬಲಗೈ ಹಿಡಿದು ಅವಳ ನೈಟಿ ಜಗ್ಗಿ ಅಪಮಾನ ಮಾಡಿರುತ್ತಾನೆ, ಈಶಪ್ಪ ಈತನು ಕೈಯಿಂದ ನನ್ನ ಸೊಸೆಯ ಬೆನ್ನಿಗೆ ಹೊಡೆದಿರುತ್ತಾನೆ. ಅಷ್ಟರಲ್ಲಿ ನಮಗೆ ಹೊಡೆಯುತ್ತಿರುವದನ್ನು ನೋಡಿದ ಚಂದಪ್ಪ ತಂದೆ ನಿಜಗಪ್ಪ ಡಬ್ಬೇರ ಮತ್ತು ಮಾನಪ್ಪ ತಂದೆ ಅಂಬಲಪ್ಪ ಮೂಲಿಮನಿ ಇವರುಗಳು ಬಿಡಿಸಿಕೊಂಡರು ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು, ಆಗ ಮೂರು ಜನರು ನೀವು ಇನ್ನೊಮ್ಮೆ ನಮಗೆ ಎದರು ಮಾತಾಡಿದರೆ ಅಥವಾ ಪೊಲಿಸ್ ಠಾಣೆಗೆ ಹೊದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿದ್ದರಿಂದ ನಾವು ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:27/05/2021 ರಂದು ಠಾಣೆಗೆ ಬಂದಿರುತ್ತೇವೆ.ನಾವು ಮನೆಯಲ್ಲಿ ಇಬ್ಬರೆ ಹೆಣ್ಣು ಮಕ್ಕಳು ಇದ್ದುದನ್ನು ನೋಡಿ ನಮಗೆ ಕೈಯಿಂದ ಹೊಡೆದು, ನನ್ನ ಸೋಸೆಗೆ ನೈಟಿ ಹಿಡಿದು ಎಳೆದು ಅಪಮಾನ ಮಾಡಿ, ಕೈಯಿಂದ ಹೊಡೆದು ಜೀವ ಭಯ ಹಾಕಿದ ಶರಣಪ್ಪ @ ಮುದಕಪ್ಪ ತಂದೆ ಚಂದಪ್ಪ ಹಲಗಿ, ಸುಬಾಷ ತಂದೆ ಚಂದಪ್ಪ ಹಲಗಿ, ಈಶಪ್ಪ ಹಲಗಿ ಎಲ್ಲರೂ ಜಾ: ಪರಿಶಿಷ್ಟ ಜಾತಿ ಸಾ: ಗೋಗಿ ಕೆ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 57/2021 ಕಲಂ, 323, 354, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ ಠಾಣೆ :- ಯುಡಿಆರ್ ನಂ 09/2021 ಕಲಂ 174 ಸಿಆರ್ಪಿಸಿ: ಇಂದು ದಿನಾಂಕ 27.05.2021 ರಂದು 06.00 ಪಿಎಮ್ ಕ್ಕೆ ಅಂಚೆ ಮೂಲಕ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ವಿಶ್ರಮ ಭಾಗ್ ಪೊಲೀಸ್ ಠಾಣೆಯಿಂದ ವಸೂಲಾದ ವರದಿ ಸಾರಂಶವೇನೆಂದರೇ ದಿನಾಂಕ: 05/03/2021 ರಂದು ನಮ್ಮೂರ ಗ್ರಾಮ ದೇವತೆ ಜಾತ್ರೆ ಇದ್ದುದರಿಂದ ನಾನು ಹಾಗೂ ನಮ್ಮ ಅಣ್ಣ ಇಬ್ಬರು ಜಾತ್ರೆ ನಿಮಿತ್ಯ ರಥೋತ್ಸವ ಇರುವದರಿಂದ ಗ್ರಾಮದ ಅಗಸಿ ಹತ್ತಿರ ಹೋಗಿದ್ದೆವು. ಸದರಿ ದಿನದಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ರಥ ಎಳೆಯುವ ಸಮಯದಲ್ಲಿ ನಮ್ಮ ಅಣ್ಣನು ಕೂಡ ರಥ ಎಳೆಯುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದುದರಿಂದ ರಥವು ನಮ್ಮ ಅಣ್ಣ ರಮೇಶ ಈತನ ಹೊಟ್ಟೆಯ ಮೇಲೆ ಹಾದು ಹೋಗಿದ್ದು, ಆಗ ಸದರಿಯವನಿಗೆ ನಾನು ಹಾಗೂ ನಮ್ಮ ಅಳಿಯ ಬನ್ನೆಪ್ಪ ತಂದೆ ನಿಂಗಪ್ಪ ತೆಗ್ಗೆಳ್ಳೆರಮನಿ ಇಬ್ಬರು ಕೂಡಿ ಅಲ್ಲಿಂದ ಉಪಚಾರ ಕುರಿತು ತಾಳಿಕೋಟಿಯ ಸಿದ್ದ ಬಸವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕೊಡಿಸಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ವಾಸುದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ಸಾಂಗ್ಲಿಯ ವಿದ್ಯಾಭಾರತಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ನಮ್ಮ ಅಣ್ಣ ರಮೇಶ ಈತನು ಉಪಚಾರದಲ್ಲಿರುತ್ತಾ ದಿನಾಂಕ: 11/03/2021 ರಂದು ಸಾಯಂಕಾಲ 4.30 ಗಂಟೆ ಸುಮಾರಿಗೆ ಉಪಚಾರ ಫಲಕಾರಿಯಾಗದೇ ಸಾಂಗ್ಲಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಸದರಿ ನಮ್ಮ ಅಣ್ಣ ರಮೇಶ ಈತನು ದಿನಾಂಕ: 05/03/2021 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಗ್ರಾಮದೇವತೆ ಜಾತ್ರಾ ಸಮಯದಲ್ಲಿ ಆಕಸ್ಮಿಕವಾಗಿ ರಥದ ಚಕ್ರಕ್ಕೆ ಸಿಲುಕಿ ಉಪಚಾರ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ ಸದರಿ ಘಟನೆಯು ಆಕಸ್ಮಿಕವಾಗಿ ನಡೆದಿದ್ದು ಅಂತಾ ಇದ್ದ ವರದಿ ಮೇಲಿಂದ ಠಾಣಾ ಯುಡಿಆರ್ ನಂಬರ 09/2021 ಕಲಂ 174 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

 

Last Updated: 28-05-2021 12:18 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080