ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/03/2021

ಭೀಗುಡಿ ಪೊಲೀಸ್ ಠಾಣೆ:- 05/2021 ಕಲಂ 110 (ಇ & ಜಿ) ಸಿಆರ್ಪಿಸಿ : ಇಂದು ದಿನಾಂಕ:28/03/2021 ರಂದು ಫಿಯರ್ಾದಿದಾರರು ಪೆಟ್ರೋಲಿಂಗ್ ಮಾಡುತ್ತಾ ಮದ್ಯಾಹ್ನ 3 ಗಂಟೆ ಸುಮಾರಿಗೆ ಸಲಾದಪುರ ಗ್ರಾಮದ ದ್ಯಾವಮ್ಮ ದೇವಿ ಗುಡಿ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಿರುವುದನ್ನು ನೋಡಿ ಸದರಿಯವನಿಗೆ ಬುದ್ದಿ ಮಾತು ಹೇಳಿದರೂ ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕ ಶಾಂತತಾಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಮತ್ತು ಸದರಿಯವನು ಚಾಳಿ ಬಿದ್ದ ಅಪರಾಧಿಯಾಗಿರುವ ಬಗ್ಗೆ ತಿಳಿದು ಬಂದಿದ್ದರಿಂದ ಹಾಗೂ ಸದರಿಯವನಿಂದ ಜರುಗಬಹುದಾದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಶಾಂತಿ ಪಾಲನೆಗಾಗಿ ಮುಂಜಾಗೃತ ಕ್ರಮ ಕುರಿತು 3.30 ಪಿ.ಎಂ.ಕ್ಕೆ ವಶಕ್ಕೆ ತೆಗೆದುಕೊಂಡು 4 ಪಿ.ಎಂ.ಕ್ಕೆ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಮೇಲೆ ಠಾಣೆ ಪಿ.ಎ.ಆರ್. ನಂ. 05/2021 ಕಲಂ 110 (ಇ & ಜಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹುಣಸಗಿ ಪೊಲೀಸ್ ಠಾಣೆ :- 19/2021 279, 338, 304(ಎ) ಐಪಿಸಿ & 187 ಐಎಂವಿ ಕಾಯ್ದೆ : ದಿನಾಂಕ:28/03/2021 ರಂದು ಸಾಯಂಕಾಲ 18.00 ಗಂಟೆಯ ಸುಮಾರಿಗೆ ಮೃತ ಜಯಪ್ಪ ಮತ್ತು ಗಾಯಾಳು ಸುಗಣಪ್ಪ ಇಬ್ಬರೂ ಕೂಡಿ ಅಪಾಚಿ ಮೋಟಾರ್ ಸೈಕಲ್ ನಂ. ಕೆಎ-03 ಇವಿ-4764 ನೇದ್ದರ ಮೇಲೆ ಹುಣಸಗಿ ಪಟ್ಟಣದ ಎಲ್ & ಟಿ ಶೋರುಂ ದಾಟಿ ಹುಣಸಗಿ-ದೇವಾಪುರ ರಸ್ತೆಯ ಮೇಲೆ ರೋಡಿನ ಬಲಗಡೆಯಿಂದಾ ರೋಡಿನ ಎಡಬಾಗದ ರೋಡಿಗೆ ಹೋಗುವ ಕುರಿತು ರಸ್ತೆಯನ್ನು ದಾಟುವಾಗ, ಆರೋಪಿತನು ತನ್ನ ಮಿನಿಲಾರಿ ನಂ. ಕೆಎ-01 ಸಿ-1098 ನೇದ್ದನ್ನು ಹುಣಸಗಿ ಬಸವೇಶ್ವರ ವೃತ್ತದ ಕಡೆಯಿಂದಾ ಅತಿವೇಗ ಹಾಗೂ ನಿಷ್ಕಾಳಜಿನತದಿಂದಾ ನಡೆಯಿಸಿಕೊಂಡು ಬಂದು ಸದರಿ ರಸ್ತೆ ದಾಟುತ್ತಿದ್ದ ಜಯಪ್ಪನು ಚಲಾಯಿಸುವ ಮೋಟಾರ್ ಸೈಕಲಗೆ ಅದೇ ವೇಗದಲ್ಲಿ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದಾ ಜಯಪ್ಪ ಮತ್ತು ಸುಗಣಪ್ಪ ಇಬ್ಬರೂ ಮೋಟಾರ್ ಸೈಕಲ ಸಮೇತ ರೋಡಿನ ಮೇಲೆ ಬಿದ್ದಿದ್ದು, ಮೃತ ಜಯಪ್ಪನಿಗೆ ಎಡಗಕಣ್ಣಿನ ಮೇಲೆ ಹಣೆಗೆ ಭಾರಿ ರಕ್ತಗಾಯವಾಗಿ ಎರಡು ಕಿವಿ ಮತ್ತು ಮೂಗು ಹಾಗೂ ಬಾಯಿಂದಾ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಗಣಪ್ಪ ಹಳ್ಳಿ ಈತನಿಗೆ ಎಡಗಣ್ಣಿನ ಹುಬ್ಬಿನಿಂದಾ ತೆಲೆಯ ವರಗೆ ಭಾರಿ ರಕ್ತಗಾಯವಾಗಿದ್ದು, ಆರೋಪಿತನು ಅಪಘಾತಪಡಿಸಿ ಸ್ಥಳದಲ್ಲಿಯೇ ವಾಹನ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ

ಶಹಾಪೂರ ಪೊಲೀಸ್ ಠಾಣೆ :- 69/2021. ಕಲಂ 279,338 ಐಪಿಸಿ ಮತ್ತು 187 ಐಎಂವಿ ಯಾಕ್ಟ : ಇಂದು ದಿನಾಂಕ 28/03/2021 ರಂದು 11.20 ಪಿಎಂ ಕ್ಕೆ ಅರ್ಜಿದಾರರಾದ ಶ್ರೀ ಮಲ್ಲಪ್ಪ ತಂದೆ ಸಿದ್ರಾಮಪ್ಪ ಕಶೆಟ್ಟಿ ಸಾ|| ದೋರನಳ್ಳಿ ಇವರು ಠಾಣೆಗೆ ಹಾಜರಾಗಿ ಕೈಬರಹದಿಂದ ಬರೆದ ಲಿಖಿತ ಅರ್ಜಿಯನ್ನು ತಂದು ಹಾಜರುಪಡಿಸಿದ್ದು ಸದರಿ ಅರ್ಜಿಯ ಸಾರಾಂಶವೇನೆಂದರೆ, ದಿನಾಂಕ 26/03/2021 ರಂದು 9.00 ಪಿಎಂ ಸುಮಾರಿಗೆ ಫಿರ್ಯಾದಿ ಮತ್ತು ಅವರ ದೊಡ್ಡಪ್ಪನ ಮಗನಾದ ಬಸವರಾಜ ತಂದೆ ತಿಮ್ಮಣ್ಣ ಕಶೆಟ್ಟಿ ಸಾ|| ದೋರನಳ್ಳಿ ಇಬ್ಬರೂ ಕೂಡಿ ತಮ್ಮ ಹೊಲಕ್ಕೆ ನೀರು ಬಡಲು ದೋರನಳ್ಳಿ ಗ್ರಾಮದ ತಮ್ಮ ಮನೆಯಿಂದ ಯಾದಗಿರಿ ರಸ್ತೆಯಲ್ಲಿರುವ ತಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಯಾದಗಿರಿ ರಸ್ತೆಯಲ್ಲಿರುವ ಆಂಧ್ರ ಕ್ಯಾಂಪಿನ ಹತ್ತಿರ ರಸ್ತೆಯ ಮೇಲೆ ಯಾದಗಿರಿ ಕಡೆಯಿಂದ ಕಾರು ನಂ ಕೆಎ 51 ಎಂಜಿ 2053 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ೋಡಿಸಿಕೊಂಡು ಬಂದು ಬಸವರಾಜನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದ ಬಸವರಾಜನಿಗೆ ಬಲಗಾಲು ಮುರಿದಿದ್ದು ಮತ್ತು ಬಲಗೈ ಮುರಿದಿದ್ದು ಕೈಗೆ, ಕಾಲಿಗೆ, ಹಣೆಗೆ ತರಚಿದ ರಕ್ತಗಾಯವಾಗಿದ್ದು ಆ ದಿನ ಕಾರಿನ ಚಾಲಕನು ತನ್ನ ಕಾರನ್ನು ಸ್ವಲ್ಪ ಮುಂದೆ ನಿಲ್ಲಿಸಿ ಓಡಿ ಹೋಗಿದ್ದು ಚಾಲಕನ ಹೆಸರು ಲಿಂಗರಾಜ ತಂದೆ ಭೀಮರಾಯ ಸಾ|| ಹಳಿಪೇಠ ಶಹಾಪೂರ ಅಂತಾ ತಿಳಿದು ಬಂದಿದ್ದು ಆ ದಿನ ಬಸವರಾಜನಿಗೆ ಭಾರೀ ಪ್ರಮಾಣದ ಗಾಯಗಳಾಗಿದ್ದರಿಂದ ತಕ್ಷಣ 108 ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಅರ್ಜಂಟಾಗಿ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ಬಸವರಾಜನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ಅರ್ಜಂಟ್ ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ದಿನಾಂಕ 28/03/2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅಪಘಾತ ಮಾಡಿ ಬಸವರಾಜನಿಗೆ ಗಾಯಪಡಿಸಿದ ಕಾರ ನಂ ಕೆಎ 51 ಎಂಜಿ 2053 ನೇದ್ದರ ಚಾಲಕನಾದ ಲಿಂಗರಾಜ ತಂದೆ ಭೀಮರಾಯ ಸಾ|| ಹಳಿಪೇಠ ಶಹಾಪೂರ ಈತನ ಮೇಲೆ ಕ್ರಮ ಜರುಗಿಸಬೇಕು ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2021 ಕಲಂ 279,338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ: 22/2021 ಕಲಂ: 323,504,506,109,427 ಸಂಗಡ 34 ಐಪಿಸಿ ಮತ್ತು 3(1)(ಖ), 3(1)(ಖ), 3(2)(ಗಿಂ),ಖಅ/ಖಖಿ ಕಂ ಂಅಖಿ 1989 : ಇಂದು ದಿನಾಂಕ 28.03.2021 ರಂದು 6:30 ಪಿಎಮಕ್ಕೆ ಪಿರ್ಯಾದಿ ಶ್ರೀಮತಿ ಮರೆಮ್ಮ ಗಂಡ ಸೋಮಲಿಂಗಪ್ಪ ಭಂಡಾರಿ ವ:55 ವರ್ಷ ಉ:ಕೂಲಿಕೆಲಸ ಜಾ:ಪರಿಶಿಷ್ಟ ಜಾತಿ(ಹಿಂದೂ ಹೊಲೆಯ) ಸಾ:ಅಂಬೇಡ್ಕರ ನಗರ ವಾರ್ಡ ನಂ:07 ಕಕ್ಕೇರಾ ತಾ:ಸುರಪೂರ ಇವರು ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಹೇಳಿಕೆಯನ್ನು ಠಾಣೆಯ ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಾನು ಗಂಡ ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನಗೆ ರೇಣುಕಾ, ಗಂಗಮ್ಮ, ಶಿವನಮ್ಮ ಅಂತ ಮೂರು ಜನ ಹೆಣ್ಣು ಮಕ್ಕಳು ಯಮನಪ್ಪ ಅಂತ ಒಬ್ಬ ಗಂಡು ಮಗನಿದ್ದು ಹೆಣ್ಣು ಮಕ್ಕಳಾದ ರೇಣುಕಾ, ಗಂಗಮ್ಮ ರವರದ್ದು ಮತ್ತು ಮಗನಾದ ಯಮನಪ್ಪ ರವರದು ಮದುವೆಯಾಗಿದ್ದು, ಮನೆಯಲ್ಲಿ ಸದ್ಯ ನಾನು ನನ್ನ ಗಂಡ ಸೋಮನಿಂಗಪ್ಪ, ಮಗನಾದ ಯಮನಪ್ಪ ಹಾಗೂ ಸೊಸೆ ಜ್ಯೋತಿ ಮತ್ತು ಹೆಣ್ಣು ಮಕ್ಕಳಾದ ಗಂಗಮ್ಮ, ಶಿವನಮ್ಮ ರವರು ಇರುತ್ತೇವೆ. ನನ್ನ ಗಂಡನು ಕಕ್ಕೇರಾ ಯು.ಕೆ.ಪಿ ಯಲ್ಲಿ ಮೆಸ್ತ್ರೀ ಕೆಲಸ ಮಾಡುತ್ತಿರುವನು. ನನ್ನ ಗಂಡನಿಗೆ ಶಿವಪ್ಪ ಅಂತ ಒಬ್ಬ ತಮ್ಮನಿದ್ದು ಅವನದು ಮದುವೆಯಾಗಿದ್ದು ನಾವು ಮತ್ತು ನಮ್ಮ ಮೈದುನ ಶಿವಪ್ಪ ರವರು ಈಗ 10 ವರ್ಷಗಳ ಹಿಂದೆ ಬೇರೆಬೇರೆಯಾಗಿದ್ದು ನಾವು ಮತ್ತು ನಮ್ಮ ಮೈದುನ ಶಿವಪ್ಪ ರವರು ಕೂಡಿ ಇರುವಾಗಲೇ ನಾವು ನಮ್ಮೂರ ಬ್ರಾಹ್ಮಣ ಸಮಾಜದ ವಕೀಲ ವೃತ್ತಿ ಮಾಡುವ ಜೈರಾವ ಕುಲಕಣರ್ಿ ರವರ ಮನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ನಮಗೆ ಇರಲು ಜಾಗೆ ಇಲ್ಲದ್ದರಿಂದ ಅವರು ನಮ್ಮಿಂದ 5,000/- ರೂ ಪಡೆದುಕೊಂಡು ಕಕ್ಕೇರಾ ಅಂಬೇಡ್ಕರ ಓಣಿಯಲ್ಲಿ 30*40 ವಿಸ್ತೀರ್ಣದ ಅವರ ಹೆಸರಿನಲ್ಲಿರುವ ಖುಲ್ಲಾ ಜಾಗೆಯನ್ನು ನಮಗೆ ಕೊಟ್ಟಿದ್ದು ಆ ಜಾಗೆಯಲ್ಲಿ ನಾವು ಮತ್ತು ನಮ್ಮ ಮೈದುನ ಶಿವಪ್ಪ ರವರು ಕೂಡಿ ಇರುವಾಗಲೇ ಈಗ 25 ವರ್ಷಗಳ ಹಿಂದೆ ಜನತಾ ಮನೆಯನ್ನು ಕಟ್ಟಿಕೊಂಡಿದ್ದು ಈ ಮನೆಯು ನನ್ನ ಮೈದುನ ಶಿವಪ್ಪನ ಹೆಂಡತಿಯಾದ ಲಲಿತಾ ರವರ ಹೆಸರಿನಲ್ಲಿದ್ದು ಈಗ 10 ವರ್ಷಗಳ ಹಿಂದೆ ನಾವು ಮತ್ತು ನಮ್ಮ ಮೈದುನ ಶಿವಪ್ಪ ರವರು ಬೇರೆಬೇರೆಯಾಗಿದ್ದು ನಾವು ಬೇರೆಯಾಗುವ ಕಾಲಕ್ಕೆ ಜೇವಗರ್ಿ ತಾಲೂಕಿನ ಇಜೇರಿಯಲ್ಲಿರುವ ನಮ್ಮ ಪೂರ್ವಜರ ಆಸ್ತಿಯು ಮೈದುನ ಶಿವಪ್ಪನ ಪಾಲಿಗೆ ಬಂದಿದ್ದು ಅವನು ತನ್ನ ಕುಟುಂಬದೊಂದಿಗೆ ಇಜೇರಿಯಲ್ಲಿಯೇ ಇದ್ದು ಕಕ್ಕೇರಾದಲ್ಲಿರುವ ಜನತಾ ಮನೆಯು ನಮ್ಮ ಪಾಲಿಗೆ ಬಂದಿದ್ದು ನಾನು ಮತ್ತು ನನ್ನ ಗಂಡ ಮಕ್ಕಳು ಆಗಿನಿಂದ 8-9 ವರ್ಷದವರೆಗೆ ಅದೇ ಮನೆಯಲ್ಲಿಯೇ ಇದ್ದು ಈಗ 2 ವರ್ಷಗಳ ಹಿಂದೆ ನಾವು ಮರಗಮ್ಮನ ಗುಡಿಯ ಹತ್ತಿರ 6 ನೇ ವಾಡರ್ಿನಲ್ಲಿ ಬೇರೆ ಮನೆ ಕಟ್ಟಿಕೊಂಡು ಅಲ್ಲಿ ವಾಸವಾಗಿದ್ದು ಹಳೆ ಮನೆಯನ್ನು ಕೀಲಿ ಹಾಕಿರುವೆವು. ಹೀಗಿದ್ದು ನಿನ್ನೆ ದಿನಾಂಕ 27.03.2021 ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಗಂಗಮ್ಮ ಗಂಡ ಮಂಜುನಾಥ ಹಾಗೂ ಶಿವನಮ್ಮ ರವರು ನಮ್ಮ ಹೊಸ ಮನೆಯಲ್ಲಿದ್ದಾಗ ಹೊರಗಡೆ ಹೋದ ನನ್ನ ಮಗನಾದ ಯಮನಪ್ಪ ಇತನು ಬಂದು ತಿಳಿಸಿದ್ದೆನೆಂದರೆ ನಮ್ಮ 7 ನೇ ವಾರ್ಡನಲ್ಲಿರುವ ಹಳೆಯ ಮನೆಯನ್ನು ಜೈರಾವ ಕುಲಕಣರ್ಿ ರವರ ಮಗನಾದ ಸದ್ಯ ಕಲಬುರಗಿಯಲ್ಲಿರುವ ಬ್ರಾಹ್ಮಣ ಸಮಾಜದ ಅನೀಲಕುಮಾರ ತಂದೆ ಜೈರಾವ ಕುಲಕಣರ್ಿ ಇವರು ಅವರ ಮಗನೊಂದಿಗೆ ಜೆಸಿಬಿ ನಂ:ಕೆಎ-33 ಎಮ್-7476 ನೇದ್ದನ್ನು ತೆಗೆದುಕೊಂಡು ಬಂದು ಕೆಡುವ ಹತ್ತಿದ್ದು ಅಲ್ಲಿಗೆ ಹೋಗೊಣ ನಡೆಯಿರಿ ಅಂತ ಅಂದಿದ್ದರಿಂದ ನಾನು ಮತ್ತು ನನ್ನ ಮಗನಾದ ಯಮನಪ್ಪ ಮಕ್ಕಳಾದ ಗಂಗಮ್ಮ ಗಂಡ ಮಂಜುನಾಥ, ಶಿವನಮ್ಮ ರವರೊಂದಿಗೆ ನಮ್ಮ ಹಳೆಯ ಮನೆಗೆ 12:15 ಗಂಟೆಗೆ ಹೋಗಿ ನೋಡಲಾಗಿ ಅನೀಲಕುಮಾರ ತಂದೆ ಜೈರಾವ ಹಾಗೂ ಅವರ ಮಗ ಹೆಸರು ಗೊತ್ತಿಲ್ಲ ಇಬ್ಬರೂ ಕೂಡಿ ಜೆಸಿಬಿ ನಂ:ಕೆಎ-33 ಎಮ್-7476 ನೇದ್ದರಿಂದ ನಮ್ಮ ಮನೆಯನ್ನು ಕೆಡವಹತ್ತಿದ್ದು ಆಗ ನಾನು ಮತ್ತು ನನ್ನ ಮಗ ಯಮನಪ್ಪ ರವರು ಅವರಿಗೆ ಯಾಕೆ ನಮ್ಮ ಮನೆಯನ್ನು ಕೆಡವುತ್ತಿದ್ದಿರಿ ಅಂತ ಕೇಳಿದಾಗ ಅವರು ನಮಗೆ ಎಲೇ ಹೊಲೆ ಸೂಳೆ ಮಕ್ಕಳೇ ನೀವು ಯಾರಿಗೆ ಕೇಳಿ ಇಲ್ಲಿ ಮನೆ ಕಟ್ಟಿದ್ದಿರೀ ಈ ಜಾಗೆ ನಮ್ಮದು ಇರುತ್ತದೆ ಅಂತ ಅಂದಿದ್ದು ಆಗ ನಾನು ಮತ್ತು ನನ್ನ ಮಕ್ಕಳು ಅವರಿಗೆ ನಿಮ್ಮ ಈ ಜಾಗೆಯನ್ನು ನಿಮ್ಮ ತಂದೆ ಜೈರಾವ ಕುಲಕಣಿ ರವರು ಇರುವಾಗಲೇ ನಾವು ಅವರ ಕೈ ಬಾಯಲ್ಲಿ ಮತ್ತು ಮನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಗಿನ ಕಾಲಕ್ಕೆ ನಮ್ಮಿಂದ 5,000/- ರೂಪಾಯಿ ಪಡೆದುಕೊಂಡು ಕೊಟ್ಟಿದ್ದಾರೆ ಅಂತ ಅಂದಾಗ ಅನೀಲಕುಮಾರನು ಅವರ ಅಣ್ಣನಾದ ಅವಿನಾಶ ತಂದೆ ಜೈರಾವ ಕುಲಕಣರ್ಿ ರವರಿಗೆೆ ನಮ್ಮ ಎದುರೆ ಪೋನ್ ಹಚ್ಚಿ ನಾವು ಹೇಳಿದ ವಿಷಯವನ್ನು ತಿಳಿಸಿದಾಗ ಅವನು ಕೂಡಾ ಆ ಸೂಳೆ ಮಕ್ಕಳಿಗೆ ನಾವು ಯಾವುದೇ ಜಾಗೆ ಕೊಟ್ಟಿರುವದಿಲ್ಲ ಆ ಹೊಲೆ ಸೂಳೆ ಮಕ್ಕಳಿಗೆ ಏನ್ ಕೇಳುತ್ತಿರೀ ಜೆಸಿಬಿಯಿಂದ ಪೂತರ್ಿಯಾಗಿ ಮನೆಯನ್ನು ಕೆಡವಿ ಜಾಗೆಯನ್ನು ಸಮತಟ್ಟು ಮಾಡಿರಿ ಅಂತ ತಿಳಿಸಿದ್ದು ಆಗ ಮತ್ತೆ ಅನೀಲಕುಮಾರನು ತನ್ನ ಮಗನೊಂದಿಗೆ ಜೆಸಿಬಿಯಿಂದ ಪೂತರ್ಿಯಾಗಿ ನಮ್ಮ ಮನೆಯನ್ನು ಕೆಡವ ಹತ್ತಿದ್ದು ಆಗ ನಾನು ಮತ್ತು ನನ್ನ ಮಕ್ಕಳಾದ ಗಂಗಮ್ಮ, ಯಮನಪ್ಪ, ಶಿವನಮ್ಮ ರವರು ಮನೆ ಕೆಡವುದನ್ನು ತಡೆಯಲು ಜೆಸಿಬಿ ಹತ್ತಿರ ಹೋದಾಗ ನನ್ನ ಮಗ ಯಮನಪ್ಪನಿಗೆ ಅನೀಲಕುಮಾರನು ಕೈಯಿಂದ ಎಡ ಕಪಾಳದ ಮೇಲೆ ಹೊಡೆದು ಒಳಪೆಟ್ಟು ಮಾಡಿದ್ದು, ಅನೀಲಕುಮಾರ ಹಾಗೂ ಅವರ ಮಗ ಇಬ್ಬರೂ ನನಗೆ ಮತ್ತು ನನ್ನ ಮಕ್ಕಳಿಗೆ ಸೂಳೆ ಮಕ್ಕಳೇ ನೀವು ಸರಿಯುತ್ತಿರೋ ಅಥವಾ ಜೆಸಿಬಿ ಮೇಲೆ ಹಾಯಿಸಿ ತೆಗ್ಗು ತೊಡಿ ಇಲ್ಲೇ ನಿಮ್ಮನ್ನು ಮುಚ್ಚಿ ಹಾಕೋಣವೇ ಅಂತ ಜೀವದ ಬೆದರಿಕೆ ಹಾಕಿದ್ದು ಆಗ ನಾವು ಎಲ್ಲರೂ ನಮ್ಮ ಜೀವಕ್ಕೆ ಅಂಜಿ ಸುಮ್ಮನೆ ನಿಂತಾಗ ಜೆಸಿಬಿಯಿಂದ ನಮ್ಮ ಮನೆಯನ್ನು ಪೂತರ್ಿಯಾಗಿ ಕೆಡವಿ ನಷ್ಟವುಂಟು ಮಾಡಿದ್ದು ನಮ್ಮ ಮನೆ ಜೆಸಿಬಿಯಿಂದ ಕೆಡವಿದ್ದನ್ನು ಮತ್ತು ನಮಗೆ ಜಾತಿ ನಿಂದನೆ ಮಾಡಿ ಬೈದು ಜೀವದ ಬೆದರಿಕೆ ಹಾಕಿದ್ದನ್ನು ಅಲ್ಲಿಯೇ ಇದ್ದ ನಮ್ಮೂರ ಮರೆಪ್ಪ ತಂದೆ ಪರಶುರಾಮ ಕಾಂಗ್ರೆಸ, ಪ್ರಭು ತಂದೆ ಪರಮಣ್ಣ ಬೋವಿ ರವರು ನೋಡಿದ್ದು ಕಾರಣ ನಮಗೆ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿ ನಮ್ಮ ಮನೆಯನ್ನು ಕೆಡವಿ ನೆಲಸಮ ಮಾಡಿ ನಷ್ಟವುಂಟು ಮಾಡಿದ ಅನೀಲಕುಮಾರ ತಂದೆ ಜೈರಾವ ಕುಲಕಣರ್ಿ ಹಾಗೂ ಅವರ ಮಗನ ಮೇಲೆ ಮತ್ತು ಇದಕ್ಕೆ ಪ್ರಚೋದನೆ ನೀಡಿದ ಅವಿನಾಶ ತಂದೆ ಜೈರಾವ ಕುಲಕಣರ್ಿ ರವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ನಾನು ಮನೆಯಲ್ಲಿ ನನ್ನ ಗಂಡ ಮತ್ತು ಮಕ್ಕಳೊಂದಿಗೆ ಈ ಬಗ್ಗೆ ವಿಚಾರ ಮಾಡಿ ಬಂದಿದ್ದರಿಂದ ದೂರು ಕೊಡಲು ತಡವಾಗಿರುತ್ತದೆ ಅಂತ ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 22/2021 ಕಲಂ 323,504,506,109,427 ಸಂಗಡ 34 ಐಪಿಸಿ ಮತ್ತು 3(1)(ಖ), 3(1)(ಖ), 3(2)(ಗಿಂ),ಖಅ/ಖಖಿ ಕಂ ಂಅಖಿ 1989 ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.

                                

  

ಇತ್ತೀಚಿನ ನವೀಕರಣ​ : 29-03-2021 10:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080