ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/04/2021

ಯಾದಗರ ನಗರ ಪೊಲೀಸ್ ಠಾಣೆ :- 51/2021 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ; 28/04/2021 ರಂದು 6-15 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ.28/04/2021 ರಂದು 5-00 ಪಿಎಮ್ ಕ್ಕೆ ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಗೇರಾ ಏರಿಯಾದ ಚಂದ್ರಾಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಇಂದು ದಿನಾಂಕ. 28/04/2021 ರಂದು 6-00 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 6-15 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.51/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಠಾಣೆ ಯಾದಗಿರಿ :- 50/2021 ಕಲಂ: 143, 147, 504, 341, 323, 506 ಸಂಗಡ 149 ಐಪಿಸಿ : ದಿನಾಂಕ:28/04/2021 ರಂದು 7-45 ಪಿಎಮ್ಕ್ಕೆ ಶ್ರೀ ದೀಪಕ ತಂದೆ ಮಲ್ಲಪ್ಪ ನಾಟೇಕಾರ, ವ:30, ಜಾ:ಹೊಲೆಯ, ಉ:ಡ್ರೈವರ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ನಾನು ಹೆಂಡತಿ ಮಕ್ಕಳೊಂದಿಗೆ ಡ್ರೈವರ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ಈಗ ಸುಮಾರು ಒಂದು ವರ್ಷದ ಹಿಂದೆ ನಾನು ಮತ್ತು ನಮ್ಮೂರ ನಮ್ಮ ಜಾತಿಯ ಈಶಮ್ಮ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿರುತ್ತೇವೆ. ಆದರೆ ಅದಕ್ಕೆ ಅವಳ ಅಣ್ಣತಮ್ಮಂದಿರಾದ ಭೀಮರಾಯ ತಂದೆ ರಾಮಣ್ಣ ತುಮಕೂರು ಮತ್ತು ಹೊನ್ನಪ್ಪ ತಂದೆ ರಾಮಣ್ಣ ತುಮಕೂರು ಮತ್ತು ಇತರರು ವಿರೋಧ ವ್ಯಕ್ತಪಡಿಸುತ್ತಾ ಬಂದಿರುತ್ತಾರೆ. ಆದ್ದರಿಂದ ನಾನು ಮತ್ತು ಈಶಮ್ಮ ಇಬ್ಬರೂ ದೇವದುರ್ಗದಲ್ಲಿ ನೆಲೆಸಿರುತ್ತೇವೆ. ನಾನು ಆಗಾಗ ನಾಯ್ಕಲ್ ಗ್ರಾಮದಲ್ಲಿ ನಮ್ಮ ತಂದೆ-ತಾಯಿ ಹತ್ತಿರ ಬಂದು ಹೋಗುತ್ತಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:27/04/2021 ರಂದು ನಾನು ಕೆಲಸದ ಪ್ರಯುಕ್ತ ನಾಯ್ಕಲ್ ಗ್ರಾಮಕ್ಕೆ ಬಂದು ಇಲ್ಲಿಯೇ ಇದ್ದೆನು. ಇಂದು ದಿನಾಂಕ: 28/04/2021 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಕೆಲಸದ ಪ್ರಯುಕ್ತ ನಮ್ಮೂರ ಸರಕಾರಿ ಬಾವಿ ಬಳಿಯಿಂದ ಊರೋಳಗೆ ಹೋಗುತ್ತಿದ್ದಾಗ 1) ಭೀಮರಾಯ ತಂದೆ ರಾಮಣ್ಣ ತುಮಕೂರು, 2) ಹೊನ್ನಪ್ಪ ತಂದೆ ರಾಮಣ್ಣ ತುಮಕೂರು, 3) ಮಲ್ಲಿಕಾಜರ್ುನ ತಂದೆ ನಿಂಗಪ್ಪ ದೊರನಹಳ್ಳಿ, 4) ಭೀಮರಾಯ ತಂದೆ ಭಾಗಪ್ಪ ಗಡ್ಡೆಸೂಗೂರು ಮತ್ತು 5) ರಾಮಣ್ಣ ತಂದೆ ತಿಪ್ಪಣ್ಣ ತುಮಕೂರು ಎಲ್ಲರೂ ಸಾ:ನಾಯ್ಕಲ್ ಇವರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಬಂದದವರೆ ನನಗೆ ತಡೆದು ನಿಲ್ಲಿಸಿ, ಈ ಭೊಸುಡಿ ಮಗ ನಮ್ಮ ತಂಗಿಗೆ ಮರಳು ಮಾಡಿ ಮದುವೆ ಮಾಡಿಕೊಂಡು ಹೋಗಿ ನಮ್ಮ ಎದುರು ಎದಿ ಉಬ್ಬಿಸಿ ತಿರುಗಾಡುತ್ತಾನೆ ಎಂದು ಅವಾಚ್ಯ ಬೈದು ಜಗಳ ತೆಗೆದು ಮಲ್ಲಿಕಾಜರ್ುನ ಮತ್ತು ಭೀಮರಾಯ ತಂದೆ ಭಾಗಪ್ಪ ಇಬ್ಬರೂ ಹಿಡಿದುಕೊಂಡಾಗ ಭೀಮರಾಯ ತುಮಕೂರು ಮತ್ತು ಹೊನ್ನಪ್ಪ ಇಬ್ಬರೂ ನನಗೆ ಕೈ ಮುಷ್ಠಿ ಮಾಡಿ ಮುಖಕ್ಕೆ, ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದರು. ರಾಮಣ್ಣನು ಬಂದು ನನಗೆ ಕಾಲಿನಿಂದ ಒದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಸಣ್ಣಮ್ಮ ಮಾನಮ್ಮ ಗಂಡ ಹಣಮಂತ ನಾಟೇಕಾರ ಹಾಗೂ ಮರಿಲಿಂಗ ತಂದೆ ಮರೆಪ್ಪ ಕಲ್ಮನಿ ಇವರು ಬಂದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಭೊಸುಡಿ ಮಗನೆ ಇನ್ನೊಮ್ಮೆ ನಾಯ್ಕಲ್ ಗ್ರಾಮದಲ್ಲಿ ಕಂಡರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಭಯ ಹಾಕಿರುತ್ತಾರೆ. ಆದ್ದರಿಂದ ವಿನಾಕಾರಣ ನನ್ನೊಂದಿಗೆ ಜಗಳ ತೆಗೆದು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 50/2021 ಕಲಂ: 143, 147, 504, 341, 323, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ :- 69/2021 ಕಲಂ 87 ಕೆ.ಪಿ. ಕಾಯ್ದೆ : ದಿನಾಂಕ: 28/04/2021 ರಂದು 7:30 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸಾಹೇಬರು 9 ಜನಆರೋಪಿತರೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:28/04/2021 ರಂದು 4:30 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯರುಕ್ಮಾಪೂರಗ್ರಾಮದ ಶ್ರೀ ಬನಶಂಕರಿದೇವಿಯಗುಡಿಯಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271, 3) ಶ್ರೀ ದೇವಿಂದ್ರಪ್ಪ ಸಿಪಿಸಿ-184 4) ಶ್ರೀ ಮಾನಯ್ಯ ಸಿಪಿಸಿ-372, 5) ಶ್ರೀ ಮಹಾದೇವಪ್ಪ ಸಿಪಿಸಿ-126 6) ಶ್ರೀ ಕುಮಾರ ಸಿಪಿಸಿ-139 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ1) ಶ್ರೀ ನಾರಾಯಣತಂದೆ ಮಲ್ಲೇಶಪ್ಪದನವಾಡ ವಯಾ:45 ವರ್ಷಜಾ:ಸಾಲೇರ ಉ:ಟೆಂಟ್ ಹೌಸ್ ಸಾ:ರುಕ್ಮಾಪೂರತಾ:ಸುರಪೂರ 2) ಶ್ರೀ ರವೀಂದ್ರನಾಥತಂದೆ ಬಸವರಾಜ ಬಡಗಾ ವಯಾ:47 ವರ್ಷಜಾ:ದೇವಾಂಗ ಉ:ಕೂಲಿ ಸಾ:ರುಕ್ಮಾಪೂರತಾ:ಸುರಪುರಇವರನ್ನು 5 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:15 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0094 ನೇದ್ದರಲ್ಲಿಠಾಣೆಯಿಂದ ಹೊರಟು 5:45 ಪಿ.ಎಂ ಕ್ಕೆ ರುಕ್ಮಾಪೂರಗ್ರಾಮದ ಶ್ರೀ ಬನಶಂಕರಿದೇವಿಯಗುಡಿಯಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಶ್ರೀ ಬನಶಂಕರಿದೇವಿಯಗುಡಿಯ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 5:50 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 9 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಮುದ್ದುರಾಯತಂದೆ ಬಸಪ್ಪ ಪೂಜಾರಿ ವಯಾ:60 ವರ್ಷಜಾ:ಲಿಂಗಾಯತ ಉ:ನೇಕಾರಿಕೆ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಅಶೋಕಕುಮಾರತಂದೆಗುರುನಾಥ ಬಂಡಾರಿ ವಯಾ:41 ವರ್ಷಜಾ:ಸಕ್ಕುಳಸಾಳಿ ಉ:ಕೂಲಿ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಭೀಮಾಶಂಕರತಂದೆ ಮುದಕಪ್ಪಗೌಡ ಮಾಲಿ ಪಾಟೀಲ್ ವಯಾ:35 ವರ್ಷಜಾ:ಬೇಡರ ಉ:ಡ್ರೈವರ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಅಮರಪ್ಪತಂದೆ ಶಿವಲಿಂಗಪ್ಪ ಅಯ್ಯಾಳ ವಯಾ:73 ವರ್ಷಜಾ:ಲಿಂಗಾಯತ ಉ:ಒಕ್ಕಲುತನ ಸಾ:ರುಕ್ಮಾಪೂರತಾ:ಸುರಪೂರ ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 450/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಚಂದ್ರಾಕಾಂತತಂದೆ ಮಹಾದೇವಪ್ಪ ಚಿಲ್ಲಾಳ ವಯಾ:59 ವರ್ಷಜಾ:ಸಕ್ಕುಳಸಾಳಿ ಉ:ವ್ಯಾಪಾರ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಅಶೋಕ ತಂದೆಚಂದ್ರಾಮಪ್ಪ ಚಿಲ್ಲಾಳ ವಯಾ:55 ವರ್ಷಜಾ:ಸಕ್ಕುಳಸಾಳಿ ಉ:ಮೆಕ್ಯಾನಿಕ್ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 250/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಚಂದ್ರಶೇಖರತಂದೆ ಮಾನಪ್ಪ ಪಾಳಮುಖಿ ವಯಾ:65 ವರ್ಷಜಾ:ಸಕ್ಕುಳಸಾಳಿ ಉ:ವ್ಯಾಪಾರ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 350/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಚೌಡಪ್ಪತಂದೆ ಮಲ್ಲಣ್ಣಗಂಜಿ ವಯಾ:61 ವರ್ಷಜಾ:ನೇಕಾರ ಉ:ಕೂಲಿ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. 9) ಕಾಳಿಂಗ ತಂದೆ ಭೀಮಣ್ಣದೇವಾಪೂರ ವಯಾ:61 ವರ್ಷಜಾ: ಉ:ಕೂಲಿ ಸಾ:ರುಕ್ಮಾಪೂರತಾ:ಸುರಪೂರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 400/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 2050/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 5:50 ಪಿ.ಎಮ್ ದಿಂದ 6:50 ಪಿ.ಎಮ್ ವರೆಗೆ ಬರೆದುಕೊಂಡಿದ್ದುಇರುತ್ತದೆ. ನಂತರ 9 ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಿಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 69/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ನಾರಾಯಣಪೂರ ಪೊಲೀಸ್ ಠಾಣೆ :- 25/2021 ಕಲಂ: 143, 147, 148, 323, 324, 427, 504, 506 ಸಂಗಡ 149 ಐಪಿಸಿ : ಪಿಯರ್ಾದಿ ಹೊನ್ನಪ್ಪ ತಂದೆ ಧೀರಪ್ಪ ರಾಠೋಡ ಸಾ||ನಾರಾಯಣಪೂರ ಐಬಿ ತಾಂಡಾ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ದಿನಾಂಕ:25/04/2021 ರಂದು ನಮ್ಮ ತಾಂಡಾದಲ್ಲಿ ಮದುವೆ ಇದ್ದ ಕಾರಣ ಮದುವೆ ಕಾರ್ಯಕ್ಕೆ ಹೋಗುತ್ತಿದ್ದಾಗ ಸ್ವಲ್ಪ ಹೊತ್ತು ನಮ್ಮ ತಾಂಡಾದಲ್ಲಿನ ಕೃಷ್ಣ ತಂದೆ ತಿರುಪತಿ ರಾಠೋಡ ಸಾ||ನಾರಾಯಣಪೂರ ಐಬಿ ತಾಂಡಾ ಇವರ ಚಹದ ಅಂಗಡಿಯ ಮುಂದಿನ ಜಾಗದಲ್ಲಿ ನನ್ನ ಗೆಳೆಯರಾದ ನಮ್ಮ ತಾಂಡಾದ ಬಾಲಚಂದ್ರ ತಂದೆ ಚಂದಪ್ಪ ರಾಠೋಡ, ವಿರೇಶ ತಂದೆ ಕೃಷ್ಣ ಜಾದವ ಇವರೊಂದಿಗೆ ಮಾತನಾಡುತ್ತಿದ್ದಾಗ ಮದ್ಯಾಹ್ನ ಅಂದಾಜು 12:00 ಗಂಟೆಯ ಸುಮಾರಿಗೆ ಬಂದ ನಮ್ಮ ತಾಂಡಾದವರಾದ 1) ತುಕರಾಮ ತಂದೆ ಗೋವಿಂದ ರಾಠೋಡ, 2) ಗಂಗಾದರ ತಂದೆ ಬೂದಪ್ಪ ರಾಠೋಡ ಇವರುಗಳು ಬಂದು ನನಗೆ ಲೇ ಸೂಳಿ ಮಗನೆ ನಿಮಗೆ ಸೊಕ್ಕು ಜಾಸ್ತಿ ಆಗೆದ ಇಂದು ಖಲಾಸ್ ಮಾಡಿ ಬಿಡುತ್ತೇವೆ ಅಂತಾ ಬೈದು ಜಗಳ ತೆಗೆದು ತುಕರಾಮನು ನನ್ನ ಮೇಲೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು ಗಂಗಾದರ ರಾಠೋಡ ಈತನು ನನಗೆ ಕಲ್ಲಿನಿಂದ ಮೈ-ಕೈಗೆ ಹೊಡೆದು ಒಳಪೆಟ್ಟು ಪಡೆಸಿದ್ದು ನಂತರ ಅಲ್ಲಿಯೇ ನಿಲ್ಲಿಸಿದ್ದ ನಮ್ಮ ಮೋಟರ್ ಸೈಕಲ್ ನಂ.ಕೆಎ-33, ಇಎ-2381 ನೇದ್ದಕ್ಕೆ ಒದ್ದು ಕೆಳಗಡೆ ಬಿಳಿಸಿದ್ದರಿಂದ ಬಲಬಾಗದ ಮೋಟರ್ ಸೈಕಲ್ ಸ್ಟೀಲ್ ಬೆಂಡಾಗಿರುತ್ತದೆ. ನಂತರ ಅಲ್ಲಿಗೆ ಬಂದ 3) ಗಂಗಪ್ಪ ತಂದೆ ಬೂದಪ್ಪ ರಾಠೋಡ, 4) ಖೀರಪ್ಪ ತಂದೆ ಥಾವರೆಪ್ಪ ರಾಠೋಡ, 5) ಗೋವಿಂದ ತಂದೆ ಶಿವಪ್ಪ ರಾಠೋಡ, 6) ಥಾವರಪ್ಪ ತಂದೆ ಶಿವಪ್ಪ ರಾಠೋಡ ಇವರು ಬಂದು ಗಂಗಪ್ಪ ರಾಠೋಡ, ಖೀರಪ್ಪ ರಾಠೋಡ ಇವರು ಕೂಡ ನನಗೆ ಕೈಯಿಂದ ಮೈ-ಕೈಗೆ ಹೊಡೆ ಬಡೆ ಮಾಡಿರುತ್ತಾರೆ. ಗೋವಿಂದ ರಾಠೋಡ, ಥಾವರಪ್ಪ ರಾಠೋಡ ಇವರುಗಳು ನನಗೆ ರಂಡಿ ಮಗನೆ ನಿನಗೆ ತಾಂಡಾದಲ್ಲಿ ಬಾಳ್ವೆ ಮಾಡಿಕೊಂಡು ಇರಲು ಬಿಡುವುದಿಲ್ಲ ಅಂತಾ ಬೈದಾಡಿದ್ದು ಈ ಜಗಳವನ್ನು ನಮ್ಮ ತಾಂಡಾದ ಬಾಲಚಂದ್ರ ತಂದೆ ಚಂದಪ್ಪ ರಾಠೋಡ, ವಿರೇಶ ತಂದೆ ಕೃಷ್ಣ ಜಾದವ, ಶಾಂತಪ್ಪ ತಂದೆ ಚಂದಪ್ಪ ರಾಠೋಡ, ಶರಣಪ್ಪ ತಂದೆ ರಾಮಪ್ಪ ರಾಠೋಡ ಇವರುಗಳು ಬಿಡಿಸಿದ್ದು ಇರುತ್ತದೆ. ನಂತರ 12:40 ಪಿಎಮ್ ಸುಮಾರಿಗೆ ತುಕರಾಮ ತಂದೆ ಗೊವಿಂದ ರಾಠೋಡ, ಗಂಗಾದರ ಬೂದಪ್ಪ ರಾಠೋಡ ಇವರು ನಮ್ಮ ಮನೆಗೆ ಬಂದು ಕಲ್ಲಿನಿಂದ ಕಿಡಕಿಯ ಗ್ಲಾಸ್ ಹೊಡೆದಿರುತ್ತಾರೆ. ಈ ಜಗಳದ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ ಬಂದು ದೂರು ಅಜರ್ಿಯನ್ನು ನೀಡುತ್ತಿದ್ದು ಕಾರಣ ನನಗೆ ಹೊಡೆದವರ ವಿರುದ್ಧ ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.25/2021 ಕಲಂ: 143, 147, 148, 323, 324, 427, 504, 506 ಸಂ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ :-. 58/2021 ಕಲಂ: 143, 147, 148, 323, 324, 326, 307, 354, 504, 506, 149 ಐಪಿಸಿ : ಇಂದು ದಿ: 28/04/2021 ರಂದು 7.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರಿ ಲಾಲಸಾಬ ತಂದೆ ಬುಡ್ಡೆಸಾಬ ಗಾಣದವರ ವಯಾ|| 37 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಏವೂರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನೆಂದರೆ, ನಮ್ಮೂರ ಸೀಮಾಂತರದಲ್ಲಿ ನಮ್ಮೂರ ರಾಜಭಿ ಗಂಡ ಅಬ್ದುಲಗನಿ ನಾಯ್ಕೋಡಿ ಇವರ ದೇಸಾಯಿ ಹೆಸರಿನ ಹೊಲದ ಪಕ್ಕದಲ್ಲಿ ನಾನು ಹಾಗೂ ನಮ್ಮ ತಮ್ಮ ಮಹಿಬೂಬಸಾಬ ಇಬ್ಬರು ಕೂಡಿಕೊಂಡು ಲಕ್ಕಾಗೋಳ ಇವರ ಹೊಲ ಲೀಜಿಗೆ ಮಾಡಿದ್ದು, ನಮ್ಮ ತಮ್ಮ ಮಹಿಬೂಬಸಾಬ ಈತನು ಪಕ್ಕದ ಹೊಲದ ರಾಜಭಿ ಇವರೊಂದಿಗೆ ಮಾತನಾಡುತ್ತಿದ್ದರಿಂದ ನಮ್ಮ ಸಂಬಂದಿಕರಾದ ಬಾಷಾಸಾಬ ತಂದೆ ಖಾಸಿಂಸಾಬ ನಾಯ್ಕೋಡಿ ಈತನು ನನ್ನ ತಮ್ಮನ ಮೇಲೆ ಸಂಶಯ ವ್ಯಕ್ತಪಡಿಸಿದ್ದನು. ಹೀಗಿದ್ದು ಇಂದು ದಿನಾಂಕ: 28/04/2021 ರಂದು ಬೆಳಿಗ್ಗೆ 8.15 ಗಂಟೆಗೆ ನಾನು ಹಾಗು ನಮ್ಮ ತಮ್ಮ ಮಹಿಬೂಬಸಾಬ ತಂದೆ ಬುಡ್ಡೇಸಾಬ ಗಾಣದವರ ಇಬ್ಬರು ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಾ ಇದ್ದಾಗ ನಮ್ಮ ತಮ್ಮನು ರಾಜಭಿ ಇವರ ಹೊಲದಲ್ಲಿ ಮಾತನಾಡುತ್ತಾ ನಿಂತಾಗ ಸದರಿ ರಾಜಭಿ ಇವರ ಸಂಬಂದಿಕರಾದ 1) ಬಾಷಾಸಾಬ ತಂದೆ ಖಾಸಿಂಸಾಬ ನಾಯ್ಕೋಡಿ 2) ಪೀರಸಾಬ ತಂದೆ ಖಾಸಿಂಸಾಬ ನಾಯ್ಕೋಡಿ 3) ಖಾಸಿಂಸಾಬ ತಂದೆ ಬಾಷಾಸಾಬ ನಾಯ್ಕೋಡಿ 4) ರಮಜಾನಭಿ ಗಂಡ ಭಾಷಾಸಾಬ ನಾಯ್ಕೋಡಿ 5) ಚಾಂದಬೀ ಗಂಡ ಪೀರಸಾಬ ಈ ಎಲ್ಲಾ ಜನರು ಏಕಾಏಕಿ ರಾಜಬೀ ಇವರ ಹೊಲದಲ್ಲಿ ಬಂದವರೇ ಅವಳಿಗೆ ಏನಲೆ ಸೂಳಿ ಮಹಿಬೂಬಸಾಬ ಈತನ ಜೊತೆ ಏನು ಮಾತನಾಡುತ್ತಿ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಅವಳು ಆತನ ಜೊತೆ ಮಾತನಾಡಿದರೆ ಏನು ತಪ್ಪಾಯಿತು ಅಂತ ಅಂದಾಗ ಸದರಿಯವರೆಲ್ಲರು ನಮ್ಮ ತಮ್ಮ ಹಾಗೂ ರಾಜಭೀ ಇವರಿಗೆ ಕೊಲೆ ಮಾಡುವ ಉದ್ದೇಶದಿಂದ ಈ ಸೂಳೆಮಕ್ಕಳದು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಬಾಷಾಸಾಬ ಹಾಗೂ ಪೀರಸಾಬ ಇವರು ಅಲ್ಲಿಯೇ ಬಿದ್ದ ಬಡಿಗೆಯಿಂದ ರಾಜಭಿ ಇವಳ ಎರಡೂ ಮೊಳಕೈಗೆ ಹೊಡೆದು ಗುಪ್ತಗಾಯ ಪಡಿಸಿದರು. ಅವರಲ್ಲಿಯ ಖಾಸಿಂಸಾಬ ಈತನು ಅಲ್ಲಿಯೇ ಬಿದ್ದ ಕಲ್ಲಿನಿಂದ ಅವಳ ಮೇಲ್ತುಟಿಗೆ ಹೊಡೆದು ರಕ್ತಗಾಯ ಪಡಿಸಿದನು. ನಂತರ ಅಲ್ಲಿಯೇ ಇದ್ದ ನನ್ನ ತಮ್ಮನಾದ ಮಹಿಬೂಬಸಾಬ ಗಾಣದವರ ಈತನಿಗೆ ಎಲ್ಲರು ಕೈಯಿಂದ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ ಬಾಷಾಸಾಬ ಈತನು ನನ್ನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ತಲೆಗೆ ಬಲವಾಗಿ ಹೊಡೆದು ಭಾರಿ ರಕ್ತಗಾಯಪಡಿಸಿದ್ದಲ್ಲದೆ, ಅದೇ ಬಡಿಗೆಯಿಂದ ನನ್ನ ತಮ್ಮನ ಎಡಗೈ ಮೊಳಕೈ ಹತ್ತಿರ ಹೊಡೆದು ಭಾರಿ ಗುಪ್ತಗಾಯಪಡಿಸಿ ಕೊಲೆಮಾಡಲು ಪ್ರಯತ್ನಿಸಿದ್ದು ಇರುತ್ತದೆ. ನಂತರ ಪೀರಸಾಬ ಈತನು ಈ ಸೂಳೆಯದು ಬಾಳ ಆಗಿದೆ ಅಂತ ಬೈಯುತ್ತಾ ರಾಜಭಿ ಇವಳಿಗೆ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಜಂಪರ ಹಿಡಿದು ಹರಿದು ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ ನಂತರ ಸದರಿ ಇಬ್ಬರು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಬಂದೇನವಾಜ ತಂದೆ ಖಾಜಾಸಾಬ ವನದುರ್ಗ, ಅಮಾದೆ ತಂದೆ ಶೇರ ಅಲಿ ಯತ್ನಾಳ ಹಾಗೂ ನಾನು ಎಲ್ಲರು ಕೂಡಿ ಸದರಿಯವರಿಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ಕಾರಣ ಮೇಲ್ಕಾಣಿಸಿದ 5 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 58/2021 ಕಲಂ: 143, 147, 148, 323, 324, 326, 307, 354, 504, 506, 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 30-04-2021 01:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080