ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29-05-2021

ಗುರಮಿಠಕಲ್ ಪೊಲೀಸ್ ಠಾಣೆ :- 74/2021 ಕಲಂ: 323, 302, 504, ಸಂ.34 ಐಪಿಸಿ : ಇಂದು ದಿನಾಂಕ 28.05.2021 ರಂದು ಮಧ್ಯಾಹ್ನ 1:45 ಗಂಟೆಗೆ ಯಂಪಾಡ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆಂದು ಮಾಹಿತಿ ಬಂದ ಮೇರೆಗೆ ನಾನು ಸಿಬ್ಬಂದಿಯವರನ್ನು ಕರೆದುಕೊಂಡು ಸಮಯ ಮಧ್ಯಾಹ್ನ 2:15 ಗಂಟೆಗೆ ಯಂಪಾಡ ಗ್ರಾಮಕ್ಕೆ ಹೋಗಿ ಮೃತನ ಮನೆಗೆ ಭೇಟಿ ನೀಡಿ ಮೃತನ ತಂದೆಯಾದ ಹಣಮಂತ ತಂದೆ ಭೀಮಯ್ಯ ಕಾಡಪ್ಪನೋರ ಜಾ||ಬೇಡರ ಉ||ಒಕ್ಕಲುತನ ಸಾ||ಮಗದಂಪೂರ ತಾ||ಗುರುಮಠಕಲ್ ಜಿ||ಯಾದಗಿರಿ ಈತನಿಗೆ ವಿಚಾರಿಸಿದಾಗ ಸದರಿಯವರು ಸಮಯ ಸಂಜೆ 4:30 ಗಂಟೆಗೆ ಒಂದು ಲಿಖಿತ ಫಿರ್ಯಾದಿ ಅಜರ್ಿಯನ್ನು ಹಾಜರುಪಡಿಸಿದ್ದು ಅದನ್ನು ಸ್ವೀಕರಿಸಿಕೊಂಡು ಪರಿಶೀಲಿಸಿದ್ದು ಅದರ ಸಾರಾಂಶವೆನೇಂದರೆ ನಾನು ಹಣಮಂತ ತಂದೆ ಭೀಮಯ್ಯ (ಕಾಡಪ್ಪನೋರ) ಸಾ||ಮಗದಂಪೂರ ತಾ||&ಜಿ||ಯಾದಗಿರಿ ಸ್ಥಳ:-ಎಂಪಾಡ ಇದ್ದು ಸಹ ಕುಟುಂಬದೊಂದಿಗೆ ಮಗದಂಪೂರ ಗ್ರಾಮದಲ್ಲಿ ವಾಸವಿದ್ದು ದಿನಾಂಕ 28.05.2021 ರಂದು ನನ್ನ ಮಗನಾದ ಹಣಮಂತ ತಂದೆ ಹಣಮಂತ ವಯಸ್ಸು 26 ವರ್ಷ, ಜಾತಿ: ಬೇಡರ (ಎಸ್.ಟಿ) ನಮ್ಮ ತಾತನ ಸಂಬಂದಿಕರು ಮನೆ ಎಂಪಾಡ ಗ್ರಾಮಕ್ಕೆ ಬಂದಿದ್ದು ಕೃಷಿ ವ್ಯವಸಾಯ ಸಂಬಂದ ಎತ್ತಿನ ಗಳೆ ಸಾಮಾನು (ಹುದ್ದಿಗೆ) ತರಲು ಎಂಪಾಡ ಗ್ರಾಮದ ಅಡವಿಗೆ ಬೆಳಿಗ್ಗೆ 9:00 ಎ.ಎಮ್ ಸುಮಾರಿಗೆ ಹೋಗಿರುತ್ತಾನೆ. ಜೊತೆಯಲ್ಲಿ 5 ಜನರು ಸೇರಿ ಅಡವಿಯಲ್ಲಿ ಹೊಣ ಕಟ್ಟಿಗೆ (ಹುದ್ದಿಗೆ) ಕಡಿಯುವಾಗ ಅರಣ್ಯ ಅಧಿಕಾರಿಗಳು ಬಂದು ನನ್ನ ಮಗನ ಮೇಲೆ ಜೊತೆಗೆ ಇರುವವರ ಮೇಲೆ ಅಡವಿಯಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲದೇ ಎಲ್ಲರನ್ನು ಬೆನ್ನತ್ತಿ ಸುಮಾರು ಒಂದು ಕಿಲೋ ಮೀಟರ ಓಡಿಸಾಡಿ ಇರುತ್ತಾರೆ. ಲಕ್ಷ್ಮಣ ಎಂಬ ವಾಚರ ಹಾಗೂ ಅರಣ್ಯ ಇಲಾಖೆ ಅಧಿಕಾರಿಯವರು ಮನ ಬಂದಂತೆ ಎಲ್ಲರನ್ನು ಬಡಿಗೆಯಿಂದ ಹೊಡೆದಿರುತ್ತಾನೆ. ಹಾಗೂ ಕೊಡಲಿ ಹಾಗೂ ಕುಡಗೋಲ ಕಸಿದುಕೊಂಡಿರುತ್ತಾನೆ. ಅದೇ ಸಮಯದಲ್ಲಿ ನಮ್ಮ ಮಗ ಅವರಿಂದ ತಪ್ಪಿಸಿಕೊಳ್ಳಲು ಓಡುವಾಗ ಅವರು ಬೆನ್ನು ಹತ್ತಿದ್ದರಿಂದ ಕುಸಿದು ಬಿದ್ದು ಜಾಗದಲ್ಲಿ ಮೃತಪಟ್ಟಿರುತ್ತಾನೆ. ಈ ಸಂದರ್ಭದಲ್ಲಿ ನನ್ನ ಮಗನ ಜೊತೆಯಲ್ಲಿರುವ 1]ಭೀಮರಾಯ ತಂದೆ ಸಾಬಣ್ಣ (ನಾಯ್ಕೋಡಿ), 2]ತಿಪ್ಪಣ್ಣ ತಂದೆ ಭೀಮಶಪ್ಪ (ಮುಕ್ಕರೋರ), 3]ಹಣಮಂತ ತಂದೆ ದುರ್ಗಪ್ಪ(ನಾಯ್ಕೋಡಿ), 4]ಅನೀಲ ಕುಮಾರ ತಂದೆ ಶರಣಪ್ಪ (ದೊಡ್ಡಮನಿ), 5]ಭೀಮಪ್ಪ ತಂದೆ ಶರಣಪ್ಪ (ಕಾವಲಿ) ಈ ಮೇಲಿನ ಎಲ್ಲಾರು ಎಂಪಾಡ ಗ್ರಾಮದವರಾಗಿದ್ದು ಅದೇ ಸಮಯದಲ್ಲಿ ನನ್ನ ಅರಣ್ಯ ವಾಚರ ಲಕ್ಷ್ಮಣ ನವರು ಹೊಡೆದಿದ್ದರಿಂದ ಮೃತಪಟ್ಟನೆಂದು ಅಳುತ್ತಿರುವಾಗ ಅರಣ್ಯಾಧಿಕಾರಿ ಲಕ್ಷ್ಮಣ & ಅರಣ್ಯ ಅಧಿಕಾರಿಗಳಾದ ತಾಲೂಕ ಅಧಿಕಾರಿ (ಆರ್.ಎಫ್.ಓ) ಅರಣ್ಯ ರಕ್ಷಕರು ನಮ್ಮನ್ನು ಬಿಟ್ಟು ಓಡಿ ಹೋದರು. ಮೃತಪಟ್ಟಿದ್ದರಿಂದ ಗ್ರಾಮದ ಎಲ್ಲಾ ರೈತ ಬಾಂಧವರು ಬಂದು ಮೃತ ದೇಹವನ್ನು ಮನೆಗೆ ತಂದಿರುತ್ತಾರೆ. ಆದ್ದರಿಂದ ಸಂಬಂದಪಟ್ಟ ಅರಣ್ಯ ಅಧಿಕಾರಿ ಲಕ್ಷ್ಮಣ ಮತ್ತು ತಾಲೂಕ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ದೂರು ಸಲ್ಲಿಸುತ್ತಿದೆ ಅಂತಾ ವಗೈರೆ ನೀಡಿದ ಲಿಖಿತ ದೂರು ಅಜರ್ಿಯನ್ನು ಸ್ವೀಕರಿಸಿಕೊಂಡು ಬಳಿಕ ಸದರಿ ಫಿರ್ಯಾದಿಯ ಅಜರ್ಿಯ ಮೇಲೆ ಮುಂದಿನ ಕ್ರಮ ಜರುಗಿಸಲು ಸಂಜೆ 5:00 ಗಂಟೆಗೆ ಠಾಣೆಗೆ ಬಂದು ಸದರಿ ಫಿರ್ಯಾಧಿ ಅಜರ್ಿಯ ಸಾರಾಂಶದ ಮೇಲಿಂದ ನಾನು ಶ್ರೀಮತಿ ಗಂಗಮ್ಮ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 74/2021 ಕಲಂ: 323, 302, 504 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 73/2021 ಕಲಂ 279, 337, 338 ಐಪಿಸಿ : ದಿನಾಂಕ 28/05/2021 ರಂದು ಸಾಯಂಕಾಲ 5-30 ಗಂಟೆಗೆ ಫಿರ್ಯಾಧಿ ಮತ್ತು ಅವರ ಸಂಬಂಧಿಕರು ಕೂಡಿಕೊಂಡು ಕ್ವಾಟಗೇರಿ ಗ್ರಾಮದಲ್ಲಿ ಮದುವೆಯಿದ್ದ ಪ್ರಯುಕ್ತ ಅಟೋ ನಂ ಕೆ.ಎ-33ಎ-9450 ನೆದ್ದರಲ್ಲಿ ಕುಳಿತುಕೊಂಡು ಹೋಗಿ ಅಲ್ಲಿ ಮದುವೆ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬರುವಾಗ ಮಾರ್ಗಮಧ್ಯ ಕಟಗಿಶಹಾಪೂರ-ಹ್ತತಿಕುಣಿ ರೋಡಿನ ಮೇಲೆ ಅಟೋ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಹೋಗುವಾಗ ಅದೇ ವೇಳೆಗೆ ಎದುರುಗಡೆ ಮೋಟಾರ ಸೈಕಲ್ ನಂ ಕೆ.ಎ-33-ಎಚ್-8536 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಎರಡು ವಾಹನಗಳು ಕಾಲೇಜ್ ಎದುರುಗಡೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿದ್ದರಿಂದ ಸತ್ಯಮ್ಮ ಗಂಡ ಚಂದ್ರಶೇಖರ ದಂಡಂಬಳಿ ಮತ್ತು ಮರೇಪ್ಪ ತಂದೆ ತಿಪ್ಪಣ್ಣ ಕಡೇಚೂರ ಇಬ್ಬರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯಗಳು ಆಗಿರುತತವೆ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 93/2021 ಕಲಂಃ 143,147,148, 323,324,,354,504,506 ಸಂ.149 ಐಪಿಸಿ : ದಿನಾಂಕ: 28/05/2021 ರಂದು 05-30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗಶ್ರೀಮತಿ ದೇವಮ್ಮಗಂಡ ಭೀಮಣ್ಣಕಂಪಾಪೂರ ಸಾ:ದೇವಾಪುರಇವಳು ಠಾಣೆಗೆ ಬಂದುಒಂದು ಗಣಕೀಕರಿಸಿದ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನ್ನಕೊನೆಯ ಮಗಳಾದ ಮಲ್ಲಿಕಾತಂದೆ ಭೀಮಣ್ಣಕಂಪಾಪೂರ ವಯಸ್ಸು:19 ವರ್ಷ ಇವಳನ್ನು ಯಾದಿಗಿರಿ ಪಟ್ಟಣದಅಂಬೇಡ್ಕರ ನಗರದಲ್ಲಿ ವಾಸಿಸುತ್ತಿರುವ ನಾಗಮ್ಮಗಂಡ ದಿ:ಆಂಜನೇಯಈಟೆಇವರ ಮಗನಾದ ಪ್ರಸನ್ನ ಎಂಬ ಯುವಕನೊಂದಿಗೆ ಕೆಲವು ದಿನಗಳ ಹಿಂದೆ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಲಾಗಿತ್ತು ಮತ್ತು ಈಗ ದಿನಾಂಕ: 31-05-2021 ರಂದು ವಿವಾಹ ಮಾಡಲುಗುರು ಹಿರಿಯರು ನಿಶ್ಚಯಿಸಲಾಗಿರುತ್ತದೆ. ಮತ್ತು ಈಗಾಗಲೆ ಮದುವೆ ಕಾರ್ಡಗಳು ಮತ್ತು ಮದುವೆಗೆ ಸಂಬಂಧಪಟ್ಟ ವರನಿಗೆಕೋಡಬೇಕಾದ ಬಂಗಾರ, ಬಟ್ಟೆ ಮತ್ತು ಸೂಲಿಗೆ ಸಾಮಾನುಗಳು ಖರೀದಿ ಮಾಡಿಕೊಂಡುಇನ್ನೇನು ಮದುವೆ ಮಾಡಬೇಕೆನ್ನುವಷ್ಟರಲ್ಲಿ ವರನಕುಟುಂಬದವರು ದಿನಾಂಕ: 22-05-2021 ರಂದು ನಮಗೆ ಪೋನ್ ಮಾಡಿ ನಿಮ್ಮೂರಿನವರಾದ 1) ಶ್ರೀಮತಿ ದೇವಮ್ಮಗಂಡ ಶಿವಪ್ಪ ಕೆಂಭಾವಿ 2) ಮರೆಮ್ಮಗಂಡ ಶಿವಪ್ಪ ಕೆಂಬಾವಿ ಇವರಿಬ್ಬರೂ ನಮ್ಮ ಮನೆಗೆ ಬಂದು ನಿನ್ನ ಮಗಳ ನಡತೆ ಸರಿಇರುವದಿಲ್ಲ ಅವಳನ್ನು ಮದುವೆಯಾಗಬೇಡ್ರಿ ಈಗ ಬಿಟ್ಟು ಬಿಡ್ರಿಎಂದು ನಮಗೆ ಹೇಳಿರುತ್ತಾರೆ ಎಂದು ನಮಗೆ ತಿಳಿಸಿ ಈ ಮದುವೆ ನಾವು ಮಾಡುವುದಿಲ್ಲವೆಂದು ನಮಗೆ ಹೇಳಿದಾಗ ನಾವು ಆಘಾತಗೊಂಡುದೇವಪೂರಗ್ರಾಮದಗುರು ಹಿರಿಯರ ಮುಂದೆ ಈ ವಿಷಯ ತಿಳಿಸಿ ಊರಿನ ಹಿರಿಯರನ್ನುಕರೆದುಕೊಂಡು ದಿನಾಂಕ:23-05-2021 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆದೇವಾಪೂರಗ್ರಾಮದಿಂದಯಾದಿಗಿರಿ ಪಟ್ಟಣದಲ್ಲಿರುವ ಹುಡುಗನ ಮನೆಗೆ ಹೊದೇವು ನಾವು ಹೋಗುವಷ್ಟರಲ್ಲಿ ಮತ್ತೆ ಸದರಿ ಆರೋಪಿಗಳು ಹುಡುಗನಿಗೆ ಮತ್ತು ಹುಡುಗನಕುಟುಂಬದವರಿಗೆ ಪೋನ್ ಮಾಡಿ ಈಗ ನಿಮಗೆ ಹೆಣ್ಣುಕೊಟ್ಟ ಬೀಗರುಜೀಪ್ತಗೆದುಕೊಂಡು ನಿಮ್ಮ ಮನೆಗೆ ಬರುತ್ತಿದ್ದಾರೆ ನೀವು ಯಾವುದೇಕಾರಣಕ್ಕೂ ಮದುವೆ ಮಾಡಿಕೊಳ್ಳಲು ಒಪ್ಪ ಬೇಡ್ರಿ ಅವಳ ನಡತೆ ಸರಿಇರುವದಿಲ್ಲವೆಂದು ಪುನ: ತಿಳಿಸಿರುವ ವಿಷಯವನ್ನು ನಮ್ಮ ಬೀಗರರಿಕಾಡರ್ಿಂಗ ಮಾಡಿಕೊಂಡಿರುತ್ತಾರೆ. ನಾವು ಯಾದಗಿರಿಯಅವರ ಮನೆಗೆ ಹೋಗಿ ವಿಚಾರ ಮಾಡಿದಾಗಅವರು ನಮಗೆ ಬೈದು ನಮ್ಮೂರಿನವರು ಪೋನ್ ಮಾಡಿದ ವಿಷಯವನ್ನುರಿಕಾಡರ್ಿಂಗ ಮಾಡಿದದ್ವನಿ ಸುರಳಿಯನ್ನು ತೋರಿಸಿ ಈ ಮದುವೆ ಮಾಡಿಕೊಳ್ಳುವುದಿಲ್ಲ. ನಿಮ್ಮ ಹುಡುಗಿಯ ನಡತೆ ಸರಿಇರುವದಿಲ್ಲ ಎದ್ದು ನಿಮ್ಮಊರಿಗೆ ಹೋಗಿ ಎಂದು ಬೈದಾಗ ನಾವು ವಾಪಸ್ಸು ನಮ್ಮಊರಿಗೆ ಬಂದೆವು .ನಮ್ಮಊರಿಗೆ ಬಂದ ನಂತರ ನಮ್ಮಗ್ರಾಮದಲ್ಲಿರುವಗುರು ಹಿರಿಯರಿಗೆ ವಿಚಾರ ಮಾಡಿ ನಾವು ದಿನಾಂಕ:23-05-2021 ರಂದು ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ಮಲ್ಲಿಕಾಕೂಡಿಕೊಂಡು ಸದರಿ ಆರೋಪಿಗಳ ಮನೆಯ ಮುಂದೆ ಹೋಗಿ ನಮ್ಮ ಮಗಳ ಬಗ್ಗೆ ಯಾಕೆಅಪಪ್ರಚಾರ ಮಾಡಿದ್ರಿಇದು ಸರಿಯಲ್ಲಾಇದುಒಂದು ಹೆಣ್ಣಿನಜೀವನದ ವಿಷಯವಿರುತ್ತದೆ. ಯಾಕೆ ಹೀಗೆ ಮಾಡದ್ರಿಎಂದು ಕೇಳಿದಾಗ ಮರೆಮ್ಮಈಕೆಯು ಬಂದು ಏ ಬೊಸಡಿ ಆ ಹೆಣ್ಣುಯಾರು ಮದುವೆಯಾಗಬಾರದುಜೀವಂತಕೊರಗಿ ಸಾಯಿಬೇಕಲೇ ಬೊಸಡಿಅಂತಾ ಬೈದಳು ಈಕೆ ಬೈಯುಷ್ಟರಲ್ಲಿ ನನ್ನ ಮಗಳ ಕುಪ್ಪಸವನ್ನು ಹಿಡಿದುಕೊಂಡುಜಗ್ಗಾಡಿಕೂದಲು ಹಿಡಿದುದೇವಮ್ಮಗಂಡ ಶಿವಪ್ಪ ಇವಳು ಹೊಡೆದಿರುತ್ತಾಳೆ. 3) ಶಿವಪ್ಪ ಕೆಂಬಾವಿ ಈತನು ಬಂದು ಸೂಳಿ ಮಕ್ಕಳು ನಮ್ಮ ಮನೆಗೆ ಬಂದು ನಮ್ಮನ್ನು ಕೇಳುವುದಕ್ಕೆ ಎಷ್ಟು ಧೈರ್ಯಇವರನ್ನುಇಲ್ಲೇಖಲಾಸ್ ಮಾಡಿ ಬಿಡಿ ಎಂದುಅವಾಚ್ಯ ಶಬ್ದಗಳಿಂದ ಬೈದು ನನಗೆ ಒದ್ದನು ನಂತರ 4) ಕನಕಪ್ಪತಂದೆ ನಂದಪ್ಪದೊಡ್ಡಮನಿ ಈತನು ನನ್ನ ಸೀರೆ ಹಿಡಿದುಜಗ್ಗಾಡಿ ಏನು ಮಾಡಿಕೊಳ್ಳುತ್ತಿ ಮಾಡಿಕೊಳ್ಳಿ ನಾವು ಹೇಳಿವಿ ಎಂದು ಬೈದು ಇಷ್ಟಕ್ಕೆ ನೀವು ಸುಮ್ಮನಿದ್ದರಿ ಸರಿಇಲ್ಲವಾದರೆ ನಿಮ್ಮನ್ನುಜೀವ ಸಹೀತ ಬಿಡುವದಿಲ್ಲವೆಂದು ಬೈದನು. 5) ಶ್ರೀಮತಿ ಅಯ್ಯಮ್ಮಗಂಡ ಮರೆಪ್ಪ ಮುಷ್ಠಳ್ಳಿ ಈಕೆಯು ಬಂದು ಈ ಉದ್ರಿ ಸೂಳಿಯರು ಸಾಲಲಾರದೆನೆ ನಮ್ಮ ಮನೆಗೆ ಬಂದು ಕೇಳುತ್ತಿದ್ದಾರೆ. ಯಾವುದೆಕಾರಣಕ್ಕೂ ಇವಳನ್ನು ಮದುವೆ ಮಾಡದಂತೆತಡೆಯಬೇಕುಎಂದು ಅವಳು ಬಂದು ಕಾಲಿನಿಂದ ಒದ್ದಳು ನಂತರ 6) ಮೌನೇಶತಂದೆ ನಂದಪ್ಪ ತಳವಾರ ಈತನುಕೂಡ ಬಡಿಗೆತಗೆದುಕೊಂಡು ಬಂದು ಹೊಡೆಯುವದಕ್ಕೆ ಬಂದು ನನ್ನ ಮಗಳಿಗೆ ಒಳಪೆಟ್ಟಾಗುವಂತೆ ಬೆನ್ನಿಗೆ ಹೊಡೆಯುತ್ತಾಇವರಜೀವ ಸಹೀತ ಉಳಿಸಬೇಡ್ರಿ ಎಲ್ಲರೂಕೂಡಿಇವರನ್ನುಖಲಾಸ್ ಮಾಡಿ ಬಿಡೋಣಎಂದುಕೂಗಾಡುತ್ತಿದ್ದಾಗ ನಾನು ಭಯಗೊಂಡುಚಿರಿದಾಗ ನಮ್ಮೂರಿನವರಾದಅಂಬ್ರಪ್ಪತಂದೆ ಶಿವಪ್ಪ ಕಂಪಾಪೂರ ಮತ್ತು ಹಣಮಂತತಂದೆ ಬೀಮಪ್ಪಕಂಪಾಪೂರ ಹಾಗೂ ಇನ್ನಿತರರು ಬಂದು ನಮಗೆ ಹೊಡೆಯುವುದನ್ನು ಬಿಡಿಸಿ ರಕ್ಷಣೆ ಮಾಡಿದರುಇಲ್ಲದಿದ್ದರೆ ನನ್ನ ಮತ್ತು ನನ್ನ ಮಗಳ ಪ್ರಾಣ ಹೋಗುತ್ತಿತ್ತುಇರಲಿ ಈಗ ನಿಮ್ಮಜೀವ ಉಳಿದಿದೆ ಆದರೆಇನ್ನೊಂದು ಸಲ ನಿಮ್ಮಜೀವ ಸಹೀತ ಉಳಿಸುವುದಿಲ್ಲವೆಂದುಕೂಗಾಡಿದನು. ಆಗ ನಮ್ಮಗ್ರಾಮದವರು ನಮಗೆ ರಕ್ಷಣೆ ಮಾಡಿ ನಮ್ಮನ್ನು ನಮ್ಮ ಮನೆಗೆ ಕಳುಹಿಸಿದವರು. ಸದರಿ ಆರೋಪಿಗಳು ನಮ್ಮಜಾತಿಯವರಾಗಿದ್ದು, ಅವರಿಗೂ ನಮಗೂ ಕೆಲವೊಂದು ವಿಷಯದಲ್ಲಿಯಾವಾಗಲು ಆಗಿ ಬರುತ್ತಿರಲಿಲ್ಲ ಇದೇಒಂದುಉದ್ದೇಶವಿಟ್ಟುಕೊಂಡು ನಮ್ಮ ಮಗಳ ಭವಿಷ್ಯವನ್ನು ಹಾಳು ಮಾಡುವ ಹುನ್ನಾರ ನಡೆಸಿ ನನ್ನ ಮಗಳ ವಿವಾಹವನ್ನುತಡೆದಿರುತ್ತಾರೆಕಾರಣ ಸದರಿಆರೋಪಿತರ ವಿರುದ್ದ ಶಿಸ್ತಿನ ಕ್ರಮಕೈಕೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ ನಾವು ಸ್ವತ: ಹೇಳಿ ಕಂಪ್ಯೂಟರಟೈಪ್ ಮಾಡಿಸಿಕೊಟ್ಟಿರುತ್ತೆನೆ. ಮತ್ತು ನಾನು ಗ್ರಾಮದಲ್ಲಿರುವಗುರು ಹಿರಿಯರನ್ನು ವಿಚಾರ ಮಾಡಿಒಂದು ಹೆಣ್ಣಿನಜೀವನಇರುತ್ತದೆ. ಎಂದುತಡವಾಗಿ ಬಂದು ಮಾನ್ಯರವರಲ್ಲಿಅಜರ್ಿ ಸಲ್ಲಿಸಿದ್ದು ಇರುತ್ತದೆ. ಆದ್ದರಿಂದ ದಯಾಳುಗಳಾದ ತಾವುಗಳು ಸದರಿ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ .ಅಂತಾಕೊಟ್ಟಅಜರ್ಿಯ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ :- 76/2021 ಕಲಂ: 143,147,148,323,324,326,354,504,506 ಸಂಗಡ 149 ಐಪಿಸಿ : ಇಂದು ದಿನಾಂಕ 28.05.2021 ರಂದು 8.30 ಪಿಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಪಾರ್ವತಿ ಗಂಡ ಜೆಟ್ಟೆಪ್ಪ ಮುಷ್ಠಳ್ಳಿ ವಯಾ|| 35 ಜಾ|| ಹಿಂದೂ ಹೊಲೆಯ ಉ|| ಕೂಲಿಕೆಲಸ ಸಾ|| ಕೆಂಭಾವಿ ತಾ|| ಸುರಪೂರ ಇವರು ಸರಕಾರಿ ಆಸ್ಪತ್ರೆ ಶಹಾಪೂರದಲ್ಲಿ ಕೊಟ್ಟ ಹೇಳಿಕೆ ಸಾರಾಂಶವೇನಂದರೆ ನನಗೆ ಎರಡು ಜನ ಹೆಣ್ಣು ಮಕ್ಕಳು ಹಾಗು ಒಬ್ಬ ಗಂಡು ಮಗನಿರುತ್ತಾನೆ. ನನ್ನ ಗಂಡನಾದ ಜೆಟ್ಟೆಪ್ಪ ಈತನು ಟೇಲರಿಂಗ್ ಕೆಲಸ ಮಾಡಿಕೊಂಡು ಇರುತ್ತಾನೆ. ನಮ್ಮ ಮನೆ ಹಾಗು ಶಂಕರ ತಂದೆ ಜೆಟ್ಟೆಪ್ಪ ಕಟ್ಟಿಮನಿ ಇವರ ಮನೆ ಆಜುಬಾಜು ಇದ್ದು ನಮ್ಮ ಮಗಳಾದ ವೀಣಾ ಇವಳಿಗೆ ನಮ್ಮ ಪಕ್ಕದ ಮನೆಯ ಶಂಕರ ಕಟ್ಟಿಮನಿ ಈತನು ಕೆಟ್ಟದಾಗಿ ಬೈದಿದ್ದು ಆಗ ನನ್ನ ಮಗಳಾದ ವೀಣಾ ಇವಳು ನನ್ನ ಮುಂದೆ ಬಂದು ತಿಳಿಸಿದ್ದು ನಾನು ಶಂಕರ ಈತನಿಗೆ ಕೇಳಿದರಾಯಿತು ಅಂತ ಸುಮ್ಮನಿದ್ದೆನು. ಹೀಗಿದ್ದು ದಿನಾಂಕ 26.05.2021 ರಂದು ಬೆಳಿಗ್ಗೆ 07.30 ಗಂಟೆಯ ಸುಮಾರಿಗೆ ನಾನು ಹಾಗು ನನ್ನ ಗಂಡನಾದ ಜೆಟ್ಟೆಪ್ಪ ತಂದೆ ಶರಣಪ್ಪ ಮುಷ್ಠಳ್ಳಿ ನಾವಿಬ್ಬರೂ ನಮ್ಮ ಮನೆಯ ಮುಂದೆ ನಿಂತು ಶಂಕರ ಕಟ್ಟಿಮನಿ ಈತನಿಗೆ ನಮ್ಮ ಮಗಳಿಗೆ ಯಾಕೇ ಬೈದಿರುವಿ ಅಂತ ಕೇಳಿದಾಗ ಮನೆಯಲ್ಲಿದ್ದ 1] ಶಂಕರ ತಂದೆ ಜೆಟ್ಟೆಪ್ಪ ಕಟ್ಟಿಮನಿ 2] ಶರಣಪ್ಪ ತಂದೆ ಜೆಟ್ಟೆಪ್ಪ ಕಟ್ಟಿಮನಿ 3] ಬೋರಮ್ಮ ಗಂಡ ಶರಣಪ್ಪ ಕಟ್ಟಿಮನಿ 4] ಶಶಿಕಲಾ ಗಂಡ ಶಂಕರ ಕಟ್ಟಿಮನಿ 5] ಪರಶುರಾಮ ತಂದೆ ಶರಣಪ್ಪ ಕಟ್ಟಿಮನಿ 6] ಅಂಬ್ರವ್ವ ಗಂಡ ಜೆಟ್ಟೆಪ್ಪ ಕಟ್ಟಿಮನಿ ಸಾ|| ಎಲ್ಲರೂ ಕೆಂಭಾವಿ ಇವರು ನಮ್ಮ ಮನೆಯ ಅಂಗಳದಲ್ಲಿ ಗುಂಪುಕಟ್ಟಿಕೊಂಡು ಬಂದವರೇ ಏನಲೇ ಸೂಳೇ ನಮಗೆ ಕೇಳುವವಳು ನೀನು ಯಾರು ಅಂತ ಅಂದಾಗ ನನ್ನ ಗಂಡನಾದ ಜೆಟ್ಟೆಪ್ಪ ಮುಷ್ಠಳ್ಳಿ ಈತನು ನನ್ನ ಹೆಂಡತಿಗೆ ಯಾಕೇ ಬೈಯುತ್ತಿ ಅಂತ ಕೇಳಿದಾಗ ಮೇಲ್ಕಾಣಿಸಿದ ಎಲ್ಲಾ ಜನರು ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಯುತ್ತಾ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಶಂಕರ ಕಟ್ಟಿಮನಿ ಈತನು ನನ್ನ ಗಂಡನಿಗೆ ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ಆತನ ಮೂಗಿಗೆ, ಬಲಗಣ್ಣಿಗೆ ಹಾಗು ಹೊಟ್ಟೆಗೆ ಅಲ್ಲದೆ ಬೆನ್ನಿಗೆ ಗುದ್ದಿ ಗುಪ್ತಗಾಯ ಪಡಿಸುತ್ತಿದ್ದಾಗ ಅವನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಾನು ಬಿಡಿಸಲು ಹೋದಾಗ ನನಗೂ ಸಹ ಬೋರಮ್ಮ ಹಾಗು ಶಶಿಕಲಾ ಇವರು ಕೂದಲು ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಶರಣಪ್ಪ ಕಟ್ಟಿಮನಿ ಹಾಗು ಪರಶುರಾಮ ಕಟ್ಟಿಮನಿ ಇವರು ಅಲ್ಲಿಯೇ ಬಿದ್ದ ಕಲ್ಲಿನಿಂದ ನನ್ನ ಮೊಳಕಾಲಿಗೆ, ಟೊಂಕಕ್ಕೆ ಹೊಡೆಯುತ್ತಿದ್ದಾಗ ಶರಣಪ್ಪ ಕಟ್ಟಿಮನಿ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬಲಗೈ ಮುಡ್ಡಿಗೆ ಭಲವಾಗಿ ಹೊಡೆದಿದ್ದು ಕೈ ಮುರಿದಂತಾಗಿ ಭಾರೀ ಗುಪ್ತಗಾಯವಾಗಿರುತ್ತದೆ. ನಂತರ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅವರಲ್ಲಿಯ ಶಂಕರ ಕಟ್ಟಿಮನಿ ಈತನು ಈ ಸೂಳೆಯದು ಬಹಾಳ ಆಗಿದೆ ಅಂತ ಬೈಯುತ್ತಾ ನನಗೆ ಮಾನಬಂಗ ಮಾಡುವ ಉದ್ದೇಶದಿಂದ ಸೀರೆ ಹಾಗು ಕೂದಲು ಹಿಡಿದು ಎಳೆದಾಡಿ ಮಾನಬಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ನಂತರ ನಾನು ಹಾಗು ನನ್ನ ಗಂಡ ಇಬ್ಬರೂ ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ರಾಯಪ್ಪ ತಂದೆ ಮರಲಿಂಗಪ್ಪ ಬಡಿಗೇರ, ಶಾಂತಮ್ಮ ಗಂಡ ರಾಯಪ್ಪ ಬಡಿಗೇರ ಹಾಗು ಯಲ್ಲಮ್ಮ ಗಂಡ ಬಸಲಿಂಗಪ್ಪ ಬಸರಿಗಿಡ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾವು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಅಂಬ್ಯೂಲೆನ್ಸ ಮೂಲಕ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಉಪಚಾರ ಪಡೆದುಕೊಳ್ಳುತ್ತಿದ್ದು ಕಾರಣ ಮೇಲ್ಕಾಣಿಸಿದ ಆರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 76/2021 ಕಲಂ 143,147,148,323,324,326,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ನಗರ ಪೊಲೀಸ್ ಠಾಣೆ:- 61/2021 ಕಲಂ 188, 269, 270 ಐಪಿಸಿ ಸಂಗಡ ಕಲಂ 51 ಖಿಜ ಆಚಿಚಿಣಜಡಿ ಒಚಿಟಿಜರಟಜಟಿಣ ಂಛಿಣ 2005, : ಇಂದು ದಿನಾಂಕ 28/05/2021 ರಂದು ಮಧ್ಯಾಹ್ನ 12-00 ಗಂಟೆಗೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೇನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಇಂದು ದಿನಾಂಕ 28/05/2021 ರಂದು ಬೆಳಿಗ್ಗೆ 06-00 ಗಂಟೆಯಿಂದ 12-00 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಕೊಡಲಾಗಿದ್ದು, ನಾನು ಸೌಮ್ಯ ಎಸ್.ಆರ್. ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ಮತ್ತು ಠಾಣೆಯ ಸಿಬ್ಬಂದಿ ಜನರಾದ ಜಗನಾಥರೆಡ್ಡಿ ಹೆಚ್.ಸಿ 10, ಸಾಬರೆಡ್ಡಿ ಪಿ.ಸಿ 379 ಎಲ್ಲರು ಕೂಡಿ ನಮ್ಮ ಸಕರ್ಾರಿ ಜೀಪ್ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಲಾಕ್ಡೌನ್ ಬಂದೋಬಸ್ತ ಹಾಗೂ ನಗರದಲ್ಲಿ ಪೆಟ್ರೋಲಿಂಗ್ ಕುರಿತು ಹೋದಾಗ ಇಂದು ಬೆಳಿಗ್ಗೆ 11-30 ಗಂಟೆಗೆ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರೋಡಿನ ತರಕಾರಿ ಮಾಕರ್ೇಟ್ ಹತ್ತಿರ ಇರುವ ನ್ಯೂ ವೀರಭದ್ರೇಶ್ವರ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರದ ಮುಂದೆ ಸಾರ್ವಜನಿಕರು ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಕಿರಾಣಿ ಖರೀದಿ ಮಾಡುತಿದ್ದರು. ಇದನ್ನು ನೋಡಿದ ನಾವು ಅಲ್ಲಿಗೆ ಹೋಗಿ ಕಿರಾಣಿ ಅಂಗಡಿಯ ಮಾಲಿಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಅಮರೇಶ ಸ್ವಾಮಿ ತಂದೆ ಸುಭಾಷಸ್ವಾಮಿ ವಯಾ 40 ವರ್ಷ, ಜಾ|| ಹಿರೇಮಠ ಉ|| ಕಿರಾಣಿ ವ್ಯಾಪಾರ ಸಾ|| ಟಿ.ಬಿ ರೋಡ ಯಾದಗಿರಿ ಅಂತಾ ತಿಳಿಸಿದನು. ಸದರಿಯವನಿಗೆ ನಾವು ತಿಳುವಳಿಕೆ ಹೇಳಿ ಜನರಿಗೆ ಸಮಾಜಿಕ ಅಂತರದಲ್ಲಿ ನಿಲ್ಲಿಸಿದ್ದು ಇರುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ವಿಧಿಸಿ, ಸಾರ್ವಜನಕರು ಖಡ್ಡಾಯಾಗಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವಿರುವ ಬಗ್ಗೆ ತಿಳಿದ್ದಿದ್ದು, ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ ನ್ಯೂ ವೀರಭದ್ರೇಶ್ವರ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರದಲ್ಲಿ ಮಾಲಿಕರಾದ ಅಮರೇಶ ಸ್ವಾಮಿ ತಂದೆ ಸುಭಾಷಸ್ವಾಮಿ ಇವರು ತಮ್ಮ ಕಿರಾಣಿ ಅಂಗಡಿಯ ಮುಂದೆ ಯಾವುದೇ ರೀತಿಯ ಸಮಾಜಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು ಗುಂಪು ಗುಂಪಾಗಿ ಸೇರುವದರಿಂದ ಈತನ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇಂದು ದಿನಾಂಕ 28/05/2021 ರಂದು ಮಧ್ಯಾಹ್ನ 12-00 ಗಂಟೆಗೆ ಠಾಣೆಗೆ ಬಂದು ಈ ವರದಿ ಸಲ್ಲಿಸುತ್ತಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ನಾನು ಯಾದಗಿರಿ ನಗರ ಠಾಣೆ ಗುನ್ನೆ ನಂ 61/2021 ಕಲಂ 188, 269, 270 ಐಪಿಸಿ ಸಂಗಡ ಕಲಂ 51 ಖಿಜ ಆಚಿಚಿಣಜಡಿ ಒಚಿಟಿಜರಟಜಟಿಣ ಂಛಿಣ 2005, ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ ಠಾಣೆ :- 42/2021 ಕಲಂ: 32, 34 ಕೆ.ಇ ಆಕ್ಟ್ : ಇಂದು ದಿನಾಂಕ: 28/05/2021 ರಂದು 3:45 ಪಿ.ಎಮ್ಕ್ಕೆ ಸಕರ್ಾರಿ ತಫರ್ೇ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಫನ ಪತ್ರ ಹಾಜರು ಪಡೆಸಿದ್ದುದರ ಸಾರಾಂಶವೆನೇಂದರೆ ದಿನಾಂಕ: 28/05/2021 ರಂದು 1:30 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ನಾರಾಯಣಪೂರ-ಲಿಂಗಸ್ಗೂರ ಮುಖ್ಯ ರಸ್ತೆಯ ಮೇಲೆ ಲಿಂಗಸೂರ ಕಡೆಗೆ ಮಹೀಂದ್ರ ಪಿಕ್ಅಪ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ನಾನು, ಸಿಬ್ಬಂದಿಯವರಿಗೆ ಮತ್ತು ಪಂಚರೊಂದಿಗೆ ಠಾಣೆಯಿಂದ ಸರಕಾರಿ ಜೀಪ್ ನಂ ಕೆ.ಎ-33 ಜಿ.0098 ನೇದ್ದರಲ್ಲಿ 2:15 ಪಿ.ಎಮ್.ಕ್ಕೆ ಹೊರಟ 2:25 ಪಿ.ಎಮ್.ಕ್ಕೆ ನಿಸಗರ್ಾ ಧಾಬಾದ ಹತ್ತಿರ ಹೋಗಿ ನಿಂತುಕೊಂಡಾಗ ನಾರಾಯಣಪೂರ ಕಡೆಯಿಂದ ಮಹೀಂದ್ರ ಪಿಕ್ಅಪ್ ವಾಹನ ಬಂದಿದ್ದು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು ಆಗ ಮಹೀಂದ್ರ ಪಿಕ್ಅಪ್ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸಿದ್ದು ವಾಹನವನ್ನು ಪರಿಶೀಲಿಸಲಾಗಿ ಮಹೀಂದ್ರ ಪಿಕ್ಅಪ್ ವಾಹನ ನಂ ಕೆ.ಎ.33, 2331 ಇದ್ದು ವಾಹನದಲ್ಲಿ ಇಬ್ಬರೂ ವ್ಯಕ್ತಿಗಳಿದ್ದು ಅವರ ಜೊತೆ ಐದು ರಟ್ಟಿನ ಬಾಕ್ಸ್ಗಳಿದ್ದವು. ಮೊದಲು ಎರಡು ಬಾಕ್ಸ್ ತೆರೆದು ನೋಡಲಾಗಿ ಅದರಲ್ಲಿ 180ಎಮ್ಎಲ್ದ ಒರಿಜನಲ್ ಚಾಯ್ಸ್ ಟೆಟ್ರಾಪ್ಯಾಕಗಳು ಇದ್ದು ಒಂದು ಬಾಕ್ಸ್ನಲ್ಲಿ ಎಣಿಕೆ ಮಾಡಿ ನೋಡಲಾಗಿ 48 ಟೆಟ್ರಾಪ್ಯಾಕಗಳು ಇದ್ದವು ಎರಡು ಬಾಕ್ಸಗಳು ಸೇರಿ 180ಎಮ್ಎಲ್ದ 96 ಒರಿಜನಲ್ ಚಾಯ್ಸ್ ಟೆಟ್ರಾಪ್ಯಾಕಗಳು ಇದ್ದು. ಒಂದು ಟೆಟ್ರಾಪ್ಯಾಕ ಬೇಲೆ 70.26/- ರು ಒಟ್ಟು 96 ಟೆಟ್ರಾಪ್ಯಾಕಗಳ ಬೆಲೆ 96ಥ70.26 = 6744.96/- ರೂ ಆಗುತ್ತಿದ್ದು, ಮತ್ತೆ ಎರಡು ರಟ್ಟಿನ ಬಾಕ್ಸ್ಗಳನ್ನು ತೆರೆದು ನೋಡಲಾಗಿ ಅವುಗಳಲ್ಲಿ 650ಎಮ್ಎಲ್ನ ಕಿಂಗ್ಪಿಶರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರ್ ಬಾಟಲಿಗಳು ಇದ್ದು ಒಂದು ಬಾಕ್ಸ್ನಲ್ಲಿ 12ರಂತೆ ಎರಡು ಬಾಕ್ಸ್ಗಳಲ್ಲಿ 650ಎಮ್ಎಲ್ನ ಕಿಂಗ್ಪಿಶರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರ್ನ 24 ಗಾಜಿನ ಬಾಟಲಿಗಳು ಇದ್ದವು. ಒಂದು ಬಿಯರ ಬಾಟಲಿಯ ಬೇಲೆ 150/- ರೂ ಇದ್ದು ಒಟ್ಟು 24 ಬಿಯರ ಬಾಟಲಿಯ ಬೆಲೆ 24ಥ150=3600/-ರೂ ಆಗುತ್ತಿದ್ದು, ಇನ್ನೊಂದು ರಟ್ಟಿನ ಬಾಕ್ಸ್ ತೆರೆದು ನೋಡಲಾಗಿ ಅದರಲ್ಲಿ 180 ಎಮ್ಎಲ್ದ 48 ಐವಾಡ್ರ್ಸ ವಿಸ್ಕಿ ಟೆಟ್ರಾಪ್ಯಾಕಗಳು ಇದ್ದವು. ಒಂದು ಐವಾಡ್ರ್ಸ ವಿಸ್ಕಿ ಟೆಟ್ರಾಪ್ಯಾಕನ ಬೇಲೆ 70.26/- ರೂ ಆಗುತ್ತಿದ್ದು 48 ಐವಾಡ್ರ್ಸ ವಿಸ್ಕಿ ಟೆಟ್ರಾಪ್ಯಾಕನ ಬೆಲೆ 48ಥ70.26= 3372.48/- ರೂ ಆಗುತ್ತಿದ್ದು ಇರುತ್ತದೆ. ಒಟ್ಟು ಮದ್ಯ 41ಲೀಟರ್ 520 ಎಮ್ಎಲ್ ಮದ್ಯದ ಒಟ್ಟು ಮೊತ್ತ 13717.44/-ರೂ ಆಗುತ್ತದೆ. ಮಹೀಂದ್ರ ಪಿಕ್ಅಪ್ ವಾಹನದ ಚಾಲಕನ ಹೆಸರು ಮತ್ತು ವಿಳಾಸದ ಬಗ್ಗೆ ವಿಚಾರಿಸಲಾಗಿ ತನ್ನ ಹೆಸರು ಸಂತೋಷ ತಂದೆ ಲಾಲಪ್ಪ ಪವ್ಹಾರ ವ||28ವರ್ಷ ಜ|| ಹಿಂದೂ ಲಂಬಾಣಿ ಉ|| ವ್ಯಾಪಾರ ಸಾ|| ಜಂಗಿರಾಂಪೂರ ತಾಂಡಾ ತಾ|| ಲಿಂಗಸ್ಗೂರ ಜಿ||ರಾಯಚೂರ ಅಂತಾ ತಿಳಿಸಿದ್ದು ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಾಗಿ ತನ್ನ ಹೆಸರು ಹಣಮಂತ ತಂದೆ ಹುಲಗಪ್ಪ ಕಲಮಂಗಿ ವ|| 30ವರ್ಷ ಜಾ|| ಹಿಂದೂ ಕುರುಬರ ಉ|| ವ್ಯಾಪಾರ ಸಾ|| ಸುಣಕಲ್ಲ ತಾ|| ಲಿಂಗಸ್ಗೂರ ಜಿ|| ರಾಯಚೂರ ಅಂತಾ ತಿಳಿಸಿದ್ದು ಇರುತ್ತದೆ. ಮಹೀಂದ್ರ ಪಿಕ್ಅಪ್ ವಾಹನದಲ್ಲಿ ಮದ್ಯದ ಸಾಗಾಣಿಕೆ ಮತ್ತು ಖರೀದಿಯ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ. ಮದ್ಯ ಮಾರಾಟ ಮಾಡಲು ಪರವಾನಿಗೆಯ ಬಗ್ಗೆ ವಿಚಾರಿಸಲಾಗಿ ಯಾವುದೆ ಪರವಾನಿಗೆ ಇರುವದಿಲ್ಲ ಅಂತಾ ತಿಳಿಸಿದರು. ಮಹೀಂದ್ರ ಪಿಕ್ಅಪ್ ವಾಹನದಲ್ಲಿ ಇದ್ದ ಮದ್ಯದ ಐದು ರಟ್ಟಿನ ಬಾಕ್ಸ್ಗಳಲ್ಲಿನ 180ಎಮ್ಎಲ್ದ ಒರಿಜನಲ್ ಚಾಯ್ಸ್ನ 96 ಟೆಟ್ರಾಪ್ಯಾಕಗಳನ್ನು 650 ಎಮ್ಎಲ್ನ ಕಿಂಗ್ಪಿಶರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರ್ 24 ಬಾಟಲಿಗಳು ಹಾಗೂ 180 ಎಮ್ಎಲ್ದ 48 ಐವಾಡ್ರ್ಸ ವಿಸ್ಕಿ ಟೆಟ್ರಾಪ್ಯಾಕಗಳನ್ನು ರಟ್ಟಿನ ಬಾಕ್ಸ ಸಮೇತ ಪ್ರತ್ಯೇಕವಾಗಿ ಬಿಳಿಯ ಅರಿವೆಯಿಂದ ಕಟ್ಟಿ ಅರಗಿನಿಂದ ಎನ್ ಎಂಬ ಅಕ್ಷರದ ಶೀಲ್ನಿಂದ ಶೀಲ್ಮಾಡಿದ್ದು ಇರುತ್ತದೆ. ಕೇಸಿನ ಮುಂದಿನ ಪುರಾವೆ ಕುರಿತು ಮಹೀಂದ್ರ ಪಿಕ್ಅಪ್ ವಾಹನ ನಂ.ಕೆಎ-33, 2331 ಅ.ಕಿ.60,000=00 ರೂ ನೇದ್ದನ್ನು ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ದಿನಾಂಕ:28/05/2021 ರಂದು 2:30 ಪಿ.ಎಮ್. ದಿಂದ 3:30 ಪಿ.ಎಮ್ವರೆಗೆ ಕೈಕೊಂಡು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಇಬ್ಬರ ಆರೋಪಿತರೊಂದಿಗೆ ಈ ಅಸಲ್ ಜಪ್ತಿ ಪಂಚನಾಮೆಯನ್ನು ಹಾಜರು ಪಡೆಸಿದ್ದು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೊರಟಿದ್ದ ಸದರಿ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 42/2021 ಕಲಂ : 32, 34 ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 29-05-2021 11:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080