ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/02/2021

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ:- 06/2021 ಕಲಂ: 279, 337, 338 ಐಪಿಸಿ ;- ದಿನಾಂಕ 03.02.2021 ರಂದು ಎಂದಿನಂತೆ ಪರಮವ್ವ ಮುಂಜಾನೆ 10:00 ಗಂಟೆಗೆ ಕಕ್ಕೇರಾ ಸಂತೆ ಇರುವದರಿಂದ ತಯಾರಾಗಿ ಯಲಗಟ್ಟೆರದೊಡ್ಡಿಯ ರಸ್ತೆಯ ಮೇಲೆ ಬಂದು ನಿಂತೆನು, ಅದೇ ಸಮಯಕ್ಕೆ ಅಂಬಾನಗರದ ಭೀಮಣ್ಣ ತಂದೆ ಹಣಮಂತ ಬೆಣಸಿಗಡ್ಡಿ ವಯ:32 ವರ್ಷ ಉ:ಆಟೋ ಡ್ರೈವರ್ ಜಾತಿ:ಹಿಂದೂ ಬೇಡರ ಸಾ:ಅಂಬಾನಗರ ತಾ:ಸುರಪುರ ಇತನು ಕಪ್ಪು-ಹಳದಿ ಬಣ್ಣದ ಟಂಟಂ ನಂ:ಕೆಎ-33 ಎ-5675 ನೇದ್ದನ್ನು ಚಲಾಯಿಸಿಕೊಂಡು ಬಂದು ನನ್ನ ಹತ್ತಿರ ನಿಲ್ಲಿಸಿ ನಾನು ಇವತ್ತು ಕಕ್ಕೇರಾ ಸಂತೆಗೆ ಹೋಗುತ್ತಿದ್ದೇನೆ ಬರ್ರಿ ನಿಮಗೂ ಸಹ ಕಕ್ಕೇರಾ ಸಂತೆಗೆ ಕರೆದುಕೊಂಡು ಹೋಗುತ್ತೇನೆ ನೀವು ತಿಳಿದಷ್ಟು ಹಣ ಕೊಡ್ರಿ ಅಂತಾ ಅಂದನು. ಆಗ ನಾನು ಭೀಮಣ್ಣ ತಂದೆ ಹಣಮಂತ ಬೆಣಸಿಗಡ್ಡಿ ಇತನು ತಂದಿರುವ ಟಂಟಂನಲ್ಲಿ ಕುಳಿತುಕೊಂಡು ಕಕ್ಕೇರಾ ಕಡೆ ಬರುತ್ತಿದ್ದೇನು, ನಮ್ಮ ಜೊತೆ ಮೇಘನಾಬಾಯಿ ಗಂಡ ದಾವರೆಪ್ಪ ಚವ್ಹಾಣ ಸಾ-ಪೀರುನಾಯಕತಾಂಡಾ, ಕಂಠೆಮ್ಮ ಗಂಡ ದುರ್ಗಪ್ಪ ರಾಜಾಪೂರ ಸಾ-ಚಿಂಚೋಡಿ ತಾ-ದೇವದುರ್ಗ (ಹಾ.ವ.ಯಲಗಟ್ಟೆರದೊಡ್ಡಿ), ಜುಮಲಾ ಗಂಡ ಬಂದಗಿಸಾಬ ಹೊಳೆರ ಸಾ-ಹೊಳೆರದೊಡ್ಡಿ ಕಕ್ಕೇರಾ ಮತ್ತು ಗಂಗಾಬಾಯಿ ತಂದೆ ದಾವರೆಪ್ಪ ಚವ್ಹಾಣ ಸಾ-ಪೀರುನಾಯಕತಾಂಡಾ ಎಲ್ಲರೂ ಕೂಡಿಕೊಂಡು ಅಂಬಾನಗರದ ಭೀಮಣ್ಣ ತಂದೆ ಹಣಮಂತ ಬೆಣಸಿಗಡ್ಡಿ ಇತನು ತಂದಿರುವ ಕಪ್ಪು-ಹಳದಿ ಬಣ್ಣದ ಟಂಟಂ ನಂ:ಕೆಎ-33 ಎ-5675 ನೇದ್ದರಲ್ಲಿ ಕಕ್ಕೇರಾಗೆ ಹೋಗುತ್ತಿರುವಾಗ ಚಿಂಚೋಡಿಯರದೊಡ್ಡಿ ಸಮೀಪ ಬರುತ್ತಿದ್ದಂತೆ ಆಟೋ ಡ್ರೈವರನಾದ ಭೀಮಣ್ಣ ತಂದೆ ಹಣಮಂತ ಬೆಣಸಿಗಡ್ಡಿ ತನ್ನ ಟಂಟಂ ನಂ:ಕೆಎ-33 ಎ-5675 ನೇದ್ದನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿರುವಾಗ ಏ ತಮ್ಮ ನಿಧಾನಕ್ಕೆ ಹೋಗು ಅಂದರೂ ಸಹ ನಮ್ಮ ಮಾತಿಗೆ ಕ್ಯಾರೆ ಅನ್ನದೇ ಭೀಮಣ್ಣ ಇತನು ಅಂದಾಜು ಸಮಯ ಮುಂಜಾನೆ 10:30 ಗಂಟೆಗೆ ಟಂಟಂ ಅನ್ನು ವೇಗವಾಗಿ ಓಡಿಸಿ ಒಮ್ಮೆಲೇ ತಿರುಗಿಸಿದನು, ಇದರಿಂದ ಟಂಟಂ ಒಮ್ಮೆಲೇ ಉರುಳಿ ಬಿತ್ತು, ಟಂಟಂನಲ್ಲಿ ನಾನು ಸೇರಿದಂತೆ ಮೇಘನಾಬಾಯಿ ಗಂಡ ದಾವರೆಪ್ಪ ಚವ್ಹಾಣ, ಕಂಠೆಮ್ಮ ಗಂಡ ದುರ್ಗಪ್ಪ ರಾಜಾಪೂರ, ಜುಮಲಾ ಗಂಡ ಬಂದಗಿಸಾಬ ಹೊಳೆರ ಮತ್ತು ಗಂಗಾಬಾಯಿ ತಂದೆ ದಾವರೆಪ್ಪ ಚವ್ಹಾಣ ಎಲ್ಲರೂ ಸಹ ಟಂಟಂ ಸಮೇತ ನೆಲಕ್ಕೆ ಬಿದ್ದೆವು. ನೆಲಕ್ಕೆ ಬಿದ್ದ ರಭಸಕ್ಕೆ ಎಲ್ಲರಿಗೂ ಗಾಯಗಳಾಗಿ ಚೀರಾಡುತ್ತೀರುವಾಗ ಅಲ್ಲಿಯೇ ಹೊಲದಲ್ಲಿ ಇದ್ದ ದೇವಪ್ಪ ತಂದೆ ಸಾಬಣ್ಣ ಬ್ಯಾಳಿ ಸಾ: ಬ್ಯಾಳೆರದೊಡ್ಡಿ ಮತ್ತು ರಸ್ತೆಯ ಮೇಲೆ ಹೋಗುತ್ತಿರುವ ಶಬ್ಬೀರ್ ತಂದೆ ಹುಸೇನಸಾಬ ಕಕ್ಕೇರಾ ಇವರು ನಮ್ಮ ಸಮೀಪ ಬಂದು ನಾವು ನರಳಾಡುತ್ತಿದ್ದನ್ನು ನೋಡಿ ನಮ್ಮೆಲ್ಲರನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಕ್ಕೇರಾ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಟಂಟಂ ಉರುಳಿ ಬಿದ್ದ ರಭಸಕ್ಕೆ ನನಗೆ ತೊಡೆಗೆ,ಎದೆಗೆ,ಎಡಗೈಗೆ,ತಲೆ ಹಿಂಭಾಗಕ್ಕೆ ಮತ್ತು ಹೊಟ್ಟೆಗೆೆ ಭಾರಿ ಗುಪ್ತಗಾಯ ಆಗಿರುತ್ತದೆ. ಅದೇ ರೀತಿ ನಮ್ಮ ಜೊತೆ ಟಂಟಂನಲ್ಲಿ ಬಂದವರಿಗೂ ಕೂಡ ಗಾಯಗಳಾಗಿರುತ್ತದೆ. ಆದ ಕಾರಣ ಟಂಟಂ ಅನ್ನು ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ನಮಗೆ ಅಪಘಾತ ಪಡಿಸಿದ ಭೀಮಣ್ಣ ತಂದೆ ಹಣಮಂತ ಬೆಣಸಿಗಡ್ಡಿ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:06/2021 ಕಲಂ 279, 337 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 24/2021 ಕಲಂ 379 ಐಪಿಸಿ ಮತ್ತು 44 ಕೆ.ಎಮ್.ಎಮ್.ಸಿ. ಆರ್ 1994;- ದಿನಾಂಕ: 02-02-2021 ರಂದು ಫಿರ್ಯಾದಿ ದಾರರು ಇ.ಆರ್.ಎಸ್.ಎಸ್. ವಾಹನ ರೆಸ್ಪಾಂಟೆಂಟ ಕರ್ತವ್ಯದಲ್ಲಿದ್ದಾಗ ಕಂಟ್ರೋಲ ರೂಮ ದಿಂದ ಮಹಿತಿ ಬಂದಿದ್ದೇನಂದರೆ ಹೈಯಾಳ ಬಿ ಗ್ರಾಮದಲ್ಲಿ ಯಾರೋ ಟ್ರ್ಯಾಕ್ಟರ ದಲ್ಲಿ ಕಳ್ಳತದಿಂದ ಮರಳು ಸಾಗಿಸುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ತಕ್ಷಣ ಹೋಗಿ ಟ್ರ್ಯಾಕ್ಟರ ಹಿಡಿದು ತಂದಿದ್ದು ಟ್ರ್ಯಾಕ್ಟರ ಚಾಲಕ ಓಡಿ ಹೋಗಿರುತ್ತಾನೆ ಟ್ರ್ಯಾಕ್ಟರಗೆ ನಂಬರ ಇರುವುದಿಲ್ಲ ಅಂತಾ ಇದ್ದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2021 ಕಲಂ 379 ಐಪಿಸಿ ಮತ್ತು 44 ಕೆ.ಎಮ್.ಎಮ್.ಸಿ. ಆರ್ 1994 ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 30/2021 ಕಲಂಃ 306, ಸಂ 149 ಐಪಿಸಿ;- ದಿನಾಂಕ: 03/02/2021 ರಂದು 12:30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀಮತಿ ರೆಣುಕಾ ಗಂಡ ದಿ||ನಿಂಗಪ್ಪ ಯಾದವ್ ವಯಾ:26 ವರ್ಷ ಜಾತಿ||ಯಾದವ್ ಉ||ಕೂಲಿ ಕೆಲಸ ಸಾ||ಚಿಕ್ಕನಳ್ಳಿ ತಾ||ಸುರಪೂರ ಇವಳು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೇಂದರೆ. ನನಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಹಿಂದು ಸಂಪ್ರದಾಯದ ಪ್ರಕಾರ ಚಿಕ್ಕನಳ್ಳಿ ಗ್ರಾಮದ ನಿಂಗಪ್ಪ ತಂದೆ ತಿಮ್ಮಯ್ಯಾ ಯಾದವ್ ವಯಾ:32 ವರ್ಷ ಈತನೊಂದಿಗೆ ಗ್ರಾಮದ ತಿಮ್ಮಯ್ಯಾ ಮುತ್ಯಾನ ದೇವಸ್ಥಾನದಲ್ಲಿ ಎರಡನೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಸಧ್ಯ ನನಗೆ ನಾಲ್ಕು ವರ್ಷದ ಪರಶುರಾಮ ಮತ್ತು ಒಂದು ವರ್ಷದ ಅನೀಲ ವೆಂಬುವ ಮಗನಿದ್ದು, ಈಗ ನಾನು 6 ತಿಂಗಳ ಗಬರ್ಿಣಿ ಇರುತ್ತೆನೆ. ನನ್ನ ಗಂಡನ ಮೊದಲನೆ ಹೆಂಡತಿಯ ಹೆಸರು ಹಣಮಂತಿ ಸಾ:ಪೇಠ ಅಮ್ಮಾಪೂರದವಳಿದ್ದು ಅವಳಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನನಗೆ ಮದುವೆಯಾದಗಿನಿಂದ ನನ್ನ ಗಂಡನ ಮೊದಲನೆಯ ಹೆಂಡತಿಯಾದ ಹಣಮಂತಿ ನಾನು ಇಬ್ಬರು ಒಂದೆ ಮನೆಯಲ್ಲಿ ನನ್ನ ಗಂಡನೊಂದಿಗೆ ಸಂಸಾರ ಮಾಡಿಕೊಂಡಿದ್ದು ಅನೊನ್ಯವಾಗಿದ್ದೆವು. ಈಗ ಒಂದು ವರ್ಷದಿಂದ ನಾನು ನನ್ನ ಗಂಡನಾದ ನಿಂಗಪ್ಪನೊಂದಿಗೆ ಮೊದಲನೆ ಹೆಂಡತಿಯಾದ ಹಣಮಂತಿ ಇಬ್ಬರು ಕುಟುಂಬ ಸಮೇತವಾಗಿ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿದ್ದೆವು. ನನ್ನ ಗಂಡನ ಮೊದಲನೆಯ ಹೆಂಡತಿಯಾದ ಹಣಮಂತಿ ಇವರ ಅಣ್ಣಂದಿರರಾದ 1) ಮುದಕಪ್ಪ ತಂದೆ ಹಣಮಂತ ಕಮತಗೇರ,2) ತಾಯಪ್ಪ ತಂದೆ ಹಣಮಂತ ಕಮತಗೇರ ಹಾಗೂ ಅವಳ ತಮ್ಮನಾದ 3) ವೆಂಕಟೇಶ ತಂದೆ ಹಣಮಂತ ಕಮತಗೇರ ಹಣಮಂತಿಯ ಸೋದರ ಮಾವನಾದ 4) ಮುಕೇಶ ತಂದೆ ಚಂದಪ್ಪ ಪಸ್ತಳ್ಳಿ 5) ತಾಯಪ್ಪ (ಮಿಸಿ ತಾಯಪ್ಪ) ತಂದೆ ಬೈಲಪ್ಪ ಪಸ್ತಳ್ಳಿಯವರ ತಂಗಿಯ ಗಂಡನಾದ 6) ಹಣಮಂತ ತಂದೆ ತಿಮ್ಮಪ್ಪ ಗುಬ್ಬಿಯವರ ಸಾ:ಎಲ್ಲರೂ ಪೇಠ ಅಮ್ಮಾಪೂರ ಈ ಆರು ಜನರು ನನ್ನ ಗಂಡನಾದ ನಿಂಗಪ್ಪನಿಗೆ ಚಿಕ್ಕನಳ್ಳಿ ಗ್ರಾಮದಲ್ಲಿರುವ ಎರಡು ಎಕರೆ ಆಸ್ತಿಯಲ್ಲಿ ನಮ್ಮ ಅಕ್ಕಳಾದ ಹಣಮಂತಿ ಇವಳಿಗೆ ಪಾಲು ಮಾಡಿಕೊಡು ಮಗನೇ ಇಲ್ಲ ಅಂದ್ರ ಕೊಟರ್ಿಗೆ ಹಾಕಿ ನಿನ್ನನ್ನು ಕಟಕಟಿಯಲ್ಲಿ ನಿಲ್ಲಿಸುತ್ತೆವೆ ಅಂತಾ ಹೆದರಿಸುತ್ತಿದ್ದಾರೆ ನಾನು ಆಸ್ತಿ ಪಾಲು ಮಾಡಿಕೊಡುವದಿಲ್ಲ ಬೆಕಂದ್ರೆ ನಾನೇ ಸಾಯುತ್ತೆನೆ ಅಂತಾ ನನ್ನ ಮುಂದೆ ನಮ್ಮ ಅಕ್ಕ ಹಣಮಂತಿ ಇವಳು ಮನೆಯಲ್ಲಿ ಇಲ್ಲದ ಸಮಯದಲ್ಲಿ ನನಗೆ ವಿಷಯ ತಿಳಿಸುತ್ತಿದ್ದನು. ಆಗ ನಾನು ನೀನೆಕೆ ಸಾಯುತ್ತಿ ಬೇಡಿದರೆ ಕೊಟ್ಟರಾಯಿತು ಅಂತಾ ಸಮಾಧಾನ ಹೇಳುತ್ತಾ ಬಂದಿದ್ದೆನು. ಹೀಗಿರುವಾಗ ಚಿಕ್ಕನಳ್ಳಿ ಗ್ರಾಮದಲ್ಲಿರುವ ನಮ್ಮ ಮಾವನಾದ ತಿಮ್ಮಯ್ಯಾ ಇವರಿಗೆ ಹುಷಾರಿಲ್ಲದ ಕಾರಣ ನನ್ನ ಗಂಡ ನನ್ನ ತಂದೆ ಮಾತಾಡಿಕೊಂಡು ಬರೋಣ ನಡಿರಿ ಊರಿಗೆ ಹೋಗೊಣ ಅಂತಾ ಹೇಳಿ ಮೊನ್ನೆ ದಿನಾಂಕ:01-02-2021 ರಂದು ಸಾಯಂಕಾಲ ಬೆಂಗಳೂರಿನಿಂದ ನಾನು ನನ್ನ ಗಂಡನಾದ ನಿಂಗಪ್ಪ ಅಕ್ಕಳಾದ ಹಣಮಂತಿ ಎಲ್ಲರೂ ಹೊರಟು ನಿನ್ನೆ ಬೆಳಿಗ್ಗೆ ಚಿಕ್ಕನಳ್ಳಿ ಗ್ರಾಮಕ್ಕೆ ಬಂದು ಗಂಡನ ಮನೆಯಲ್ಲಿದ್ದೆವು.ನಿನ್ನೆ ದಿನಾಂಕ:02-02-2021 ರಂದು ಸಾಯಂಕಾಲ ನಾನು ಅಕ್ಕಳಾದ ಹಣಮಂತಿ ಮಾವನಾದ ತಿಮ್ಮಯ್ಯಾ, ಹಾಗೂ ಅತ್ತೆಯಾದ ಯಲ್ಲಮ್ಮ ನಾಲ್ಕರು ಮನೆಯಲ್ಲಿರುವಾಗ ನನ್ನ ಗಂಡನಾದ ನಿಂಗಪ್ಪ ಈತನು ಹೊರಗಡೆ ಹೊಗಿದ್ದನು. ಅಂದಾಜು 7 ಗಂಟೆ ಸುಮಾರಿಗೆ ನಮ್ಮೂರ ಯಂಕಪ್ಪ ತಂದೆ ಬೋಜಪ್ಪ ಯಾದವ್ ಈತನು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ. ನಿನ್ನ ಗಂಡನಾದ ನಿಂಗಪ್ಪ ಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ನಿನ್ನೆ ಗಂಡ ನಿಮ್ಮ ಗುಡಿಸಲು ಹೊಲದಲ್ಲಿ ಎಣ್ಣೆ ಕುಡಿದಾನವ ನಾನು ನಮ್ಮೂರ ಹಣಮಂತ ತಂದೆ ನರಸಪ್ಪ ಗೊಗ್ಗಿ, ಮರೆಪ್ಪ ತಂದೆ ತಿಮ್ಮಯ್ಯಾ ಯಾದವ್ ಮೂವರು ಕೂಡಿ ಸೈಕಲ್ ಮೊಟಾರ ಮೇಲೆ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೆವೆ. ಅಂತಾ ವಿಷಯ ತಿಳಿಸಿದ ಕೂಡಲೆ ನಾನು ಸುರಪೂರ ಆಸ್ಪತ್ರೆಗೆ ಬಂದು ನೊಡಲು ನನ್ನ ಗಂಡ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೇ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸದಲ್ಲಿ ನನ್ನ ಮಾವನಾದ ಸಿದ್ದಪ್ಪ ತಂದೆ ಶೀವಪ್ಪ ಯಾದವ್, ಶೇಖಪ್ಪ ತಂದೆ ತಿಮ್ಮಯ್ಯಾ ಯಾದವ್ ಅತ್ತೆಯಾದ ಯಲ್ಲವ್ವ ಇವರೆಲ್ಲರೂ ಗಂಡ ನಿಂಗಪ್ಪನನ್ನು ಕಲಬುರಗಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯ ಪರತಾಬಾದ ಹತ್ತಿರ ಹೋಗುತ್ತಿರುವಾಗ ರಾತ್ರಿ 11-30 ಗಂಟೆಗೆ ನನ್ನ ಗಂಡ ನಿಂಗಪ್ಪನು ಮೃತ ಪಟ್ಟಿದ್ದು ಇರುತ್ತದೆ. ಮೃತ ನನ್ನ ಗಂಡನ ಶವವನ್ನು ಸುರಪೂರ ಸರಕಾರಿ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ತಂದು ಹಾಕಿದ್ದು, ನಾನು ವಿಚಾರ ಮಾಡಿ ನನ್ನ ಮಾವನಾದ ಸಿದ್ದಪ್ಪ ತಂದೆ ಶೀವಪ್ಪ ಯಾದವ್, ಶೇಖಪ್ಪ ತಂದೆ ತಿಮ್ಮಣ್ಣ ಯಾದವ್ ಇವರೊಂದಿಗೆ ಠಾಣೆಗೆ ಬಂದು ಅಜರ್ಿ ನಿಡಿರುತ್ತೆನೆ. ನನ್ನ ಗಂಡನು ಪೇಠ ಅಮ್ಮಾಪೂರ ಗ್ರಾಮದ ಆರು ಜನರು ಆಸ್ತಿಯ ಪಾಲು ವಿಷಯದಲ್ಲಿ ಕೊಟ್ಟ ,ಕಿರುಕುಳ ತೊಂದರೆ ತಾಳಲಾರದೆ. ದಿನಾಂಕ:02/02/2021 ರಂದು ಸಾಯಂಕಾಲ 6-30 ಗಂಟೆಗೆ ಹೊಲಕ್ಕೆ ಹೋಗಿ ಕ್ರಿಮಿನಾಶ ಔಷದಿ ಸೇವನೆ ಮಾಡಿ ಸಾವನಪ್ಪಿದ್ದು ಇರುತ್ತದೆ ಇದರಲ್ಲಿ ಮೊದಲನೆ ಹೆಂಡತಿಯಾದ ಹಣಮಂತಿ ಇವಳದು ಯಾವುದೆ ತಪ್ಪು ಇರುವದಿಲ್ಲ ಈ ಬಗ್ಗೆ ನನ್ನ ಗಂಡನಿಗೆ ಕಿರುಕುಳ ಕೊಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-02-2021 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080