ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/03/2021

ಕೆಂಭಾವಿ ಪೊಲೀಸ್ ಠಾಣೆ:- ಯುಡಿಆರ್ ನಂ 04/2021 ಕಲಂ 174 ಸಿಆರ್ಪಿಸಿ : ಇಂದು ದಿನಾಂಕ: 29/03/2021 ರಂದು 9.00 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ ಗಂಡ ಮಲ್ಲಿಕಾಜರ್ುನ ಹೂಗಾರ ವಯಾ|| 27 ಜಾ|| ಹೂಗಾರ ಉ|| ಹೊಲಮನೆಗೆಲಸ ಸಾ|| ಪರಸನಳ್ಳಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನೆಂದರೆ, ನನಗೆ 2 ಜನ ಮಕ್ಕಳೀದ್ದು, ಅವರಲ್ಲಿ ಐಶ್ವರ್ಯ ಎನ್ನುವ 9 ವರ್ಷದ ಹೆಣ್ಣುಮಗಳು ಹಾಗೂ ಮನೋಜ ಎನ್ನುವ 7 ವರ್ಷದ ಗಂಡುಮಗನಿರುತ್ತಾನೆ. ನನ್ನ ಗಂಡನ ಅಣ್ಣತಮ್ಮಂದಿರು ಒಟ್ಟು 4 ಜನರಿದ್ದು, ನನ್ನ ಗಂಡನಾದ ಮಲ್ಲಿಕಾಜರ್ುನ ತಂದೆ ನಾಗಣ್ಣ ಹೂಗಾರ ವಯಾ|| 30 ವರ್ಷ ಈತನು ಕೊನೆಯವನಾಗಿದ್ದು ಇರುತ್ತದೆ. ಈ 4 ಜನರ ಮದ್ಯ ಪರಸನಳ್ಳಿ ಸೀಮಾಂತರದಲ್ಲಿ ಹೊಲ ಸವರ್ೇ ನಂ. 89 ರಲ್ಲಿ 4 ಎಕರೆ ಹಾಗೂ ಸವರ್ೇ ನಂ 25 ರಲ್ಲಿ 5 ಎಕರೆ ಹೊಲವಿದ್ದು, ಎಲ್ಲಾ ಹೊಲಗಳು ನಮ್ಮ ಮಾವನವರಾದ ನಾಗಣ್ಣ ಹೂಗಾರ ಇವರ ಹೆಸರಿನಲ್ಲಿ ಇರುತ್ತವೆ. ನಮ್ಮ ಮಾವನವರಿಗೆ ಲಕ್ವಾ ಹೊಡೆದಿದ್ದು, ಉಳಿದ ನನ್ನ ಗಂಡನ ಅಣ್ಣಂದಿರು ಆ ಕಡೆ ಈ ಕಡೆ ದುಡಿಯಲು ಹೋಗುತ್ತಿದ್ದು, ಸದರಿ ಹೊಲಗಳನ್ನು ನನ್ನ ಗಂಡನಾದ ಮಲ್ಲಿಕಾಜರ್ುನ ಈತನೆ ಉಳುಮೆ ಮಾಡಿಕೊಂಡು ಹೋಗುತ್ತಿದ್ದನು. ಸದರಿ ಹೊಲದಲ್ಲಿ ಹೋದ ವರ್ಷ ಭತ್ತದ ಬೆಳೆ ಮಾಡಿದ್ದು ಸದರಿ ಬೆಳೆಯ ಸಲುವಾಗಿ ಎಸ್ಬಿಐ ಬ್ಯಾಂಕ್ ಕೆಂಭಾವಿಯಲ್ಲಿ 80,000/- ರೂಪಾಯಿ ಹಾಗೂ ಅಲ್ಲಿ ಇಲ್ಲಿ ಜನರಲ್ಲಿ ಕೈಗಡವಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದನು. ಹೋದ ವರ್ಷ ಅಷ್ಟೊಂದು ಸರಿಯಾದ ಬೆಳೆ ಬಾರದೇ ಸಾಲ ಹಾಗೇ ಉಳಿದಿತ್ತು. ಸದರಿ ಸಾಲ ಹೇಗೆ ತೀರಿಸುವದು ಅಂತ ನನ್ನ ಗಂಡ ದಿನಾಲು ಚಿಂತೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದನು.ಹೀಗಿದ್ದು ನಿನ್ನೆ ದಿನಾಂಕ: 28/03/2021 ರಂದು ನಾನು ಕೆಂಭಾವಿಗೆ ಬಂದಾಗ ನನ್ನ ಗಂಡನು ಸಾಯಂಕಾಲ 6 ಗಂಟೆ ಸುಮಾರಿಗೆ ಕೃಷಿ ಚಟುವಟಿಕೆ ಸಲುವಾಗಿ ಮಾಡಿದ ಸಾಲದ ಭಾದೆಯಿಂದ ವಿಷ ಸೇವನೆ ಮಾಡಿದ್ದಾನೆ ಅಂತ ಸುದ್ದಿ ತಿಳಿದು ಮನೆಗೆ ಹೋಗಿ ನೋಡಲು ನನ್ನ ಗಂಡನು ಮನೆಯಲ್ಲಿ ಬಿದ್ದು ಒದ್ದಾಡುತ್ತಿದ್ದು, ವಿಚಾರಿಸಲು ಸಾಲ ಜಾಸ್ತಿಯಾಗಿದೆ ತೀರಿಸುವದು ಆಗುವದಿಲ್ಲ ಅದಕ್ಕಾಗಿ ವಿಷ ಕುಡಿದಿದ್ದೇನೆ ಅಂತ ತಿಳಿಸಿದಾಗ ಕೂಡಲೆ ಗಂಡ ಮಲ್ಲಿಕಾಜರ್ುನ ಇವರಿಗೆ ನಾನು ಹಾಗೂ ನಮ್ಮ ಮಾವ ಮೋಹನರಾಯ ಇಬ್ಬರು ಕೂಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬರಬೇಕೆನ್ನುವಷ್ಟರಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ.ನನ್ನ ಗಂಡನು ಕೃಷಿ ಚಟುವಟಿಕೆ ಸಲುವಾಗಿ ಎಸ್ಬಿಐ ಬ್ಯಾಂಕ್ ಕೆಂಭಾವಿಯಲ್ಲಿ 80,000/- ರೂ ಹಾಗೂ ಕೈಗಡ 5ಲಕ್ಷ ಸಾಲ ಮಾಡಿಕೊಂಡು ಸದರಿ ಸಾಲದ ಬಾಧೆಯಿಂದ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದು ಸದರಿ ನನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೂ ಯಾವುದೇ ರೀತಿಯ ಸಂಶಯ ಇರುವದಿಲ್ಲ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ 04/2021 ಕಲಂ: 174 ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡೆನು.

ಭೀಗುಡಿ ಪೊಲೀಸ್ ಠಾಣೆ :- 26/2021 ಕಲಂ 323,324,354,504,506 ಐಪಿಸಿ : ಫಿಯರ್ಾದಿ ಮತ್ತು ಆರೋಪಿತನ ನಡುವೆ ಹಳೆಯ ವೈಷಮ್ಯವಿದ್ದು ದಿನಾಂಕ:29/03/2021 ರಂದು 12 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮನೆಯಲ್ಲಿದ್ದಾಗ ಆರೋಪಿತನು ಫಿಯರ್ಾದಿ ಮನೆಯ ಮುಂದೆ ನಿಂತು ವಿನಾಕಾರಣ ಒದರಾಡುತ್ತಿರುವಾಗ ಫಿಯರ್ಾದಿಯು ಯಾಕೆ ಒದರಾಡುತ್ತಿ ಅಂತಾ ಕೇಳಿದಾಗ ಆರೋಪಿತನು ಭೋಸಡಿ ಮಕ್ಕಳೆ ನಿಮ್ಮ ಸೊಕ್ಕು ಬಹಳವಾಗಿದೆ ಅಂತಾ ಬೈದು, ಸೀರೆಯ ಸೆರಗು ಹಿಡಿದು ಎಳೆದಾಡಿ ಕೈಯಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಗುರಮಿಠಕಲ್ ಪೊಲೀಸ್ ಠಾಣೆ :- 49/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 29.03.2021 ರಂದು 6:00 ಪಿಎಮ್ ಕ್ಕೆ ಪಿರ್ಯಾಧಿ ಕೆ. ಜನಾರ್ಧನರಾವ್ ಸಾ||ನಾರಾಯನಪೇಟ್ ಈತನು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನಂದರೆ ತನ್ನ ಮಾರುತಿ ಕಾರ್ ನಂ:ಟಿಎಸ್-09 ಇಎಲ್, ಟಿ/ಆರ್-3807 ನೇದ್ದನ್ನು ತನ್ನ ಗೆಳೆಯ ಆರೋಪಿ ದಯಾನಂದ ತಂದೆ ಶಂಕರ ಕ್ಯಾತನ ಈತನು ಪೆಸೆಂಟ್ ನೋಡುವದಕ್ಕಾಗಿ ಕಾರನ್ನು ತೆಗೆದುಕೊಂಡು ಬಂದು ಪುಟಪಾಕ್ ದಿಂದ ಮರಳಿ ನಾರಾಯಣಪೇಟ್ ಕ್ಕೆ ಹೋಗುವಾಗ ಗುರುಮಠಕಲ್ ದಿಂದ ನಾರಯಣಪೇಟ್ ಕಡೆಗೆ ಹೋಗುವ ಮುಖ್ಯ ರಸ್ತೆ ಮೇಲೆ ಅತಿವೇಗ, ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಸಾಯಂಕಾಲ 4:00 ಗಂಟೆಯ ಸುಮಾರಿಗೆ ಪಟಪಾಕ್ ಹತ್ತಿರ ಎದುರಿಗೆ ಬಸ್ ಬಂದಿದ್ದರಿಂದೊಮ್ಮಿಂದ-ಒಮ್ಮಲೇ ಕಟ್ ಮಾಡಿದ್ದರಿಂದ ಕಾರ್ ಪಲ್ಟಿಯಾಗಿ ಆರೋಪಿ ಚಾಲಕನಿಗೆ ಭಾರಿ ಮತ್ತು ಸಾದ ಸ್ವರೂಪದ ಗಾಯಗಳಾಗಿ ಕಾರ್ ಡ್ಯಾಮೇಜ್ ಆಗಿದ್ದು ಉಪಚಾರಕ್ಕಾಗಿ ಗಾಯಾಳುವನ್ನು ನಾರಾಯಣಪೇಟ್ ಬಾಲಾಜಿ ನರಸಿಂಹ ಹೋಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದಾಗಿ ಸದರಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಪಿರ್ಯಾಧಿ ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ :- 07/2021 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 29/03/2021 ರಂದು ಮಧ್ಯಾಹ್ನ 3-15 ಗಂಟೆಗೆ ಶ್ರೀ ಶಂಕರ ತಂದೆ ತೇಜ್ಯಾ ಪವ್ಹಾರ, ವ:50, ಜಾತಿ: ಲಮ್ಮಾಣಿ, ಉ:ಒಕ್ಕಲುತನ, ಸಾ:ಮುದ್ನಾಳ ದೊಡ್ಡ ತಾಂಡ ಇವರು ಪೋಲಿಸ ಠಾಣೆಗೆ ಹಾಜರಾಗಿ ಸಲ್ಲಿಸಿದ ದೂರು ಅಜರ್ಿಯೇನೆಂದರೆ, ನನಗೆ ರವಿ, ಟೋಪು, ಮತ್ತು ಅಜೇಯ ಅಂತಾ ಮೂರು ಜನ ಗಂಡು ಮಕ್ಕಳಿರುತ್ತಾರೆ. ಟೋಪು ಈತನು ಪದವಿ ವಿಧ್ಯಾಭ್ಯಾಸ ಮಾಡುತ್ತಿದ್ದು. ಇಂದು ದಿನಾಂಕ: 29/03/2021 ರಂದು ಹೋಳಿ ಹಬ್ಬದ ಪ್ರಯಕ್ತ ನನ್ನ ಮಗ ಟೋಪು ಈತನು ತಾಂಡದಲ್ಲಿ ತನ್ನ ಗೆಳೆಯರೊಂದಿಗೆ ಬಣ್ಣದ ಓಕಳಿ ಆಟವಾಡಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ನನ್ನ ಮಗ ಟೋಪು ನನ್ನ ತಮ್ಮನ ಮಗ ವಿಜಯ ಮತ್ತು ಅವರ ಗೆಳೆಯರಾದ ಮೋಹನ ಗೌರವ ಮತ್ತು ಅನಿಲ ಐದು ಜನ ಕೂಡಿ ಗುರಸಣಗಿ ಬ್ರೀಡ್ಜಗೆ ಹೋಗಿ ಸಾನ್ನ ಮಾಡಿಕೊಂಡು ಬರುತ್ತೇವೆ ಎಂದು ಹೇಳಿ ಹೋದರು. 12-30 ಪಿಎಮ್ ಸುಮಾರಿಗೆ ನನ್ನ ತಮ್ಮನ ಮಗ ವಿಜಯ ಈತನು ನನ್ನ ಹಿರಿಯ ಮಗ ರವಿ ಈತನಿಗೆ ಪೋನು ಮಾಡಿ ನಾವು ಮತ್ತು ನಿಮ್ಮ ತಮ್ಮ ಟೋಪು ಸಾನ್ನ ಮಾಡಲು ಭೀಮಾನದಿ ಗುರುಸಣಗಿ ಬ್ರೀಡ್ಜಗೆ ಬಂದಿವಿ. ಟೋಪು ಇವನು ನೀರಿನಲ್ಲಿ ಈಜಾಡಲು ಇಳ್ಳಿದಿದ್ದ ಅಲ್ಪ-ಸ್ವಲ್ಪ ಈಜಾಡಿ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾನೆ. ಎಂದು ಹೇಳಿದ್ದಾಗ ಗಾಬರಿಯಾಗಿ ನನ್ನ ಮಗ ರವಿ ನನಗೆ ತಿಳಿಸಿದಾಗ ನಾನು ಮತ್ತು ನನ್ನ ಮಗ ರವಿ ಹಾಗೂ ನಮ್ಮ ಸಂಬಂಧಿಕರು ಕೂಡಿ ತಕ್ಷಣಕ್ಕೆ ಸ್ಥಳಕ್ಕೆ ಹೋಗಿ ನೋಡಿದೆ. ನನ್ನ ಮಗ ಗುರಸಣಗಿ ಬ್ರೀಡ್ಜ ಕೆಳಗಿ ಭೀಮಾನದಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ. ಅಲ್ಲಿಯೇ ಇದ್ದ ಮೋಹನ, ವಿಜಯ, ಅನೀಲ, ಮತ್ತು ಗೌರವ, ಇವರಿಗೆ ಕೇಳಿದಾಗ ನಾವು ಬಣ್ಣ ಆಡಿ ಬಂದಿದ್ದ ಟೋಪು ಈತನು ಬಟ್ಟೆ ಬಿಚ್ಚಿ ನನಗೆ ಅಲ್ಪ-ಸ್ವಲ್ಪ ಈಜು ಬರುತ್ತದೆ ಅಂತಾ ಹೇಳಿ ಎಲ್ಲಾರೂಗಿಂತ ಮುಂಚೆ ನೀರಿನಲ್ಲಿ ಈಜಾಡಲು ಇಳಿದ್ದಿದು ಸರಿಯಾಗಿ ಈಜಲು ಬರದೇ ಮುಳಗಲು ಆರಂಭಿಸಿದಾಗ ಮೋಹನ ಮತ್ತು ವಿಜಯ ತೆಗೆಯಲು ಹೋಗಿದ್ದು ಮೋಹನ ಕೂಡ ಮುಳಗಲು ಆರಂಭಿಸಿದಾಗ ನಾವು ಮತ್ತು ಮೀನುಗಾರರು ಸೇರಿ ಮೋಹನನಿಗೆ ತೆಗಿಯಲು ಅಷ್ಟರಲ್ಲಿಯೇ ಟೋಪು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದನು. ಎಂದು ಹೇಳಿದರು. ಕಾರಣ ಟೋಪು ಈತನು ಸರಿಯಾಗಿ ಈಜಲು ಬರದೇ ನೀರಿನಲ್ಲಿ ಮುಳಗಿ ಮೃತಪಟ್ಟಿದನು. ಮೃತನ ಮರಣದಲ್ಲಿ ನಮಗೆ ಯಾರ ಮೇಲೆ ಯಾವುದೇ ರೀತಯ ಫಿರ್ಯಾದಿ - ಸಂಶಯ ವೈರ್ಯಾಗ ಇರುವುದಿಲ್ಲ ಎಂದು ಮುಂದಿನ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 07/2021 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 30-03-2021 11:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080