ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/04/2021

ಶಹಾಪೂರ ಪೊಲೀಸ್ ಠಾಣೆ :- 94/2021.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ : ಇಂದು ದಿನಾಂಕ 29/04/2021 ರಂದು 11-30 ಗಂಟೆಗೆ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ. ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 29/04/2021 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ, ಶಹಾಪೂರನಗರದ ಲಕ್ಷ್ಮೀ ವೈನ್ ಶಾಪ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಮೇರೆಗೆ, ಠಾಣೆಯಲ್ಲಿ ಹಾಜರಿದ್ದ ನಾರಾಯಣ ಹೆಚ್.ಸಿ.49. ಗೋಕುಲ್ ಹುಸೇನ್ ಜೀಪಚಾಲಕ ನಾಗರೆಡ್ಡಿ ಎ.ಎಚ್.ಸಿ. 25. ಇವರಿಗೆ ಬಾತ್ಮೀ ವಿಷಯ ತಿಳಿಸಿ, ಹೋಗಿ ದಾಳಿ ಮಾಡಬೆಕೆಂದು ಹೇಳಿ ನಾರಾಯಣ ಹೆಚ್.ಸಿ.49. ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು 9-10 ಗಂಟೆಗೆ ಹೇಳಿ ಕಳುಹಿಸಿದಂತೆ ಸದರಿಯವರು ನಗದಲ್ಲಿ ಹೋಗಿ ಇಬ್ಬರು ಪಂಚರಾದ 1] ಶ್ರೀ ವಿಷ್ಣು ತಂದೆ ಬಸವರಾಜ ಕಾಂಬ್ಳೆ ವ|| 39 ಜಾ|| ಕಾಟಿಕ್ ಉ|| ಕೂಲಿ ಸಾ|| ಗಾಂಧಿಚೌಕ ಹತ್ತಿರ ಶಹಾಪುರ 2) ಶ್ರೀ ಶರಣು ತಂದೆ ಗಣಪತಿ ಮೇದರ ವ|| 32 ಜಾ|| ಮೇದರ ಉ|| ಕೂಲಿ ಸಾ|| ಮೇದರ ಓಣಿ ಸುರಪೂರ ಇವರಿಗೆ ಕರೆದುಕೊಂಡು ಬಂದು 9-20 ಗಂಟೆಗೆ ಹಾಜರಪಡಿಸಿದ್ದು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಮಾನ್ಯ ಡಿವೈ,ಎಸ್,ಪಿ, ಸಾಹೇಬರು ಸುರಪೂರ, ರವರ ಮಾರ್ಗದರ್ಶನದಲ್ಲಿ ದಾಳಿಕುರಿತು ನಾನು ಮತ್ತು ಪಂಚರು, ಸಿಬ್ಬಂದಿ ಜನರು, ಎಲ್ಲರು ಕೂಡಿ ಠಾಣೆಯ ಜೀಪ ನಂ ಕೆಎ-33 ಜಿ-0138 ನೇದ್ದರಲ್ಲಿ ಕುಳಿತುಕೊಂಡು 9-30 ಗಂಟೆಗೆ ಠಾಣೆಯಿಂದ ಹೋರಟೆವು. ನೇರವಾಗಿ 9-40 ಗಂಟೆಗೆ ಲಕ್ಷ್ಮೀ ವೈನ್ ಶಾಪ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪನಿಲ್ಲಿಸಿ, ಎಲ್ಲರು ಜೀಪಿನಿಂದ ಇಳಿದು ನಡೆದುಕೊಂಡು ಹೋಗಿ ಅಂಗಡಿಗಳ ಮತ್ತು ಹೋಟೆಲ್ಗಳ ಗೋಡೆಯ ಮರೆಯಲ್ಲಿ ನಿಂತು ನಿಗಾಮಾಡಿ ನೋಡಲಾಗಿ, ಒಬ್ಬ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿ ಲಕ್ಷ್ಮೀ ವೈನ ಶಾಪ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕುಲಮಾಡಿ ಕೊಟ್ಟಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 9-45 ಗಂಟೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಸದರಿಯವನ ಸುತ್ತುವರೆದು ದಾಳಿ ಮಾಡಿ ಹಿಡಿದಾಗ ಮದ್ಯ ಕುಡಿಯಲು ಅನುಕುಲ ಮಾಡಿಕೊಟ್ಟಿದ್ದ ಒಬ್ಬ ವ್ಯಕ್ತಿ ಸಿಕ್ಕಿದ್ದು. ಮತ್ತು ಮದ್ಯ ಕುಡಿಯಲು ಬಂದ ಜನರು ಮದ್ಯದ ಪಾಕೇಟ್ಗಳನ್ನು ಬಿಟ್ಟು ಓಡಿ ಹೋದರು ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಗರಾಜ ತಂದೆ ಲಕ್ಷ್ಮಣ್ಣ ಸರಾಯಿದರ ವ|| 35 ಜಾ|| ಮರಾಠ ಕಟರ್ ಉ|| ಕೂಲಿ ಸಾ|| ಕುಂಬಾರ ಓಣಿ ಶಹಾಪೂರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಲಕ್ಷ್ಮೀ ವೈನ ಶಾಪ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 180 ಎಂ.ಎಲ್.ನ ಒಟ್ಟು 9 ಬ್ಯಾಗಪೇಪರ್ ಡಿಲಕ್ಸ ವಿಸ್ಕಿ ಪೌಚ್ಗಳು (ಪಾಕೇಟ್ಗಳು) ಇದ್ದು ಒಂದು ಪಾಕೇಟ್ನ ಕಿಮ್ಮತ್ತು 106.23 ರೂ ಅಂತಾ ಇದ್ದು, ಒಟ್ಟು 9 ಬ್ಯಾಗಪೇಪರ್ ಡಿಲಕ್ಸ ವಿಸ್ಕಿ ಪೌಚ್ಗಳು ಕಿಮ್ಮತ್ತು 956.07 ರೂ ಗಳಾಗುತ್ತಿದ್ದು, 2] 2 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 3] ಮದ್ಯ ಕುಡಿಯಲು ಉಪಯೋಗಿಸಿದ 180 ಎಂ.ಎಲ್. 2 ಬ್ಯಾಗಪೇಪರ್ ಡಿಲಕ್ಸ ವಿಸ್ಕಿ ಖಾಲಿ ಪೌಚ್ಗಳು ಇದ್ದವು. ಅ:ಕಿ: 00=00 ರೂ, ಒಟ್ಟು 9 ಮದ್ಯದ ಪಾಕೇಟ್ಗಳಲ್ಲಿ 180 ಎಂ.ಎಲ್.ನ 1 ಬ್ಯಾಗಪೇಪರ್ ಡಿಲಕ್ಸ ವಿಸ್ಕಿ ಪೌಚ್ ಪಂಚರ ಸಮಕ್ಷಮದಲ್ಲಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಒಂದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 9-45 ಗಂಟೆಯಿಂದ 10-45 ಗಂಟೆಯವರೆಗೆೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 11-00 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲುಗಳನ್ನು ಹಾಜರುಪಡಿಸಿ 11-30 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 94/2021 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 95/2021 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ: 29-04-2021 ರಂದು 6:10 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ (ಅ.ವಿ.) ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 29-04-2021 ರಂದು 5:30 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪುರ ನಗರ ಮಡಿವಾಳೇಶ್ವರ ನಗರದ ಶಾರದಾಸ್ಕೂಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಮದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 28/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಇಸ್ಪೀಟ ಜುಜಾಟ ಆಡುವ ವ್ಯಕ್ರಿಗಳ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತರ ಮೇಲೆ ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.95/2021 ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು ನಂತರ ದಾಳಿಗೆ ಹೋಗಿ ದಾಳಿಮಾಡಿ 8 ಜನ ಆರೋಪಿತರು ಮತ್ತು ನಗದು 5110/- ಹಣ ಮತ್ತು 52 ಇಸ್ಪೀಟ ಎಲೆಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

ವಡಗೇರಾ ಠಾಣೆ ಯಾದಗಿರಿ :- 51/2021 ಕಲಂ: 143, 147, 148, 504, 341, 323, 324, 506 ಸಂಗಡ 149 ಐಪಿಸಿ : ಇಂದು ದಿನಾಂಕ:29/04/2021 ರಂದು 11-30 ಎಎಮ್ಕ್ಕೆ ಶ್ರೀ ಹೊನ್ನಪ್ಪ ತಂದೆ ರಾಮಣ್ಣ ತುಮಕೂರು, ವ:30, ಜಾ:ಹೊಲೆಯ, ಉ:ಕೂಲಿ ಕೆಲಸ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ಹೆಂಡತಿ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ಈಗ ಸುಮಾರು ಒಂದು ವರ್ಷದ ಹಿಂದೆ ನಮ್ಮ ತಂಗಿ ಈಶಮ್ಮ ಇವಳಿಗೆ ಮತ್ತು ನಮ್ಮ ಜಾತಿಯ ದೀಪಕ ತಂದೆ ಮಲ್ಲಪ್ಪ ನಾಟೇಕಾರ ಈತನು ಪ್ರೀತಿ ಮಾಡಿ ಮದುವೆಯಾಗಿರುತ್ತಾನೆ. ನಾವು ನಮ್ಮ ತಂಗಿಗೆ ಸರಿಯಾಗಿ ಶಿಕ್ಷಣ ಕೊಡಿಸಿದ್ದು, ಅವಳಿಗೆ ಸ್ಟಾಫ ನರ್ಸ ಸರಕಾರಿ ನೌಕರಿ ಸಿಕ್ಕಿರುವುದರಿಂದ ಸರಕಾರಿ ನೌಕರಿ ವರನಿಗೆ ನೋಡಿ ಮದುವೆ ಮಾಡಿಕೊಡಬೇಕೆಂದು ವಿಚಾರ ಮಾಡುವಷ್ಟರಲ್ಲಿ ನಮ್ಮ ತಂಗಿಗೆ ದೀಪಕನು ಪ್ರೀತಿಯ ನಾಟಕ ಮಾಡಿ ಮದುವೆ ಮಾಡಿಕೊಂಡು ಹೋಗಿದ್ದರಿಂದ ನಮಗೆ ಸಹಜವಾಗಿ ಇಬ್ಬರ ಮೇಲೆ ಸಿಟ್ಟು ಬಂದಿತ್ತು. ಆದರೂ ನಾವು ಅದನ್ನು ತೋರ್ಪಡಿಸಿಕೊಳ್ಳದೆ ಅವರಿಬ್ಬರೂ ವಯಸ್ಕರಿರುತ್ತಾರೆ ಮದುವೆಯಾಗಿರುತ್ತಾರೆ ಆಗಲಿ ಬಿಡು ಎಂದು ಸುಮ್ಮನಾಗಿದ್ದೇವು. ಆದರೂ ಸದರಿ ದೀಪಕ ಈತನು ನಮಗೆ ದಿಟ್ಟಿಸಿ, ನೋಡುವುದು ಮಂದಿ ಮೇಲೆ ಹಾಕಿ ನಮಗೆ ಬೈಯುವುದು ಮಾಡುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ: 28/04/2021 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ಶರಭಮ್ಮ ಇಬ್ಬರೂ ನಮ್ಮ ಹೊಲಕ್ಕೆ ಹೋಗುತ್ತಿದ್ದಾಗ ನಮ್ಮೂರ ಸರಕಾರಿ ಬಾವಿ ಹತ್ತಿರ 1) ದೀಪಕ ತಂದೆ ಮಲ್ಲಪ್ಪ ನಾಟೇಕಾರ, 2) ಸಾಬಣ್ಣ ತಂದೆ ಮಲ್ಲಪ್ಪ ನಾಟೇಕಾರ, 3) ಮೋನಪ್ಪ ತಂದೆ ಮಲ್ಲಪ್ಪ ನಾಟೇಕಾರ, 4) ಶರಣಪ್ಪ ತಂದೆ ಹಣಮಂತ ನಾಟೇಕಾರ, 5) ತಾಯಪ್ಪ ತಂದೆ ಹಣಮಂತ ನಾಟೇಕಾರ, 6) ದೊಡ್ಡ ಮೌನೇಶ ತಂದೆ ಮರೆಪ್ಪ ಸಾ:ತಡಿಬಿಡಿ, 7) ಸಣ್ಣ ಮೌನೇಶ ತಂದೆ ಮರೆಪ್ಪ ಸಾ:ತಡಿಬಿಡಿ, 8) ಗುರುಲಿಂಗಪ್ಪ ತಂದೆ ರಮೇಶ ಸಾ:ಇಂಗಳಗಿ, 9) ಮಾನಮ್ಮ ಗಂಡ ದೀಪಕ ನಾಟೇಕಾರ, 10) ಚಂದಮ್ಮ ಗಂಡ ಸಾಬಣ್ಣ ನಾಟೇಕಾರ, 10) ಮಾನಮ್ಮ ಗಂಡ ಹಣಮಂತ ನಾಟೇಕಾರ, 11) ಮಾನಮ್ಮ ಗಂಡ ಮೌನೇಶ ನಾಟೇಕಾರ, 12) ಭೀಮಮ್ಮ ಗಂಡ ಮೌನೇಶ ನಾಟೇಕಾರ, 13) ತಾಯಮ್ಮ ಗಂಡ ಮಲ್ಲಪ್ಪ ನಾಟೇಕಾರ, 14) ತಾಯಮ್ಮ ಗಂಡ ಮಲ್ಲಪ್ಪ ನಾಟೇಕಾರ ಎಲ್ಲರೂ ಸಾ:ನಾಯ್ಕಲ್ 15) ನಾಗರಾಜ ತಂದೆ ರಮೇಶ ಸಾ:ಇಂಗಳಗಿ ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ದೀಪಕ ಈತನು ಬಂದು ನನಗೆ ನಿಮ್ಮ ತಂಗಿಗೆ ಎತ್ತಿಕೊಂಡು ಹೋಗಿ ಲಗ್ನ ಮಾಡಿಕೊಂಡಿನಿ, ನಿಮ್ಮ ಮನೆಯಿಂದ ಇನ್ನೊಂದು ಹೆಣ್ಣು ಮಗಳಿಗೆ ಎತ್ತಿಕೊಂಡು ಹೋಗುತ್ತಿನಿ ನೀವು ಏನು ಮಾಡುತ್ತಿರಿ ಮಾಡಿಕೊ ಭೊಸುಡಿ ಮಗನೆ ಎಂದು ಜಗಳ ತೆಗೆದು ಶರಣಪ್ಪ ಮತ್ತು ತಾಯಪ್ಪ ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ದೀಪಕ ಈತನು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ನನ್ನ ಎದೆಗೆ ಹೊಡೆದನು. ಮಾನಮ್ಮ ಗಂಡ ದೀಪಕ ಇವಳು ಬಂದು ಖಾರಪುಡಿಯನ್ನು ಉಗ್ಗಿದ್ದಳು. ನಾನು ಕೆಳಗೆ ಬಿದ್ದಾಗ ಸಾಬಣ್ಣ ಮತ್ತು ಮೋನಪ್ಪ ಇಬ್ಬರೂ ನನಗೆ ಕಾಲಿನಿಂದ ಒದ್ದಿರುತ್ತಾರೆ. ಬಿಡಿಸಲು ಬಂದು ನಮ್ಮ ತಾಯಿ ಶರಭಮ್ಮ ಇವಳಿಗೆ ಚಂದಮ್ಮ, ಮಾನಮ್ಮ ಗಂಡ ಹಣಮಂತ ಇಬ್ಬರೂ ಹಿಡಿಕೊಂಡಾಗ ಮಾನಮ್ಮ ಗಂಡ ಮೌನೇಶ, ಭೀಮಮ್ಮ ಮತ್ತು ತಾಯಮ್ಮ ಇವರು ಬಂದು ಕೈಯಿಂದ ಹೊಡೆದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರು ಸಿದ್ದಪ್ಪ ತಂದೆ ರಾಮಣ್ಣ ಕಜ್ಜಿ, ಮರೆಪ್ಪ ತಾಯಿ ಮರೆಮ್ಮ ಮದ್ದಿಲಿ ಮತ್ತು ದೊಡ್ಡ ರುದ್ರಪ್ಪ ತಂದೆ ಹಣಮಂತ ಅರಕೇರಿ ಇವರು ಬಂದು ಜಗಳ ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಭೊಸುಡಿ ಮಗನೆ ಇನ್ನೊಮ್ಮೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಭಯ ಹಾಕಿ ಹೋಗಿರುತ್ತಾರೆ. ಆದ್ದರಿಂದ ವಿನಾಕಾರಣ ನಮ್ಮೊಂದಿಗೆ ಜಗಳ ತೆಗೆದು ಗುಂಪು ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ, ಕೈಯಿಂದ ಕಟ್ಟಿಗೆಯಿಂದ ಹೊಡೆದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2021 ಕಲಂ: 143, 147, 148, 504, 341, 323, 324, 506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಠಾಣೆ ಯಾದಗಿರಿ :- 52/2021 ಕಲಂ: 379 ಐಪಿಸಿ : ಇಂದು ದಿನಾಂಕ: 29/04/2021 ರಂದು 10-15 ಪಿಎಮ್ ಕ್ಕೆ ಶ್ರೀ ಅಮರೇಶ ತಂದೆ ಹಣಮಪ್ಪ ವ:26, ಉ:ಗ್ರಾಮ ಲೇಖಾಪಾಲಕ ಐಕೂರು ಗ್ರಾಮ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ನಾವು ಮಾನ್ಯ ಕಂದಾಯ ನಿರೀಕ್ಷಕರು ಹೈಯಾಳ (ಬಿ) ಹಾಗೂ ಗ್ರಾಮ ಲೇಖಾಪಾಲಕ ಐಕೂರು ಹಾಗೂ ಗ್ರಾಮ ಸಹಾಯಕ ಐಕೂರು ಇದ್ದು, ಈ ಮೂಲಕ ತಮ್ಮಲ್ಲಿ ತಿಳಿಸುವುದೇನಂದರೆ ಐಕೂರು ಗ್ರಾಮದ ಜಮೀನಿನ ಸವರ್ೆ ನಂ. 1 ರಲ್ಲಿ 8-15 ಪಿಎಮ್ ಭೇಟಿ ನೀಡಲಾಗಿ ಶ್ರೀ ಪ್ರಭಾಕರ ತಂದೆ ಶರಣಪ್ಪಗೌಡ ಮಾಲಿಪಾಟಿಲ್ ಇವರ ಹೊಲದಲ್ಲಿ ಅಂದಾಜು 60 ಟ್ರ್ಯಾಕ್ಟರ ಮರಳನ್ನು ಸಂಗ್ರಹಿಸಿದ್ದು, ಹಾಗೂ ಐಕೂರು ಗ್ರಾಮದ ಸವರ್ೆ ನಂ. 482 ರಲ್ಲಿ ಪಟ್ಟೆದಾರರಾದ ಶ್ರೀ ಪಿ. ದುಗರ್ಾರಾವ ತಂದೆ ಪನ್ಸಯ್ಯ ಇವರ ಹೊಲದಲ್ಲಿ ಅಂದಾಜು 110 ಟ್ರ್ಯಾಕ್ಟರ ಮರಳು ಅಕ್ರಮವಾಗಿ ಶೇಖರಣೆ ಮಾಡಿದ್ದು, ಕಂಡುಬಂದ ಪ್ರಯುಕ್ತ ನೈಸಗರ್ಿಕ ಸಂಪನ್ಮೂಲವಾದ ಮರಳನ್ನು ಕೃಷ್ಣಾ ನದಿಯ ತೀರದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿರುವುದರಿಂದ ಸದರಿ ಮರಳಿಗೆ ಸೂಕ್ತ ರಕ್ಷಣೆ ನೀಡಿ, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಈ ಮೂಲಕ ತಮ್ಮಲ್ಲಿ ಕೇಳಿ ಕೊಳ್ಳುತ್ತೇನೆ. ಸದರಿ ಉಲ್ಲೇಖಿತ ಮರಳಿನ ಅಂದಾಜು ಮೌಲ್ಯ 1,70,000/- ರೂ. ಇರುತ್ತದೆ. ಸದರಿ ಉಲ್ಲೇಖಿತ ಸವರ್ೆ ನಂ. ಗಳಿಗೆ ಭೇಟಿ ನೀಡಿದ ಸಮಯ 8-15 ಪಿಎಮ್ ಇರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 52/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 57/2021 ಕಲಂ 143, 147, 148, 323, 324, 326, 307, 504, 506 ಸಂ 149 ಐ.ಪಿ.ಸಿ : ದಿನಾಂಕ 29-4-2021 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾಧಿದಾರನಾದ ಶ್ರೀ ಪಾಂಡು ತಂದೆ ಗೇಮು ರಾಠೋಡ ಸಾ:ವೆಂಕಟೇಶ ನಗರ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಿನ್ನೆ ದಿನಾಂಕ 28-04-2021 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ತಾರಿಬಾಯಿ ರಾಠೋಡ ಇಬ್ಬರೂ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿದ್ದೇವು. ನಿನ್ನೆ ನಮ್ಮ ತಾಂಡದ ಸೀತಾರಾಮ ತಂದೆ ಭಜ್ಯಾ ಚವ್ಹಾಣ ಈತನ ಮಗನಾದ ಮಂಗೇಶ ತಂದೆ ಸೀತರಾಮ ಚವ್ಹಾಣ ಈತನ ನಿಶ್ಚಿತಾರ್ಥವು ಯಾಗಾಪುರ ಬೋಗಡಿ ತಾಂಡದಲ್ಲಿ ಇದ್ದಿತ್ತು. ನಾನು ಕೂಡಾ ಆ ನಿಶ್ಚಿತಾರ್ಥಕ್ಕೆ ಹೋಗಿ ಬಂದಿರುತ್ತೇನೆ. ನಂತರ ರಾತ್ರಿ 12-00 ಗಂಟೆಗೆ ನಮ್ಮ ತಾಂಡದಲ್ಲಿ ಮಂಗೇಶ ತಂದೆ ಸೀತರಾಮ ಚವ್ಹಾಣ ಈತನು ಮತ್ತು ಅವನ ಮನೆಯವರು ಮತ್ತು ನಮ್ಮ ತಾಂಡದ ಕೆಲವು ಜನರು ಕೂಡಿಕೊಂಡು ನಿಶ್ಚಿತಾರ್ಥ ಆದ ಖುಷಿಯಲ್ಲಿ ತಮ್ಮ ಮನೆಯ ಮುಂದೆ ಸಿ.ಸಿ.ರೋಡಿನ ಮೇಲೆ ಡಿಜೆ ಹಚ್ಚಿ ಎಲ್ಲರು ಡ್ಯಾನ್ಸ ಮಾಡುತ್ತಿದ್ದರು. ಆಗ ನಾನು ಮನೆಯಿಂದ ಹೊರಗಡೆ ಬಂದು ಅವರಿಗೆ ಈಗ ಬಹಳ ರಾತ್ರಿ ಆಗಿದೆ ಮನೆಯಲ್ಲಿ ಎಲ್ಲರೂ ಮಲಗಿ ಕೊಂಡಿರುತ್ತಾರೆ ನನ್ನ ಹೆಂಡತಿ ಹಾರ್ಟ ಪೆಸೆಂಟ ಇರುತ್ತಾಳೆ ಅವಳಿಗೆ ತೊಂದರೆ ಆಗುತ್ತಿದೆ ಡಿಜೆ ಸೌಂಡ ಕಡಿಮೆ ಮಾಡಿರಿ ಅಂತಾ ಅವರಿಗೆ ಕೇಳಿದೆನು. ಆಗ ಮಂಗೇಶ ತಂದೆ ಸೀತರಾಮ ಚವ್ಹಾಣ ಈತನು ಬಂದು ನನ್ನ ನಿಶ್ಚಿತಾರ್ಥ ಆಗಿದೆ ಆ ಖುಷಿಯಲ್ಲಿ ಡಿಜೆ ಹಚ್ಚಿ ಕುಣಿಯುತ್ತಿದ್ದೇವೆ ಬೊಸಡಿ ಮಗನೇ ನೀ ಯಾರು ನಮಗೆ ಕೇಳುವವ ಅಂತಾ ಅವಾಚ್ಯಾವಾಗಿ ಬೈದು ನನ್ನ ಕತ್ತಿಗೆ ಹಿಡಿದು ದಬ್ಬಿಕೊಟ್ಟನು. ಆಗ ನಾನು ಗಟಾರದ ಮೇಲೆ ಬಿದ್ದೇನು. ನಂತರ 1} ಮಂಗೇಶ ತಂದೆ ಸೀತರಾಮ ಚವ್ಹಾಣ 2} ಮಹೇಶ ತಂದೆ ಸೀತಾರಾಮ ಚವ್ಹಾಣ 3} ಲಕ್ಷ್ಮಿ @ ಲಚ್ಚು ತಂದೆ ಸೀತರಾಮ ಚವ್ಹಾಣ ಈ ಮೂರು ಜನ ಬಂದವರೇ 1} ಮಂಗೇಶ ತಂದೆ ಸೀತರಾಮ ಚವ್ಹಾಣ ಮತ್ತು ಮಹೇಶ ತಂದೆ ಸೀತಾರಾಮ ಚವ್ಹಾಣ ಇಬ್ಬರೂ ಕೂಡಿ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಹೊಡೆಯುತ್ತಿದ್ದರು. ಆಗ ನಾನು ಚಿರಾಡುತ್ತಿರುವಾಗ ಮನೆಯಲ್ಲಿ ಮಲಗಿದ್ದ ನನ್ನ ಹೆಂಡತಿ ತಾರಿಬಾಯಿ ರಾಠೋಡ ಇವಳು ಜಗಳ ಬಿಡಿಸಲಿಕ್ಕೆ ಬಂದಳು, ಆಗ ಲಕ್ಷ್ಮಿ @ ಲಚ್ಚು ತಂದೆ ಸೀತರಾಮ ಚವ್ಹಾಣ ಇವಳು ತನ್ನ ಕೈಯಲ್ಲಿದ್ದ ಚಹಾವನ್ನು ನನ್ನ ಹೆಂಡತಿಯ ಮುಖದ ಮೇಲೆ ಚಲ್ಲಿ ಕೂದಲು ಹಿಡಿದು ಎಳದಾಡಿ ಮನಬಂದಂತೆ ಕೈಯಿಂದ ಹೊಡೆದಿರುತ್ತಾಳೆ. ನಂತರ ಅವರು ಜಗಳ ಬಿಟ್ಟು ಹೋದರು. ನಂತರ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಯಾದಗಿರಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ಹೋಗಬೇಕು ಅಂತಾ ನಮ್ಮ ತಾಂಡದ ಕಮಾನ ಹತ್ತಿರ ಬಂದೆವು. ನಮಗೆ ಹೊಡೆಬಡೆ ಮಾಡಿದ ವಿಷಯ ಗೋತ್ತಾಗಿ ನನ್ನ ಅಣ್ಣನ ಮಗನಾದ ಗೋವಿಂದ ತಂದೆ ಮನ್ನು ರಾಠೋಡ ಈತನು ಕೂಡಾ ಕಮಾನ ಹತ್ತಿರ ಬಂದು ಜಗಳ ನಡೆದ ಬಗ್ಗೆ ನಮಗೆ ಕೇಳುತ್ತಿದ್ದನು. ಆಗ 1} ಮಂಗೇಶ ತಂದೆ ಸೀತರಾಮ ಚವ್ಹಾಣ 2} ಮಹೇಶ ತಂದೆ ಸೀತಾರಾಮ ಚವ್ಹಾಣ 3} ಲಕ್ಷ್ಮಿ @ ಲಚ್ಚು ತಂದೆ ಸೀತರಾಮ ಚವ್ಹಾಣ 4} ಸೀತರಾಮ ತಂದೆ ಭಜ್ಯಾ ಚವ್ಹಾಣ 5} ಅನೀಲ ತಂದೆ ನಾಗರಾಜ ರಾಠೋಡ 6} ಕವೀತಾ ತಂದೆ ಸೀತರಾಮ ಚವ್ಹಾಣ 7} ಬಾಲು ತಂದೆ ಸೀತರಾಮ ಚವ್ಹಾಣ 8} ಬಾಭು ತಂದೆ ತಾರಸಿಂಗ ರಾಠೋಡ ಹಾಗೂ ಸೀತಾರಾಮನ 3 ಜನ ಅಳಿಯಂದಿರು, ಹಾಗೂ ಇತರೇ 5 ರಿಂದ 10 ಜನರು ಇವರೆಲ್ಲರೂ ಕೂಡಿಕೊಂಡು ಅಕ್ರಮ ಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಕೊಡಲಿ ಬಡಿಗೆ, ಕಾರದ ಪುಡಿಯನ್ನು ಹಿಡಿದುಕೊಂಡು ಬಂದವರೇ ಅವರಲ್ಲಿ 1} ಮಂಗೇಶ ತಂದೆ ಸೀತರಾಮ ಚವ್ಹಾಣ ಈತನು ಏ ಬೊಸಡಿ ಮಗನೇ ಪಾಂಡ್ಯ ಸೂಳೇ ಮಗನೇ ನಿನಗೆ ಬಹಳ ಸೊಕ್ಕು ಇದೆ, ಇವತ್ತು ನಿನಗೆ ಕೊಲೆ ಮಾಡದೇ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿದನು. ಅವರಲ್ಲಿ 3} ಲಕ್ಷ್ಮಿ @ ಲಚ್ಚು ತಂದೆ ಸೀತರಾಮ ಚವ್ಹಾಣ ಇವಳು ತನ್ನ ಕೈಯಲ್ಲಿದ್ದ ಕಾರದ ಪುಡಿಯನ್ನು ನಮ್ಮಲ್ಲೆರ ಮೇಲೆ ಚಲ್ಲಿರುತ್ತಾಳೆ. ಆಗ ಮಂಗೇಶ ಈತನು ತನ್ನ ಕೈಯಲ್ಲಿಯ ಕೊಡಲಿಯಿಂದ ನನಗೆ ಹೊಡೆಯಲು ಬಂದನು, ಆಗ ನಾನು ತಪ್ಪಿಸಿಕೊಂಡೆನು ಅದೇ ಕೊಡಲಿ ಏಟು ಜಗಳ ಬಿಡಿಸಲು ಬಂದಿದ್ದ ನನ್ ಅಣ್ಣ ಮಗ ಗೋವಿಂದ ತಂದೆ ಮನ್ನು ರಾಠೋಡ ಈತನ ತಲೆಗೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ, 2} ಮಹೇಶ ತಂದೆ ಸೀತಾರಾಮ ಚವ್ಹಾಣ ಈತನು ಬಡಿಗೆಯಿಂದ ಗೋವಿಂದ ಈತನ ಎಡಕಪಾಳಕ್ಕೆ, ಬಲಗೈ ಮೊಳಕೈಗೆ, ಎಡಗಾಲಿಗೆ ಮತ್ತು ಬೆನ್ನಿಗೆ ಹೊಡೆದು ರಕ್ತಗಾಯ ಗುಪ್ತಗಾಯ ಮಾಡಿರುತ್ತಾನೆ.. 4} ಸೀತರಾಮ ತಂದೆ ಭಜ್ಯಾ ಚವ್ಹಾಣ ಮತ್ತು 5} ಅನೀಲ ತಂದೆ ನಾಗರಾಜ ರಾಠೋಡ ಇವರಿಬ್ಬರೂ ತಮ್ಮ ತಮ್ಮ ಕೈಯಲ್ಲಿದ್ದ ಬಡಿಗೆಗಳಿಂದ ನನ್ನ ಬೆನ್ನಿಗೆ, ಎರಡು ಕೈಗಳ ರಟ್ಟೆಗಳಿಗೆ ಹೊಡೆದು ಕಂದುಗಟ್ಟಿದ ಗಾಯಗಳು ಮಾಡಿರುತ್ತಾಳೆ. 6} ಕವೀತಾ ತಂದೆ ಸೀತರಾಮ ಚವ್ಹಾಣ 7} ಬಾಲು ತಂದೆ ಸೀತರಾಮ ಚವ್ಹಾಣ ಮತ್ತು 8} ಬಾಬು ತಂದೆ ತಾರಾಸಿಂಗ ರಾಠೋಡ ಈ ಮೂರು ಜನರು ಕೂಡಿಕೊಂಡು ತಮ್ಮ ತಮ್ಮ ಕೈಗಳಿಂದ ನನಗೆ ಮತ್ತು ನನ್ನ ಹೆಂಡತಿಯಾದ ತಾರಿಬಾಯಿ ಇವಳಿಗೆ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿದ್ದು ಇರುತ್ತದೆ. ಅವರೆಲ್ಲರೂ ಕೂಡಿಕೊಂಡು ನಮ್ಮನ್ನು ನೆಲದ ಮೇಲೆ ಹಾಕಿ ಇವತ್ತು ನಿಮಗೆ ಕೊಲೆ ಮಾಡದೇ ಬಿಡುವದಿಲ್ಲ ಸೂಳೇ ಮಕ್ಕಳೆ ಅಂತಾ ಅಂದು ಕೈಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಮನಬಂದಂತೆ ಒದೆಯುತ್ತಿದ್ದರು. ಆಗ ನಾವು ಚಿರಾಡುತ್ತೀರುವಾಗ ನಮ್ಮ ತಾಂಡದ ಹೀರು ತಂದೆ ಶಂಕರ ರಾಠೋಡ ಮತ್ತು ಶಂಕರ ತಂದೆ ದಾವುಜೀ ರಾಠೋಡ ಗೋರ್ಯಾ ತಂದೆ ರಾಮು ರಾಠೋಡ ಇವರು ಬಂದು ಜಗಳ ನೋಡಿ ಬಿಡಿಸಿರುತ್ತಾರೆ. ಈ ಜಗಳವು ಇಂದು ದಿನಾಂಕ 29-04-2021 ರಂದು ರಾತ್ರಿ 12-30 ಎ.ಎಮ ಕ್ಕೆ ನಮ್ಮ ತಾಂಡದ ಕಮಾನ ಹತ್ತಿರ ಸಿ.ಸಿ.ರೋಡ ಮೇಲೆ ನಡೆದಿರುತ್ತದೆ. ಸದರಿ ಜಗಳದಲ್ಲಿ ನನ್ನ ಹೆಂಡತಿಯ ಕೊರಳಲ್ಲಿದ್ದ 3 ತೋಲಿ ಬಂಗಾರದ ಆಭರಣಗಳು ಹರಿದು ಬಿದ್ದಿರುತ್ತವೆ. ಹುಡಿಕಿದರು ಸಿಕ್ಕಿರುವದಿಲ್ಲ. ಅವರು ತೆಗೆದುಕೊಂಡಿರಬಹುದು. ಜಗಳದಲ್ಲಿ ಭಾರಿ ರಕ್ತಗಾಯ ಗುಪ್ತಗಾಯಗಳಾಗಿ ಅಸ್ವಸ್ಥನಾಗಿದ್ದ ಗೋವಿಂದ ತಂದೆ ಮನ್ನು ರಾಠೋಡ ಈತನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯಲ್ಲಿರುವ ಮನುರ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿ ನಂತರ ಯಾದಗಿರಿ ಗ್ರಾಮೀಣ ಪೊಲೀಸ ಠಾಣೆಗೆ ತಡವಾಗಿ ಬಂದು ದೂರು ಕೊಟ್ಟಿದ್ದು ಇರುತ್ತದೆ. ನಮ್ಮ ಜೋತೆಗೆ ಜಗಳ ಮಾಡಿ ಅವಾಚ್ಯವಾಗಿ ಬೈದು ಕೊಡಲಿ, ಬಡಿಗೆ ಮತ್ತು ಕೈಯಿಂದ ಹೊಡೆಬಡೆ ಮಾಡಿ ಭಾರಿ ರಕ್ತಗಾಯ & ಗುಪ್ತಗಾಯ ಮಾಡಿ ಜೀವದ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ರೀತಿ ಕ್ರಮ ಕೈಕೊಂಡು ಉಪಚಾರ ಕುರಿತು ನಮ್ಮನ್ನು ಆಸ್ಪತ್ರಗೆ ಕಳುಹಿಸಿರಿ ಅಂತಾ ಹೇಳಿ ಗಣಕಯಂತ್ರದಲ್ಲಿ ಗಣಕಿಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂದ ಮೇಲಿಂದ ಠಾಣೆಯ ಗುನ್ನೆ ನಂ 57/2021 ಕಲಂ 143, 147, 148, 323, 324, 326, 307, 504, 506 ಸಂ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ :- 67/2021 ಕಲಂ 379 ಐಪಿಸಿ : ಇಂದು ದಿನಾಂಕ: 29-04-2021 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದುಪ್ಪಲ್ಲಿ ಹಳ್ಳದಲ್ಲಿ ಮರಳು ತುಂಬಿದ ಸ್ವರಾಜ ಕಂಪನಿಯ ಟ್ರ್ಯಾಕ್ಟರ ನಂ. ಎಪಿ-22 ಎಇ-8166 ಅಂತಾ ಇದ್ದು ಅದಕ್ಕೆ ನೀಲಿ ಬಣ್ಣದ ಟ್ರ್ಯಾಲಿ ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.67/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ :- 68/2021, ಕಲಂ 323, 324, 498(ಎ), 504.506. ಸಂ.34 ಐ ಪಿ ಸಿ : ದಿನಾಂಕ. 29.04.2021 ರಂದು 6-45 ಪಿ.ಎಂ.ಕ್ಕೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೆರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮತ್ತು ಫಿಯರ್ಾದಿ ಶ್ರೀಮತಿ ಲಕ್ಷ್ಮೀ ಗಂಡ ಯಲ್ಲಪ್ಪ ವಯ|| 28 ವರ್ಷ, ಸಾ|| ಕ್ಯಾತನಾಳ ತಾ||ಜಿ|| ಯಾದಗಿರಿ ಇವಳ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ನನ್ನ ಗಂಡ ಮತ್ತು ನನ್ನ ಅತ್ತೆ ದೇವಮ್ಮ ಗಂಡ ನರಸಿಂಗಪ್ಪ ಮದುವೆಯಾದಾಗಿನಿಂದಲೂ ಕಿರುಕುಳ ನೀಡುತ್ತಾ ಬಂದಿದ್ದು, ಇಂದು ದಿನಾಂಕ. 29.04.2021 ರಂದು ಸಾಯಂಕಾಲ 5.00 ಗಂಟೆಗೆ ನಮ್ಮ ಅತ್ತೆ ಮತ್ತು ನನ್ನ ಗಂಡ ಇಬ್ಬರೂ ಮತ್ತೆ ನಾವೆಲ್ಲರೂ ಬೆಂಗಳೂರಿನಲ್ಲಿ ಗುಲಬಗರ್ಾ ಕಾಲೋನಿಯಲ್ಲಿಯೇ ಒಟ್ಟಿಗೆ ಇರೋಣ ಅಂದಾಗ ಅದಕ್ಕೆ ನಾನು ಒಪ್ಪದೆ ಇದ್ದದ್ದಕ್ಕೆ ನಮ್ಮ ಅತ್ತೆ ನನಗೆ ರಂಡಿ, ಸೂಳೇ ಅಂತ ಬೈದು, ಕೂದಲು ಹಿಡಿದು ನೆಲಕ್ಕೆ ಹಾಕಿ ಎಳೆದಾಡಿ ತಲೆಗೆ ರಕ್ತಗಾಯ ಮಾಡಿದ್ದು,. ನನ್ನ ಗಂಡ ಕೈ ಮುಷ್ಟಿ ಮಾಡಿ ಬಲಕಪಾಳಕ್ಕೆ, ಬೆನ್ನಿಗೆ, ಕುತ್ತಿಗೆಗೆೆ ಹೊಡೆದಿದ್ದರಿಂದ ಕೈಯಲ್ಲಿನ ಉಂಗುರ ತಾಕಿ ನನ್ನ ಬಲಕಪಾಳಕ್ಕೆ ರಕ್ತಗಾಯವಾಗಿದ್ದು, ಬೆನ್ನಿಗೆ, ಕುತ್ತಿಗೆಗೆ ಗುಪ್ತಗಾಯವಾಗಿರುತ್ತದೆ. ನನ್ನ ತಂದೆಗೆ ನನ್ನ ಗಂಡ ಕೈ ಮುಷ್ಟಿ ಮಾಡಿ ಹೊಡೆದಿದ್ದರಿಂದ ಎಡಗಡೆ ಭುಜಕ್ಕೆ ಒಳಪೆಟ್ಟಾಗಿರುತ್ತದೆ. ನನಗೆ ಇನ್ನೊಮ್ಮೆ ನೀನು ಮನೆಗೆ ಬಂದರೆ ಇಲ್ಲಿಯೇ ನಿನಗೆ ಖಲಾಸ ಮಾಡುತ್ತೇವೆ ಅಂತ ಜೀವಭಯ ಹಾಕಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಫಿಯರ್ಾದಿ ಹೇಳಿಕೆ ಸಾರಾಂಶ ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :-. 58/2021 ಕಲಂ 188, 269, 270 ಐ.ಪಿ.ಸಿ ಮತ್ತು 5(2) ಕನರ್ಾಟಕ ಸಾಖ್ರಾಮಿಕ ತಡೆ ಕಾಯ್ದೆ-2020 : ದಿನಾಂಕ 29-04-2021 ರಂದು 6-30 ಪಿ.ಎಮ್ ಕ್ಕೆ ಶ್ರೀ ಶಿವಲಿಂಗಪ್ಪಾ ಎ.ಎಸ್,ಐ ರವರು ಠಾನೇಗೆ ಹಾಜರಾಗಿ ತಮ್ಮ ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 29-04-2021 ರಂದು 00-05 ಎ.ಎಮ್ ಸುಮಾರಿಗೆ ವೆಂಕಟೇಶ ನಗರದಲ್ಲಿ ಕೋರೋನಾ ಎರಡನೇ ಅಲೆ ವೈರಾಣು ಹರಡುವಿಕೆಯ ಬಗ್ಗೆ ಸಕರ್ಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಗುಂಪು ಗೂಡಿ ಜಗಳವಾಡುತ್ತಿದ್ದಾರೆ ಕೂಡಲೇ ಹಾಜರಿದ್ದ ಸಿಬ್ಬಂದಿಯವರನ್ನು ಕರೆದುಕೊಂಡು ವೆಂಕಟೇಶ ನಗರಕ್ಕೆ ಹೋಗಲು ಮೇಲಾಧಿಕಾರಿಗಳು ನನಗೆ ಆದೇಶ ನೀಡಿದ್ದರಿಂದ ನಾನೂ ಕೂಡಲೇ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂಧಿ ಯವರಾದ ಶ್ರೀ ಮೋನಪ್ಪಾ ಪಿಸಿ-263 ಹಾಗೂ ಮಹಬೂಬ ಪಿಸಿ-55 ರವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು ವೆಂಕಟೇಶ ನಗರಕ್ಕೆ 00-30 ಎ.ಎಮ್ ಕ್ಕೆ ಹೋದೆವು. ವೆಂಕಟೇಶ ನಗರದ ಕಮಾನ ಹತ್ತಿರ ಸುಮಾರು ಜನರು ಕೂಡಿಕೊಂಡು ಸಾರ್ವಜನಿಕ ರಸ್ತೆಯ ಮೇಲೆ ಗುಂಪುಗೂಡಿಕೊಂಡು ಡಿ.ಜೆ ಸೌಂಡ ಹಚ್ಚಿ ಚೀರಾಡುತ್ತಾ ಅವಾಚ್ಯವಾಗಿ ಬೈದಾಡುತ್ತಾ ಕೊಡಲಿ ಬಡಿಗೆಯಿಂದ ಹೊಡೆದಾಡುತ್ತಾ ಜಗಳವಾಡುತ್ತಾ ನಿಂತಿದ್ದರು. ಈಗ ಸಧ್ಯ ಕೋರೊನೋ ಎರಡನೇ ಅಲೆ ವೈರಾಣು ಹರಡುವಿಕೆಯ ಸಂಬಂದವಾಗಿ ಇಡಿ ಕನರ್ಾಟಕ ರಾಜ್ಯದಲ್ಲಿ ಲಾಕ್ ಡೌನ್ ಇದ್ದು, ಮಾನ್ಯ ಕನರ್ಾಟಕ ಸರಕಾರ ರವರು ಹೊರಡಿಸಿದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಅಪಾಯಕರಿಯಾದ ಕೋರೊನೋ ವೈರಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುವದರಿಂದ ಒಬ್ಬರಿಗೊಬ್ಬರೂ ಮೂರು ಫೀಟಿನಷ್ಟು ಅಂತರ ಕಾಯ್ದು ಕೊಂಡು ಇರಬೇಕು ಅಂತಾ ಆದೇಶ ಗೊತ್ತಿದ್ದರೂ ಕೂಡಾ ಆ ಸಮಯದಲ್ಲಿ ಈ ಕೆಳಕಂಡವರು ನಿರ್ಲಕ್ಷತನವಹಿಸಿದ್ದು ಇರುತ್ತದೆ ಸದರಿಯವರ ಹೆಸರು ವಿಳಾಸದ ಬಗ್ಗೆ ತಿಳಿದುಕೊಳ್ಳಲಾಗಿ ಅವರ ಹೆಸರು 1) ಮಂಗೇಶ ತಂದೆ ಸೀತಾರಾಮ ಚವ್ಹಾಣ ವಯಾ:28 2) ದೀಪಕ ತಂದೆ ಸೋಮ್ಲಾ ರಾಠೋಡವಯಾ:35 3) ಮಹೇಶ ತಂದೆ ಸೀತಾರಾಮ ಚವ್ಹಾಣ ವಯಾ: 25 4) ಬಾಬು ತಂದೆ ಥಾರು ರಾಠೋಡ ವಯಾ: 35 5) ಗನ್ನು ತಂದೆ ಬಾಲಿ ರಾಠೊಡ ವಯಾ:29 6) ಸೀತಾರಾಮ ತಂದೆ ಭೋಜು ಚವ್ಹಾಣ ಸಾ; ಎಲ್ಲರೂ ವೆಂಕಟೇಶ ನಗರ 7) ಲಕ್ಷ್ಮೀ ಗಂಡ ದೀಪಕ ರಾಠೋಡ ವಯಾ:32 ಸಾ: ಯರಗೋಳ ಮತ್ತು 8) ಸಂತೋಷ ರಾಠೊಡ ಸಾ: ವಾಡಿ ತಾ: ಚಿತಾಪೂರ (ಡಿ.ಜೆ ಮಾಲೀಕ) ಹಾಗೂ ಇತರೇ 10 ರಿಂದ 12 ಜನರು ಕೂಡಿಕೊಂಡು ಡಿ.ಜೆ ಸೌಂಡ ಹಚ್ಚಿ ಗುಂಪೂಗೂಡಿ ಸಕರ್ಾರದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ. ಡಿ.ಜೆ ಸೌಂಡ ಅಳವಡಿಸಿದ ವಾಹನ ನಂ: ಕೆ.32/ಸಿ-1298 ಅಂತಾ ಇತ್ತು. ಈ ಬಗ್ಗೆ ಈಗಾಗಲೇ ಯಾದಗಿರಿ ಗ್ರಾಮೀಣ ಠಾಣೆ ಗುನ್ನೆ ನಂ: 57/2021 ಕಲಂ 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ನಾನು ರಾತ್ರಿಯಿಂದ ವೆಂಕಟೇಶ ನಗರದಲ್ಲಿಯೇ ಇದ್ದು ಇಂದು ವಿಶ್ರಾಂತಿ ಮಾಡಿ ಠಾಣೆಗೆ ಬಂದು ನನ್ನ ವರದಿ ಸಲ್ಲಿಸಿದ್ದು ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ವರದಿಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 58/2021 ಕಲಂ 188, 269, 270 ಐಪಿಸಿ ಮತ್ತು ಕಲಂ 5 (2) ಕನರ್ಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ಕೊಡೇಕಲ್ ಪೊಲೀಸ ಠಾಣೆ:- 30/2021 ಕಲಂ: 143, 147, 302 ಸಂಗಡ 149 ಐಪಿಸಿ : ಇಂದು ದಿನಾಂಕ:29.04.2021 ರಂದು ಸಾಯಂಕಾಲ 6:15 ಪಿ.ಎಮ್ಕ್ಕೆ ಪಿಯರ್ಾದಿ ಶ್ರೀ ಬಸಣ್ಣ @ ಬಸಪ್ಪ ತಂದೆ ನಿಂಗಪ್ಪ ಬಂಗೇರ ವ:60 ವರ್ಷ ಜಾ:ಹಿಂದೂ ಬೇಡರ ಉ:ಒಕ್ಕಲುತನ ಸಾ:ಬಂಗೇರದೊಡ್ಡಿ ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಮ್ಮ ಹೇಳಿಕೆಯನ್ನು ಹೇಳಿ ಟೈಪ್ ಮಾಡಿಸಿದ್ದು, ಸದರಿ ಪಿಯರ್ಾದಿಯ ಹೇಳಿಕೆ ಸಾರಾಂಶ ಏನೆಂದರೆ, ನಮ್ಮ ತಂದೆ-ತಾಯಿಗೆ ನಾನು ಹಣಮಪ್ಪ, ಭೀಮಣ್ಣ, ಶಂಕ್ರಪ್ಪ, ವೆಂಕಟೇಶ, ಭೀಮವ್ವ, ಚಂದಮ್ಮ ಅಂತಾ 7 ಜನ ಮಕ್ಕಳಿದ್ದು ನಮ್ಮಲ್ಲೆರದೂ ಮದುವೆಯಾಗಿದ್ದು ನಾವು ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಇರುತ್ತೇವೆ. ನನಗೆ ಹಣಮಪ್ಪ @ ಹಣಮಂತ, ಅಮರವ್ವ, ಸ್ವಾಮವ್ವ, ನಾಗಮ್ಮ, ಯಮನಪ್ಪ, ಪರಸಪ್ಪ, ಪೂಜಪ್ಪ, ನಿಂಗಪ್ಪ ಅಂತಾ 8 ಜನ ಮಕ್ಕಳಿದ್ದು ಮಗನಾದ ಹಣಮಪ್ಪ @ ಹಣಮಂತ ಈತನದು ಹಾಗೂ ಅಮರವ್ವ, ಸ್ವಾಮವ್ವ ರವರದ್ದು ಮದುವೆಯಾಗಿದ್ದು ಹೆಣ್ಣುಮಕ್ಕಳು ತಮ್ಮ ಗಂಡನ ಮನೆಯಲ್ಲಿದ್ದು ಉಳಿದವರದು ಇನ್ನೂ ಮದುವೆಯಾಗಿರುವುದಿಲ್ಲ. ನನ್ನ ಮಗ ಹಣಮಪ್ಪ @ ಹಣಮಂತ ಈತನಿಗೆ ಮಾನಪ್ಪ ಅಂತಾ ಹೆಸರಿನ 5 ವರ್ಷದ ಮಗನಿದ್ದು ನಾವೆಲ್ಲರೂ ಕೂಡಿಯೇ ಇರುತ್ತೇವೆ. ಕಕ್ಕೇರಾ ಸೀಮಾಂತರದ ಜಮೀನು ಸವರ್ೇ ನಂ:603 ರಲ್ಲಿ ನನ್ನದು ಬಂಗೇರ ಹೊಲ ಅಂತಾ ಹೆಸರಿನ 8 ಎಕರೆ ಜಮೀನು ಇದ್ದು, ನನ್ನ ಈ ಜಮೀನಿಗೆ ಹೊಂದಿ ಇದೇ ಸವರ್ೇ ನಂಬರ್ ದಲ್ಲಿ ನಮ್ಮ ಎರಡನೇ ಅಣ್ಣ-ತಮ್ಮಕೀಯ ಜಟ್ಟೆಪ್ಪ ತಂದೆ ಬಸಣ್ಣ ಬಂಗೇರ ರವರ ಜಮೀನು ಇದ್ದು, ನಾವು ನಮ್ಮ ಜಮೀನಿಗೆ ಹೋಗಬೇಕಾದರೆ ಜಟ್ಟೆಪ್ಪ ತಂದೆ ಬಸಣ್ಣ ಬಂಗೇರ ರವರ ಹೊಲದಲ್ಲಿಯ ದಾರಿಯ ಮೇಲಿಂದಲೇ ಹೋಗಬೇಕು. ಈ ರಸ್ತೆಯು ಕಕ್ಕೇರಾದಿಂದ ನೀಲಕಂಠರಾಯನಗಡ್ಡಿಯ ಕಡೆಗೆ ಹೋಗುವ ರಸ್ತೆಯಾಗಿದ್ದು, ಇದು ಸರಕಾರಿ ರಸ್ತೆಯಾಗಿದ್ದರೂ ಕೂಡಾ ನಮ್ಮ ಅಣ್ಣ-ತಮ್ಮಕೀಯ ಜಟ್ಟೆಪ್ಪ ಬಂಗೇರ ಈತನು ನಮಗೆ ಹಾಗೂ ನಮ್ಮ ಅಣ್ಣ-ತಮ್ಮಂದಿರಿಗೆ ತಿರುಗಾಡಲು ದಾರಿ ಬಿಡದೇ ಈಗ 6-7 ತಿಂಗಳುಗಳಿಂದ ತಕರಾರು ಮಾಡುತ್ತಾ ದಾರಿಯ ಮೇಲೆ ಯಾರೂ ತಿರುಗಾಡದಂತೆ ಮುಳ್ಳು ಹಚ್ಚಿ ಬಂದ್ ಮಾಡುತ್ತಾ ಬಂದಿದ್ದು ನಾವು ಅವನಿಗೆ ಈ ದಾರಿ ಸರಕಾರಿ ದಾರಿ ಇದ್ದು ಹೀಗೆ ನೀನು ದಾರಿಯನ್ನು ಬಂದ್ ಮಾಡಿದರೆ ನಾವು ಹೇಗೆ ತಿರುಗಾಡಬೇಕು ಅಂತಾ ಕೇಳಿದ್ದಕ್ಕೆ ಅವನು ನಮ್ಮ ಮೇಲೆ ಸಿಟ್ಟಾಗಿ ಸೂಳೇ ಮಕ್ಕಳೇ ಈ ದಾರಿಯ ಬಗ್ಗೆ ಕೇಳಲಿಕ್ಕೆ ನೀವ್ಯಾರು ಈ ದಾರಿ ವಿಷಯದಲ್ಲಿ ನನ್ನ & ನಮ್ಮ ಕುಟುಂಬದ ಜೊತೆ ತರಕಾರು ಮಾಡಿದರೆ ನಿಮಗೆ ಕೊಲೆ ಮಾಡುತ್ತೇವೆ ಅಂತಾ ಜಟ್ಟೆಪ್ಪ ಹಾಗೂ ಅವನ ಮಕ್ಕಳಾದ ಬಸಪ್ಪ @ ಬಸಣ್ಣ, ಮುತ್ತಪ್ಪ @ ಹಣಮಂತ, ಬುಡ್ಡಯ್ಯ ತಂದೆ ಜಟ್ಟೆಪ್ಪ, ಪರಸಪ್ಪ ತಂದೆ ಜಟ್ಟೆಪ್ಪ ಹಾಗೂ ಪೂಲಬಾಯೇರ ದೊಡ್ಡಿಯ ಜಟ್ಟೆಪ್ಪನ ಮೊಮ್ಮಕ್ಕಳಾದ ಮಾನಯ್ಯ ತಂದೆ ನಂದಪ್ಪ, ಹುಲಗಪ್ಪ ತಂದೆ ನಂದಪ್ಪ ಇವರುಗಳು ನನಗೆ ಹಾಗೂ ನನ್ನ ಕಟುಂಬದವರಿಗೆ ಕೊಲೆ ಬೆದರಿಕೆ ಹಾಕುತ್ತಾ ಬಂದಿದ್ದು ಇರುತ್ತದೆ. ನಾವು ಬಡವರಿದ್ದುದರಿಂದ ನನ್ನ ಮಗ ಹಣಮಂತ @ ಹಣಮಪ್ಪ ಈತನು ನಮ್ಮೂರಲ್ಲಿ ಯಾರಾದರು ಕೂಲಿ ಕೆಲಸಕ್ಕೆ ಕರೆದರೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಆದರೂ ಕೂಡಾ ನಾವು ಜಟ್ಟೆಪ್ಪ ಹಾಗೂ ಅವರ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಯಾಕೆ ತಕರಾರು ಮಾಡುವುದು ಅಂತಾ ತಾಳಿಕೊಂಡು ಬಂದಿದ್ದು ಇರುತ್ತದೆ. ಈಗ 5 ದಿನಗಳ ಹಿಂದೆ ಜಟ್ಟೆಪ್ಪನ ಹಿರಿಯ ಮಗನಾದ ಪೂಜಪ್ಪನು ಸತ್ತಿದ್ದು ಆಗ ನಾವು ಅವರು ಅಣ್ಣ-ತಮ್ಮಕೀಯರೆಂದು ಅಂತ್ಯಕ್ರಿಯೆಗೆ ಹೋಗಬೇಕೆಂದು ತಯಾರಾದಾಗ ಜಟ್ಟೆಪ್ಪನ ಇನ್ನೊಬ್ಬ ಮಗನಾದ ಬಸಪ್ಪ @ ಬಸಣ್ಣ ಈತನು ನಮ್ಮ ಮನೆಯ ಮುಂದೆ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಬಂದು ಸೂಳೇ ಮಕ್ಕಳೇ ನೀವು ನಮ್ಮ ಅಣ್ಣ ಪೂಜಪ್ಪನ ಮಣ್ಣಿಗೆ ಬರುವುದು ಬೇಡ ಬಂದರೆ ನಿಮ್ಮನ್ನು ಕಡಿದು ಹಾಕುತ್ತೇನೆ ಅಂತಾ ಒದರಾಡಿ ಹೋಗಿದ್ದನು.ಹೀಗಿದ್ದು ನಿನ್ನೆ ದಿನಾಂಕ:28.04.2021 ರಂದು ಮುಂಜಾನೆ 10:00 ಗಂಟೆಯ ಸುಮಾರಿಗೆ ನಾನು & ನನ್ನ ಹೆಂಡತಿ ದ್ಯಾಮವ್ವ ಹಾಗೂ ನನ್ನ ಮಗನಾದ ಹಣಮಂತ @ ಹಣಮಪ್ಪ ತಂದೆ ಬಸಣ್ಣ ಬಂಗೇರ ವ:30 ವರ್ಷ ರವರು ನಮ್ಮ ಮನೆಯಲ್ಲಿದ್ದಾಗ ನಮ್ಮ ಅಣ್ಣ-ತಮ್ಮಕೀಯ ಜಟ್ಟೆಪ್ಪನ ಮಕ್ಕಳಾದ ಬಸಪ್ಪ @ ಬಸಣ್ಣ, ಬುಡ್ಡಪ್ಪ ತಂದೆ ಜಟ್ಟೆಪ್ಪ ಹಾಗೂ ಜಟ್ಟೆಪ್ಪನ ಮೊಮ್ಮಕ್ಕಳಾದ ಪೂಲಬಾಯೇರ ದೊಡ್ಡಿಯ ಮಾನಯ್ಯ ತಂದೆ ನಂದಪ್ಪ, ಹುಲಗಪ್ಪ ತಂದೆ ನಂದಪ್ಪ ಇವರುಗಳು ನಮ್ಮ ಮನೆಗೆ ಬಂದು ನನ್ನ ಮಗನಾದ ಹಣಮಂತ @ ಹಣಮಪ್ಪನಿಗೆ ನಮ್ಮ ಕವಳಿ ರಾಶಿ ಮಾಡುತ್ತಿದ್ದೇವೆ ಕವಳಿಯನ್ನು ಹರವಲು ಕೂಲಿ ಕೆಲಸಕ್ಕೆ ಬಾ ಅಂತಾ ಕರೆದಿದ್ದರಿಂದ ನಾನು ಅಣ್ಣ-ತಮ್ಮಕೀಯವರು ಕರೆಯುತ್ತಾರೆ ಹೋಗು ಅಂತಾ ನನ್ನ ಮಗನಿಗೆ ಕಳುಹಿಸಿದ್ದು, ನಿನ್ನೆ ದಿನ ರಾತ್ರಿಯಾದರು ಕೂಲಿಕೆಲಸಕ್ಕೆ ಹೋದ ನನ್ನ ಮಗ ಹಣಮಂತನು ಮರಳಿ ಮನೆಗೆ ಬಂದಿರಲಿಲ್ಲ. ನಾವು ಅಲ್ಲಿಯೇ ಕವಳಿ ರಾಶಿಯ ಹತ್ತಿರ ಮಲಗಿಕೊಂಡಿರಬಹುದೆಂದು ತಿಳಿದಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ:29.04.2021 ರಂದು ಮುಂಜಾನೆ 09:30 ಗಂಟೆಯ ಸುಮಾರಿಗೆ ನನ್ನ ಹೆಂಡತಿಯಾದ ದ್ಯಾಮವ್ವ ಹಾಗೂ ನನ್ನ ಸಣ್ಣ ಮಗನಾದ ನಿಂಗಪ್ಪ ರವರು ಬಟ್ಟೆ & ಕೌದಿ ತೊಳೆಯಲು ನಮ್ಮೂರ ಪಕ್ಕದ ಕೃಷ್ಣಾ ನದಿಗೆ ಹೋಗಿದ್ದು ಬಟ್ಟೆ ಒಗೆಯಲು ನನ್ನ ಹೆಂಡತಿಯ ಜೊತೆಗೆ ಹೋದ ನನ್ನ ಮಗ ನಿಂಗಪ್ಪನು ಮುಂಜಾನೆ 10:15 ಗಂಟೆಯ ಸುಮಾರಿಗೆ ಅಳುತ್ತಾ ಮನೆಗೆ ಬಂದಿದ್ದು ನಾನು ಅವನಿಗೆ ವಿಚಾರಿಸಲಾಗಿ ನನ್ನ ಮಗನು ತಿಳಿಸಿದ್ದೇನೆಂದರೆ, ನಮ್ಮ ಅಣ್ಣ-ತಮ್ಮಕೀಯ ಜಟ್ಟೆಪ್ಪ ತಂದೆ ಬಸಣ್ಣ ಬಂಗೇರ ಇವರ ಅಳಿಯನಾದ ನಂದಪ್ಪ ತಂದೆ ಹಣಮಂತ ಪೂಲಬಾಯೇರ ಇವರ ಹೊಲದಲ್ಲಿಯ ಕೃಷ್ಣಾ ನದಿಯ ದಂಡೆಯ ಮೇಲಿನ ಪೂಜಾರೆಪ್ಪನ ಗುಡಿಯ ಮುಂದೆ ಒಬ್ಬ ಮನುಷ್ಯನು ಮಲಗಿಕೊಂಡಂತೆ ಕಂಡುಬಂದಿದ್ದು, ನಾನು & ಅವ್ವ ದ್ಯಾಮವ್ವ ಇಬ್ಬರು ಕೂಡಿ ಹೋಗಿ ನೋಡಲಾಗಿ ಆ ಮನುಷ್ಯನು ನನ್ನ ಅಣ್ಣ ಹಣಮಂತ @ ಹಣಮಪ್ಪನು ಇದ್ದು ಅವನು ಸತ್ತಿದ್ದು ನಾವು ನೋಡಲಾಗಿ ಅವನ ತಲೆಯ ಕೆಳಗೆ ಕೌದಿಯನ್ನು ಮಡಚಿ ಇಟ್ಟಿದ್ದು ಮೇಲೆ ಚಾದರ ಹೊದಿಕೆಮಾಡಿದ್ದು ನೋಡಲಾಗಿ ಮೈಮೇಲೆ ಹಾಫ್ ತೋಳಿ ಬನಿಯನ್ & ಬಿಳಿಯ ಬಣ್ಣದ ಲುಂಗಿ ಇದ್ದು ನನ್ನ ಅಣ್ಣನ ಎರಡೂ ಪಕ್ಕಡಿಗಳ ಮೇಲೆ ಕಂದುಗಟ್ಟಿದ ಗಾಯಗಳು ಮತ್ತು ಬೆನ್ನಿನ ಮೇಲೆ ಹಾಗೂ ಎರಡೂ ಡುಬ್ಬಗಳ ಮೇಲೆ ತರಚಿದ ಗಾಯಗಳು, ಎದೆಯ ಮೇಲೆ ಚೂರಿದ ಗಾಯಗಳು ಕಂಡುಬಂದಿದ್ದು, ಅಲ್ಲದೇ ಎಳೆದಾಡಿ ಹೊಡೆ-ಬಡೆಮಾಡಿದಂತೆ ಕಂಡು ಬಂದಿದ್ದು ನೋಡಿದರೆ ನನ್ನ ಅಣ್ಣನನ್ನು ಕೊಲೆಮಾಡಿದ ಹಾಗೆ ಕಾಣಿಸುತ್ತದೆ ಅಂತಾ ತಿಳಿಸಿದ್ದು ಇರುತ್ತದೆ. ನಂತರ ನಾನು ಮತ್ತು ನನ್ನ ಮಗನಾದ ನಿಂಗಪ್ಪ ಹಾಗೂ ತಮ್ಮನಾದ ಭೀಮಣ್ಣ ತಂದೆ ನಿಂಗಪ್ಪ ಬಂಗೇರ ಹಾಗೂ ಅಳಿಯನಾಗಬೇಕಾದ ಪರಸಪ್ಪ ತಂದೆ ಹಣಮಂತ ಪೂಲಬಾಯೇರ ಇವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ನನ್ನ ಮಗ ಹಣಮಂತ@ಹಣಮಪ್ಪ ಈತನು ಮೃತಪಟ್ಟಿದ್ದು ನೋಡಲಾಗಿ ನನ್ನ ಮಗನ ಮೈಮೇಲೆ ಎರಡೂ ಪಕ್ಕಡಿಗಳ ಮೇಲೆ ಕಂದುಗಟ್ಟಿದ ಗಾಯಗಳು ಮತ್ತು ಬೆನ್ನಿನ ಮೇಲೆ ಹಾಗೂ ಎರಡೂ ಡುಬ್ಬಗಳ ಮೇಲೆ ತರಚಿದ ಗಾಯಗಳು, ಎದೆಯ ಮೇಲೆ ಚೂರಿದ ಗಾಯಗಳು ಕಂಡುಬಂದಿದ್ದು, ಅಲ್ಲದೇ ನನ್ನ ಮಗನಾದ ಹಣಮಂತ@ಹಣಮಪ್ಪನಿಗೆ ಎಳೆದಾಡಿ ಹೊಡೆ-ಬಡೆಮಾಡಿದಂತೆ ಕಂಡು ಬಂದಿರುತ್ತದೆ. ನನ್ನ ಮಗನಾದ ಹಣಮಂತ@ಹಣಮಪ್ಪ ಈತನಿಗೆ ನಿನ್ನೆ ದಿನಾಂಕ:28/04/2021 ರಂದು ಕೂಲಿಕೆಲಸಕ್ಕೆಂದು ಕರೆದುಕೊಂಡ ಹೋದ 1) ಬಸಪ್ಪ @ಬಸಣ್ಣ ತಂದೆ ಜೆಟ್ಟೆಪ್ಪ ಬಂಗೇರ, 2) ಬುಡ್ಡಯ್ಯ ತಂದೆ ಜೆಟ್ಟೆಪ್ಪ ಬಂಗೇರ 3) ಹುಲಗಪ್ಪ ತಂದೆ ನಂದಪ್ಪ ಪೂಲಬಾಯೇರ 4) ಮಾನಯ್ಯ ತಂದೆ ನಂದಪ್ಪ ಪೂಲಬಾಯೇರ ಇವರು ಮತ್ತು 5) ಮುತ್ತಪ್ಪ @ ಹಣಮಂತ ತಂದೆ ಜೆಟ್ಟೆಪ್ಪ ಬಂಗೇರ 6) ಪರಸಪ್ಪ ತಂದೆ ಜೆಟ್ಟೆಪ್ಪ ಬಂಗೇರ ಇವರು ಕೂಡಿ ನನ್ನ ಮಗನಿಗೆ ಹಳೆಯ ವೈಷಮ್ಯದಿಂದ ನಿನ್ನೆ ದಿನಾಂಕ:28.04.2021 ರಂದು ರಾತ್ರಿ 9:00 ಗಂಟೆಯಿಂದ ಇಂದು ದಿನಾಂಕ:29.04.2021 ರಂದು ಮುಂಜಾನೆ 09:45 ಗಂಟೆಯ ಮದ್ಯದ ಅವಧಿಯಲ್ಲಿ ಕೊಲೆಮಾಡಿ ಹೆಣವನ್ನು ನಂದಪ್ಪ ತಂದೆ ಹಣಮಂತ ಪೂಲಬಾಯೇರ ಇವರ ಹೊಲದಲ್ಲಿಯ ಹೊಳಿ ದಂಡೆಯ ಮೇಲಿನ ಪೂಜಾರಪ್ಪನ ಗುಡಿ ಮುಂದೆ ಮಲಗಿಸಿ ಹೋಗಿದ್ದು ಇರುತ್ತದೆ. ನಾನು ಹಿರಿಯರೊಂದಿಗೆ ವಿಚಾರ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ನನ್ನ ಮಗನ ಶವವು ಕೊಲೆಯಾದ ಸ್ಥಳದಲ್ಲಿಯೇ ಇದ್ದು ಕಾರಣ ನನ್ನ ಮಗನಿಗೆ ಕೊಲೆ ಮಾಡಿದವರ ವಿರುದ್ದು ಕಾನೂನ ಕ್ರಮ ಜರುಗಿಸಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ ಪಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.30/2021 ಕಲಂ: 143, 147, 302 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ:- 26/2021 ಕಲಂ: 143, 147, 148, 323, 324, 326, 504, 506 ಸಂ 149 ಐಪಿಸಿ : ಇಂದು ದಿನಾಂಕ:29/04/2021 ರಂದು 5:30 ಪಿಎಮ್ಕ್ಕೆ ಪಿಯರ್ಾದಿ ಶ್ರೀಮತಿ ಮಂಗಲಿಬಾಯಿ ಗಂಡ ಕಸ್ತೂರೆಪ್ಪ ರಾಠೋಡ ವ|| 58ವರ್ಷ ಜಾ|| ಹಿಂದೂ ಲಂಬಾಣಿ ಉ|| ಕೂಲಿಕೆಲಸ ಸಾ|| ದೊಡ್ಡಚಾಪಿ ತಾಂಡಾ ಇವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ತನಗೆ ಮಂಜುನಾಥ ರಾಠೋಡ, ಜಯರಾಮ ರಾಠೋಡ, ಜಗದೇವ ರಾಠೋಡ, ಸಂತೋಷ ರಾಠೋಡ ಅಂತಾ ನಾಲ್ಕು ಜನ ಗಂಡು ಮಕ್ಕಳಿದ್ದು ಅವರಲ್ಲಿ ಮಂಜುನಾಥ, ಜಯರಾಮ ಇವರಿಗೆ ಮದುವೆ ಮಾಡಿದ್ದು ಇವರಿಬ್ಬರೂ ತಮ್ಮ ತಮ್ಮ ಕುಟುಂಬದೊಂದಿಗೆ ಬೇರೆಯಾಗಿ ವಾಸಮಾಡುತ್ತಿದ್ದು ಸದ್ಯ ಕೂಲಿ ಕೆಲಸಕ್ಕಾಗಿ ಮಂಜುನಾಥನು ಗೋವಾಕ್ಕೆ, ಜಯರಾಮನು ಹಾಸನಗೆ ಹೋಗಿದ್ದು ಇರುತ್ತದೆ. ಇನ್ನಿಬ್ಬರೂ ಮಕ್ಕಳಾದ ಜಗದೇವ ಮತ್ತು ಸಂತೋಷ ಇವರಿಗೆ ಇನ್ನೂ ಮದುವೆ ಆಗಿರುವುದಿಲ್ಲ ಇವರು ನಮ್ಮೊಂದಿಗೆ ವಾಸವಿರುತ್ತಾರೆ. ನಮ್ಮ ಮಕ್ಕಳಾದ ಜಗದೇವ ಮತ್ತು ಸಂತೋಷ ಇವರುಗಳು ಬೆಂಗಳೂರಿಗೆ ಹೋಗಿ ಅಲ್ಲಿಯೇ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು ಸುಮಾರು ಒಂದು ವಾರದ ಹಿಂದೆ ನನ್ನ ಗಂಡನಾದ ಕಸ್ತೂರೆಪ್ಪ ತಂದೆ ಭೀಲಪ್ಪ ರಾಠೋಡ ಈತನು ಬಿದ್ದಿದ್ದರಿಂದ ಬಲಗಾಲು ಮುರಿದಿದ್ದು ನಾನು ಒಬ್ಬಳೆ ಆಗಿದ್ದರಿಂದ ನನ್ನ ಗಂಡನಿಗೆ ನೋಡಿಕೊಳ್ಳಲು ಆಗದಿದ್ದರಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಕಿರಿಯ ಮಗನಾದ ಸಂತೋಷನು ಬೆಂಗಳೂರಿನಿಂದ ನಮ್ಮ ತಾಂಡಾಕ್ಕೆ ಬಂದು ತನ್ನ ತಂದೆಗೆ ನೋಡಿಕೊಂಡು ನಮ್ಮೊಂದಿಗೆ ವಾಸವಾಗಿದ್ದು ಇರುತ್ತದೆ. ನಮ್ಮ ಮಗನಾದ ಸಂತೋಷನು ತಾಂಡಾದಲ್ಲಿ ಇದ್ದಾಗ ನಮ್ಮ ತಾಂಡಾದ ಅಂಗನವಾಡಿ ಶಾಲೆಗೆ ತಾರಾಬಾಯಿ ಗಂಡ ಬಾಲಚಂದ್ರ ಜಾದವ ಸಾ|| ಸಣ್ಣಚಾಪಿ ತಾಂಡಾ ಇವರು ಅಂಗನವಾಡಿ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಿದ್ದು ಅವಳು ನಮ್ಮ ಮಗನಿಗೆ ಅಂಗನವಾಡಿ ಕೆಂದ್ರಕ್ಕೆ ಬರುವ ದವಸ ದಾನ್ಯಗಳನ್ನು ಜನರಿಗೆ ಹಂಚಿಕೆ ಮಾಡಲು ಕರೆಯುತ್ತಿದ್ದು ನಮ್ಮ ಮಗ ಸಂತೋಷನು ನಮ್ಮ ತಾಂಡಾದ ಅಂಗನವಾಡಿಗೆ ಹೋಗಿ ಅವರು ಹೇಳುವ ಕೆಲಸವನ್ನು ಮಾಡಿ ಬರುತ್ತಿದ್ದನು ಹೀಗೆ ತಾರಾಬಾಯಿಯು ಆಗಾ ಆಗಾ ನಮ್ಮ ಮಗನಿಗೆ ಪೋನ್ ಮಾಡಿ ಕರೆಯಿಸಿಕೊಂಡು ತನ್ನ ಅಂಗನವಾಡಿ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಳು ಇದರಿಂದ ಅವರಿಬ್ಬರೂ ಜಾಸ್ತಿ ಪರಿಚಯ ವಾಗಿದ್ದು ಇರುತ್ತದೆ. ಹೀಗಿದ್ದು ದಿನಾಂಕ:27/04/2021 ರಂದು ಸಾಯಂಕಾಲ ನಮ್ಮ ಮಗ ಸಂತೋಷನು ಮನೆಯಲ್ಲಿದ್ದಾಗ ಬಸವರಾಜ ತಂದೆ ಹಣಮಂತ ರಾಠೋಡ ಸಾ||ಬಸರಗಿಡ ಲಕ್ಷ್ಮಣಕೇರಿ ತಾಂಡಾ ಈತನು ನನ್ನ ಮಗನಿಗೆ ಪೋನ್ ಮಾಡಿದಾಗ ನನ್ನ ಮಗನ ಮೊಬೈಲ್ ಸ್ವೀಚ್ ಆಪ್ ಆಗಿದ್ದು ನಂತರ ಮಿಸ್ಡ್ಕಾಲ್ ಮೆಸೇಜ್ ಬಂದಿದ್ದರಿಂದ ಬೇರೆಯವರ ಪೋನ್ ತೆಗೆದುಕೊಂಡು ನನ್ನ ಮಗ ಸಂತೋಷನು ಬಸವರಾಜನಿಗೆ ಪೋನ್ ಮಾಡಿದಾಗ ಎಲ್ಲಿ ಇದ್ದಿಯಾ ಅಂತಾ ಕೇಳಿದಾಗ ನನ್ನ ಮಗನು ಮನೆಯಲ್ಲಿ ಇದ್ದಿನಿ ಅಂತಾ ಹೇಳಿದಾಗ ನಿನ್ನ ಹತ್ತಿರದ ಮೆಮರಿ ಕಾರ್ಡ ತಗೊಂಡು ಬಾ ನಿನ್ನ ಹತ್ತಿರ ಮಾತಾಡುವುದಿದೆ ಅಂತಾ ಹೇಳಿದಾಗ ನನ್ನ ಮಗನು ಮನೆಯಿಂದ ಅಂದು ಸಾಯಂಕಾಲ 6:15 ಗಂಟೆಯ ಸುಮಾರಿಗೆ ಹೋದನು ಸುಮಾರು ಹೊತ್ತು ಆದರು ನನ್ನ ಮಗ ಸಂತೋಷನು ಮರಳಿ ಮನೆಗೆ ಬರಲಿಲ್ಲ ನಾವು ದಿನ ನಿತ್ಯದಂತೆ ಹೊರಗಡೆ ಹೋಗಿದ್ದಾನಲ್ಲ ಆಮೇಲೆ ಬರುತ್ತಾನೆ ಅಂತಾ ಸುಮ್ಮನಾದೆವು. ನಂತರ ತಿರುಪತಿ ತಂದೆ ಮೋತೆಪ್ಪ ರಾಠೋಡ ಸಾ|| ಬಸರಗಿಡದ ತಾಂಡಾ ಈತನು ಚಂದಪ್ಪ ತಂದೆ ಶಂಕ್ರಪ್ಪ ಪವ್ಹಾರ ಸಾ|| ದೊಡ್ಡಚಾಪಿ ತಾಂಡಾ ಇವರಿಗೆ ಪೋನ್ ಮಾಡಿ ನಮ್ಮ ಸಂತೋಷನಿಗೆ ಬಸವರಾಜ ತಂದೆ ಹಣಮಂತ ರಾಠೋಡ, ಶೇಖಪ್ಪ ತಂದೆ ಹಣಮಂತ ರಾಠೋಡ ಸಾ|| ಬಸರಗಿಡ ಲಕ್ಷ್ಮಣಕೇರಿ ತಾಂಡಾ ಬಾಲಚಂದ್ರ ತಂದೆ ತುಳಜಪ್ಪ ಜಾದವ ಸಾ|| ಸಣ್ಣಚಾಪಿ ತಾಂಡಾ ಇವರುಗಳು ಸಾಯಂಕಾಲ 6:30 ಪಿಎಮ್ ಸುಮಾರಿಗೆ ನಮ್ಮ ಹೊಲದಲ್ಲಿನ ಎಣ್ಣಿವಡಗೇರಾ-ಕೊಟೇಗುಡ್ಡ ರಸ್ತೆಯ ಮೇಲೆ ಹೊಡೆದಿರುತ್ತಾರೆ ನಾನು ಬಿಡಿಸಿದರರು ಬಿಡದೇ ತಮ್ಮ ಸಂಗಡ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ನಂತರ ನಮಗೆ ಮತ್ತು ತಾಂಡಾದಲ್ಲಿನ ನಮ್ಮವರಿಗೆ ಈ ವಿಷಯ ಗೊತ್ತಾಗಿದ್ದು ಇರುತ್ತದೆ. ನಂತರ ನಾರಾಯಣ ತಂದೆ ಮೋತೆಪ್ಪ ಪವ್ಹಾರ, ಕೃಷ್ಣಪ್ಪ ತಂದೆ ಚಂದಪ್ಪ ಪವ್ಹಾರ, ತಿರುಪತಿ ತಂದೆ ಲಚ್ಚಪ್ಪ ಪವ್ಹಾರ ಸಾ|| ಎಲ್ಲಾರೂ ದೊಡ್ಡಚಾಪಿ ತಾಂಡಾ ಹರಿಸಿಂಗ್ ತಂದೆ ನೀಲಪ್ಪ ಪವ್ಹಾರ ಸಾ|| ಮಾರನಾಳ ದೊಡ್ಡತಾಂಡಾ ಇವರುಗಳು ಬಸರಗಿಡ ಲಕ್ಷ್ಮಣಕೇರಿ ತಾಂಡಾಕ್ಕೆ ಹೋಗಿ ಬಸವರಾಜ ತಂದೆ ಹಣಮಂತ ರಾಠೋಡ ಇವರ ಮನೆಯಲ್ಲಿದ್ದ ನಮ್ಮ ಮಗನಿಗೆ ಬಿಡಿಸಿಕೊಂಡು ನಮ್ಮ ತಾಂಡಾಕ್ಕೆ ಕರೆದುಕೊಂಡು ಬಂದಿರುತ್ತಾರೆ. ಮನೆಗೆ ಕರೆದುಕೊಂಡು ಬಂದ ನನ್ನ ಮಗ ಸಂತೋಷನಿಗೆ ನೋಡಲಾಗಿ ತಿವ್ರವಾಗಿ ಗಾಯಪೆಟ್ಟು ಹೊಂದಿ ಅಸ್ವಸ್ಥಗೊಂಡಿದ್ದನು ವಿಚಾರಿಸಿದರು ಘಟನೆಯ ಬಗ್ಗೆ ಸರಿಯಾಗಿ ಹೇಳುವ ಸ್ಥೀತಿಯಲ್ಲಿ ಇರಲಿಲ್ಲ. ಆಗೇ ಒಂದು ಖಾಸಗಿ ವಾಹನದಲ್ಲಿ ನನ್ನ ಮಗನಿಗೆ ಉಪಚಾರ ಕುರಿತು ನಾನು, ನಮ್ಮ ತಾಂಡಾದ ಗಂಗಪ್ಪ ತಂದೆ ಭೀಲಪ್ಪ ರಾಠೋಡ, ತಿರುಪತಿ ತಂದೆ ಹಣಮಂತ ರಾಠೋಡ ಸೇರಿ ಸಕರ್ಾರಿ ಆಸ್ಪತ್ರೆ ಲಿಂಗಸ್ಗೂರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ರಾಯಚೂರದಲ್ಲಿನ ಸುರಕ್ಷಾ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಕೊಡಿಸಿದ್ದು ಇರುತ್ತದೆ. ನನ್ನ ಮಗನಿಗೆ ಜಗಳದಲ್ಲಿ ಬಲಕೈಯ ಮೊಣಕೈ ಕೆಳಗೆ ಮತ್ತು ಎಡ ಕೈಯ ಕಿಲು ಮುರಿದಿದ್ದರಿಂದ ಅದಕ್ಕೆ ನಾವು ದಿನಾಂಕ:28/04/2021 ರಂದು ಆಪರೇಷನ್ ಮಾಡಿಸಿದ್ದು ಈಗ ಉಪಚಾರ ಪಡೆದು ಸ್ವಲ್ಪ ಗುಣಮುಖನಾಗಿದ್ದು ನಾವು ನಮ್ಮ ಮಗ ಸಂತೋಷನು ಗುಣಮುಖವಾದನಂತರ ನಡೆದ ಘಟನೆಯ ಬಗ್ಗೆ ವಿಚಾರಿಸಲಾಗಿ ತಿಳಿಸಿದ್ದು ಎನೇಂದರೆ ತನಗೆ ದಿನಾಂಕ:27/04/2021 ರಂದು ಸಾಯಂಕಾಲ ನಾನು ಮನೆಯಲ್ಲಿದ್ದಾಗ ಬಸವರಾಜ ತಂದೆ ಹಣಮಂತ ರಾಠೋಡ ಸಾ||ಬಸರಗಿಡ ಲಕ್ಷ್ಮಣಕೇರಿ ತಾಂಡಾ ಈತನು ನನಗೆ ಪೋನ್ ಮಾಡಿದಾಗ ನನ್ನ ಮೊಬೈಲ್ ಸ್ವೀಚ್ ಆಪ್ ಆಗಿದ್ದು ನಂತರ ಮಿಸ್ಡ್ಕಾಲ್ ಮೆಸೇಜ್ ಬಂದಿದ್ದರಿಂದ ನಾನು ಬೇರೆಯವರ ಪೋನ್ ತೆಗೆದುಕೊಂಡು ಬಸವರಾಜನಿಗೆ ಪೋನ್ ಮಾಡಿದಾಗ ಎಲ್ಲಿ ಇದ್ದಿಯಾ ಅಂತಾ ಕೇಳಿದಾಗ ನಾನು ಮನೆಯಲ್ಲಿ ಇದ್ದಿನಿ ಅಂತಾ ಹೇಳಿದ್ದು ಆಗ ಬಸವರಾಜನು ನನಗೆ ನಿನ್ನ ಹತ್ತಿರದ ಮೆಮರಿ ಕಾರ್ಡ ತಗೊಂಡು ಬಾ ನಿನ್ನ ಹತ್ತಿರ ಮಾತಾಡುವುದಿದೆ ಅಂತಾ ಹೇಳಿದಾಗ ನಾನು ಮನೆಯಿಂದ ಅಂದು ಸಾಯಂಕಾಲ 6:15 ಗಂಟೆಯ ಸುಮಾರಿಗೆ ಹೋಗಿದ್ದು 6:30 ಪಿಎಮ್ ಸುಮಾರಿಗೆ ನಾನು ಮೋತೆಪ್ಪ ತಂದೆ ರಾಮಚಂದ್ರ ರಾಠೋಡ ಸಾ|| ಬಸರಗಿಡದ ತಾಂಡಾ ಇವರ ಹೊಲದಲ್ಲಿನ ಎಣ್ಣಿವಡಗೇರಾ-ಕೊಟೆಗುಡ್ಡ ರಸ್ತೆಯ ಮೇಲೆ ಹೋದಾಗ ಅಲ್ಲಿಯೇ ಇದ್ದ ಬಸವರಾಜ ತಂದೆ ಹಣಮಂತ ರಾಠೋಡ, ಶೇಖಪ್ಪ ತಂದೆ ಹಣಮಂತ ರಾಠೋಡ ಸಾ|| ಬಸರಗಿಡ ಲಕ್ಷ್ಮಣಕೇರಿ ತಾಂಡಾ ಬಾಲಚಂದ್ರ ತಂದೆ ತುಳಜಪ್ಪ ಜಾದವ ಸಾ|| ಸಣ್ಣಚಾಪಿ ತಾಂಡಾ ಇವರುಗಳಲ್ಲಿ ಬಸವರಾಜನು ನನಗೆ ಲೇ ಸೂಳಿ ನಿನ್ನ ಹತ್ತಿರದ ಮೆಮರಿ ಕಾರ್ಡ ಕೊಡು ಇಲ್ಲಾಂದ್ರ ನಿನಗೆ ಖಲಾಸ್ ಮಾಡುತ್ತೇವೆ ಅಂತಾ ಹೇಳಿದಾಗ ನಾನು ಅವರಿಗೆ ನನ್ನ ಹತ್ತಿರ ಯಾವುದೇ ಮೆಮರಿ ಕಾರ್ಡ ಇರುವುದಿಲ್ಲ ಅಂತಾ ಹೇಳಿದ್ದು ಆಗ ಅವರೆಲ್ಲರೂ ನನ್ನೊಂದಿಗೆ ತಕ್ಕೆಕುಸ್ತಿಗೆ ಬಿದ್ದು ಜಗಳ ತೆಗೆದು ಬಸವರಾಜ ಮತ್ತು ಶೇಖಪ್ಪ ಇವರುಗಳು ಬಡಿಗೆಯಿಂದ ನನ್ನ ಮೈ-ಕೈಗೆ ಹೊಡೆದು ಬಲಕೈಯ ಮೊಣಕೈ ಕೆಳಗೆ ಮತ್ತು ಎಡ ಕೈಯ ಕಿಲಿಗೆ ಹೊಡೆದು ಭಾರಿ ಒಳಪೆಟ್ಟು ಪಡೆಸಿದ್ದು, ಡುಬ್ಬಕ್ಕೆ ಹೊಡೆದು ಒಳಪೆಟ್ಟು ಪಡೆಸಿದ್ದು ನನ್ನ ಹತ್ತಿರ ಇದ್ದ ಎರಡು ಮೊಬೈಲ್ಗಳನ್ನು ಕಸಿದುಕೊಂಡಿರುತ್ತಾರೆ. ನಾನು ಚಿರಾಡಿಕೊಂಡಾಗ ಜಗಳದ ಗದ್ದಲ ಕೇಳಿ ಅಲ್ಲಿಯೇ ತಮ್ಮ ಹೊಲದಲ್ಲಿನ ಮನೆಯಿಂದ ಬಂದ ಮೋತೆಪ್ಪ ತಂದೆ ರಾಮಚಂದ್ರ ರಾಠೋಡ, ತಿರುಪತಿ ತಂದೆ ಮೋತೆಪ್ಪ ರಾಠೋಡ ಸಾ|| ಇಬ್ಬರೂ ಬಸರಗಿಡದ ತಾಂಡಾ ಇವರು ಬಿಡಿಸಿದರು ಅವರು ಬಿಡದೆ ನನಗೆ ಬಸರಗಿಡ ಲಕ್ಷ್ಮಣಕೇರಿ ತಾಂಡದಲ್ಲಿನ ತಮ್ಮ ಮನೆಗೆ 7:15 ಪಿಎಮ್ ಸುಮಾರಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಇದ್ದ ತಾರಾಬಾಯಿ ಗಂಡ ಬಾಲಚಂದ್ರ ಜಾದವ, ರವಿ @ ರಿಂಡಾ ತಂದೆ ಚಂದಪ್ಪ ಜಾದವ ಸಾ|| ಸಣ್ಣಚಾಪಿ ತಾಂಡಾ, ರಾಮಿಬಾಯಿ ಗಂಡ ಹಣಮಂತ ರಾಠೋಡ ಸಾ|| ಬಸರಗಿಡ ಲಕ್ಷ್ಮಣಕೇರಿ ತಾಂಡಾ ಇವರುಗಳಲ್ಲಿ ರಾಮಿಬಾಯಿ ರಾಠೋಡ ಇವಳು ನನಗೆ ಬಾರಲೇ ಸೂಳಿ ಮಗನೆ ಇಲ್ಲಿಯೇ ಖಲಾಸ್ ಮಾಡಿ ಬಿಡುತ್ತೇವೆ ನಿನ್ನ ಸಲುವಾಗಿ ನಮ್ಮ ಎರಡು ಎಕರೆ ಜಮೀನು ಹೋಗಲಿ ಅಂತಾ ಹೇಳಿ ನನಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ತೆರಚಿದ ಗಾಯಪಡೆಸಿದ್ದು, ತಾರಾಬಾಯಿ, ರವಿ @ ರಿಂಡಾ ಜಾದವ ಇವರು ಕೈಯಿಂದ ಮೈ-ಕೈಗೆ ಹೊಡೆಬಡೆ ಮಾಡಿದ್ದು ಇರುತ್ತದೆ. ನಂತರ ನಮ್ಮ ತಾಂಡಾದವರು ಬಂದು ನನಗೆ ಬಿಡಿಸಿಕೊಂಡು ಬಂದಿರುತ್ತಾರೆ ಅಂತಾ ತಿಳಿಸಿದನು. ಕಾರಣ ನನ್ನ ಮಗನಿಗೆ ಕಟ್ಟಿಗೆ, ಕೈಯಿಂದ ಹೊಡೆದು ಬಲಕೈಯ ಮೊಣಕೈ ಕೆಳಗೆ ಮತ್ತು ಎಡ ಕೈಯ ಕಿಲು ಮುರಿದು, ಡುಬ್ಬಕ್ಕೆ ಅಲ್ಲಲ್ಲಿ ಒಳಪೆಟ್ಟು ಪಡೆಸಿದ್ದು, ತಲೆಗೆ ರಕ್ತಗಾಯ ಪಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಕೀತ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 26/2021 ಕಲಂ: 143, 147, 148, 323, 324, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ :- 59/2021 ಕಲಂ: 143, 147, 148, 447, 323, 324, 354, 504, 506, 149 ಐಪಿಸಿ : ಇಂದು ದಿ: 29/04/2021 ರಂದು 8.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರಿ ಅಬ್ದುಲ ಗನಿ ತಂದೆ ಖಾಸಿಂಸಾಬ ನಾಯ್ಕೋಡಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಏವೂರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಏನೆಂದರೆ, ನಮ್ಮೂರ ಸೀಮಾಂತರದಲ್ಲಿ ನನ್ನ ಹೆಸರಿನಲ್ಲಿ ಹೊಲ ಸವರ್ೇ ನಂ 299 ಇದ್ದು ನಮ್ಮ ಹೊಲದ ಪಕ್ಕದಲ್ಲಿ ಮಹಿಬೂಬಸಾಬ ಗಾಣದವರ ಇವರು ಲೀಜಿಗೆ ಮಾಡಿದ ಹೊಲವಿರುತ್ತದೆ. ಸದರಿ ಮಹಿಬೂಬಸಾಬ ತಂದೆ ಬುಡ್ಡೆಸಾಬ ಗಾಣದವರ ಈತನು ನನ್ನ ಹೆಂಡತಿಯೊಂದಿಗೆ ಅಸಭ್ಯವಾಗಿ ವತರ್ಿಸುತ್ತಿದ್ದು ಆಗಾಗ ಸದರಿಯವನಿಗೆ ಬುದ್ದಿವಾದ ಹೇಳಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 28/04/2021 ರಂದು ಬೆಳಿಗ್ಗೆ 8.15 ಗಂಟೆಗೆ ನಾನು ಹಾಗೂ ನನ್ನ ಹೆಂಡತಿ ರಾಜಭಿ ಹಾಗೂ ನಮ್ಮ ಅಣ್ಣನ ಹೆಂಡತಿಯಾದ ಚಾಂದಬೀ, ಅತ್ತೆಯಾದ ಅಬುಮಾ ಎಲ್ಲರು ಕೂಡಿಕೊಂಡು ನಮ್ಮ ಹೊಲದಲ್ಲಿನ ಶೇಂಗಾ ಕಿತ್ತುತ್ತಿದ್ದಾಗ ನಮ್ಮ ಪಕ್ಕದ ಹೊಲದ ಮಹಿಬೂಬಸಾಬ ಈತನು ನನ್ನ ಹೆಂಡತಿಯೊಂದಿಗೆ ಅಸಭ್ಯವಾಗಿ ವತರ್ಿಸುತ್ತಿದ್ದು ಆಗ ಏಕೆ ಹೀಗೆ ಮಾಡುತ್ತಿ ಅಂತ ಅಂದಾಗ ಸದರಿಯವನು ಅಷ್ಟಕ್ಕೆ ಸುಮ್ಮನೆ ಹೋಗಿ ಸದರಿ 1) ಮಹಿಬೂಬ ತಂದೆ ಬುಡ್ಡೆಸಾಬ ಗಾಣದವರ ಈತನು ತಮ್ಮ ಸಂಬಂದಿಕರಾದ 2) ಲಾಲಸಾಬ ತಂದೆ ಬುಡ್ಡೆಸಾಬ ಗಾಣದವರ, 3) ಅಬ್ದುಲಗನಿ ತಂದೆ ಬಂದಗಿಸಾಬ ಸಂತಿ, 4) ರಾಜು ತಂದೆ ಹಾಜಿ ಕರೀಮ ಗಾಣದವರ, 5) ಬುಡ್ಡೆಸಾಬ ತಂದೆ ರಸೂಲಸಾಬ ಗಾಣದವರ, 6) ಹಾಜಿಸಾಬ ತಂದೆ ರಸೂಲಸಾಬ ಗಾಣದವರ 7) ಮುಮ್ತಾಜ ಗಂಡ ಬುಡ್ಡೆಸಾಬ ಗಾಣದವರ 8) ಚಾಂದಬೀ ಗಂಡ ಲಾಲಸಾಬ ಗಾಣದವರ 9) ಸೈಫಾನಭಿ ಗಂಡ ಮಹಿಬೂಬಸಾಬ ಗಾಣದವರ 10) ಕಾತನಬೀ ಗಂಡ ಬಂದಗೀಸಾಬ ಸಂತಿ ಸಾ|| ಎಲ್ಲರೂ ಏವೂರ ಈ ಎಲ್ಲಾ ಜನರನ್ನು ಕರೆದುಕೊಂಡು ನಮ್ಮ ಹೊಲದಲ್ಲಿ ಅಕ್ರಮಪ್ರವೇಶ ಮಾಡಿ ಏನಲೆ ಸೂಳೆ ಮಗನೆ ಇಲ್ಲಸಲ್ಲದ್ದು ನಮ್ಮ ಮೈಮೇಲೆ ಹಾಕುತ್ತಿಯಾ ನಿನ್ನ ಸೊಕ್ಕು ಬಾಳ ಆಗಿದೆ ಅಂತ ಎಲ್ಲರು ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನಮ್ಮ ಅಣ್ಣನ ಹೆಂಡತಿಯಾದ ಚಾಂದಭೀ ಗಂಡ ಪೀರಸಾಬ ನಾಯ್ಕೋಡಿ ಹಾಗೂ ಅತ್ತೆಯಾದ ಅಬುಮಾ ಸಾ|| ಕೋರಳ್ಳಿ ಇವರು ಬಿಡಿಸಿಕೊಳ್ಳಲು ಬಂದಾಗ ಸದರಿ ಎರಡೂ ಜನರಿಗೆ ಈ ಸೂಳೆಯರ ಸೊಕ್ಕು ಬಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡುತ್ತಾ ಅತ್ತೆಯಾದ ಅಬುಮಾ ಇವಳಿಗೆ ಲಾಲಸಾಬ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ತಲೆಗೆ ಹಾಗೂ ಟೊಂಕಕ್ಕೆ ಹೊಡೆದು ಗುಪ್ತಗಾಯ ಪಡಿಸಿದನು. ನಮ್ಮ ಅಣ್ಣನ ಹೆಂಡತಿಯಾದ ಚಾಂದಭೀ ಇವಳಿಗೆ ಮಹಿಬೂಬ ಗಾಣದವರ ಈತನು ಈ ಸೂಳೆಯದು ಬಾಳ ಆಗಿದೆ ಅಂತ ಬೈದು ಮಾನಭಂಗ ಮಾಡುವ ಉದ್ದೇಶದಿಂದ ಕೂದಲು ಹಾಗೂ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ನಂತರ ನಾವೆಲ್ಲರು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಹುಸೇನಸಾ ತಂದೆ ಮಕ್ತುಮಸಾಬ ಮಕಾಶಿ, ರಮೇಶ ತಂದೆ ನಿಂಗಪ್ಪ ನಾಟೀಕಾರ ಇವರು ಬಂದು ಬಿಡಿಸಿಕೊಂಡರು ನಂತರ ಎಲ್ಲರು ಹೊಡೆಯುವದನ್ನು ಬಿಟ್ಟು ಸೂಳೆಮಕ್ಕಳೆ ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು ಕಾರಣ ಮೇಲ್ಕಾಣಿಸಿದ 10 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 59/2021 ಕಲಂ: 143, 147, 148, 447, 323, 324, 354, 504, 506, 149 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಗುರಮಿಠಕಲ್ ಪೊಲೀಸ್ ಠಾಣೆ:-. 63/2021 ಕಲಂ 279, 304(ಎ) ಐಪಿಸಿ : ಇಂದು ದಿನಾಂಕ 29.04.2021 ರಂದು ಬೆಳಿಗ್ಗೆ ಲಾರಿ ನಂ ಎಮ್.ಹೆಚ್-25-ಬಿ-7871 ನೇದ್ದರಲ್ಲಿ ಸೇಡಂನಿಂದ ಸಿಮೇಂಟ್ ತುಂಬಿಕೊಂಡು ಆರೋಪಿ ಮಹಾಂತೇಶ ಮತ್ತು ಮೃತ ನಾಗರಾಜ ಇಬ್ಬರು ಕೂಡಿಕೊಂಡು ಆ ಸಿಮೇಂಟನ್ನು ನಾರಾಯಣಪೇಠ್ಗೆ ತೆಗೆದುಕೊಂಡು ಹೋಗುತ್ತಿದ್ದಾಗ ಸದರಿ ಲಾರಿಯನ್ನು ಆರೋಪಿತನಾದ ಮಹಾಂತೇಶ ಈತನು ಚಲಾಯಿಸುತ್ತಿದ್ದನು. ಬೆಳಿಗ್ಗೆ 10:30 ಗಂಟೆಯಿಂದ 11:00 ಗಂಟೆಯ ನಡುವಿನ ಅವಧಿಯಲ್ಲಿ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪುಟಪಾಕ ಗ್ರಾಮ ದಾಟಿದ ನಂಬರ ಇಳೀಜಾರಿನ ರಸ್ತೆಯ ತಿರುವಿನಲ್ಲಿ ನಿಯಂತ್ರಿಸಲು ಸಾಧ್ಯವಾಗದೇ ಒಮ್ಮೇಲೆ ಬಲಕ್ಕೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಗಾಯಾಳು ನಾಗರಾಜನಿಗೆ ತಲೆಗೆ, ಎರಡೂ ಕೈಗಳಿಗೆ, ಮುಖಕ್ಕೆ ಭಾರಿ ರಕ್ತಗಾಯಗಳು ಮತ್ತು ಅಲ್ಲಲ್ಲಿ ರಕ್ತಗಾಯಗಳು ಮತ್ತು ಗುಪ್ತಗಾಯಗಳಾಗಿದ್ದರಿಂದ ಆರೋಪಿ ಮಹಾಂತೇಶ ಈತನು ಗಾಯಾಳು ನಾಗರಾಜನಿಗೆ ಚಿಕಿತ್ಸೆ ಕುರಿತು ಗುರುಮಠಕಲ್ ಆಸ್ಪತ್ರೆಗೆ ನಂತರ ಅಲ್ಲಿಂದ ಸೇಡಂ ಸರಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಅಲ್ಲಿಂದ ಫಿರ್ಯಾದಿ ಮತ್ತು ಆತನ ಮಗನಾದ ವಿರೇಶ ಎಂಬುವವರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಸಮಯ ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ಮಾಡಬೂಳ-ಕಲಬುರಗಿ ಪಟ್ಟಣಗಳ ನಡುವೆ ಮೃತಪಟ್ಟಿದ್ದು ಆ ಬಗ್ಗೆ ಫಿರ್ಯಾದಿಯು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 63/2021 ಕಲಂ 279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 30-04-2021 01:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080