ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/03/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 45/2021 ಕಲಂ 20 (ಬಿ) ಎನ್.ಡಿ.ಪಿ.ಎಸ್ ಎಕ್ಟ-1985 : ಇಂದು ದಿನಾಂಕ 30-03-2021 ರಂದು 12-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಶಿವಲಿಂಗಪ್ಪಾ ಎ.ಎಸ್.ಐ ಯಾದಗಿರಿ ಗ್ರಾಮೀಣ ಠಾಣೆರವರು ಮುದ್ನಾಳ ಗ್ರಾಮಕ್ಕೆ ಹಳ್ಳಿ ಬೇಟಿ ಕುರಿತು ಹೋದಾಗ ಆಲ್ಲಿ ಅದೇ ಗ್ರಾಮದ ಆರೋಪಿತನಾದ ಮಾನಶಪ್ಪಾ ತಂದೆ ಯಲ್ಲಪ್ಪಾ ವಡ್ಡರ ವಯಾ: 60 ಉ: ತರಕಾರಿ ಮಾರುವುದು ಜಾ:ವಡ್ಡರ ಸಾ: ನಾಗರಬಂಡಿ ಹಾ:ವ: ಮುದ್ನಾಳ ತಾ:ಜಿ: ಯಾದಗಿರಿ ಇತನು ತನ್ನ ಮನೆಯ ಹಿಂದಿನ ಬಾಜು ಖುಲ್ಲಾ ಜ್ಯಾಗೆಯಲ್ಲಿ ವಿವಿಧ ನಮೂನೆಯ ತರಕಾರಿಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ ಅಂತಾ ಮಾಹಿತಿ ಸಂಗ್ರಹಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದರಿಂದ ಗುನ್ನೆ ದಾಖಲಿಸಿಕೊಂಡು ನಂತರ ಸಿಬ್ಬಂಧಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಾನ್ಯ ಡಿ.ಎಸ್.ಪಿ ಸಾಹೆಬರು ಯಾದಗಿರಿ ರವರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ಆರೋಪಿತನಿಂದ 1) ಮೂರು ಹಸಿ ಗಾಂಜ ಗಿಡಗಳು ಇದರ ತೂಕ 1 ಕೆಜಿ 300 ಗ್ರಾಂ ಇದ್ದು, ಇದರ ಅಂದಾಜು ಕಿಮ್ಮತ್ತು 5000/- ರೂ 2) ಸುಮಾರು 300 ಒಣ ಗಾಂಜಾ ಇದರ ಕಿಮ್ಮತ್ತು 2000/- ರೂ ಹೀಗೆ ಒಟ್ಟು 7000/ರೂಪಾಯಿ ಕಿಮ್ಮತ್ತಿನ ಹಸಿ ಮತ್ತು ಒಣ ಗಾಂಜಾ ಹಾಗೂ ಗಾಂಜಾ ಮಾರಾಟ ಮಾಡಿದ 830/-ರೂಪಾಯಿಗಳನ್ನು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 46/2021 ಕಲಂ 78(3) ಕೆ.ಪಿ. ಆ್ಯಕ್ಟ : ದಿನಾಂಕ 30/03/2021 ರಂದು ಸಾಯಂಕಾಲ 5-00 ಪಿ.ಎಮ್ ಕ್ಕೆ ಆರೋಪಿತನು ಬಾಚವಾರ ಗ್ರಾಮದಲ್ಲಿ ಇರುವ ಅಟೋ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 3000/ರೂ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ,

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 15/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 30/03/2021 ರಂದು 11-15 ಎ.ಎಂ.ಕ್ಕೆ ಶ್ರೀ ಅಬ್ದುಲ್ ನಹೀಮ ತಂದೆ ಅಬ್ದುಲ್ ರಹೀಮ ಸಗರಿ ವಯ;58 ವರ್ಷ, ಉ;ವ್ಯಾಪಾರ, ಜಾ;ಮುಸ್ಲಿಂ, ಸಾ;ದುಕಾನವಾಡಿ ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಪಿಯರ್ಾದಿ ಹೇಳಿಕೆಯನ್ನು ನೀಡಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನ ಮಗನಾದ ನದೀಮ ಹೈಮದ್ ವಯ;33 ವರ್ಷ, ಈತನು ಯಾದಗಿರಿ ನಗರದ ಕನಕವೃತ್ತದ ಮಜೀದನಲ್ಲಿ ಮೌಲಾನ ಅಂತಾ ಕೆಲಸ ಮಾಡಿಕೊಂಡು ಬರುತ್ತಾನೆ. ಇಂದು ದಿನಾಂಕ 29/03/2021 ರಂದು ಮದ್ಯಾಹ್ನದ ನಮಾಜ್ ಹಜ್ ಕೊಡುವ ಸಂಬಂಧ ನನ್ನ ಮಗನು ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಮಜೀದಗೆ ಹೋಗಿದ್ದು ಇರುತ್ತದೆ. ಹೀಗಿದ್ದು ಮದ್ಯಾಹ್ನ 2-30 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿಯಾದ ಶ್ರೀ ಚಾಂದಪಾಶಾ ತಂದೆ ಮಹೀಮೂದ ಹುಸೇನ್ ಶಾಪುರಿ ಸಾ;ದುಕಾನವಾಡಿ ಈತನು ಪೋನ್ ಮಾಡಿ ನನಗೆ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನಿಮ್ಮ ಮಗ ನದೀಮ ಹೈಮದ್ ಇಬ್ಬರು ಮಜೀದನಲ್ಲಿ ನಮಾಜ್ ಮುಗಿಸಿಕೊಂಡು ಕನಕವೃತ್ತದ ಕನಕ ಪ್ರತಿಮೆ ಮುಂದಿನ ಮುಖ್ಯ ರಸ್ತೆಯ ಬದಿಯಲ್ಲಿ ಇಬ್ಬರು ನಡೆದುಕೊಂಡು ಹೊರಟಿದ್ದಾಗ ಗಾಂಧಿಚೌಕ್ ಕಡೆಯಿಂದ ನಮ್ಮ ಎದುರಿಗೆ ಬರುತ್ತಿದ್ದ ಒಂದು ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮಲ್ಲಿ ನಿಮ್ಮ ಮಗನಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದನು ಆಗ ಸದರಿ ಅಪಘಾತದಲ್ಲಿ ನಿಮ್ಮ ಮಗನಿಗೆ ನೋಡಲು ಎಡಹುಬ್ಬಿಗೆ ರಕ್ತಗಾಯವಾಗಿದ್ದು ಮತ್ತು ಸೊಂಟಕ್ಕೆ ಭಾರೀ ಒಳಪೆಟ್ಟಾಗಿರುತ್ತದೆ. ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ಬಿಟ್ಟು ಓಡಿ ಹೋಗಿರುತ್ತಾನೆ. ಆತನನ್ನು ನಾವು ಮತ್ತೆ ನೋಡಿದರೆ ಗುತರ್ಿಸುತ್ತೇವೆ. ಮೋಟಾರು ಸೈಕಲ್ ನಂಬರ ಕೆಎ-33, ಕ್ಯು-7248 ನೇದ್ದು ಇರುತ್ತದೆ. ಸದರಿ ಅಪಘಾತವನ್ನು ಕಂಡು ಮಜೀದ್ ಕಾಂಪ್ಲೆಕ್ಸ್ ನಲ್ಲಿ ಇರುವ ಪಂಚರ್ ಅಂಗಡಿಯವರಾದ ಮಹಮದ್ ಹುಸೇನ್ ತಂದೆ ಮಹಮದ್ ಉಸ್ಮಾನ್ ಮಿಠಾಯಿವಾಲೆ ಈತನು ಓಡೋಡಿ ಬಂದಿರುತ್ತಾನೆ. ಈ ಘಟನೆಯು ಇಂದು ದಿನಾಂಕ 29/03/2021 ರಂದು ಮದ್ಯಾಹ್ನ 2-15 ಪಿ.ಎಂ.ಕ್ಕೆ ಜರುಗಿದ್ದು ಇರುತ್ತದೆ. ನಾವಿಬ್ಬರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ಚಾಮಾ ಲೇಔಟ್ ನಲ್ಲಿ ಇರುವ ಲೈಫ್ ಲೈನ್ ಆಸ್ಪತ್ರೆಗೆ ಕರೆದುಕೊಮಡು ಹೋಗುತ್ತಿದ್ದು ನೀವು ಕೂಡಲೇ ಆಸ್ಪತ್ರೆಗೆ ಬರಬೇಕು ಅಂದಾಗ ನನಗೆ ಗಾಬರಿಯಾಗಿ ಲೈಫ್ ಲೈನ್ ಆಸ್ಪತ್ರೆಗೆ ಬಂದು ನೋಡಲು ನನ್ನ ಮಗ ಚಿಕಿತ್ಸೆ ಪಡೆಯುತ್ತಿದ್ದು ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದರ ಬಗ್ಗೆ ತಿಳಿಸಿದನು. ನಾನು ನನ್ನ ಮಗನಿಗೆ ಹೆಚ್ಚಿನ ಉಪಚಾರಕ್ಕಾಗಿ ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇನೆ. ಹೀಗಿದ್ದು ಇಂದು ದಿನಾಂಕ 29/03/2021 ರಂದು 2-15 ಪಿ.ಎಂ.ದ ಸುಮಾರಿಗೆ ಕನಕ ವೃತ್ತದ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನನ್ನ ಮಗ ನದೀಮ ಹೈಮದ್ ಈತನಿಗೆ ಮೋಟಾರು ಸೈಕಲ್ ನಂಬರ ಕೆಎ-33, ಕ್ಯು-7248 ನೇದ್ದರ ಸವಾರನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನೇರವಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿಕೊಂಡು ಇಂದು ದಿನಾಂಕ 30/03/2021 ರಂದು ತಡವಾಗಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 15/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ :- 70/2021. ಕಲಂ. 279.338.ಐ.ಪಿ.ಸಿ. 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 30/03/2021 ರಂದು 19-30 ಗಂಟೆಗೆ ಪಿಯರ್ಾದಿ ಶ್ರೀ ಕೃಷ್ಣ ತಂದೆ ಹೊನ್ನಪ್ಪ ಕಟ್ಟಿಮನಿ ವ|| 23 ಜಾ|| ಮಾದಿಗ ಉ|| ಕೂಲಿ ಸಾ|| ಹಳಿಸಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕೈಯಲ್ಲಿ ಬರೆದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 27/03/2021 ರಂದು ಬೆಳಿಗಿ ನಜಾವ 4-30 ಗಂಟೆಗೆ ನಾನು ಮತ್ತು ನಮ್ಮ ತಂದೆಯಾದ ಹೊನ್ನಪ್ಪ ತಂದೆ ಮಲ್ಲಪ್ಪ ಕಟ್ಟಿಮನಿ ಇಬ್ಬರು ಎಂದಿನಂತೆ ಎದ್ದು ನನ್ನ ತಂದೆ ಬೈಹಿದರ್ೆಸೆಗೆ ಹೋಗಲು ಶಹಾಪೂರದ ಎ.ಪಿ.ಎಂ.ಸಿ.ಯ ಖುಲ್ಲಾಜಾಗದ ಕಡೆಗೆ ಹೋದನು. ನಂತರ ನಾನು ಬೈಹಿದರ್ೆಸೆಗೆ ಎ.ಪಿ.ಎಂ.ಸಿ, ಕಡೆಗೆ ಹೊರಟು ಶಹಾಪೂರ-ಯಾದಗಿರಿ ಮುಖ್ಯ ರಸ್ತೆ ಮೇಲೆ ಸಂಗಮೇಶ್ವರ ಪೆಟ್ರೋಲ್ ಪಂಪ ಹತ್ತಿರದ ಹಣಮಂತ ನಗರ ಕ್ರಾಸ್ದಲ್ಲಿ 4-50 ಗಂಟೆಗೆ ಹೋದಾಗ ನನ್ನ ತಂದೆ ಬೈಹಿದರ್ೆಸೆ ಮುಗಿಸಿಕೊಂಡು ರಸ್ತೆ ದಾಟಿ ಬರುತ್ತಿರುವಾಗ ಯಾದಗಿರಿ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಹಿಂದೆ ಒಬ್ಬ ವ್ಯಕ್ತಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ಹೊನ್ನಪ್ಪನಿಗೆ ಡಿಕ್ಕಿಪಡಿಸಿ ಅಪಘಾತಮಾಡಿದನು. ಆಗ ನಮ್ಮ ತಂದೆ ಹೊನ್ನಪ್ಪನು ರಸ್ತೆಯ ಮೇಲೆ ಬಿದ್ದನು. ಮೋಟರ್ ಸೈಕಲ್ ಚಾಲಕ ಮತ್ತು ಹಿಂದೆ ಕುಳಿತವನು ಮೋಟರ್ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದರು. ಸದರಿ ಅಪಘಾತ ನೋಡಿ ನಾನು ಮತ್ತು ಅಲ್ಲೆ ಹೋರಟಿದ್ದ ನಮ್ಮೂರ ಮರೆಪ್ಪ ತಂದೆ ಹೈಯಾಳಪ್ಪ ಬಸವಂತಪೂರ ಇಬ್ಬರು ಹೋಗಿ ನನ್ನ ತಂದೆ ಹೊನ್ನಪ್ಪನಿಗೆ ನೋಡಲಾಗಿ, ಬಲಗಾಲು ಮೊಳಕಾಲು ಕೆಳಗೆ ಭಾರಿ ಗುಪ್ತಗಾಯ, ಎರಡು ಪಕ್ಕೆಗೆ ಗುಪ್ತಗಾಯ, ಎಡಗೈ ಮೋಳಕೈಗೆ ತರಚಿದ ಗಾಯ, ಹಣೆಗೆ ತರಚಿದ ಗಾಯ ವಾಗಿರುತ್ತದೆ. ನನ್ನ ತಂದೆ ಹೊನ್ನಪ್ಪನಿಗೆ ಅಪಘಾತಮಾಡಿದ ಮೋಟರ್ ಸೈಕಲ್ ಮೇಲೆ ಹಿಂದೆ ಕುಳಿತವನಿಗೆ ನೋಡಿ ವಿಚಾರಿಸಲಾಗಿ ತನ್ನ ಹೆಸರು ಗಣೇಶ ತಂದೆ ಆನಂದ ಚವ್ಹಾಣ ಸಾ|| ಗುಂಡಳ್ಳಿ ತಾಂಡಾ, ಅಂತ ತಿಳಿಸಿದನು ಸದರಿಯವನಿಗೆ ಬಲಗಡೆ ಕಣ್ಣಿನ ಹತ್ತಿರ ಮತ್ತು ತಲೆಗೆ ಗುಪ್ತಗಾಯ, ಬಲಗಡೆ ಹಣೆಗೆ ಭಾರಿ ರಕ್ತಗಾಯ, ಕುತ್ತಿಗೆಗೆ ಗುಪ್ತಗಾಯ, ಎರಡು ಕೈಗಳ ಹಸ್ತದ ಮಣಿಕಟ್ಟಿಗೆ, ಬಲಗಡೆ ಬುಜಕ್ಕೆ, ಬಲಗಾಲು ಹಿಮ್ಮಡಿಗೆ ತರಚಿದ ಗಾಯವಾಗಿರುತ್ತದೆ. ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ಸವಾರನಿಗೆ ನೋಡಿ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಾಣಾಪ್ರತಾಪಸಿಂಗ್ ತಂದೆ ಶಿವಶಂಕರ ಚವ್ಹಾಣ ಸಾ|| ಗುಂಡಳ್ಳಿ ತಾಂಡಾ ಅಂತ ತಿಳಿಸಿದನು. ಸದರಿಯವನಿಗೆ ಸಣ್ಣಪುಟ್ಟ ಗುಪ್ತಗಾಯವಾಗಿದ್ದು ಇರುತ್ತದೆ. ಸ್ವಲ್ಪ ಹೊತ್ತು ನಿಂತಹಾಗೆ ಮಾಡಿ ಮೋಟರ್ ಸೈಕಲ್ ಬಿಟ್ಟು ಹೋದನು. ಸದರಿ ಅಪಘಾತಮಾಡಿದ ಮೋಟರ್ ಸೈಕಲ್ ನೋಡಲಾಗಿ ಅದರ ನಂ ಕೆಎ-33 ವಿ-6429 ಅಂತಾ ಇದ್ದು, ಮೋಟರ್ ಸೈಕಲ್ ಮುಂದೆ ಜಖಂಗೊಂಡಿರುತ್ತದೆ. ಅಪಘಾತವು ಬೆಳಗಿನ ಜಾವ 4-50 ಗಂಟೆಯ ಸುಮಾರಿಗೆ ಜರುಗಿರುತ್ತದೆ. ಆಗ ನಾನು 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದರಿಂದ ಅಂಬುಲೇನ್ಸ ಬಂದ ನಂತರ ನಾನು ಮತ್ತು ಮರೇಪ್ಪ ಇಬ್ಬರು ಕೂಡಿ ನನ್ನ ತಂದೆ ಹೊನ್ನಪ್ಪನಿಗೆ ಮತ್ತು ಗಣೇಶನಿಗೆ ಉಪಚಾರ ಕುರಿತು ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿದೆವು. ಗಣೇಶನು ತನ್ನ ತಂದೆಗೆ ಫೋನ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ ಗಣೇಶನ ತಂದೆಯಾದ ಆನಂದ ತಂದೆ ರಾಮು ಚವ್ಹಾಣ ಈತನು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ನನ್ನ ತಂದೆಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ನನ್ನ ತಂದೆಯಾದ ಹೊನ್ನಪ್ಪನಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಕಲಬುರಗಿಯ ಯುನ್ಯಟೇಡ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನನ್ನ ತಂದೆಗೆ ಉಪಚಾರ ಮಾಡಿಸುವದು ಅವಶ್ಯವಾಗಿದ್ದರಿಂದ ಉಪಚಾರ ಮಾಡಿಸಿ ನಮ್ಮ ಹಿರಿಯರಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಅಂತ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 70/2021 ಕಲಂ: 279, 338, ಐಪಿಸಿ ಮತ್ತು 187 ಐ.ಎಂ.ವಿ. ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀಗುಡಿ ಪೊಲೀಸ್ ಠಾಣೆ:- 27/2021 ಕಲಂ 279, 338 ಐಪಿಸಿ : ದಿನಾಂಕ: 29/03/2021 ರಂದು 10.30 ಎ.ಎಮ್. ಸುಮಾರಿಗೆ ಫಿಯರ್ಾದಿಯ ಚಿಕ್ಕಪ್ಪನಾದ ಬಾಬಾಸಾಹೇಬ ಈತನು ತನ್ನ ವೈಯಕ್ತಿಕ ಕೆಲಸದ ನಿಮಿತ್ಯ ಆರೋಪಿತನ ಮೋಟರ್ ಸೈಕಲ್ ನಂ:ಕೆಎ-33, ಇಎ-1486 ನೇದ್ದರ ಮೇಲೆ ಆರೋಪಿತನ ಹಿಂದೆ ಕುಳಿತು ಹೊಸೂರ ಕಡೆಗೆ ಡೋಣಗೇರ ಗಡ್ಡಿ ಹತ್ತಿರ ಹೊರಟಾಗ ಆರೋಪಿತನು ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಮೋಟರ್ ಸೈಕಲ್ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಬಾಬಾಸಾಹೇಬ ಈತನ ಬಲಗಾಲಿಗೆ ಭಾರಿ ರಕ್ತಗಾಯವಾದ ಬಗ್ಗೆ ದೂರು.

ಭೀಗುಡಿ ಪೊಲೀಸ್ ಠಾಣೆ:- 28/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 30/03/2021 ರಂದು 04.00 ಪಿ.ಎಮ್.ಕ್ಕೆ ಭೀ.ಗುಡಿಯ ಶಿವದೇವಾಲಯ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಹೆಣ್ಣು ಮಗಳು ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 6.15 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಡಿ.ಎಸ್.ಪಿ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.45 ಪಿ.ಎಮ್.ಕ್ಕೆ ದಾಳಿ ಮಾಡಿ ಆರೋಪಿತರಿಂದ 1) ನಗದು ಹಣ ರೂಪಾಯಿ 5917=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತರ ವಿರುದ್ದ ಕ್ರಮ ಜರುಗಿಸಿದ ಬಗ್ಗೆ.

ಗೋಗಿ ಪೊಲೀಸ್ ಠಾಣೆ:- 29/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 30/03/2021 ರಂದು 06.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿಎಸ್ಐ ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 30/03/2021 ರಂದು ಮಹಲ್ ರೊಜಾ ಯಲ್ಲಮ್ಮದೇವಿ ಗುಡ್ಡದ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಪರಶುರಾಮ ತಂದೆ ಈಶ್ವರಪ್ಪ ಹೊಸಮನಿ ವಯಾ:25 ಜಾ: ಪರಿಶಿಷ್ಟ ಜಾತಿ ಉ: ಒಕ್ಕಲುತನ ಸಾ: ಗಂಗನಾಳ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 04.20 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1650/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 29/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸ್ಶೆದಾಪೂರ ಪೊಲೀಸ್ ಠಾಣೆ:-51/2021 ಕಲಂ. 279, 427 ಐಪಿಸಿ:30-03-2021 ರಂದು ರಾತ್ರಿ 08-30 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಂದರೆ ದಿನಾಂಕ:30-03-2021 ರಂದು ನಾನು ಸೈದಾಪೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ರಾಚನಳ್ಳಿ ಕ್ರಾಸ ಹತ್ತಿರ ಅಂಗಡಿ ಇಟ್ಟುಕೊಂಡು ಇರುವ ಗೋಪಾಲ ಶಟ್ಟಿಹಳ್ಳಿ ಈತನು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ಲಾರಿ ಚಾಲಕನು ತನ್ನ ಲಾರಿಯನ್ನು ಅಲಕ್ಷತನದಿಂದ ನಡೆಸಿ ಕೆ.ಇ.ಬಿ ಕಂಬಕ್ಕೆ ಡಿಕ್ಕಿ ಪಡಿಸಿದ್ದರಿಂದ ಕಂಬ ಮುರಿದಿರುತ್ತದೆ ಅಂತಾ ತಿಳಿಸಿದ್ದರಿಂದ ಆಗ ನಾನು ಬನ್ನಪ್ಪ ಬದ್ದೆಪಲ್ಲಿ ಇಬ್ಬರೂ ಕೂಡಿ ಹೋಗಿ ನೋಡಲಾಗಿ ವಿನೋದ ದಾಬದ ಮುಂದೆ ಇರುವ ಕೆ.ಇ.ಬಿ ಕಂಬ ಮುರಿದಿದ್ದು ಆಗ ನಾನು ಗೋಪಾಲ ಈತನಿಗೆ ವಿಚಾರಿಸಲಾಗಿ ಲಾರಿ ಚಾಲಕನು ಇಂದು ಬೆಳಿಗ್ಗೆ 08-30 ಗಂಟೆಗೆ ತನ್ನ ಲಾರಿಯನ್ನು ಅಲಕ್ಷತನದಿಂದ ನಡೆಸಿಕೊಂಡು ಕೆ.ಇ.ಬಿ ಕಂಬಕ್ಕೆ ಗುದ್ದಿದ್ದು ಲಾರಿ ಗುದ್ದಿದ್ದರಿಂದ ಕಂಬ ಮುರಿದಿರುತ್ತದೆ ಅಂತಾ ತಿಳಿಸಿದ್ದು ಆಗ ನಾನು ಅಲ್ಲಿ ಇದ್ದ ಲಾರಿ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಆತನ ಹೆಸರು ಜ್ಞಾನೇಶ್ವರ ತಂದೆ ಪ್ರಕಾಶ ಕುಂಬಾರ ವ|| 26 ವರ್ಷ ಜಾ|| ಕುಂಬಾರ ಉ|| ಲಾರಿ ಚಾಲಕ ಸಾ|| ಕೊಂಡಜಿಗಡ ಸಲೆಗನ ಜಿ|| ಒಸಮಬಾದ ಮಾಹಾರಾಷ್ಟ್ರ ಅಂತಾ ತಿಳಿಸಿದ್ದು ಅಪಘಾತ ಪಡಿಸಿದ ಲಾರಿಯನ್ನು ಪರಿಶೀಲಿಸಿ ನೋಡಲಾಗಿ ಲಾರಿ ನಂ. ಎಮ.ಹೆಚ್-12 ಪಿಕ್ಯೂ-9577 ಅಂತಾ ಇದ್ದು, ಲಾರಿ ಚಾಲಕನು ತಾನು ನಡೆಸುವ ಲಾರಿಯನ್ನು ಅಲಕ್ಷತನದಿಂದ ನಡೆಸಿ ರೋಡಿನ ಪಕ್ಕದಲ್ಲಿ ಇರುವ ಕೆ.ಇ.ಬಿ ಕಂಬಕ್ಕೆ ಅಪಘಾತಪಡಿಸಿದ್ದರಿಂದ ಕೆ.ಇ.ಬಿ ಕಂಬ ಮುರಿದು ಅಂದಾಜು 35 ಸಾವಿರದಿಂದ 40 ಸಾವಿರ ವರೆಗೆ ನಷ್ಟವಾಗಿರುತ್ತದೆ ಅಂತಾ ಪಿಯರ್ಾಧಿ ಸಾರಂಶ

ಗುರಮಠಕಲ್ ಪೊಲೀಸ್ ಠಾಣೆ:-50/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 30.03.2021 ರಂದು ಸಂಜೆ 07:00 ಗಂಟೆಗೆ ನಜರಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 08/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ರಾತ್ರಿ 09:30 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 10:00 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 3150/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 30.03.2021 ರಂದು ಸಮಯ ರಾತ್ರಿ 11:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-78 ಗುರುಮಠಕಲ್ ಠಾಣೆ ಗುನ್ನೆ ನಂಬರ 50/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-71/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 30/03/2021 ರಂದು ರಾತ್ರಿ 22-00 ಗಂಟೆಗೆ ಫಿಯರ್ಾದಿ ಶ್ರೀ ನಾನು, ಮರಳಪ್ಪ ತಂದೆ ಹಣಮಂತ ಚಟ್ನಳ್ಳಿ, ವಯ 40 ವರ್ಷ, ಜಾತಿ ಪ.ಜಾತಿ(ಹೊಲೆಯ), ಉಃ ಕೂಲಿ ಕೆಲಸ, ಸಾಃ ಬಬಲಾದಿ ಹಾಲಿವಸತಿ ಅನಕಸೂಗುರ, ತಾಃ ವಡಗೇರಾ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಮಗ ರವಿ @ ರವಿಚಂದ್ರ ತಂದೆ ಮರಳಪ್ಪ ಚಟ್ನಳ್ಳಿ ವಯ 18 ವರ್ಷ ಈತನು ಶಹಾಪೂರದಲ್ಲಿ ಪಿ.ಯು.ಸಿ ದ್ವಿತಿಯ ವರ್ಷದ ವಿದ್ಯಾಭ್ಯಾಸ ಮಾಡಿಕೊಂಡು ಶಹಾಪೂರದಲ್ಲಿಯೇ ರೂಮ್ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದನು, ಆಗಾಗ ಊರಿಗೆ ಬಂದು ಹೋಗುವದು ಮಾಡುತಿದ್ದನು. ಒಂದೆರಡು ವಾರಗಳಿಂದ ನನ್ನ ಮಗ ರವಿ @ ರವಿಚಂದ್ರ ಈತನು ಊರಿಗೆ ಬಂದಿರಲಿಲ್ಲ ಆದ್ದರಿಂದ ನಾನು ದಿನಾಂಕ 14/03/2021 ರಂದು ನಮ್ಮೂರಿನಿಂದ ಶಹಾಪೂರದಲ್ಲಿರುವ ನನ್ನ ಮಗನಿಗೆ ಭೇಟಿಯಾಗಲು, ನಾನು ಮತ್ತು ನನ್ನ ಸಂಬಂಧಿಕನಾದ ಮಲ್ಲಪ್ಪ ತಂದೆ ಬಸಪ್ಪ ಮುರಡಿ ಈತನ ಮೋಟರ್ ಸೈಕಲ್ ಮೇಲೆ ಮದ್ಯಾಹ್ನದ ಸುಮಾರಿಗೆ ಶಹಾಪೂರಕ್ಕೆ ಬಂದೆವು. ಶಹಾಪೂರದ ಹಳೆ ಬಸ್ ನಿಲ್ದಾಣದ ಹತ್ತಿರ ಮದ್ಯಾಹ್ನ 2-10 ಗಂಟೆಯ ಸುಮಾರಿಗೆ ಇದ್ದಾಗ, ಶಹಾಪೂರದ ಶರಣಪ್ಪ ತಂದೆ ಸಿದ್ದಲಿಂಗಪ್ಪ ಕಡಿಮನಿ ಇವರು ನನಗೆ ಫೋನ್ ಮಾಡಿ, ಇಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ನನ್ನ ಕೆಲಸದ ನಿಮಿತ್ಯ ಶಹಾಪೂರದಿಂದ ಮೋಟರ್ ಸೈಕಲ್ ಮೇಲೆ ದಿಗ್ಗಿಗೆ ಹೋಗುತಿದ್ದೆನು. ಶಹಾಪೂರ- ದಿಗ್ಗಿ ರೋಡಿನ ಮೇಲೆ ಡಿಗ್ರಿ ಕಾಲೇಜ್ ಹತ್ತಿರ ಒಬ್ಬ ಹುಡುಗ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದನು. ನನ್ನ ಹಿಂದುಗಡೆಯಿಂದ ಅಂದರೆ ಶಹಾಪೂರ ಕಡೆಯಿಂದ ಒಬ್ಬ ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನನಗೆ ಓವರ ಟೇಕ್ ಮಾಡಿ ಮುಂದೆ ಹೋಗಿ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಒಬ್ಬ ಹುಡುಗನಿಗೆ ಡಿಕ್ಕಿ ಮಾಡಿ ಆಟೋ ರೋಡಿನ ಬದಿಗೆ ಪಲ್ಟಿ ಮಾಡಿದನು. ಆಗ ನಾನು ಮೋಟರ್ ಸೈಕಲ್ ಬದಿಗೆ ನಿಲ್ಲಿಸಿ ಹೋಗಿ ನೋಡಲಾಗಿ ರೋಡಿನ ಬದಿಗೆ ಬಿದ್ದ ಹುಡುಗ ನಿಮ್ಮ ಮಗ ರವಿಚಂದ್ರ ಇದ್ದಾನೆ ಆತನಿಗೆ ಅಪಘಾತದಲ್ಲಿ ಭಾರಿ ಗಾಯಗಳಾಗಿರುತ್ತವೆ ಅಂಬುಲೇನ್ಸಗೆ ಫೋನ್ ಮಾಡಿದ್ದೇನೆ ನೀವು ಎಲ್ಲಿದ್ದಿರಿ ಅಂತ ವಿಚಾರಿಸಿದಾಗ, ನಾವು ನಮ್ಮ ಮಗನಿಗೆ ಮಾತನಾಡಿಸಿಕೊಂಡು ಹೋಗಲು ಈ ದಿನ ಶಹಾಪೂರಕ್ಕೆ ಬಂದಿರುತ್ತೇವೆ ಇಲ್ಲೆ ಇದ್ದೇವೆ ಬಂದೇವು ಅಂತ ಹೇಳಿ ಸ್ವಲ್ಪ ಸಮಯದಲ್ಲಿಯೇ ಶಹಾಪೂರ- ದಿಗ್ಗಿ ರೋಡಿಗೆ ಹೋಗಿ ನೋಡಲಾಗಿ ಡಿಗ್ರಿ ಕಾಲೇಜ್ ಹತ್ತಿರ ಒಂದು ಆಟೋ ರೋಡಿನ ಬದಿಗೆ ಪಲ್ಟಿಯಾಗಿ ಬಿದ್ದಿತ್ತು. ನನ್ನ ಮಗನು ರೋಡಿನ ಬದಿಗೆ ಬಿದ್ದಿದ್ದನು ನೋಡಲಾಗಿ ನನ್ನ ಮಗನ ಸೊಂಟದ ಎಲಬು ಮುರಿದ ಭಾರಿ ರಕ್ತ ಬರುತಿತ್ತು. ಎಡಗೈ ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ಭಾರಿ ಗುಪ್ತಗಾಯವಾಗಿತ್ತು, ಬಾಯಿ ಮತ್ತು ಗದ್ದಕ್ಕೆ ರಕ್ತಗಾಯವಾಗಿತ್ತು. ಆಟೋದ ಹತ್ತಿರ ಒಬ್ಬ ವ್ಯಕ್ತಿ ನಿಂತಿದ್ದನು, ಶರಣಪ್ಪನು ಇವನೇ ನೋಡಿ ನಿಮ್ಮ ಮಗನಿಗೆ ಅಪಘಾತ ಪಡಿಸಿದ ಚಾಲಕ ಅಂತ ಹೇಳಿದ ಮೇರೆಗೆ ನಾವೆಲ್ಲರೂ ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಭೀಮರಡ್ಡಿ ತಂದೆ ಚಂದ್ಪಪ ಪಿಟ್ಲರ್ ವಯ 29 ವರ್ಷ ಜಾತಿ ಕಬ್ಬಲಿಗ ಉಃ ಆಟೋ ಚಾಲಕ ಸಾಃ ಗಂಗಾನಗರ ಶಹಾಪೂರ ಆಂತ ಹೇಳಿದನು. ಸದರಿಯವನಿಗೆ ಯಾವುದೇ ಗಾಯವಗೈರೆ ಕಂಡು ಬಂದಿರುವುದಿಲ್ಲ. ಆಟೋ ನಂಬರ ನೋಡಲಾಗಿ ಕೆಎ-33-ಎ-9960 ಇದ್ದು, ಸ್ವಲ್ಪ ಜಖಂಗೊಂಡಿರುತ್ತದೆ. ಅಷ್ಟರಲ್ಲಿಯೇ ಅಂಬುಲೇನ್ಸ್ ವಾಹನ ಸ್ಥಳಕ್ಕೆ ಬಂದಿದ್ದು, ಗಾಯಗೊಂಡ ನನ್ನ ಮಗನಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಯಾದಗಿರಿಗೆ ಹೋಗಲು ತಿಳಿಸಿದ್ದು, ಅಂಬುಲೇನ್ಸ ವಾಹನದಲ್ಲಿ ನನ್ನ ಮಗನನ್ನು ಕರೆದುಕೊಂಡು ಯಾದಗಿರಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿಸಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ್ ವಾಹನದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ದಿನಾಂಕ 26/03/2021 ರ ವರೆಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು, ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಡಿಸ್ಜಾರ್ಜ ಆಗಿ ನನ್ನ ಮಗನನ್ನು ಮನೆಗೆ ಕರೆದುಕೊಂಡು ಬಂದಿರುತ್ತೇನೆ. ಸದ್ಯ ನನ್ನ ಮಗ ಮನೆಯಲ್ಲಿಯೇ ಇರುತ್ತಾನೆ, ಇನ್ನೂ ಸಂಪೂರ್ಣವಾಗಿ ಗುಣಮುಖನಾಗಿರುವುದಿಲ್ಲ. ನನ್ನ ಮಗನಿಗೆ ಉಪಚಾರದ ಅವಶ್ಯಕತೆ ಇದ್ದುದ್ದರಿಂದ ಅರ್ಜಂಟಾಗಿ ದವಾಖಾನೆಗೆ ಹೋಗಿ ಉಪಚಾರ ಮಾಡಿಸಿ ನನ್ನ ಮಗನ ಜೊತೆಯಲ್ಲಿಯೇ ಉಳಿದುಕೊಂಡಿದ್ದೆನು, ನನ್ನ ಮಗನಿಗೆ ಅಪಘಾತದ ಬಗ್ಗೆ ವಿಚಾರಿಸಿದಾಗ ಅಪಘಾತದ ದಿನದಂದು ನನ್ನ ಗೆಳೆಯರೆಲ್ಲರೂ ಆಟವಾಡಲು ಡಿಗ್ರಿ ಕಾಲೇಜಿನ ಮೈದಾನಕ್ಕೆ ಹೋಗಿದ್ದರು, ನಾನು ಆಟವಾಡಲು ಮೈದಾನಕ್ಕೆ ಹೋಗುತಿದ್ದಾಗ ಒಬ್ಬ ಆಟೋ ಚಾಲಕ ಹಿಂದಿನಿಂದ ಚಲಾಯಿಸಿಕೊಂಡು ಬಂದು ನನಗೆ ಅಪಘಾತ ಪಡಿಸಿರುತ್ತಾನೆ ಅಂತ ಹೇಳಿದನು. ನನ್ನ ಮಗನ ಯೋಗಕ್ಷೆಮ ನೋಡಿಕೊಳ್ಳಲು ಜೊತೆಯಲ್ಲಿದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತ್ತಿದ್ದೇನೆ.

ಇತ್ತೀಚಿನ ನವೀಕರಣ​ : 31-03-2021 11:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080