ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 16-03-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 14/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 15/03/2022 ರಂದು ಸಾಯಂಕಾಲ 8 ಪಿ.ಎಂ.ದ ಸುಮಾರಿಗೆ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಯಾದಗಿರಿಯ ಗಂಗಾನಗರದ ಹತ್ತಿರ ಈ ಕೇಸಿನ ಗಾಯಾಳುಗಳು ತಮ್ಮ ಮೋಟಾರು ಸೈಕಲ್ ನಂಬರ ನೊಂದಣಿ ಇಲ್ಲದ್ದು, ಅದರ ಚೆಸ್ಸಿ ನಂಬರ ಒಇ4ಎಅ715ಊಊಖಿ064858 ನೇದ್ದರ ಮೇಲೆ ಯಾದಗಿರಿಯಿಂದ ಸಮನಾಪುರ ತಾಂಡಾಕ್ಕೆ ಹೋಗುವಾಗ ಮಾರ್ಗ ಮದ್ಯೆ ಯಾದಗಿರಿಯ ಗಂಗಾನಗರದ ಹತ್ತಿರ ಸೇಡಂ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಬರುತ್ತಿದ್ದ ಒಂದು ಕ್ರೂಜರ್ ವಾಹನ ಸಂಖ್ಯೆ ಕೆಎ-34, ಎ-2869 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಮೋಟಾರು ಸೈಕಲ್ ಸವಾರ ಮತ್ತು ಹಿಂಬದಿ ಸವಾರನಿಗೆ ಗಂಬೀರ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು, ಅಲ್ಲದೇ ಕ್ರೂಜರ್ ಚಾಲಕನಿಗೆ ಕೂಡ ಬಲಕಣ್ಣಿಗೆ ಭಾರೀ ರಕ್ತಗಾಯವಾಗಿರುತ್ತದೆ ಅಂತಾ ಪಿಯರ್ಾದಿ ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 51/2022 ಕಲಂ: 457, 380 ಐ.ಪಿ.ಸಿ : ದಿನಾಂಕ: 15/03/2022 ರಂದು 4.00 ಪಿಎಮ್ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಕಿಶನ್ ತಂದೆ ತುಕಾರಾಮ ಚವ್ಹಾಣ ವಯಾ|| 35 ವರ್ಷ ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಏವೂರ ಸೀಮಾಂತರದಲ್ಲಿ ಸವರ್ೆ ನಂ 330 ರಲ್ಲಿ ನನ್ನ ಹೆಸರಿನಲ್ಲಿ 2 ಎಕರೆ 30 ಗುಂಟೆ ಜಮೀನು ಮತ್ತು ನಮ್ಮ ತಂದೆಯವರಾದ ತುಕಾರಾಮ ತಂದೆ ಲಸ್ಕರ್ ಚವ್ಹಾಣ ಇವರ ಹೆಸರಿನಲ್ಲಿ 1 ಎಕರೆ 10 ಗುಂಟೆ ಜಮೀನು ಇದ್ದು ಅದೇ ಹೊಲದಲ್ಲಿ ಒಂದು ಮನೆಯು ಕಟ್ಟಿದ್ದು ಇರುತ್ತದೆ. ನಾವು ಊರಲ್ಲಿನ ಮನೆಯಲ್ಲಿ ವಾಸವಿದ್ದು ಹೊಲದಲ್ಲಿನ ಮನೆಯಲ್ಲಿ ಬೆಳೆಗಳ ರಾಶಿಯ ಸಮಯದಲ್ಲಿ ಇರುತ್ತಿದ್ದು ಮತ್ತು ಬೆಳೆದ ಮಾಲನ್ನು ಅದೇ ಮನೆಯಲ್ಲಿ ಇಡುತ್ತಿದ್ದೆವು. ಈ ವರ್ಷ ನಾವು ನಮ್ಮ ಹೊಲದಲ್ಲಿ ಹತ್ತಿ ಬೆಳೆಯನ್ನು ಹಾಕಿದ್ದು ಹತ್ತಿಯನ್ನು ಬಿಡಿಸಿ ಅದೇ ಮನೆಯಲ್ಲಿ ಹಾಕಿದ್ದು ಒಮ್ಮೆಲೇ ಮಾರಾಟ ಮಾಡಿದರಾಯ್ತು ಅಂತಾ ಮನೆಯಲ್ಲಿ ಅಂದಾಜು 15 ಕ್ವಿಂಟಾಲನಷ್ಟು ಹತ್ತಿಯನ್ನು ಕೂಡಿ ಹಾಕಿದ್ದು 15 ಕ್ವಿಂಟಾಲ್ ಹತ್ತಿಯ ಬೆಲೆ ಅಂದಾಜು 1,40,000/-(ಒಂದು ಲಕ್ಷದ ನಲವತ್ತು ಸಾವಿರ) ರೂಪಾಯಿ ಕಿಮ್ಮತ್ತಿನ ಹತ್ತಿ ಮನೆಯಲ್ಲಿ ಬಿಡಿಸಿ ಹಾಕಿದ್ದು ಪ್ರತಿದಿನ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ದೇಸು ಮೂರು ಜನರು ಸಂಜೆ 8.00 ಗಂಟೆಯವರೆಗೆ ಹೊಲದಲ್ಲಿನ ಮನೆಯಲ್ಲಿ ಇದ್ದು ಮನೆಗೆ ಬರುತ್ತಿದ್ದೆವು. ಅದರಂತೆ ದಿನಾಂಕ 10/03/2022 ರಂದು ಸಂಜೆ 8.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಮ್ಮನಾದ ದೇಸು ಇಬ್ಬರೂ ಕೂಡಿ ಎಂದಿನಂತೆ ಹೊಲದಲ್ಲಿನ ಮನೆಗೆ ಕೀಲಿ ಹಾಕಿಕೊಂಡು ಮನೆಗೆ ಬಂದೆವು. ನಂತರ ಮರುದಿನ ದಿನಾಂಕ 11/03/2022 ರಂದು ಬೆಳಿಗ್ಗೆ 7.00 ಗಂಟೆಗೆ ನಾನು ಮತ್ತು ನಮ್ಮ ತಂದೆಯಾದ ತುಕಾರಾಮ ಇಬ್ಬರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿನ ಮನೆಯ ಹತ್ತಿರ ಹೋಗಿ ನೋಡಲಾಗಿ ಮನೆಯ ಕೀಲಿ ಮುರಿದು ಬಾಗಿಲು ತೆರೆದಿದ್ದು ಕಂಡು ಬಂದಿದ್ದರಿಂದ ನಾವು ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿ ಹಾಕಿದ್ದ ಅಂದಾಜು 15 ಕ್ವಿಂಟಾಲನಷ್ಟು ಹತ್ತಿ ಇದ್ದಿರಲಿಲ್ಲ. ಯಾರೋ ಕಳ್ಳರು ದಿನಾಂಕ 10/03/2022 ರ ರಾತ್ರಿ 10.00 ಗಂಟೆಯಿಂದ ದಿನಾಂಕ 11/03/2022 ರ ಬೆಳಿಗ್ಗೆ 6.00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಮನೆಯೊಳಗಿನ ಹತ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದು ನಾವು ಸುತ್ತ ಮುತ್ತ ಊರುಗಳಲ್ಲಿ ವಿಚಾರಿಸಲಾಗಿ, ಹುಡುಕಾಡಲಾಗಿ ಹತ್ತಿ ಕಳವು ಮಾಡಿಕೊಂಡು ಹೋದವರ ಬಗ್ಗೆ ಪತ್ತೆಯಾಗದ ಕಾರಣ ಇಂದು ದಿನಾಂಕ 15/03/2022 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಯಾರೋ ಕಳ್ಳರು ದಿನಾಂಕ 10/03/2022 ರ ರಾತ್ರಿ 10.00 ಗಂಟೆಯಿಂದ ದಿನಾಂಕ 11/03/2022 ರ ಬೆಳಿಗ್ಗೆ 6.00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಮನೆಯೊಳಗಿನ ಅಂದಾಜು 1,40,000/-(ಒಂದು ಲಕ್ಷದ ನಲವತ್ತು ಸಾವಿರ) ರೂಪಾಯಿ ಕಿಮ್ಮತ್ತಿನ 15 ಕ್ವಿಂಟಾಲ್ ಹತ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದು ಕಾರಣ ಸದರಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ: 51/2022 ಕಲಂ: 457, 380 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಇತ್ತೀಚಿನ ನವೀಕರಣ​ : 16-03-2022 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080