Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-11-2022

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ.ನಂ-197/2022 ಕಲಂ: 279, 304(ಎ) ಐ.ಪಿ.ಸಿ ಸಂಗಡ ಕಲಂ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ 21/11/2022 ರಂದು 6.45 ಪಿ.ಎಂ.ಕ್ಕೆ ಶ್ರೀ ಹುಸೇನಬಾಷಾ ತಂ/ ಖಾಸಿಂಅಲಿ ಮುಲ್ಲಾ, ಸಾ|| ಅನವಾರ, ತಾ|| ವಡಗೇರಾ, ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿಯನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ಇಂದು ದಿನಾಂಕ: 21/11/2022 ರಂದು ಸಾಯಂಕಾಲ 4.30 ಪಿ.ಎಂ. ಸುಮಾರಿಗೆ ನನ್ನ ತಮ್ಮ ಮದರಶಾ ತಂ/ ಖಾಸಿಂಅಲಿ ಮುಲ್ಲಾ, ವ|| 21 ವರ್ಷ, ಜಾ|| ಮುಸ್ಲಿಂ, ಉ|| ಕೂಲಿಕೆಲಸ, ಸಾ|| ಅನವಾರ, ತಾ|| ವಡಗೇರಾ, ಜಿ|| ಯಾದಗಿರಿ ಈತನು ಶಹಾಪೂರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮೋಟರ ಸೈಕಲ್ ನಂ. ಕೆಎ-33 ವೈ-4287 ನೇದ್ದನ್ನು ಚಲಾಯಿಸಿಕೊಂಡು ಮನೆಯಿಂದ ಹೋದನು. ನಂತರ ಸಾಯಂಕಾಲ 5.25 ಪಿ.ಎಂ. ಸುಮಾರಿಗೆ ನನಗೆ ಪರಿಚಯಯದ ಶ್ರೀ ಭೀಮಶಾ ತಂ/ ಅಂಬಣ್ಣ ನಾಯ್ಕೋಡಿ ಸಾ|| ವಿಭೂತಿಹಳ್ಳಿ, ತಾ|| ಶಹಾಪೂರ ರವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ನಿಂಗಣಗೌಡ ತಂ/ ಲಕ್ಷ್ಮಣಗೌಡ ಬಿರಾದಾರ ಇಬ್ಬರೂ ಕೂಡಿಕೊಂಡು ನಮ್ಮೂರಿನಿಂದ ಶಹಾಪೂರ-ಸುರಪುರ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹಿಲ್ಟೌನ್ ದಾಬಾಕಡೆಗೆ ಹೊರಟಿದ್ದಾಗ ನಮ್ಮೂರ ಬಸವರಾಜಪ್ಪ ಸೌಳಪಟ್ಟಿ ರವರ ಮನೆಯ ಹತ್ತಿರ ರೋಡಿನಲ್ಲಿ ಇಂದು ಸಾಯಂಕಾಲ 5.15 ಪಿ.ಎಂ. ಸುಮಾರಿಗೆ ಶಹಾಪೂರ ಕಡೆಯಿಂದ ಒಂದು ಅಶೋಕಾಲೈಲ್ಯಾಂಡ್ ಮಿನಿಗೂಡ್ಸ್ನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ಎದುರಿನಿಂದ ಅಂದರೆ ಹತ್ತಿಗುಡೂರ ಕಡೆಯಿಂದ ಬರುತ್ತಿದ್ದ ಒಂದು ಮೋಟರ ಸೈಕಲಕ್ಕೆ ಜೋರಾಗಿ ಡಿಕ್ಕಿಪಡಿಸಿದ ಪರಿಣಾಮ ಮೋಟರ ಸೈಕಲ್ ಸವಾರನಿಗೆ ತಲೆಗೆ ಭಾರೀ ರಕ್ತಗಾಯವಾಗಿ ತಲೆ ನುಜ್ಜುಗುಜ್ಜಾಗಿ ತಲೆಯಿಂದ ಮಾಂಸ ಖಂಡ ಹೊರಗೆ ಬಂದಿದ್ದು, ಬಲಗೈ ರಟ್ಟೆಗೆ, ಬಲಗಾಲ ತೊಡೆಗೆ ಭಾರೀ ಒಳಪೆಟ್ಟಾಗಿ ಮುರಿದಂತೆ ಕಂಡು ಬಂದಿದ್ದು, ಗದ್ದಕ್ಕೆ, ಎಡಗೈ ಮುಷ್ಟಿಯ ಹತ್ತಿರ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸದರಿ ವ್ಯಕ್ತಿಗೆ ಪರಿಶೀಲಿಸಿ ನೋಡಲಾಗಿ ಮೃತಪಟ್ಟ ವ್ಯಕ್ತಿಯು ನಿನ್ನ ತಮ್ಮ ಮದರಶಾ ತಂ/ ಖಾಸಿಂಅಲಿ ಮುಲ್ಲಾ ಇರುತ್ತಾನೆ. ಅಪಘಾತಪಡಿಸಿದ ಅಶೋಕಾ ಲೈಲ್ಯಾಂಡ್ ಮಿನಿ ಗೂಡ್ಸ್ನ ಚಾಲನು ಅಪಘಾತಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆ ಸಮಯದಲ್ಲಿ ಸದರಿಯವನಿಗೆ ನೋಡಿದ್ದು ಇನ್ನೊಮ್ಮೆ ನೋಡಿದಲ್ಲಿ ಗುರುತಿಸುತ್ತೇನೆ. ನಂತರ ಸ್ಥಳದಲ್ಲಿದ್ದ ಅಶೋಕಾ ಲೈಲ್ಯಾಂಡ್ ಮಿನಿ ಗೂಡ್ಸ್ನ ನಂಬರ ನೋಡಲಾಗಿ ಕೆಎ-33 ಬಿ-0520 ಅಂತಾ ಇದ್ದು, ನಿನ್ನ ತಮ್ಮ ಚಲಾಯಿಸುತ್ತಿದ್ದ ಮೋಟರ ಸೈಕಲ್ ನಂ.ಕೆಎ-33 ವೈ-4287 ಅಂತಾ ಇರುತ್ತದೆ ಅಂತಾ ಹೇಳಿದಾಗ ವಿಷಯವನ್ನು ನನ್ನ ತಂದೆ ಖಾಸಿಂಅಲಿ, ತಾಯಿ ಬೀಬಿಪಾತಿಮಾ ರವರೊಂದಿಗೆ ಘಟನೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ತಮ್ಮನಿಗೆ ಮೇಲ್ಕಾಣಿಸಿದಂತೆ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಕಾರಣ ಅಪಘಾತಪಡಿಸಿ ತನ್ನ ವಾಹನ ಬಿಟ್ಟು ಓಡಿ ಹೋದ ಅಶೋಕಾ ಲೇಲ್ಯಾಂಡ್ ಮಿನಿ ಗೂಡ್ಸ್ ನಂ. ಕೆಎ-33 ಬಿ-0520 ನೇದ್ದ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 197/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 198/2022 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ: 21/11/2022 ರಂದು ರಾತ್ರಿ 20-15 ಗಂಟೆಗೆ ಫಿಯರ್ಾದಿ ವೆಂಕಟೇಶ್ ವಯಸ್ಸು 25 ವರ್ಷ ಈತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 13/11/2022 ರಂದು ನನ್ನ ಅಣ್ಣ ವೆಂಕಟೇಶ್ ಮತ್ತು ನಮ್ಮ ಸಂಬಂಧಿಕನಾದ ಬಸವರಾಜ ತಂದೆ ಜುನ್ನಪ್ಪ ಪವಾರ್ ಸಾಃ ಮುಕರ್ಿಗುಡ್ಡ ತಾಂಡಾ ಇಬ್ಬರೂ ಕೂಡಿ ನನ್ನ ಮೋಟರ್ ಸೈಕಲ್ ನಂ ಕೆಎ-25-ಹೆಚ್.ಜಿ-6581 ರ ಮೇಲೆ ತಮ್ಮ ವೈಯಕ್ತಿಕ ಕೆಲಸದ ಸಂಬಂಧ ಕಲಬುರಗಿಗೆ ಹೋಗುತಿದ್ದರು. ಮೋಟರ್ ಸೈಕಲ್ ಬಸವರಾಜ ಚಲಾಯಿಸುತಿದ್ದ ಹಿಂದುಗಡೆ ನನ್ನ ಅಣ್ಣ ವೆಂಕಟೇಶ್ ಕುಳಿತುಕೊಂಡಿದ್ದ ಶಹಾಪೂರ ಪಟ್ಟಣ ದಾಟಿ ಆರಬೋಳ ಕಲ್ಯಾಣ ಮಂಟಪದ ಮುಂದೆ ಇರುವ ಶಹಾಪೂರ- ಭಿ ಗುಡಿ ರೋಡಿನ ಮೇಲೆ ಬೆಳಗಿನ ಜಾವ 05-00 ಗಂಟೆಗೆ ಮೋಟರ್ ಸೈಕಲ್ ಸವಾರ ಬಸವರಾಜನು ಮೋಟರ್ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡ ಹಂಪ್ಸ್ ವೇಗದಲ್ಲಿ ಜಂಪ್ ಮಾಡಿದ್ದರಿಂದ ಮೋಟರ್ ಸೈಕಲ್ ಸ್ಕಿಡ್ಡಾಗಿ ರೋಡಿನ ಮೇಲೆ ಬಿದ್ದರಿಂದ ಅಪಘಾತದಲ್ಲಿ ನನ್ನ ಅಣ್ಣ ವೆಂಕಟೇಶನಿಗೆ ಬಲಗೈ ಹಸ್ತದ ಎಲಮು ಮುರಿದು ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಮೋಟರ್ ಸೈಕಲ್ ಸವಾರ ಬಸವರಜನಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ.ಸದರಿ ಅಪಘಾತಕ್ಕೆ ಮೋಟರ್ ಸೈಕಲ್ ನಂ ಕೆಎ-25-ಹೆಚ್.ಜಿ-6581 ಸವಾರ ಬಸವರಾಜ ಈತನ ಅತಿವೇಗ ಮತ್ತು ಅಲಕ್ಷತನದಿಂದ ಈ ಅಪಘಾತವಾಗಿರುತ್ತದೆ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 198/2022 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ. ಮನುಷ್ಯಕಾಣೆ : ಇಂದು ದಿನಾಂಕ; 21/11/2022 ರಂದು 9-30 ಎಎಮ್ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸದ್ದರ ಸಾರಾಂಶವೆನೆಂದರೆ, ದಿನಾಂಕ; 28/10/2022 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ನನ್ನ ಸಹೋದರ ಅಭಿಷೇಕ ಮತ್ತು ನನ್ನ ಗಂಡ ಶರಣಪ್ಪ ತಂದೆ ತಿಪ್ಪಣ್ಣ ಭಜಂತ್ರಿ ಇಬ್ಬರು ಕೂಡಿ ಮನೆಯಿಂದ ಸ್ಟೇಷನ್ ಏರಿಯಾದಲ್ಲಿ ಅಭೀಷೇಕ ಎಕ್ಸ್-ರೇ ಸೆಂಟರಗೆ ಹೋಗಿದ್ದು ಅಲ್ಲಿಂದ ನನ್ನ ಗಂಡ ಶರಣಪ್ಪ ತಂದೆ ತಿಪ್ಪಣ್ಣ ಭಜಂತ್ರಿ ಮರಳಿ ಮನೆಗೆ ಬರಲಿಲ್ಲ. ಸಾಯಂಕಾಲ ಸಮಯದ ವರೆಗೂ ಕಾಯ್ದು ನೋಡಲಾಗಿ ಮನೆಗೆ ಬಾರದೇ ಇದ್ದರಿಂದ ನಾನು ಮತ್ತು ನನ್ನ ಸಹೋದರ ಅಭೀಷೇಕ ನನ್ನ ತಾಯಿ ಮಲ್ಕಮ್ಮ ಗಂಡ ಬಸವರಾಜ ಜಾಧವ ಎಲ್ಲರೂ ಕೂಡಿ ಯಾದಗಿರಿಯಲ್ಲಿ ಎಲ್ಲಾ ಕಡೆ ತಿರುಗಾಡಿ ಹುಡುಕಾಡಿದರು ಸಹಿತ ಸಿಗದೇ ಇದ್ದಾಗ ನಂತರ ಮರುದಿವಸ ನಾನು ಮತ್ತು ನನ್ನ ಸಹೋದರ ನಮ್ಮ ಸಭಂದಿಕರಿಗೆ ಮತ್ತು ನನ್ನ ಗಂಡನ ತಂದೆ ತಾಯಿ ಹಾಗೂ ಇತರೆ ಸ್ನೇಹಿತರಿಗೆ ಫೋನ ಮೂಲಕ ಕರೆ ಮಾಡಿ ಕೇಳಿದರು ಸಹಿತ ನಮಗೆ ಗೊತ್ತಲ್ಲವೆಂದು ತಿಳಿಸಿರುತ್ತಾರೆ. ನಂತರ ನಾನು, ನನ್ನ ಸಹೋದರ ಶಹಾಬಾದ ನಗರ ಮತ್ತು ಕಲಬುರಗಿ ನಗರದಲ್ಲಿ ಹುಡುಕಾಡಿದರು ಎಲ್ಲಿಯು ಸಿಕ್ಕಿರುವುದಿಲ್ಲ. ನನ್ನ ಗಂಡ ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಹರಿಸಿಣ ಬಣ್ಣದ ಟೀಶರ್ಟ ಮತ್ತು ಕಪ್ಪು ಬಣ್ಣದ ಚಪ್ಪಲಿ ಹಾಕಿಕೊಂಡಿದ್ದು ಮತ್ತು ನನ್ನ ಗಂಡ 167 ಸೆಂಟಿ ಮೀಟರ್ ಎತ್ತರವಿದ್ದು ಕಂದು ಬಣ್ಣ ಹೋಲುತ್ತಾನೆ. ಇವನನ್ನು ಹುಡುಕಿಕೊಡಬೇಕು ಸದರಿ ದೂರನ್ನು ಕೊಡಲು ಕಾಲ ವಿಳಂಬವಾಗಿದ್ದು ಕಾರಣವೆನೆಂದರೆ ನನ್ನ ಸಂಭಂದಿಕರಿಗೆ ಪುನಃ ಪುನಃ ವಿಚಾರಿಸುವ ಮೂಲಕ ಕಾಲ ವಿಳಂಬವಾಗಿರುತ್ತದೆ ಯಾವುದೇ ದುರುದ್ದೇಶಪೂರ್ವಕವಾಗಿರುವುದಿಲ್ಲ. ನನ್ನ ಗಂಡನು ಸಮಯ್ಯಾ ತಂದೆ ಶೇಖ್ ಹುಸೇನ ಮುಜಾವರ ಮೊ.ನಂ.9148418170, 8050418170 ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅವಳ ಹತ್ತಿರ ಹೋಗಿರಬಹುದಾಗಿ ಸಂಶಯವಿದ್ದು ಅವನಿಗೆ ಏನಾದರು ಅನಾಹುತ ಆದಲ್ಲಿ ಅವಳೇ ಹೊಣೆಗಾರಳಾಗಿರುತ್ತಾಳೆ. ಕಾರಣ ಕಾಣೆಯಾದ ನನ್ನ ಗಂಡನನ್ನು ಪತ್ತೆ ಹಚ್ಚಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.122/2022 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ:-
ಗುನ್ನೆ ನಂ. 169/2022 ಕಲಂ: 00 ಒಕ ಕಅ : ದಿನಾಂಕ 10.11.2022 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆಕೆಯ ಗಂಡ ಹಾಗೂ ಮೂರು ಜನ ಮಕ್ಕಳು ಮನೆಯಲ್ಲಿ ಊಟ ಮಾಡಿದ ನಂತರ ಫಿರ್ಯಾದಿ ಹಾಗೂ ಆಕೆಯ ಇಬ್ಬರು ಮಕ್ಕಳಾದ ಯಲ್ಲಮ್ಮ, ಸಾವಿತ್ರಮ್ಮ ಇವರು ಅಡುಗೆ ಮನೆಯಲ್ಲಿ ಮಲಗಿದ್ದು ಆಕೆಯ ಇನ್ನೊಬ್ಬಳು ಮಗಳು ದೇವಮ್ಮ ಹಾಗೂ ಆಕೆಯ ಗಂಡನಾದ ಹಣಮಂತ ಇವರು ಅವರ ಮಗಳು ದೇವಮ್ಮ ಬಟ್ಟೆ ಹೊಲೆಯುವ ಕೊಣೆಯಲ್ಲಿ ಮಲಗಿರುತ್ತಾರೆ. ನಂತರ ದಿನಾಂಕ 11.11.2022 ರಂದು ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ಫಿರ್ಯದಿಯು ತನ್ನ ಗಂಡ ಮತ್ತು ಮತ್ತು ಮಗಳು ಮಲಗಿದ್ದ ಕೊಣೆಯ ಕಸ ಗೂಡಿಸಲು ಹೋಗಿ ನೋಡಿದಾಗ ಆಕೆಯ ಗಂಡ ಮಲಗಿದ್ದು, ಮಗಳು ಕಾಣಿಸಲಿಲ್ಲ ಆಕೆ ಬಹರ್ಿದೆಸೆಗೆ ಹೋಗಿರಬೇಕೆಂದು ತಿಳಿದು ಅಲ್ಲಿಂದ ವಾಪಸ್ ಬಂದಿದ್ದು ಆಕೆ ಎಷ್ಟೋತ್ತಾದರು ಮರಳಿ ಮನೆಗೆ ಬಾರದೇ ಇದ್ದಾಗ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೊನ್ ಮಾಡಿ ವಿಚಾರಿಸಿದ ನಂತರ ಆಕೆ ಎಲ್ಲಿಯೂ ಇಲ್ಲವೆಂದು ಗೊತ್ತಾದ ನಂತರ ಆಕೆ ಕಾಣೆಯಾಗಿದ್ದು ಆಕೆಯನ್ನು ಪತ್ತೆ ಮಾಡಿಕೊಡುವಂತೆ ಇಂದು ಠಾಣೆಗೆ ಬಂದು ನೀಡಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ. 169/2022 ಕಲಂ: 00 ಒಕ ಕಅ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ: 279, 338 ಐಪಿಸಿ ಸಂ: 187 ಐಎಮ್ವಿ ಯಾಕ್ಟ : ಇಂದು ದಿನಾಂಕ: 21/11/2022 ರಂದು 06.30 ಪಿ.ಎಮ್ ಕ್ಕೆ ಶ್ರೀ. ರವಿಕುಮಾರ ತಂದೆ ಭೀಮಣ್ಣಗೌಡ ಮಾಲಿಪಾಟೀಲ್ ವಯಾ;34 ವರ್ಷ ಉ: ಒಕ್ಕಲುತನ ಜಾ: ಲಿಂಗಾಯತರೆಡ್ಡಿ ಸಾ: ರಬ್ಬನಳ್ಳಿ ತಾ: ಶಹಾಪೂರ ಜಿ: ಯಾದಗಿರಿ ಇವರು ಒಂದು ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 07/11/2022 ರಂದು ನಾನು ನಮ್ಮ ಹೊಲದಲ್ಲಿ ಇದ್ದಾಗ, 05.50 ಪಿಎಮ್ ಸುಮಾರಿಗೆ ನಮ್ಮೂರಿನ ದೇವರೆಡ್ಡಿ ತಂದೆ ಭೀಮಣ್ಣಗೌಡ ಪೊಲೀಸ್ ಪಾಟೀಲ ಇವರು ಪೋನ ಮಾಡಿ ತಿಳಿಸಿದ್ದೇನಂದರೆ, ನಾನು ಮತ್ತು ಭೀಮಣ್ಣ ತಂದೆ ರಾಯಪ್ಪ ಪೂಜಾರಿ ಇಬ್ಬರು 05.30 ಪಿಎಮ್ ಸುಮಾರಿಗೆ ಶಹಾಪೂರ ಸಿಂದಗಿ ಮೇನ್ ರೋಡಿನ ರಬ್ಬನಳ್ಳಿ ಕ್ರಾಸ್ ದಿಂದ ಪೂರ್ವಕ್ಕೆ ಅಯ್ಯಣ್ಣಗೌಡ ತುಂಬಿಗಿ ಇವರ ಕವಳಿ ಗದ್ದಿ ಹತ್ತಿರ ಇರುವ ಬಾಸು ಗೋಗಿ ಇವರ ಹತ್ತಿ ಖರೀದಿ ಮಾಡುವ ಸ್ಥಳದಲ್ಲಿ ಮಾತಾಡುತ್ತಾ ನಿಂತಾಗ ಹತ್ತಿ ಕಾಟ ಮಾಡುವ ಸ್ಥಳದ ಪೊಕ್ಕದ ರೋಡಿನಿಲ್ಲಿ ನಿಮ್ಮ ತಮ್ಮನಾದ ಹಣಮಂತ್ರಾಯಗೌಡ ಈತನು ಶಹಾಪೂರ ಕಡೆಯಿಂದ ಮೋಟಾರ್ ಸೈಕಲ್ ಮೇಲೆ ರಬ್ಬನಳ್ಳಿ ಕಡೆಗೆ ಬರುತ್ತಿದ್ದನು. ಅವನ ಹಿಂದಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಂದೆ ಹೊರಟಿದ್ದ ನಿಮ್ಮ ತಮ್ಮನ ಮೋಟಾರ್ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡೆಸಿ ಅಪಘಾತ ಮಾಡಿದ್ದಾನೆ. ನಾವು ಹತ್ತಿರ ಹೋಗಿ ನೋಡಲಾಗಿ, ನಿಮ್ಮ ತಮ್ಮ ಹಣಮಂತ್ರಾಯಗೌಡ ಈತನ ತೆಲೆಗೆ ಅಲ್ಲಲ್ಲಿ ರಕ್ತಗಾಯ ಮತ್ತು ಭಾರಿ ಗುಪ್ತ ಗಾಯವಾಗಿರುತ್ತವೆ, ಮತ್ತು ಬಲಗಣ್ಣಿನ ಕೆಳಗೆ ಮತ್ತು ಬಲಗಡೆ ಮೋಳಕೈಗೆ ತರಚಿದ ಗಾಯಗಳಾಗಿದ್ದವು, ಬಲಗಾಲಿನ ಕಿರಬಳ್ಳಿನ ಹತ್ತಿರ ರಕ್ತಗಾಯವಾಗಿದೆ. ನಿಮ್ಮ ತಮ್ಮನ ಮೋಟಾರ್ ಸೈಕಲ್ ನಂಬರ ನೋಡಲಾಗಿ ಕೆಎ-33-ವಾಯ್-8472 ಅಂತಾ ಇದ್ದು, ಅಪಘಾತ ಮಾಡಿದ ಕಾರ ನಂಬರ: ನೋಡಲಾಗಿ ಕೆಎ-02-ಎಇ-2842 ಅಂತಾ ಇದ್ದು ಅದರ ಚಾಲಕನು ಸ್ವಲ್ಪ ಸಮಯ ಅಲ್ಲೆ ಇದ್ದನು, ಅವನಿಗೆ ವಿಚಾರಿಸಿದಾಗ ತನ್ನ ಹೆಸರು ತಿರುಪತಿ ತಂದೆ ಸೊಮಲಾ ಪವ್ಹಾರ ಸಾ: ರಬ್ಬನಳ್ಳಿ ತಾಂಡಾ ಅಂತಾ ತಿಳಿಸಿದನು. ಸದರಿಯವನು ಸ್ಥಳದಲ್ಲಿ ಜನರು ಕೂಡುವದನ್ನು ನೋಡಿ ಅಲ್ಲಿಂದ ಓಡಿ ಹೊಗಿರುತ್ತಾನೆ. ನಾವು ನಿಮ್ಮ ತಮ್ಮನಿಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತಿದ್ದೇವೆ, ನೀನು ಅಲ್ಲಿಗೆ ಬಾ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ತಂದೆಯಾದ ಭೀಮಣ್ಣಗೌಡ ತಂದೆ ಅಪ್ಪಾಜಪ್ಪಗೌಡ, ನಮ್ಮ ಸೊಸೆ ಅನಿತಾ ಗಂಡ ಹಣಮಂತ್ರಾಯಗೌಡ, ಎಲ್ಲರೂ ಕೂಡಿ ಶಹಾಪೂರ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಮ್ಮನಿಗೆ ತೆಲೆಗೆ ಭಾರಿ ಗುಪ್ತಗಾಯವಾಗಿ ಮಾತನಾಡುತ್ತಿರಲಿಲ್ಲ್ಲ, ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಅದೆ ದಿವಸ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಮ್ಮನು ಇನ್ನು ಉಪಚಾರ ಪಡೆಯುತ್ತಿದ್ದಾನೆ. ನಮಗೆ ಕಾನೂನಿನ ತಿಳುವಳಿಕೆ ಇಲ್ಲದರಿಂದ ಮತ್ತು ನನ್ನ ತಮ್ಮನಿಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿ ನಂತರ ತಡವಾಗಿ ಇಂದು ದಿನಾಂಕ:21/11/2022 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಕಾರ ನಂ: ಕೆಎ-02-ಎಇ-2842 ನೇದ್ದರ ಚಾಲಕ ತಿರುಪತಿ ತಂದೆ ಸೊಮಲಾ ಪವ್ಹಾರ ಸಾ: ರಬ್ಬನಳ್ಳಿ ತಾಂಡಾ ಈತನು ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತ ಮಾಡಿ, ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೊಗಿದ್ದರಿಂದ ಸದರಿ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 82/2022 ಕಲಂ: 279, 338 ಐಪಿಸಿ ಸಂ: 187 ಐಎಮ್ವಿ ಯಾಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ: 21/11/2022 ರಂದು 09.50 ಪಿ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಆರೋಪಿತರು ಮತ್ತು ಜಪ್ತಿ ಪಂಚನಾಮೆ, ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ಒಂದು ವರದಿ ನೀಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 21/11/2022 ರಂದು 07.25 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಕಕ್ಕಸಗೇರಾ ಗ್ರಾಮದ ಸಮುದಾಯ ಭವನದ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 08.20 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 04 ಜನ ಆರೋಪಿತರು ಸಿಕ್ಕಿದ್ದು ಆರೋಪಿತರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 5620=00 ರೂ, 52 ಇಸ್ಪೇಟ ಎಲೆಗಳನ್ನು 08.20 ಪಿಎ.ಎಮ್ ದಿಂದ 09.20 ಪಿಎಮ್ ವರೆಗೆ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು 09.50 ಪಿ.ಎಮ್.ಕ್ಕೆ ಠಾಣೆಗೆ ಬಂದು ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 83/2022 ಕಲಂ, 87 ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 153/2022 ಕಲಂ: 279, 338 ಐಪಿಸಿ : ಇಂದು ದಿ: 21/11/2022 ರಂದು 8-15 ಪಿ.ಎಮ್ಕ್ಕೆ ಪಿರ್ಯಾದಿ ಶ್ರೀ ಮರೆಣ್ಣ ತಂದೆ ಮಹಾದೇವಪ್ಪ ಪೊಲೀಸ್ ಪಾಟೀಲ ವ|| 19 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಕುಪಗಲ್ ತಾ|| ಸುರಪೂರ ಇದ್ದು, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವದೆನೆಂದರೆ, ನಮ್ಮ ತಂಗಿಯಾದ ಮರಿಲಿಂಗಮ್ಮ ಇವಳು ಬಾಣೆತನಕ್ಕೆಂದು ಮನೆಗೆ 5 ತಿಂಗಳ ಹಿಂದೆ ಬಂದಿದ್ದಳು. ಬಾಣೆತನ ನಂತರ ಹೆರಿಗೆ ಆಗಿದ್ದು ನಮ್ಮ ತಂದೆಯವರಾದ ಮಹಾದೇವಪ್ಪ ತಂದೆ ಮಲಪ್ಪ ಪೊಲೀಸ್ ಪಾಟೀಲ ಈತನು ದೇವರುಗಳಿಗೆ ಪೂಜೆ ಮಾಡಿ ಟೆಂಗಿನಕಾಯಿ ಒಡೆದುಕೊಂಡು ಬರುವ ಕುರಿತು ಇಂದು ದಿನಾಂಕ: 21/11/2022 ರಂದು ಬೆಳಿಗ್ಗೆ 09 ಗಂಟೆ ಸುಮಾರಿಗೆ ಮನೆಯಿಂದ ನಮ್ಮ ಹಿರೋ ಮೋಟರ ಸೈಕಲ್ ನಂ. ಕೆಎ 36 ಇಎಲ್ 0155 ರ ಮೇಲೆ ಸುರಪುರಕ್ಕೆ ಹೋದನು. ನಂತರ ಇಂದು ಬೆಳಿಗ್ಗೆ 11:45 ಗಂಟೆ ಸುಮಾರಿಗೆ ನಾನು, ನಮ್ಮ ಅಣ್ಣ ನಿಂಗಯ್ಯ ತಂದೆ ಮಹಾದೇವಪ್ಪ ಪೊಲೀಸ್ ಪಾಟೀಲ ಮನೆಯಲ್ಲಿರುವಾಗ ನಮ್ಮೂರಿನ ಮುದಕಪ್ಪ ಪೊಲೀಸ್ ಪಾಟೀಲ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ರಾಮಣ್ಣ ತಂದೆ ಭೀಮಯ್ಯ ದೇವದುರ್ಗ ಇಬ್ಬರು ಕೂಡಿಕೊಂಡು ನಮ್ಮ ಮೋಟರ ಸೈಕಲ್ ಮೇಲೆ ಸುರಪುರದ ಆರ್.ವಿ.ಎನ್ ಚೌಕದಿಂದ ಗಂಜ್ ಕಡೆಗೆ ಹೋಗುತ್ತಿರುವಾಗ ನಮ್ಮ ಮುಂದುಗಡೆ ನಿಮ್ಮ ತಂದೆಯವರಾದ ಮಹಾದೇವಪ್ಪ ಈತನು ನಿಮ್ಮ ಮೋಟರ ಸೈಕಲ್ ಮೇಲೆ ಹೋಗುತ್ತಿದ್ದನು. ಆಗ ಆರ್.ವಿ.ಎನ್ ಚೌಕ ಮತ್ತು ವೆಂಕಟಾಪುರದ ಮದ್ಯ ಮುಖ್ಯ ರಸ್ತೆಯ ಮೇಲೆ ಬರುವ ಶಿಬರಬಂಡಿ ಹತ್ತಿರ ಹೋಗುತ್ತಿರುವಾಗ ಎದುರುಗಡೆಯಿಂದ ವೆಂಕಟಾಪುರ ಕಡೆಯಿಂದ ಒಂದು ಟ್ರಾಕ್ಟರ ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ತಂದೆಯ ಮೋಟರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮೋಟರ ಸೈಕಲ್ ಸಮೇತ ನಿಮ್ಮ ತಂದೆ ರೋಡಿನ ಮೇಲೆ ಬಿದ್ದಿದ್ದು ನಾನು ಮತ್ತು ನಮ್ಮೂರ ರಾಮಣ್ಣ ಇಬ್ಬರು ನಿಮ್ಮ ತಂದೆಗೆ ಎಬ್ಬಿಸಿ ನೋಡಲಾಗಿ ಎಡಗಾಲ ತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದು, ಎಡಗಡೆ ಪಕ್ಕಡಿಗೆ, ಸೊಂಟದ ಹತ್ತಿರ ಗುಪ್ತಗಾಯ, ಬಲಗಾಲ ಪಾದಕ್ಕೆ, ಎಡಕಪಾಳಕ್ಕೆ ರಕ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ಟ್ರಾಕ್ಟರ್ ನಂಬರ ನೋಡಲಾಗಿ ಸ್ವರಾಜ ಕಂಪನಿಯ ಟ್ರಾಕ್ಟರ ನಂ ಕೆಎ 32 ಟಿಎ 6778 ಟ್ರಾಲಿ ನಂ ಕೆಎ 32 ಟಿಎ 6780 ಇದ್ದು, ಚಾಲಕ ಸ್ಥಳದಲ್ಲಿ ಇದ್ದು ಹೆಸರು ವಿಚಾರಿಸಲಾಗಿ ನಾಗೇಶ ತಂದೆ ಮಂಜುನಾಥ ರಾಠೋಡ ಸಾ|| ನಾರಾಯಣಪುರ ಅಂತ ತಿಳಿಸಿದನು. ಸದರಿ ಘಟನೆ ಇಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಜರುಗಿದ್ದು, ನೀವು ಕೂಡಲೆ ಸ್ಥಳಕ್ಕೆ ಬರುವಂತೆ ತಿಳಿಸಿದ್ದರಿಂದ ನಾನು ಮತ್ತು ನಮ್ಮ ಅಣ್ಣ ನಿಂಗಯ್ಯ ಇಬ್ಬರು ಕೂಡಿಕೊಂಡು ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ಈ ಮೇಲಿನಂತೆ ನಮ್ಮ ತಂದೆಗೆ ಭಾರಿ ಮತ್ತು ಸಣ್ಣಪುಟ್ಟ ಗಾಯಗಳಾಗಿದ್ದು ಇರುತ್ತದೆ. ನಂತರ ನಾವು ನಮ್ಮ ತಂದೆಗೆ ಸುರಪುರ ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ್ದಲ್ಲಿ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನಂತರ ವೈದ್ಯರ ಸಲಹೆಯಂತೆ ನಮ್ಮ ತಂದೆಗೆ ಹೆಚ್ಚಿನ ಉಪಚಾರ ಕುರಿತು ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆ ಮಾಡಿದೆವು. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಈಗ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ.ಕಾರಣ ಸ್ವರಾಜ ಕಂಪನಿಯ ಟ್ರಾಕ್ಟರ ನಂ ಕೆಎ 32 ಟಿಎ 6778 ಟ್ರಾಲಿ ನಂ ಕೆಎ 32 ಟಿಎ 6780 ನೇದ್ದರ ಚಾಲಕನಾದ ನಾಗೇಶ ತಂದೆ ಮಂಜುನಾಥ ರಾಠೋಡ ಸಾ|| ನಾರಾಯಣಪುರ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ಮೋಟರ ಸೈಕಲ್ ನಂ ಕೆಎ 36 ಇಎಲ್ 0155 ನೇದ್ದಕ್ಕೆ ಅಪಘಾತಪಡಿಸಿದ್ದಿಂದ ನಮ್ಮ ತಂದೆ ಮಹಾದೇವಪ್ಪ ಈತನಿಗೆ ಈ ಮೇಲಿನಂತೆ ಗಾಯಗಳಾಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.153/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 22-11-2022 11:09 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080