Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01/02/2021

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 13/2021 ಕಲಂ: 279,337,338,304(ಎ) ಐ.ಪಿ.ಸಿ ಸಂಗಡ 187 ಐ ಎಮ್ ವಿ ಆಕ್ಟ :- ದಿನಾಂಕ: 01/02/2021 ರಂದು 00.45 ಗಂಟೆಗೆ ಪಿರ್ಯಾದಿ ಅಜರ್ಿದಾರರಾದ ಶ್ರೀ ಫಿರೋಜ ತಂದೆ ಬಸೀರುದ್ದೀನ್ ಆಲಂ ವಯಾ: 25 ವರ್ಷ ಜಾತಿ: ಜಿಲೆಕಾಫಿಯಾರ್ ಉ:ಕೂಲಿಕೆಲಸ ಸಾ: ಖಂಡೇಲಾ ತಾ: ಸುದಾನಿ ಜಿಲ್ಲಾ: ಕಟೀಯಾರ್ ರಾಜ್ಯ: ಬಿಹಾರ ಹೀಗಿರುವಾಗ ನಾನು ಮತ್ತು ತಾಸಿರ್ ತಂದೆ ಮಗದುಮಸಾಬ ತಹಸೀಲ್ದಾರ, ಮಹ್ಮದ ಆನಿಷ್ ತಂದೆ ಖುದ್ದುಶ ಆಲಂ ಎಲ್ಲರೂ ಕೂಡಿಕೊಂಡು ಸುಮಾರು ಒಂದು ತಿಂಗಳಿಂದೆ ಕಾಚಾಪೂರ ಕ್ರಾಸ ಹತ್ತಿರ ಹೊಸದಾಗಿ ಕಂಕರ ಮಶಿನ್ ಕಟ್ಟಡ ಕಾಮಗಾರಿ ಕೆಲಸಕ್ಕೆಂದು ಬಂದಿದ್ದೇವು. ನಿನ್ನೆ ದಿನಾಂಕ:31/01/2021 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಅಡಿಗೆ ಸಾಮನುಗಳನ್ನು ತರುವ ಕುರಿತು ಮೊಟಾರ ಸೈಕಲ್ ನಂ.ಕೆಎ-28 ಇಎಕ್ಸ್-6279 ನೇದ್ದರಲ್ಲಿ ನಾವು ಮೂರು ಜನರು ಕುಳಿತುಕೊಂಡು ಕೆಂಭಾವಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ಮರಳಿ ನಮ್ಮ ಕ್ಯಾಂಪಿಗೆ ಬರುವ ಕುರಿತು ಮೂರು ಜನರು ಮೊಟಾರ ಸೈಕಲ್ ಮೇಲೆ ಬರುತ್ತಿದ್ದಾಗ ಮೊಟಾರ ಸೈಕಲನ್ನು ತಾಸಿರ್ ತಂದೆ ಮಗದುಮಸಾಬ ತಹಸೀಲ್ದಾರ, ನಡೆಸುತ್ತಿದ್ದಾಗ ನಾನು ಮತ್ತು ಮಹ್ಮದ ಆನಿಷ್ ತಂದೆ ಖುದ್ದುಶ ಆಲಂ ಇಬ್ಬರೂ ಹಿಂದೆ ಕುಳಿತು ಹೊರಟಾಗ ರಾತ್ರಿ 10 ಗಂಟೆಯ ಸುಮಾರಿಗೆ ಐನಾಪೂರ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ನಾವು ಕುಳಿತ ಮೊಟಾರ ಸೈಕಲ್ ಸವಾರನು ಮೊಟಾರ ಸೈಕಲನ್ನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಾವು ಅವನಿಗೆ ನಿದಾನವಾಗಿ ನಡೆಸು ರಾತ್ರಿ ಇದೆ ಅಂತಾ ಹೇಳಿದರೂ ಕೂಡಾ ಅತೀವೇಗವಾಗಿ ನಡೆಸುತ್ತಿದ್ದಾಗ ಅದೇ ಸಮಯಕ್ಕೆ ನಮ್ಮ ಮುಂದಿನಿಂದ ಒಂದು ಕಾರು ಬರುತ್ತಿದ್ದನು ನೋಡಿದ ನಮ್ಮ ಮೊಟಾರ ಸೈಕಲ ಚಾಲಕ ತಾಸಿರ್ ತಂದೆ ಮಗದುಮಸಾಬ ಈತನು ನಾವು ಕುಳಿತ ಮೊಟಾರ ಸೈಕಲನ್ನು ಒಮ್ಮಲೇ ರೋಡಿನ ಎಡಬಾಗಕ್ಕೆ ಕಟ್ ಮಾಡಿ ಮೊಟಾರ ಸೈಕಲ್ ನಿಯಂತ್ರಣ ತಪ್ಪಿ ರೋಡಿನ ಬಲಭಾಗಕ್ಕೆ ತೆಗೆದುಕೊಂಡಾಗ ಮೋಟರ್ ಸೈಕಲ ಕೊನೆಗೆ ಕುಳಿತವನು ಪುಟಿದು ಬಿದ್ದಿದ್ದು ಅಲ್ಲದೇ ನಾನು ಸಹ ರೋಡಿನ ಮೇಲೆ ಬಿದ್ದಿದ್ದರಿಂದ ನನ್ನ ಬಲಗಾಲ ಬೆರಳಿಗೆ, ಎರಡು ಕೈ ಬೆರಳುಗಳಿಗೆ ಅಲ್ಲದೇ ಬಲಗಾಲ ತೊಡೆಗೆ ತರಚಿದ ರಕ್ತಗಾಯಗಳಾಗಿ ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನನ್ನ ಹಿಂದೆ ಕುಳಿತ್ತಿದ್ದ ಮಹ್ಮದ ಆನಿಷ್ ತಂದೆ ಖುದ್ದುಶ ಆಲಂ ಈತನ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತಸ್ರಾವವಾಗಿದ್ದು ಅಲ್ಲದೇ ಬಲಗೈ ಮೊಳಕೈ ಹತ್ತಿರ ಭಾರೀ ಗುಪ್ತಗಾಯವಾಗಿ ಕೈ ಮುರಿದಂತಾಗಿದ್ದು, ಬಲಗಾಲಿನ ಚಪ್ಪೆ, ಬಲಕಪಾಳಕ್ಕೆ ಹಾಗು ಬಲಗಾಲಿಗೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನಮ್ಮ ಮೊಟಾರ ಸೈಕಲ್ ನಡೆಸುತ್ತಿದ್ದ ತಾಸಿರ್ ತಂದೆ ಮಗದುಮಸಾಬ ತಹಸೀಲ್ದಾರ ಅಪಘಾತಪಡಿಸಿದ ತಕ್ಷಣ ಅಲ್ಲಿಂದ ಓಡಿಹೋದನು. ನಂತರ ನಾನು ಅಂಬ್ಯುಲೆನ್ಸದಲ್ಲಿ ಉಪಚಾರ ಕುರಿತು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಕಾರಣ ನಮ್ಮ ಮೊಟಾರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಅಪಘಾತ ಪಡಿಸಿ ಓಡಿಹೋದ ತಾಸಿರ್ ತಂದೆ ಮಗದುಮಸಾಬ ತಹಸೀಲ್ದಾರ ಸಾ|| ಮುಧೋಳ ಈತನ ಮೇಲೆ ಕಾನೂನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:13/2021 ಕಲಂ:279,337,338,304(ಎ) ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 14/2021 ಕಲಂ: 87 ಕೆಪಿ ಆಕ್ಟ ;- ದಿನಾಂಕ: 01.02.2021 ರಂದು 06.30 ಎಎಮ್ ಕ್ಕೆ ಪಿರ್ಯಾದಿದಾರರು ರಾತ್ರಿ ಗಸ್ತ ಚೆಕ್ಕಿಂಗ್ ಕುರಿತು ಕೆಂಭಾವಿ ಪಟ್ಟಣದಲ್ಲಿದ್ದಾಗ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದ ಬಯಲು ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರಕಾರಿ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಸದರ ಬೈಚಬಾಳ ಗ್ರಾಮದ ಸಣ್ಣ ಹನುಮಾನ ದೇವರ ಗುಡಿಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿತರು ಜೂಜಾಟ ಆಡುವ ಬಗ್ಗೆ ಖಚಿತಪಡಿಸಿಕೊಂಡು 05.05 ಎಎಮ್ಕ್ಕೆ ದಾಳಿ ಮಾಡಿದ್ದು ದಾಳಿಯಲ್ಲಿ 02 ಜನ ಆರೋಪಿತರು ಸಿಕ್ಕಿದ್ದು ಮತ್ತು ಒಟ್ಟು 9870/- ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳು & 1 ಬರಕಾ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ಠಾಣೆಗೆ 06.30 ಎ.ಎಮ್ ಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು 04.30 ಪಿಎಮ್ ಕ್ಕೆ ಸದರಿ ವರದಿ ಆಧಾರದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 14/2021 ಕಲಂ 87 ಕೆಪಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ ಗುನ್ನೆ ನಂ :- ದಿನಾಂಕ 01/02/2020 ರಂದು ಮಧ್ಯಾಹ್ನ 1-00 ಪಿ.ಎಮ್ ಕ್ಕೆ ಆರೋಪಿತನು ಹೆಡಗಿಮದ್ರಿ ಗ್ರಾಮದಲ್ಲಿ ಇರುವ ತಳಕ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 490/ರೂ, ಒಂದು ಬಾಲಪೆನ್ನ, ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 23/2021 ಕಲಂ 365,149 ಐಪಿಸಿ;- ದಿನಾಂಕ 1-2-2021 ರಂದು ಅರ್ಜಿದಾರರಾದ ರಾಜು ತಂದೆ ಧಾರು ರಾಠೋಡ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಸ್ವಲಿಖಿತ ಅರ್ಜಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ನಮ್ಮ ತಂದೆಯಾದ ಧಾರು ತಂದೆ ರೇವುನಾಯ್ಕ ರಾಠೋಡ ಸಾ|| ಹೋತಪೇಠ ತಾಂಡಾ ಇವರು ದಿನಾಂಕ 30/1/2021 ರಂದು ಮುಂಜಾನೆ 9 ಗಂಟೆಗೆ ನಮ್ಮ ಮನೆಯಿಂದ ಕೋರ್ಟ ಮತ್ತು ದವಾಖಾನೆಗೆ ಹೋಗುತ್ತೇನೆ ಎಂದು ಹೋಗಿದ್ದು ದಿನಾಂಕ 30/1/2021 ರಂದು ಮಧ್ಯಾಹ್ನ 12.10 ಗಂಟೆಗೆ ನನ್ನ ತಂದೆ ನನಗೆ ಫೋನ ಮಾಡಿ ನಾನು ಶಹಾಪೂರ ನಗರದ ಕುಂಬಾರ ಓಣಿಯಲ್ಲಿ ಇದ್ದಾಗ 10 ಜನ ಬಂದು ಕ್ರೂಸರ್ ಜೀಪಿನಲ್ಲಿ ಬಂದು ನನಗೆ ಎತ್ತಿಕೊಂಡು ಹೋಗಿದ್ದಾರೆ ಎಂದು ಹೇಳಿ ಫೋನ ಕಟ್ ಮಾಡಿರುತ್ತಾನೆ. ಆ ದಿನದಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರೂ ನನ್ನ ತಂದೆಯವರ ಪತ್ತೆಯಾಗಿರುವುದಿಲ್ಲ. ಮತ್ತು ನನಗೆ ಕಿಶನ್ ಚಾಮನಾಳ ತಾಂಡಾ ಜಿಲ್ಲಾ ಪಂಚಾಯತ ಸದಸ್ಯರ ಮೇಲೆ ಸಂಶಯ ಇರುತ್ತದೆ. ಆದ್ದರಿಂದ ನನ್ನ ತಂದೆಯವರ ಅಪಹರಣದ ಬಗ್ಗೆ ಸೂಕ್ತ ತನಿಖೆ ಮಾಡಿ ನನ್ನ ತಂದೆಯವರ ಜೀವಕ್ಕೆ ಹಾನಿಯಾಗದಂತೆ ನೋಡಿಕೊಂಡು ಅಪಹರಣ ಮಾಡಿರುವವರ ವಿರುದ್ದ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ಅರ್ಜಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 23/2021 ಕಲಂ 365 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ :- 19/2021 ಕಲಂ: 379 ಐಪಿಸಿ;- ದಿನಾಂಕ: 01/02/2021 ರಂದು 12-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ(ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 01/02/2021 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ಮತ್ತು ಸೈದಪ್ಪ ಹೆಚ್.ಸಿ 34 ಯಾದಗಿರಿ ವೃತ್ತ ಕಛೇರಿ ಹಾಗೂ ಮಹೇಂದ್ರ ಪಿಸಿ 254 ಎಲ್ಲರೂ ಪೊಲೀಸ್ ಠಾಣೆಯಲ್ಲಿದ್ದಾಗ ಮಾನ್ಯ ಆರಕ್ಷಕ ವೃತ್ತ ನಿರೀಕ್ಷಕರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಬಂದಿದ್ದೇನಂದರೆ ವಡಗೇರಾ ಠಾಣಾ ವ್ಯಾಪ್ತಿಯ ಐಕೂರು ಗ್ರಾಮದ ಕೃಷ್ಣಾ ನದಿ ದಡದಿಂದ ಯಾರೋ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳನ್ನು ಟಿಪ್ಪರನಲ್ಲಿ ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ಮತ್ತು ಸೈದಪ್ಪ ಹೆಚ್.ಸಿ 34, ಮಹೇಂದ್ರ ಪಿಸಿ 254 ರವರೊಂದಿಗೆ ಖಾಸಗಿ ವಾಹನದಲ್ಲಿ ಹೊರಟು 11 ಎಎಮ್ ಸುಮಾರಿಗೆ ಹತ್ತಿಗೂಡುರು-ಸಂಗಮ ಮೇನ ರೋಡ ಐಕೂರು ಗ್ರಾಮದ ಹತ್ತಿರ ಹೋದಾಗ ಕೃಷ್ಣಾ ನದಿ ಕಡೆಯಿಂದ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವುದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರು ಕೂಡಿ ಸದರಿ ಟಿಪ್ಪರ ನಿಲ್ಲಿಸಿದಾಗ ಚಾಲಕನು ಟಿಪ್ಪರ ನಿಲ್ಲಿಸಿದನು. ಟಿಪ್ಪರ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಶಿವಪ್ಪ ತಂದೆ ಹಣಮಂತ ಸಾ:ರಸ್ತಾಪೂರ ಎಂದು ಹೇಳಿದನು. ನಾವು ಸದರಿ ಟಿಪ್ಪರದ ನಂಬರ ನೋಡುತ್ತಿದ್ದಾಗ ಟಿಪ್ಪರ ಚಾಲಕನು ಕೆಳಗೆ ಇಳಿದು ಓಡಿ ಹೋದನು. ಸದರಿ ಟಿಪ್ಪರ ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಟಿಪ್ಪರ ನಂಬರ ನೋಡಲಾಗಿ ನಂ. ಕೆಎ 32 ಡಿ 5600 ಇರುತ್ತದೆ. ಸದರಿ ಟಿಪ್ಪರನಲ್ಲಿ ಮರಳು ತುಂಬಿದ್ದು, ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದು, ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಕುರಿತು 12-30 ಪಿಎಮ್ ಕ್ಕೆ ಟಿಪ್ಪರದೊಂದಿಗೆ ಠಾಣೆಗೆ ಬಂದು ನಿಮಗೆ ದೂರು ನೀಡುತ್ತಿದ್ದು, ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 19/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

Last Updated: 02-02-2021 10:45 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080