ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 25-09-2021

ಯಾದಗಿರಿ ಪೊಲೀಸ್ ಠಾಣೆ


         ಗುನ್ನೆ ನಂ: 99/2021 ಕಲಂ 78(3) ಕೆ.ಪಿ ಎಕ್ಟ್ :- ದಿನಾಂಕ; 24/09/2021 ರಂದು 2-15 ಪಿಎಮ್ ಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.24/09/2021 ರಂದು 10-15 ಎಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿನಗರ ತಾಂಡದ ಕ್ರಾಸದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 2-00 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 2-15 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.99/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
   
ಸೈದಾಪೂರ ಪೊಲೀಸ್ ಠಾಣೆ


 ಗುನ್ನೆ ನಂ. 145/2021 ಕಲಂ. 498(ಎ),323,504,506,ಸಂಗಡ 34 ಐಪಿಸಿ & ಕಲಂ 4 ವರದಕ್ಷಿಣೆ ನೀಷೇದ ಕಾಯ್ದೆ ;- ದಿನಾಂಕ: 24-09-2021 ರಂದು ಸಾಯಂಕಾಲ 05-00 ಗಂಟೆಗೆ ಪಿರ್ಯಾಧಿ ಠಾನೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆವೆನೆಂದರೆ ನಾನು ಸುಮಾರು ಒಂದು ವರ್ಷದಿಂದೆ ಮಲ್ಲಪ್ಪ ಈತನ ಸಂಗಡ ಮದುವೆಯಾಗಿದ್ದು ಮದುವೆಯಾದ ನಂತರ ನಾವು ಬೆಂಗಳೂರಿಗೆ ದುಡಿಯಲು ಹೋಗಿದ್ದು ಅಲ್ಲಿ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ದಿನಾಲು ನನಗೆ ದೈಹಿಕ ಮತ್ತು ಮಾನಸಿಕ ಮತ್ತು ವರದಕ್ಷಿಣಿ ಕೀರುಕುಳ ನೀಡುತಿದ್ದರು.  ದಿನಾಂಕ: 26-08-2021 ರಂದು ಬೆಳಿಗ್ಗೆ ನಾನು ಟೈಲರಿಂಗ ಕೆಲಸಕ್ಕೆ ಹೋಗಿ ಸಾಯಂಕಾಲ ಮರಳಿ ಮನೆಗೆ ಬಂದು ನಾನು ಮನೆಯಲ್ಲಿ ಅಡಿಗೆ ಮಾಡುತ್ತಿರುವಾಗ ಸಾಯಂಕಾಲ 07-00 ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಪ್ಪ ಈತನು ಲೇ ಸೂಳೆ ಮಗಳೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ  ನಿನ್ನ ಮದುವೆ ಮಾಡಿಕೊಂಡಿದ್ದರಿಂದಲೆ ನಮ್ಮ ಮನೆ ಹಾಳಾಯಿತು ಸೂಳೆ ಮಗಳೆ ನಿನ್ನ ಕಾಲಗುಣ ಸರಿಯಾಗಿಲ್ಲ ಅಂತಾ ಬೈದು ಕೈಯಿಂದ ಕಪಾಳಕ್ಕೆ ಹೊಡೆದು ಲೇ ಸೂಳೆ ಮಗಳೆ ನಮ್ಮ ಮನೆ ಬಿಟ್ಟು ಹೋಗು ಮಗಳೆ ಇಲ್ಲಂದರೆ ನಿನಗೆ ಪೆಟ್ರೋಲ್ ಹಾಕಿ ಸುಟ್ಟು ಬೂದಿ ಮಾಡುತ್ತೇನೆ ಮಗಳೆ ಅಂತಾ ಜೀವದ ಬೇದರಿಕೆ ಹಾಕಿ ಮನೆ ಬಿಟ್ಟು ಹೋಗಲೆ ಅಂತಾ ಬೈದಾಗ ನನ್ನ ಮಾವ ಹಣಮಂತ ಈತನು ಈ ಸೂಳೆಯಿಂದ ನಮಗೆ ಈ ಗತಿ ಬಂದಿದೆ ಇವಳಿಗೆ ಮನೆಯಲ್ಲಿ ಇಟ್ಟುಕೊಳ್ಳಬೇಡಿರಿ ಮನೆ ಬಿಟ್ಟು ಓಡಿಸಿಬಿಡರಿ ಅಂತಾ ಬೇದರಿಕೆ ಹಾಕಿದನು ನನ್ನ ಅತ್ತೆ ತಾಯಮ್ಮ ಈಕೆಯು ಲೇ ಸೂಳೆ ನೀನು ನಮ್ಮ ಮನೆಗೆ ಒಪ್ಪುವಂತ ಹೆಣ್ಣುಮಗಳು ಅಲ್ಲಾ ಅಂತಾ ಕೂದಲು ಹಿಡಿದು ಎಳದಾಡಿ ಕೈಯಿಂದ ಬೆನ್ನಿಗೆ ಹೊಡೆದು ನಿನು ಒಂದು ದಿನವಾದರು ನಮ್ಮ ಮನೆಯಲ್ಲಿ ಸರಿಯಾಗಿ ಬದುಕು ಮಾಡಿದೆನಲೇ ಸೂಳೆ ಅಂತಾ ಬೈದಿರುತ್ತಾಳೆ, ನನ್ನ ಮೈದುನ ರವಿ ಈತನು ಲೇ ಸೂಳೆ ನಮ್ಮ ಮನೆ ಬಿಟ್ಟು ಹೋಗು ಇಲ್ಲಂದರೆ ನಿನಗೆ ಖಲಾಸ ಮಾಡುತ್ತೇವೆ ನೋಡು ಅಂತಾ ಜೀವದ ಭಯ ಹಾಕಿದನು, ನನ್ನ ಗಂಡ ನನಗೆ ನಿನ್ನಂದಲೆ ನಮ್ಮ ಮನೆಗೆ ಸಾಲ ಜಾಸ್ತಿ ಆಗಿದೆ. ನಿಮ್ಮಪ್ಪನ ಮನೆಯಿಂದ ಐದು ಲಕ್ಷ (5,00000=00) ಹಣ ತೆಗೆದುಕೊಂಡು ಬಂದರಷ್ಟೆ ನಮ್ಮ ಮನೆಯಲ್ಲಿ ಇರಬೇಕು ಇಲ್ಲಂದರೆ ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಮಾನಸಿಕ ಮತ್ತು ದೈಹಿಕ ಮತ್ತು ವರದಕ್ಷಿಣೆ ಹಿಂಸೆ ನೀಡಿರುತ್ತಾರೆ ಅಂತಾ ಪಿಯಾಧಿ ಸಾರಂಶ.
 
                                                                                        ವಡಗೇರಾ ಪೊಲೀಸ್ ಠಾಣೆ


ಗುನ್ನೆ ನಂ. 121/2021 ಕಲಂ:279, 338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಎಕ್ಟ್;- ದಿನಾಂಕ:24/09/2021 ರಂದು 2-15 ಪಿಎಮ್ ಕ್ಕೆ ಶ್ರೀ ಖಾಜಾಸಾಬ ತಂದೆ ಕಾಸಿಂಸಾಬ ಪೂಜಾರಿ, ವ:22, ಜಾ:ಮುಸ್ಲಿಂ, ಉ:ಡ್ರೈವರ ಸಾ:ಕ್ಯಾತ್ನಳ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನಂದರೆ ನಾನು ಯಾದಗಿರಿಯಲ್ಲಿ ಕಾರ ಡ್ರೈವಿಂಗ್ ಮಾಡಿಕೊಂಡಿದ್ದು, ದಿನಾಲೂ ನಮ್ಮೂರಿಂದ ಯಾದಗಿರಿಗೆ ಹೋಗಿ ಬರುತ್ತಿರುತ್ತೇನೆ. ಹೀಗಿದ್ದು ದಿನಾಂಕ:22/09/2021 ರಂದು ಬೆಳಗ್ಗೆ ನಮ್ಮ ತಂದೆಯಾದ ಕಾಸಿಂಸಾಬ ತಂದೆ ಖಾಜಾಸಾಬ ಈತನು ತಾನು ಯಾದಗಿರಿಗೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಮೋಟರ್ ಸೈಕಲ್ ನಂ. ಕೆಎ 05 ಕ್ಯೂಯು 1410 ನೇದ್ದನ್ನು ತೆಗೆದುಕೊಂಡು ಹೋದನು. ನಂತರ ನಾನು ಯಥಾ ಪ್ರಕಾರ ಕಾರ್ ಡ್ರೈವಿಂಗ ಮಾಡಲು ಯಾದಗಿರಿಗೆ ಹೋದೆನು. ಸಾಯಂಕಾಲ 7-15 ಗಂಟೆ ಸುಮಾರಿಗೆ ನಾನು ಯಾದಗಿರಿಯಲ್ಲಿದ್ದಾಗ ನಮ್ಮೂರ ಮಂಜುರಸಾಬ ಚೌದ್ರಿ ಎಂಬುವವರು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಖಾನಾಪೂರದಿಂದ ಕ್ಯಾತ್ನಳಕ್ಕೆ ಹೋಗುತ್ತಿದ್ದೆನು. ಖಾನಾಪೂರ-ಕ್ಯಾತ್ನಳ ರೋಡ ಸಣ್ಣ ದಗರ್ಾದ ಹತ್ತಿರ ನಿಮ್ಮ ತಂದೆಯು ಸಂಜೆ 7 ಗಂಟೆ ಸುಮಾರಿಗೆ ತನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ಯಾವುದೋ ಒಂದು ವಾಹನ ಎದುರುಗಡೆಯಿಂದ ವೇಗವಾಗಿ ಬಂದು ನಿಮ್ಮ ತಂದೆಗೆ ಡಿಕ್ಕಿಪಡಿಸಿ, ನಿಲ್ಲಿಸದೆ ವೇಗವಾಗಿ ಹೊಯಿತು. ನಾನು ನಿಮ್ಮ ತಂದೆಗೆ ಸಮೀಪ ಹೋಗಿ ನೋಡಿದಾಗ ಅಪಘಾತದಲ್ಲಿ ನಿಮ್ಮ ತಂದೆಯು ತೆಲೆಗೆ, ಮುಖಕ್ಕೆ ಮತ್ತು ಅಲ್ಲಲ್ಲಿ ಭಾರಿ ಗಾಯಗೊಂಡಿರುತ್ತಾನೆ ಎಂದು ಹೇಳಿದನು. ಆಗ ನಾನು 108 ಅಂಬ್ಯುಲೇನ್ಸಗೆ ಫೊನ ಮಾಡಿ ಕರೆಸು ಎಂದು ಹೇಳಿದಾಗ ಅವನು 108 ಅಂಬ್ಯುಲೇನ್ಸ ಕರೆಸಿ, ನಮ್ಮ ತಂದೆಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾನೆ. ನಾನು ಸರಕಾರಿ ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಲಾಗಿ ಅಪಘಾತದಲ್ಲಿ ನಮ್ಮ ತಂದೆಯ ತೆಲೆಗೆ ಭಾರಿ ರಕ್ತಗಾಯ, ಮುಖಕ್ಕೆ ತರಚಿದ ಗಾಯ ಮತ್ತು ಎಡ ಮೊಳಕಾಲು ಮತ್ತು ಎಡ ಮೊಳಕೈಗೆ ತರಚಿದ ಗಾಯಗಳಾಗಿದ್ದವು. ನಮ್ಮ ತಂದೆಯು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ಮಂಜೂರಸಾಬ ಚೌದ್ರಿ ಈತನಿಗೆ ಕೇಳಿದಾಗ ಅವನು ಹೇಳಿದ್ದೇನಂದರೆ ನಾನು ಖಾನಾಪೂರದಲ್ಲಿ ಕೆಲಸ ಮುಗಿಸಿಕೊಂಡು ನನ್ನ ಮೋಟರ್ ಸೈಕಲ್ ಮೇಲೆ ಮರಳಿ ಕ್ಯಾತ್ನಳಕ್ಕೆ ಹೋಗುತ್ತಿದ್ದೇನು. ಸಂಜೆ 7 ಗಂಟೆ ಸುಮಾರಿಗೆ ಖಾನಾಪೂರ-ಕ್ಯಾತ್ನಳ ರೋಡ ಸಣ್ಣ ದಗರ್ಾದ ಹತ್ತಿರ ನಿಮ್ಮ ತಂದೆಯು ನನಗಿಂತ ಸ್ವಲ್ಪ ಮುಂದೆ ತನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಂದೆಗೆ ಡಿಕ್ಕಿಪಡಿಸಿ, ತನ್ನ ವಾಹನವನ್ನು ನಿಲ್ಲಿಸದೆ ಹೋದನು. ನಾನು ಸದರಿ ವಾಹನ ಮತ್ತು ಚಾಲಕನಿಗೆ ನೋಡಿದಲ್ಲಿ ಗುರುತಿಸುತ್ತೇನೆ ಎಂದು ಹೇಳಿದನು. ನಂತರ ನಾನು ಸಮೀಪ ಹೋಗಿ ನಿಮ್ಮ ತಂದೆಗೆ ನೋಡಿದಾಗ ಭಾರಿ ಗಾಯಗೊಂಡು ನರಳಾಡುತ್ತಿದ್ದದ್ದನ್ನು ನೋಡಿ ನಿಮಗೆ ಫೋನ ಮಾಡಿ ಹೇಳಿದೆನು ಅಂತಾ ಅಂದನು. ನಮ್ಮ ತಂದೆಯು ಯಾದಗಿರಿಯಿಂದ ಸಂತೆ ಮಾಡಿಕೊಂಡು ವಾಪಸ ನಮ್ಮೂರಿಗೆ ಹೋಗುತ್ತಿದ್ದಾಗ ಖಾನಾಪೂರ-ಕ್ಯಾತ್ನಳ ರೋಡ ಸಣ್ಣ ದಗರ್ಾದ ಹತ್ತಿರ ನಮ್ಮ ತಂದೆಯು ತನ್ನ ಮೋಟರ್ ಸೈಕಲ್ ನಂ. ಕೆಎ 05 ಕ್ಯೂಯು 1410 ನೇದ್ದರ ಮೇಲೆ ನಿಧಾನವಾಗಿ ತನ್ನ ಪಾಡಿಗೆ ತಾನು ಹೋಗುತ್ತಿದ್ದವನಿಗೆ ಯಾವುದೋ ಒಂದು ವಾಹನದ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ, ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ನೀಡಿದಾಗ ವಡಗೇರಾ ಠಾಣೆಯ ಪೊಲೀಸರು ಸದರಿ ಎಮ್.ಎಲ್.ಸಿ ವಿಚಾರಣೆ ಮಾಡಲು ಸರಕಾರಿ ಆಸ್ಪತ್ರೆಗೆ ಬಂದಿರುತ್ತಾರೆ. ಆಗ ನಾನು ನಮ್ಮ ತಂದೆಯವರಿಗೆ ಹೆಚ್ಚಿನ ಉಪಚಾರ ಕುರಿತು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ಹೀಗಾಗಿ ನಮ್ಮ ತಂದೆಯವರಿಗೆ ಬೇರೆ ಆಸ್ಪತ್ರೆಗೆ ದಾಖಲಿಸಿ, ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇನೆ ಎಂದು ಹೇಳಿರುತ್ತೇನೆ.

ಹುಣಸಗಿ ಪೊಲೀಸ್ ಠಾಣೆ


ಗುನ್ನೆ ನಂ. 69/2021 ಕಲಂ. 279, 337 338 304(ಎ) ಐಪಿಸಿ;- ದಿನಾಂಕ:23/09/2021 ರಂದು ಬೆಳಿಗ್ಗೆ 8.00 ಗಂಟೆಗೆ ಫಿರ್ಯಾದಿಯ ಅಣ್ಣ ದೇವಿಂದ್ರಪ್ಪ (ಆರೋಪಿ) ಈತನು ತನ್ನ ಹೆಂಡತಿಯಾದ ಲಕ್ಷ್ಮೀಬಾಯಿ ಇವಳಿಗೆ ತಾನು ಚಲಾಯಿಸುವ ಮೋಟಾರ್ ಸೈಕಲ್ ನಂ: ಕೆಎ-33 ಎಸ್-5860 ನೇದ್ದರ ಮೇಲೆ ಹಿಂದೆ ಕೂಡಿಸಿಕೊಂಡು ಇಸ್ಲಾಂಪೂರದಿಂದ ಗೋವಾಕ್ಕೆ ಹೋಗಲು ಹೊರಟಾಗ ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಆರೋಫಿತನು ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಗುಳಬಾಳ ಕ್ರಾಸ್ ದಾಟಿ ತಾಳಿಕೋಟಿ ಕಡೆಗೆ ಹೊರಟಾಗ, ಎದುರುಗಡೆ ಕುದುರೆ ಅಡ್ಡ ಬಂದಾಗ ಕುದುರೆಗೆ ತಪ್ಪಿಸಲು ಹೋಗಿ ಅದೇವೇಗದಲ್ಲಿ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದಿದ್ದು, ಲಕ್ಷ್ಮೀಬಾಯಿ ಇವಳಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಬೇವುಸಾಗಿದ್ದು, ಆರೋಪಿತನಿಗೂ ಸಹ ಕೈಕಾಲುಗಳಿಗೆ ತರಚಿದ ರಕ್ತಗಾಯಗಳಾಗಿದ್ದು, ಫಿರ್ಯಾದಿಯು ವಿಷಯ ತಿಳಿದು ಫಿರ್ಯಾದಿಯು ತನ್ನ ಅಳಿಯ ಮೌನೇಶನೊಂದಿಗೆ ಅಲ್ಲಿಗೆ ಹೋಗಿ ನೋಡಿ ಲಕ್ಷ್ಮೀಬಾಯಿಗೆ & ಆರೋಪಿತನಿಗೆ ಅಂಬುಲೆನ್ಸ್ದಲ್ಲಿ ಹಾಕಿಕೋಂಡು ತಾಳಿಕೋಟಿ ಆಸ್ಪತ್ರೆಗೆ ತೋರಿಸಿ ಅಲ್ಲಿಂದ ವಿಜಯಪೂರ ಸಂಜೀವಿನಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿ ಠಾಣೆಗೆ ಬಂದು ದೂರು ನೀಡಿದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
     ನಂತರ ಇಂದು ದಿನಾಂಕ:24/09/2021 ರಂದು ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಠಾಣೆಗೆ ಬಂದು ಪುರವಣಿ ಹೇಳಿಕೆ ಕೊಟ್ಟಿದ್ದು ಏನೆಂದರೆ, ದಿನಾಂಕ:23/09/2021 ರಂದು ಬೆಳಿಗ್ಗೆ 8.30 ಗಂಟೆಯ ಸುಮಾರಿಗೆ ಆದ ಅಪಘಾತದಲ್ಲಿ ಗಾಯಹೊಂದಿದ ನಮ್ಮ ಅಣ್ಣನ ಹೆಂಡತಿಯಾದ ಲಕ್ಷ್ಮೀಬಾಯಿ ಗಂಡ ದೇವಿಂದ್ರಪ್ಪ ಬಪ್ಪರಗಿ ವಯ:40 ವರ್ಷ ಇವರಿಗೆ ವಿಜಯಪೂರ ಸಂಜೀವಿನ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕ ಮಾಡಿದ್ದು, ಲಕ್ಷ್ಮೀಬಾಯಿ ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ:24/09/2021 ರಂದು ಬೆಳಿಗ್ಗೆ 6.10 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮಾನ್ಯರು ಮುಂದಿನ ಕಾನೂನ ಕ್ರಮ ಕೈಕೊಳ್ಳಬೇಕಾಗಿ ವಿನಂತಿ ಅಂತಾ ಇತ್ಯಾದಿ ಪುರವಣಿ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇರುತ್ತದೆ ಅಂತಾ ಪ್ರಕರಣದಲ್ಲಿ ಈ ಶೀಘ್ರವರದಿಯನ್ನು ಸಲ್ಲಿಸಲಾಗುತ್ತಿದೆ.
        


ಹುಣಸಗಿ ಪೊಲೀಸ ಠಾಣೆ


ಗುನ್ನೆ ನಂ. 72/2021 ಕಲಂ 279, 304(ಎ) ಐಪಿಸಿ ;- ದಿನಾಂಕ:24/09/2021 ರಂದು ಮೃತನು ಮೊಟಾರ್ ಸೈಕಲ್ ನಂ:ಕೆಎ-33 ವಾಯ್-9310 ನೇದ್ದರ ಮೇಲೆ ಗೆದ್ದಲಮರಿಯಿಂದ ಹುಣಸಗಿಗೆ ಬರಲು ಹೊರಟು ಹುಣಸಗಿ-ನಾರಾಯಣಪೂರ ರೋಡಿನ ಮೇಲೆ ಹೊರಟಾಗ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಜೋರಾಗಿ ಚಲಾಯಿಸಿ ಬಲಶೆಟ್ಟಿಹಾಳ ಸೀಮಾಂತರ ತೋಳದಿನ್ನ ಪೂಲಿನ ಮೇಲೆ ನಿಂತ್ರಣ ತಪ್ಪಿ ಸಿಮೆಂಟಿನ ಕಂಬಕ್ಕೆ ಮದ್ಯಾಹ್ನ 12.30 ಗಂಟೆಯ ಸುಮಾರಿಗೆ  ಜೊರಾಗಿ ಗುದ್ದಿ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಮೃತನ ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು, ಎಡಕೈಗೆ ರಕ್ತಗಾಯವಾಗಿದ್ದು, ಎಡಕಿವಿಗೆ ರಕ್ತಗಾಯವಾಗಿದ್ದುದ್ದು, ಸದರಿಯವನಿಗೆ ಇಲಾಜು ಕುರಿತು ಹುಣಸಗಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮೋಚಾರ ಮಾಡಿಸಿ ಹೆಚ್ಚಿನ ಉಪಚಾರಕ್ಕಾಗಿ ವಿಜಯಪೂರ ಆಸ್ಪತ್ರೆಗೆ ಕರೆದುಕೊಂಡು ಹೊರಟಾಗ ಬಸವನಬಾಗೇವಾಡಿ ದಾಟಿದ ಮೇಲೆ ಮಾರ್ಗ ಮದ್ಯ ಸಾಯಂಕಾಲ 5.00 ಗಂಟೆಗೆ ಮೃತಪಟ್ಟ ಬಗ್ಗೆ ಅಪರಾಧ.    
 

ಇತ್ತೀಚಿನ ನವೀಕರಣ​ : 25-09-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080