ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 11-06-2021

                                                                             ಮಹಿಳಾ ಪೊಲೀಸ್ ಠಾಣೆ
          ಗುನ್ನೆ ನಂ. 38/2021 ಕಲಂ: 323, 324, 143, 147, 354, 504, 506 ಸಂ/149 ಐ.ಪಿ.ಸಿ, ದಿನಾಂಕ: 10.06.2021 ರಂದು ಸಂಜೆ 4:30 ಪಿ ಎಮ್ ಕ್ಕೆ ಪಿರ್ಯಾದಿ ಶ್ರೀಮತಿ ಲಲಿತಮ್ಮ ಗಂಡ ಸಿದ್ರಾಮ್ ರೆಡ್ಡಿ ಮಾಲಿ ಪಾಟೀಲ್ ವಯಾ-38 ವರ್ಷ ಜಾತಿ-ಲಿಂಗಾಯತ ಉ-ಮನೆ ಕೆಲಸ ಸಾ-ಬೇನಕನಳ್ಳಿ ಕೆ ತಾ-ವಡಗೇರಾ ಜಿ-ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ ಸಾರಂಶವೇನೆಂದರೆ ನನಗೆ 22 ವರ್ಷಗಳ ಹಿಂದೆ ಸಿದ್ರಾಮ್ ರೆಡ್ಡಿ ತಂದೆ ಮಲ್ಲಣ್ಣಗೌಡ @ ಮಲ್ಲರೆಡ್ಡಿ ಮಾಲಿ ಪಾಟೀಲ್ ಈತನೊಂದಿಗೆ ಮದುವೆಯಾಗಿದ್ದು ನಮ್ಮ ದಾಂಪತ್ಯ ಜೀವನದಲ್ಲಿ 2 ಜನ ಹೆಣ್ಣು ಮಕ್ಕಳಿರುತ್ತಾರೆ. ನಾನು ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಯಲ್ಲಿಯೇ ಇರುತ್ತೇನೆ. 3 ತಿಂಗಳ ಹಿಂದೆ ನಾನು ಮತ್ತು ನನ್ನ ತಂದೆ ಪರ್ವತರೆಡ್ಡಿ ತಾಯಿ ಎಂಕಮ್ಮ ಎಲ್ಲರೂ ಕೂಡಿ ನನ್ನ ಗಂಡನ ಮನೆಯಾದ ಬೇನಕನಳ್ಳಿ ಗ್ರಾಮದಲ್ಲಿಯೇ ಇದ್ದು ಜೀವನ ಮಾಡುತ್ತಿದ್ದೇನೆ.
ಹೀಗಿದ್ದು ದಿನಾಂಕ 09.06.2021 ರಂದು ಮದ್ಯಾಹ್ನ 12:00 ಗಂಟೆಗೆ ನನ್ನ ಗಂಡನಾದ ಸಿದ್ರಾಮ್ ರೆಡ್ಡಿ ಮತ್ತು 5 ಜನ ಹಮಾಲರು ಸೇರಿ ಅಕ್ರಮಾಕೂಟವನ್ನು ರಚಿಸಿಕೊಂಡು ಏಕಾಏಕಿ ಒಂದು ಲಾರಿ ತೆಗೆದುಕೊಂಡು ಬಂದು ನಾನು ಬೆಳೆದಿರುವ ಭತ್ತದ ಬೆಳೆಯನ್ನು ತೆಗೆದುಕೊಂಡು ಹೋಗಲು ಬಂದಿರುತ್ತಾರೆ. ಆಗ ನಾನು ನನ್ನ ಗಂಡನಿಗೆ ಯಾಕೆ ಬೆಳೆ ತೆಗೆದುಕೊಂಡು ಹೋಗುತ್ತಿಯಾ ನಾನು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಳೆಯನ್ನು ಹಾಕಿರುತ್ತೇನೆ ಅಂತಾ ಕೇಳಿದ್ದಕ್ಕೆ ನನಗೆ ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈಯನ್ನು ತಲೆ ಮೇಲೆ ಮಾಡಿದ್ದು ನನ್ನ ಎಡಗೈಗೆ ತರಚಿತ ರಕ್ತದ ಗಾಯವಾಗಿರುತ್ತದೆ. ನನ್ನ ಗಂಡ ಸಿದ್ರಾಮ್ ರೆಡ್ಡಿ ಈತನು ನನಗೆ ಕೂದಲು ಹಿಡಿದು ಎಳೆದಾಡಿ ಹೊಡೆಬಡೆ ಮಾಡಿದ್ದು ಅಲ್ಲದೇ ಸಾರ್ವಜನಿಕರ ಸ್ಥಳದಲ್ಲಿ ನನ್ನ ಸಿರೆ ಹಿಡಿದು ಎಳೆದಾಡಿ ನನಗೆ ಅಪಮಾನ ಮಾಡಿರುತ್ತಾನೆ. ಈ ಜಗಳವನ್ನು ಬಿಡಿಸಲು ಬಂದ ನನ್ನ ತಂದೆ ಪರ್ವತರೆಡ್ಡಿ ತಾಯಿ ಎಂಕಮ್ಮ ಇವರಿಗೂ ಸಹ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿರುತ್ತಾನೆ. ಹಾಗೂ ನನ್ನ ಗಂಡನ ಜೊತೆಯಲ್ಲಿ ಲಾರಿ ಚಾಲಕ ಮತ್ತು 5 ಜನ ಹಮಾಲರು ಸೇರಿ ನನಗೆ ಹೊಡೆಬಡೆ ಮಾಡಿರುತ್ತಾರೆ. ಆದಕಾರಣ ನನಗೆ ಮತ್ತು ನನ್ನ ತಂದೆ ಪರ್ವತರೆಡ್ಡಿ ತಾಯಿ ಎಂಕಮ್ಮ ಎಲ್ಲರಿಗೂ ಹೊಡೆಬಡೆ ಮಾಡಿದ ನನ್ನ ಗಂಡ ಸಿದ್ರಾಮ್ ರೆಡ್ಡಿ ಮಾಲಿ ಪಾಟೀಲ್ ಸಾ-ಬೇನಕನಳ್ಳಿ ಮತ್ತು ಲಾರಿ ಚಾಲಕ ಹಾಗೂ 5 ಜನ ಇತರರು ಸೇರಿ ನನಗೆ ಮಾನಸಿಕವಾಗಿ ಹಿಂಸೆ ನೀಡಿ ಅವಾಚ್ಯವಾಗಿ ಬೈದು ಪ್ರಾಣ ಬೆದರಿಕೆ ಹಾಕಿದವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ದೂರಿನ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

                                                                         ಗೋಗಿ ಪೊಲೀಸ್ ಠಾಣೆ
          ಗುನ್ನೆ ನಂ. 60/2021 ಕಲಂ: 447, 504, 506 ಸಂ: 149 ಐಪಿಸಿ ದಿನಾಂಕ: 10/06/2021 ರಂದು 11.30 ಎಎಂ ಕ್ಕೆ ಶ್ರೀ. ಟೋಪು ತಂದೆ ಕಸನು ಜಾದವ ವಯಾ:65 ವರ್ಷ ಉ: ಒಕ್ಕಲುತನ ಜಾ: ಲಂಬಾಣಿ ಸಾ: ಹೊಸ್ಕೇರಾ ಬಾಂಗ್ಲಾ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣೆಗೆ ಬಂದು ಲಿಖಿತ ದೂರು ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಂಶ ಏನಂದರೆ, ನಾನು ಹೋಸ್ಕೇರಾ ಸೀಮಾಂತರದಲ್ಲಿಯ ಹೊಲ ಸವರ್ೇ ನಂ: 223 ರಲ್ಲಿ 03 ಎಕರೆ ಜಮೀನಿನ ಸಾಗುವಳಿದಾರ ಆಗಿರುತ್ತೇನೆ. ನನ್ನ ಈ ಜಮೀನು ಒತ್ತುವರಿ ಆಗಿದ್ದರಿಂದ ನಾನು ಸವರ್ೇ ಮಾಡಿಸಿಕೊಂಡಿರುತ್ತೇನೆ. ಆದರೆ, ದಿನಾಂಕ: 09/06/2021 ರಂದು ನಮ್ಮ ಹೊಸ್ಕೇರಾ ಗ್ರಾಮದ ಮರೆಪ್ಪ ತಂದೆ ನಾಗಪ್ಪ ಪಟೇಲರ ಈತನು ದಬ್ಬಾಳಿಕೆ ಮಾಡಿ ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿದ್ದಾನೆ ಅಂತಾ ಗೊತ್ತಾಗಿ ನಾನು ಮತ್ತು ನನ್ನ ಮಕ್ಕಳಾದ 1) ಮಾರುತಿ ತಂದೆ ಟೋಪು ಜಾಧವ 2) ದೇವರಾಜ ತಂದೆ ಟೋಪು ಜಾಧವ ನೇದ್ದವರು ಕೂಡಿ 02.00 ಪಿಎಂ ಸುಮಾರಿಗೆ ನಮ್ಮ ಹೊಲಕ್ಕೆ ಹೊಗಿ ನೋಡಲಾಗಿ 1) ಮರೆಪ್ಪ ತಂದೆ ನಾಗಪ್ಪ ಪಟೇಲ 2) ನಾಗಮ್ಮ ಗಂಡ ಮರೆಪ್ಪ ಪಟೇಲ 3) ಸುರೇಶ ತಂದೆ ಮರೆಪ್ಪ ಪಟೇಲ 4) ರೇಣಮ್ಮ ಗಂಡ ಸರೆಶ ಪಟೇಲ 5) ಭಿಮಣ್ಣ ತಂದೆ ಮರೆಪ್ಪ ಪಟೇಲ 6) ಪರಶುರಾಮ ತಂದೆ ಮರೆಪ್ಪ ಪಟೇಲ 7) ನಾಗರಾಜ ತಂದೆ ಮರೆಪಪ ಪಟೇಲ ಎಲ್ಲರು ಜಾ: ಬೇಡರ ಸಾ: ಹೋಸ್ಕೇರಾ ಇವರೆಲ್ಲರೂ ಕೂಡಿ ನಮ್ಮ ಸವರ್ೇ ನಂ: 223 ರಲ್ಲಿ 03 ಎಕರೆ ಜಮೀನಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ (ನೇಗಿಲು) ಗಳೆ ಹೊಡೆದಿದ್ದರು, ನಾವು ನಮ್ಮ ಹೊಲದಲ್ಲಿ ಯಾಕೆ ಗಳೆ (ನೇಗಿಲು) ಹೊಡೆದಿದ್ದರೀ ಅಂತಾ ಕೇಳಿದರೆ ಎಲ್ಲರೂ ಕೂಡಿ ಅವಾಚ್ಯವಾಗಿ ಬೈಯುತ್ತಾ ಸೂಳೆ ಮಕ್ಕಳೇ ಇಲ್ಲಿ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಆಗ ಶಾಂತಿಬಾಯಿ ಗಂಡ ವೆಂಕಟೇಶ ರಾಠೋಡ ಮತ್ತು ಸುಸಲಾಬಾಯಿ ಗಂಡ ರೇಖು ಚವ್ಹಾಣ ಇವರು ನೋಡಿ ನಮಗೆ ಅವರೊಂದಿಗೆ ಮಾತಿಗೆ ಮಾತು ಬೇಳಸಬೇಡರಿ ಅಂತಾ ನಮಗೆ ಮನೆಗೆ ಕರೆದುಕೊಂಡು ಬಂದರು, ಇಲ್ಲದಿದ್ದರೆ ಸದರಿಯವರು ನಮಗೆ ಹೊಡೆಯುತ್ತಿದ್ದರು. ನಾನು ಸರಕಾರದಿಂದ ನನ್ನ ಹೊಲವನ್ನು ಸವರ್ೇ ಮಾಡಿಸಿ ಹದ್ದು ಬಂದಿ ಮಾಡಿಸಿಕೊಂಡು ಮಾನ್ಯ ತಹಸೀಲ್ದಾರರು ಶಹಾಪುರ ರವರ ಆದೇಶದಂತೆ ನನ್ನ ಹೊಲ ನಾನು ಸಾಗುವಳಿ ಮಾಡಿಕೊಳ್ಳುತ್ತಿದ್ದರು, ಆರೋಪಿತರೆಲ್ಲರೂ ನನ್ನ ಹೊಲದಲ್ಲಿ ಅಕ್ರಮ ಪ್ರವೆಶ ಮಾಡಿ ಗಳೆ ಹೊಡೆದು ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿ. ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


                                                                               ಗೋಗಿ ಪೊಲೀಸ್ ಠಾಣೆ
             ಗುನ್ನೆ ನಂ. 61/2021 ಕಲಂ: 498(ಎ), 323, 504, 506 ಸಂಗಡ 34 ಐಪಿಸಿ ದಿನಾಂಕ: 10/06/2021 ರಂದು 1-30 ಪಿಎಮ್ ಕ್ಕೆ ಅಜರ್ಿದಾರಳಲು ಒಂದು ಲಿಖಿತ ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ತಂದೆ-ತಾಯಿಯವರಿಗೆ ನಾವು 7 ಜನ ಹೆಣ್ಣು ಮಕ್ಕಳು ಇಬ್ಬರೂ ಗಂಡು ಮಕ್ಕಳು ಇರುತ್ತೇವೆ. ನನಗೆ ಈಗ ಸುಮಾರು 8-9 ವರ್ಷಗಳ ಹಿಂದೆ ಗಂಗನಾಳ ಗ್ರಾಮದ ಮಲ್ಲಪ್ಪ ತಂದೆ ಭೀಮಪ್ಪ ಹೊಸಮನಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿರುತ್ತಾನೆ. ಮದುವೆಯಾದ ನಂತರ 6 ವರ್ಷಗಳವರೆಗೆ ನನ್ನ ಗಂಡ ಮಲ್ಲಪ್ಪ ತಂದೆ ಭೀಮಪ್ಪ ಹೊಸಮನಿ ಚೆನ್ನಾಗಿ ನೋಡಿಕೊಂಡು, ಈಗ ಸುಮಾರು ಎರಡು ವರ್ಷಗಳಿಂದ ನಿನಗೆ ಅಡುಗೆ ಸರಿಯಾಗಿ ಮಾಡಲು ಬರುವುದಿಲ್ಲಾ, ನೀನು ಚೆನ್ನಾಗಿಲ್ಲ ನೀನು ನಿನ್ನ ತವರು ಮನೆಗೆ ಹೋಗು ಅಂತಾ ನನ್ನ ಗಂಡ ಮಲ್ಲಪ್ಪ ತಂದೆ ಭೀಮಪ್ಪ ಹೊಸಮನಿ, ನಮ್ಮ ಅತ್ತೆ ನಿಂಗಮ್ಮ ಗಂಡ ಭೀಮಪ್ಪ ಹೊಸಮನಿ, ಮೈದುನರಾದ ಪಾಂಡಪ್ಪ ತಂದೆ ಭೀಮಪ್ಪ ಹೊಸಮನಿ, ನಿಂಗಪ್ಪ ತಂದೆ ಭೀಮಪ್ಪ ಹೊಸಮನಿ ಇವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಅದಕ್ಕೆ ನಾನು ತಾಳಿಕೊಂಡು ಹೋಗುತ್ತಿದ್ದೇನು. ಈ ವಿಷಯವನ್ನು ನಾನು ನನ್ನ ತವರು ಮನೆಗೆ ಹೋದಾಗ ನನ್ನ ತಂದೆ-ತಾಯಿಯ ಮುಂದೆ ಹೇಳುತ್ತಿದ್ದು, ಅದಕ್ಕೆ ಅವರು ಗಂಡನ ಮನೆಯಲ್ಲಿ ತಾಳಿಕೊಂಡು ಹೋಗಬೇಕು ಅಂತಾ ಸಮಾಧಾನ ಮಾಡಿ ಹೇಳಿ ಕಳುಹಿಸುತ್ತಿದ್ದರು. ಅದಕ್ಕೆ ನಾನು ಗಂಡನ ಮನೆಯಲ್ಲಿ ತಾಳಿಕೊಂಡು ಹೋಗುತ್ತಿದ್ದನು. ಆದರೂ ಕೂಡಾ ಎರಡು ತಿಂಗಳ ಹಿಂದೆ ನನ್ನ ಗಂಡ, ಅತ್ತೆ, ಮೈದುನರು ನನ್ನ ಅವಾಚ್ಯವಾಗಿ ಬೈದು, ನನಗೆ ನನ್ನ ತವರು ಮನೆಗೆ ಕಳುಹಿಸಿದ್ದರು. ನಾನು ಮತ್ತು ನಮ್ಮ ತಂದೆ ತಾಯಿಯವರು ನನನಗೆ ಗಂಡನ ಮನೆಗೆ ಕರೆದುಕೊಂಡು ಹೊಗು ಅಂತಾ ನನ್ನ ಗಂಡನಿಗೆ ಹೇಳುತ್ತಿದ್ದೆವು, ಹೀಗಿದ್ದು, ನಿನ್ನೆ ದಿನಾಂಕ: 09/06/2021 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ನಾನು, ನಮ್ಮ ತಂದೆ-ತಾಯಿಯೊಂದಿಗೆ ಹಾರಣಗೇರಾ ಗ್ರಾಮದಲ್ಲಿದ್ದಾಗ, ನನ್ನ ಗಂಡ 1) ಮಲ್ಲಪ್ಪ ತಂದೆ ಭೀಮಪ್ಪ ಹೊಸಮನಿ 2) ನಿಂಗಮ್ಮ ಗಂಡ ಭೀಮಪ್ಪ ಹೊಸಮನಿ 3) ಪಾಂಡಪ್ಪ ತಂದೆ ಭೀಮಪ್ಪ ಹೊಸಮನಿ 4) ನಿಂಗಪ್ಪ ತಂದೆ ಭೀಮಪ್ಪ ಹೊಸಮನಿ ಇವರೆಲ್ಲರೂ ಕೂಡಿ ನಮ್ಮ ಮನೆಯ ಮುಂದೆ ಬಂದು ಅವಾಚ್ಯವಾಗಿ ಬೈಯುತ್ತಿರುವಾಗ ನಾನು ಮನೆಯಿಂದ ಹೊರಗಡೆ ಬಂದಿದ್ದು, ಆಗ ನನ್ನ ಗಂಡ ಮಲ್ಲಪ್ಪ ಹೊಸಮನಿ ಈತನು ಕೈಯಿಂದ ಕಪಾಳಕ್ಕೆ ಹೊಡೆದಿದ್ದು, ನಮ್ಮ ಅತ್ತೆ ನಿಂಗಮ್ಮ ಹೊಸಮನಿ, ಮತ್ತು ಮೈದುನರಾದ ಪಾಂಡಪ್ಪ ಹೊಸಮನಿ, ನಿಂಗಪ್ಪ ಹೊಸಮನಿ ಇವರು ಕೈಯಿಂದ ಮೈಮೇಲೆ ಹೊಡೆಯುವಾಗ ನಮ್ಮ ಪಕ್ಕದ ಮನೆಯವರಾದ ಶಾಂತಪ್ಪ ತಂದೆ ಭೀಮರಾಯ ಸಾಲಿಮನಿ, ಬೆನಕಪ್ಪ ತಂದೆ ದೇವಿಂದ್ರಪ್ಪ ದೊಡ್ಡಮನಿ ಇವರು ಜಗಳ ಬಿಡಿಸಿಕೊಂಡರು. ಆರೋಪಿತರೆಲ್ಲರೂ ಹೊಡೆದು ಹೋಗುವಾಗ ನೀನು ಮನಗೆ ಬಂದರೆ ನಿನಗೆ ಜೀವದಿಂದ ಹೊಡೆಯುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ.

                                                                              ಶೋರಾಪೂರ ಪೊಲೀಸ್ ಠಾಣೆ
                  ಗುನ್ನೆ ನಂ. 108/2021 ಕಲಂ 87 ಕೆ.ಪಿ. ಕಾಯ್ದೆದಿನಾಂಕ: 10-06-2021 ರಂದು 8-50 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಪಿ.ಐ. ಸಾಹೇಬರು 5 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:10/06/2021 ರಂದು 6 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪುರ ಪಟ್ಟಣದ ನಡುಗೇರಿ ಏರಿಯಾದ ಶ್ರೀ ಲಕ್ಷ್ಮೀದೇವಿ ಗುಡಿಯ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ದೇವಿಂದ್ರಪ್ಪ ಪಿಸಿ-184, 3) ಶ್ರೀ ಮಂಜುನಾಥ ಪಿಸಿ-271, 4) ಶ್ರೀ ಮಾನಯ್ಯ ಪಿಸಿ-372, 5) ಶ್ರೀ ಮಹಾದೇವ ಸಿಪಿಸಿ-126, ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರುಇಬ್ಬರು ಪಂಚರಾದ 1) ಶ್ರೀ ಲಕ್ಷ್ಮಣತಂದೆ ಹಣಮಂತ ನಾಯಕ ವ|| 29 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ನಡುಗೇರಿ ಸುರಪುರ 2) ಶ್ರೀ ಗೋಪಾಲ ತಂದೆ ವೆಂಕೋಬಾ ವಿಶ್ವಕರ್ಮ ವ|| 35 ವರ್ಷಜಾ|| ವಿಶ್ವಕರ್ಮ ಉ|| ಡ್ರೈವರ್ ಸಾ|| ಮುಲ್ಲಾ ಮೋಹಲ್ಲಾ ಸುರಪುರ ಇವರನ್ನು 6-30 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 7:45 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು, 7 ಪಿ.ಎಂ ಕ್ಕೆ ಸುರಪುರ ಪಟ್ಟಣದ ನಡುಗೇರಿಏರಯಾದ ಶ್ರೀ ಲಕ್ಷ್ಮೀದೇವಿ ಗುಡಿಯ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಗುಡಿಯ ಮುಂದಿನ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಲಕ್ಷ್ಮೀದೇವಿ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:05 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 6 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಿ ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 8200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಯವರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲಾಯಿತು.
                                                                         ಗುರಮಿಠಕಲ ಪೊಲೀಸ್ ಠಾಣೆ
                 ಗುನ್ನೆ ನಂಬರ : 83/2021 ಕಲಂ: 448 323 324 354 355 504 506 ಸಂ 34 ಐಪಿಸಿ ದಿನಾಂಕ 10.06.2021 ರಂದು ಸಾಯಂಕಾಲ 7:00 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ಹಾಜರ ಪಡಿಸಿದ್ದರ ಪಿರ್ಯಾಧಿಯ ಸಾರಾಂಶವೆನೆಂದರೆ ದಿನಾಂಕ:09.06.2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾಧಿ ಮತ್ತು ಆಕೆಯ ಗಂಡ ಮತ್ತು ತಂಗಿ ಇವರೆಲ್ಲರೂ ಚಂಡ್ರಕಿ ಸಿಮಾಂತರದ ತಮ್ಮ ಜಮೀನು ಸವರ್ೇ ನಂ:71/2 ನೇದ್ದರಲ್ಲಿ ಸದಿ ತೆಗೆಯುವ ಕೆಲಸ ಮಾಡುತ್ತಿರುವಾಗ ಆರೋಪಿತರೆಲ್ಲರೂ ಪಿರ್ಯಾಧಿಯ ಜಮೀನಿನಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿಗೆ ಮಾನಬಂಗ ಪಡಿಸಲು ಪ್ರಯತ್ನಸಿ ಪಿರ್ಯಾಧಿಗೆ ಮತ್ತು ಆಕೆಯ ತಂಗಿಗೆ ಹೊಡೆ ಬಡೆ ಮಾಡಿ ಪಿರ್ಯಾಧಿಯ ಗಂಡನಿಗೆ ಕೋಲು ಮತ್ತು ಚಪ್ಪಲಿಯಿಂದ ಹೊಡೆ-ಬಡೆ ಮಾಡಿ ಜೀವಬೆದರಿಕೆ ಹಾಕಿ ಹೋದ ಪಿರ್ಯಾಧಿಯ ದೂರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ : 83/2021 ಕಲಂ: 448 323 324 354 355 504 506 ಸಂ 34 ಐಪಿಸಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
                                                                                ಗುರಮಿಠಕಲ ಪೊಲೀಸ್ ಠಾಣೆ
                 ಗುನ್ನೆ ನಂ. 84/2021 ಕಲಂ 379 ಐಪಿಸಿ ದಿನಾಂಕ 10.06.2021 ರಂದು ಸಂಜೆ 5:30 ಗಂಟೆಗೆ ಫಿರ್ಯಾದಿದಾರರು ಅನಪೂರ ಗ್ರಾಮದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಇಖಖಖ ನೇದ್ದರ ರೆಸ್ಪಾಂಡರ್ ರವರಿಗೆ ಸಹಾಯವಾಣಿ ಸಂಖ್ಯೆ 112 ನೇದ್ದರಿಂದ ಕೊಂಕಲ್ ಸಿಮಾಂತರದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾನೆಂದು ಮಾಹಿತಿ ಬಂದಿದ್ದ ವಿಚಾರವನ್ನು ಪಿಸಿ-93 ರವರು ಫಿರ್ಯಾದಿದಾರರಿಗೆ ತಿಳಿಸಿ ಅವರಿಗೂ ಕೂಡ ಸ್ಥಳಕ್ಕೆ ಬರುವಂತೆ ಕೊರಿಕೊಂಡ ಮೇರೆಗೆ ಫಿರ್ಯಾದಿದಾರರು ಪಂಚರೊಂದಿಗೆ ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ನೋಡಿದಾಗ ಇಖಖಖ ವಾಹನ ಬರುತ್ತಿರುವುದನ್ನು ನೋಡಿದ ಆರೋಪಿತನು ತಮ್ಮ ಮರಳು ತುಂಬಿದ ಟ್ರ್ಯಾಕ್ಟರನ್ನು ಕೊಂಕಲ್ ಸಿಮಾಂತರದ ಹೊಲದಲ್ಲಿ ಬಿಟ್ಟು ಓಡಿ ಹೋಗಿದ್ದು ಫಿರ್ಯಾದಿದಾರರು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಮರಳು ತುಂಬಿದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಸಿಕೊಂಡು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಮಯ ರಾತ್ರಿ 8:30 ಗಂಟೆಗೆ ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದು ಅವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 84/2021 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 12-06-2021 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080