ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-01-2022
ಯಾದಗಿರಿ ಗ್ರಾ ಪೊಲೀಸ್ ಠಾಣೆ:- 11/2022.ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ ಕಾಯ್ದೆ 2021.;- ದಿನಾಂಕ:28/01/2022 ರಂದು 4.45 ಪಿ.ಎಮ್ ಕ್ಕೆ ಶ್ರೀ ಮಂಜುಳಾ ಪಿಎಸ್,ಐ.(ತನಿಖೆ) ಯಾದಗಿರಿ ಗ್ರಾಮೀಣ ಠಾಣೆ ರವರು ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೋಂದಿಗೆ ಠಾಣೆಗೆ ಒಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ, ನಾನು ಮಂಜುಳಾ ಪಿ.ಎಸ್.ಐ.(ತನಿಖೆ) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಸಂಗಡ ಸಿಬ್ಬಂದಿಯವರಾದ ಶ್ರೀ ಬಸವರಾಜ ಪಿ.ಸಿ-185, ಶ್ರೀ ಮಹೇಶ-ಪಿ.ಸಿ.358.ಮತ್ತು ಶ್ರೀ ಸಂತೊಷ ಪಿ.ಸಿ.312. ಎಲ್ಲರು ಕೂಡಿಕೊಂಡು ಸರಕಾರಿ ವಾಹನ ಸಂಖ್ಯೆ ಕೆಎ33/ಜಿ/0115 ನೇದ್ದರಲ್ಲಿ ಕುಳಿತುಕೊಂಡು ಇಂದು ದಿನಾಂಕ 28/01/2022 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಹಳ್ಳಿ ಭೇಟಿ ನೀಡಿ ಮರಳಿ ಯಾದಗಿರಿ ಕಡೆ ಬರುವಾಗ ಒಂದು ಬಾತ್ಮಿ ಬಂದಿದ್ದೆನೆಂದರೆ ಅರಿಕೆರಿ(ಬಿ) ಗ್ರಾಮದಲ್ಲಿ ಯಾರೊ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾವು ಮತ್ತು ನಮ್ಮ ಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಾದ 1) ಶ್ರೀ ಹಣಮಂತ ತಂದೆ ಮರೆಪ್ಪ ಉಂಬ್ರಿಕೆರಿ ಜಾ:ಕಬ್ಬಲಿಗ ಉ:ಸಮಾಜ ಸೇವೆ ಸಾ:ಅರಿಕೇರಿ(ಬಿ) 2) ಶ್ರೀ ನಿಂಗಪ್ಪ ತಂದೆ ಸಾಬಣ್ಣ ಆಶನಾಳ ಕುರಿಕಾಯೊರ, ವಯ:38 ವರ್ಷ ಜಾ:ಹರಿಜನ ಸಾ:ಯಾದಗಿರಿ. ಇವರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಅರಿಕೇರಿ(ಬಿ) ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮದ್ಯಾಹ್ನ 3:00 ಗಂಟೆಗೆ ಅವನನ್ನು ನಮ್ಮ ವಶಕ್ಕೆ ಪಡೆದು ಅವನು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ವಿರೇಶ ತಂದೆ ಮಹದೇವಪ್ಪ ಪ್ರದಾನಿ ವ:35,ಉ:ಆಟೋ ಚಾಲಕ ಜಾ:ಕುರುಬ ಸಾ:ಅರಿಕೆರಿ(ಬಿ) ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 4160/ ರೂ 2)ಎರಡು ಮಟಕಾ ನಂಬರ ಬರೆದ ಚೀಟಿ ಮತ್ತು 3) ಒಂದು ಬಾಲಪೆನ್.ಅ.ಕಿ=.00 4) ಒಂದು ನೊಕಿಯಾ ಕಂಪನಿಯಾ ಮೊಬೈಲ್.ಅ.ಕಿ.200/-ರೂ. ಒಟ್ಟು 4360/-ರೂ ಗಳ ಕಿಮ್ಮತ್ತಿನ ಮುದ್ದೆಮಾಲುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಮಟಕಾ ನಂಬರ ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ನಾನೇ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದನು .ಈ ಸವಿಸ್ತಾರವಾದ ಪಂಚನಾಮೆಯನ್ನು ಮದ್ಯಾಹ್ನ 3:00 ಗಂಟೆಯಿಂದ 4:00 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಾಯಂಕಾಲ 4:45 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ.
ಶೋರಾಪೂರ ಪೊಲೀಸ್ ಠಾಣೆ ;- 21/2022 ಕಲಂ: 279, 304 (ಎ) ಐಪಿಸಿ ;- ದಿನಾಂಕಃ 28/01/2022 ರಂದು 8-15 ಪಿ.ಎಮ್ ಕ್ಕೆ ಶ್ರೀ ರಾಚಯ್ಯ ತಂದೆ ಈರಯ್ಯ ಮಠಪತಿ ಸಾಃ ಮುಷ್ಠಳ್ಳಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ ನನ್ನ ತಂದೆಯಾದ ಈರಯ್ಯ ತಂದೆ ಬಸಲಿಂಗಯ್ಯ ಮಠಪತಿ ವಯಃ 55 ವರ್ಷ ಉಃ ಒಕ್ಕಲುತನ ಹಾಗು ನನ್ನ ಅತ್ತಿಗೆಯಾದ ಸರಸ್ವತಿ ಇಬ್ಬರೂ ರೇಷನ್ ಕಾರ್ಡ ತಿದ್ದುಪಡಿ ಮಾಡಿಸಲು ದೇವಾಪೂರ ಗ್ರಾಮ ಪಂಚಾಯತ ಕಾಯರ್ಾಲಯಕ್ಕೆ ಹೋಗುತ್ತೇವೆ ಅಂತ ಹೇಳಿ ಹೋಗಿದ್ದರು. ನಂತರ ಸಾಯಂಕಾಲ 4-50 ಪಿ.ಎಮ್ ಸುಮಾರಿಗೆ ನನ್ನ ಅತ್ತಿಗೆಯಾದ ಸರಸ್ವತಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾವು ದೇವಾಪೂರ ಗ್ರಾಮಕ್ಕೆ ಹೋಗಿ ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಂಡು ಅಲ್ಲಿಂದ ಒಂದು ಖಾಸಗಿ ವಾಹನದಲ್ಲಿ ಶೆಳ್ಳಗಿ ಕ್ರಾಸಿಗೆ ಬಂದು ಇಳಿದಾಗ ಅಲ್ಲಿ ನಮ್ಮ ಸಂಬಂಧಿಕರಾದ ಕಾಮನಟಗಿ ಗ್ರಾಮದ ಚಂದ್ರಶೇಖರ ಹಿರೇಮಠ ಇವರು ಭೇಟಿಯಾಗಿದ್ದರಿಂದ ಮೂವರು ಕೂಡಿ ಬಸಯ್ಯಸ್ವಾಮಿ ಇವರ ಹೊಟೇಲನಲ್ಲಿ ಚಹಾ ಕುಡಿದೇವು. ಬಳಿಕ ನಮ್ಮೂರಿಗೆ ಯಾವದಾದರೂ ವಾಹನದಲ್ಲಿ ಹೋಗಬೆಕೆಂದು ಹೊಟೇಲದಲ್ಲಿಂದ ಹೊರಗಡೆ ಬಂದು ಸುರಪೂರ-ಲಿಂಗಸುಗೂರ ಮುಖ್ಯರಸ್ತೆ ದಾಟಿ ಶೆಳ್ಳಗಿ ಗ್ರಾಮಕ್ಕೆ ಹೋಗುವ ಕ್ರಾಸ್ ಹತ್ತಿರ ನಿಂತಿದ್ದಾಗ ಮಾವನಾದ ಈರಯ್ಯನು ಹೊಟೇಲ್ ಒಳಗಡೆ ಟಾವೇಲ್ ಮರೆತು ಬಂದಿದ್ದೇನೆ, ತಗೆದುಕೊಂಡು ಬರುತ್ತೇನೆ ಅಂತ ಹೇಳಿ ಹೊಟೇಲಿಗೆ ಹೋಗಲು ಪುನಃ ಮುಖ್ಯರಸ್ತೆ ದಾಟುತ್ತಿದ್ದಾಗ ಈಗ್ಗೆ 4-45 ಪಿ.ಎಮ್ ಸುಮಾರಿಗೆ ದೇವಾಪೂರ ಕಡೆಯಿಂದ ಈಶಾನ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಂಬರ ಕೆ.ಎ 33 ಎಫ್ 0274 ನೇದ್ದರ ಚಾಲಕನು ತನ್ನ ಬಸ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ರಸ್ತೆ ದಾಟುತ್ತಿದ್ದ ಮಾವನಾದ ಈರಯ್ಯನಿಗೆ ಜೋರಾಗಿ ಡಿಕ್ಕಿಪಡಿಸಿದರಿಂದ ಡಾಂಬರ ರಸ್ತೆಯ ಮೇಲೆ ಬಿದ್ದನು. ತಕ್ಷಣ ನಾನು ಮತ್ತು ಚಂದ್ರಶೇಖರಯ್ಯ ಹಾಗು ಹೊಟೇಲ್ ಮಾಲಿಕ ಬಸಯ್ಯಸ್ವಾಮಿ ಎಲ್ಲರೂ ಓಡಿ ಹೋಗಿ ಮಾವನವರಿಗೆ ಎಬ್ಬಿಸಿ ನೋಡಲಾಗಿ ಎರಡು ಕಣ್ಣುಗಳ ಹುಬ್ಬಿಗೆ ರಕ್ತಗಾಯಗಳಾಗಿದ್ದು, ಎರಡು ಕಡೆ ಮೆಲಕಿಗೆ ಭಾರಿಗುಪ್ತಗಾಯಗಳಾಗಿ ಮೂಗಿನಿಂದ ರಕ್ತಸ್ರಾವ ಆಗಿ ಪ್ರಜ್ಞೆ ತಪ್ಪಿರುತ್ತದೆ. ನಾವು ಮಾವನವರಿಗೆ ಯಾವುದಾದರೂ ವಾಹನದಲ್ಲಿ ಹಾಕಿಕೊಂಡು ಸುರಪೂರ ಆಸ್ಪತ್ರೆಗೆ ಒಯ್ಯುತ್ತೇವೆ, ಬೇಗ ಬಾ ಅಂತ ತಿಳಿಸಿದಳು. ಆದ್ದರಿಂದ ನಾನು ಮನೆಯಿಂದ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ನನ್ನ ತಂದೆಯವರು ಮೃತಪಟ್ಟಿದ್ದರು. ಆಗ ನನ್ನ ಅತ್ತಿಗೆ ತಿಳಿಸಿದ್ದೆನೆಂದರೆ, ನಾನು ಮತ್ತು ಚಂದ್ರಸೇಖರಯ್ಯ ಇಬ್ಬರೂ ಮಾವನಿಗೆ ಅದೇ ರಸ್ತೆಯಲ್ಲಿ ಸುರಪೂರ ಕಡೆಗೆ ಹೊರಟಿದ್ದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪೂರ ಆಸ್ಪತ್ರೆಗೆ ಕರೆದುಕೊಂಡು ಬರುವಾಗ 5-20 ಪಿ.ಎಮ್ ಸುಮಾರಿಗೆ ಸುರಪೂರ ಹಳೆ ಬಸ್ ನಿಲ್ದಾಣದ ಹತ್ತಿರ ಮೃತಪಟ್ಟಿರುತ್ತಾನೆ ಅಂತ ತಿಳಿಸಿದಳು. ಅಪಘಾತಪಡಿಸಿದ ಬಸ್ ಹಾಗು ಅದರ ಚಾಲಕ ಸ್ಥಳದಲ್ಲೆ ಇದ್ದು, ಬಸ್ ಚಾಲಕನ ಹೆಸರು ಕಾಮರಾಜ ತಂದೆ ವಾಲಪ್ಪ ಚವ್ಹಾಣ ಸುರಪೂರ ಬಸ್ ಘಟಕ ಅಂತ ಹಾಗು ಬಸ್ ಕಂಡಕ್ಟರ ಹೆಸರು ಪರಶುರಾಮ ಅಂತ ಇರುವ ಬಗ್ಗೆ ನನ್ನ ಅತ್ತಿಗೆ ಸರಸ್ವತಿ ಹಾಗು ಚಂದ್ರಶೇಖರಯ್ಯ ಇವರಿಂದ ಕೇಳಿ ಗೊತ್ತಾಗಿರುತ್ತದೆ. ಕಾರಣ ನನ್ನ ತಂದೆಯವರಿಗೆ ಅಪಘಾತಪಡಿಸಿದ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
ವಡಗೇರಾ ಪೊಲೀಸ್ ಠಾಣೆ ;- 16/2021 ಕಲಂ:279, 337, 338 ಐಪಿಸಿ ಸಂಗಡ 187 ಐಎಮ್ವಿ ಎಠ್ಟಿ್;- ದಿನಾಂಕ:28/01/2022 ರಂದು 5-45 ಪಿಎಮ್ ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಆರ್.ಟಿ.ಎ ಎಮ್.ಎಲ್.ಸಿ ಇದೆ ಅಂತಾ ನಿಸ್ತಂತು ಮೂಲಕ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಹೆಚ್.ಸಿ 102 ರವರಿಗೆ ಕಳುಹಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಗಾಯಾಳು ಸಂಬಂಧಿಕರಿಗೆ ವಿಚಾರಿಸಿದಾಗ ಗಾಯಾಳು ಕವಿತಾ ಗಂಡ ವಿನೋದ ವಿಶ್ರಾ ಈಕೆಯ ಗಂಡನಾದ ವಿನೋದ ತಂದೆ ಮಾಧವ ಮಿಶ್ರಾ, ವ:32, ಜಾ:ಡಿವರ(ಎನ್.ಟಿ), ಉ:ಕೂಲಿ ಕೆಲಸ ಸಾ:ಹಾವಡಗಾವಂ ತಾ:ಬ್ರಹ್ಮಪುರಿ ಜಿ:ಚಂದ್ರಪೂರಿ (ಮಹಾರಾಷ್ಟ್ರ) ಹಾ:ವ:ನಾಯ್ಕಲ್ ತಾ:ವಡಗೇರಾ ಜಿ:ಯಾದಗಿರಿ ಇವರು ಗಣಕೀಕೃತ ದೂರನ್ನು ಹಾಜರಪಡಿಸಿದ್ದನ್ನು 6-30 ಪಿಎಮ್ ಕ್ಕೆ ಸ್ವಿಕೃತ ಮಾಡಿಕೊಂಡು 7-45 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಹಾಜರಪಡಿಸಿರುತ್ತಾರೆ. ಸದರಿ ದೂರಿನ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಪ್ರತಿ ವರ್ಷ ನಾವು ಸುಮಾರು 25-30 ಜನ ಕನರ್ಾಟಕದ ಯಾದಗಿರಿ ಜಿಲ್ಲೆಗೆ ಬಂದು ನಾಯ್ಕಲ್ ಮತ್ತು ಸುತ್ತಮುತ್ತಲ ಗ್ರಾಮಗಳ ಭತ್ತದ ಗದ್ದೆಗಳಿಗೆ ಭತ್ತವನ್ನು ಕೂಲಿಯಿಂದ ನಾಟಿ ಹಚ್ಚುವ ಕೂಲಿ ಕೆಲಸ ಮಾಡಿಕೊಂಡು ಸುಮಾರು ಒಂದು ತಿಂಗಳ ನಂತರ ಮರಳಿ ನಮ್ಮೂರಿಗೆ ಹೋಗುತ್ತೇವೆ. ಹೀಗಿದ್ದು ಈ ವರ್ಷ ನಾವು ಸುಮಾರು 25 ಜನ ಕೂಡಿ ಭತ್ತ ನಾಟಿ ಹಚ್ಚುವ ಕೆಲಸಕ್ಕೆ ಅಂತಾ ದಿನಾಂಕ:29/12/2021 ರಂದು ನಾಯ್ಕಲ್ ಗ್ರಾಮಕ್ಕೆ ಬಂದು ನಾಯ್ಕಲ್ ಗ್ರಾಮದ ಶರಣಗೌಡ ಇವರು ಲೀಜಿಗೆ ಮಾಡಿರುವ ಹೊಲದಲ್ಲಿ ಕ್ಯಾಂಪ ಹಾಕಿಕೊಂಡು ಇಲ್ಲಿಯೇ ಇದ್ದೇವು. ಇಂದು ದಿನಾಂಕ:28/01/2022 ರಂದು ನಾಯ್ಕಲ್ ಪಕ್ಕದ ಕರಣಗಿ ಗ್ರಾಮದಲ್ಲಿ ಒಂದು ಗದ್ದೆಗೆ ಭತ್ತ ನಾಟಿ ಹಚ್ಚುವುದು ಇದ್ದರಿಂದ ನಾವು ಸುಮಾರು 18-20 ಜನ ಕೂಡಿ ಕರಣಗಿ ಗ್ರಾಮದ ಭೀಮಣ್ಣಗೌಡ ಇವರ ಕವಳೆ ಗದ್ದೆಗೆ ಹೋಗಿ ಭತ್ತವನ್ನು ಮದ್ಯಾಹ್ನ 3-30 ರ ವರೆಗೆ ನಾಟಿ ಮಾಡಿ ಮುಗಿಸಿದೆವು. ನಂತರ ಅಲ್ಲಿಂದ ನಮ್ಮ ಕ್ಯಾಂಪಿಗೆ ಬರುವ ಕುರಿತು ಕರಣಗಿ ಗ್ರಾಮದ ಶಿವಕುಮಾರ ತಂದೆ ಭೀಮಣ್ಣಗೌಡ ಇವರ ಮಹಿಂದ್ರಾ ಗೂಡ್ಸ ಗಾಡಿ ನಂ: ಕೆಎ 33 ಬಿ 1905 ನೇದ್ದರಲ್ಲಿ ಸುಮಾರು 14 ರಿಂದ 16 ಜನ ಹತ್ತಿ ಕುಳಿತೇವು. ನಾನು ಕೂಡಾ ಮಹಿಂದ್ರಾ ಗಾಡಿಯಲ್ಲಿ ಮುಂದೆ ಡ್ರೈವರನ ಬಾಜು ಕುಳಿತೆನು. ನಮ್ಮ ಎಲ್ಲಾ ಸುಮಾರು 15 ಜನ ಕೆಲಸದವರು ಕೂಡಾ ಗಾಡಿಯಲ್ಲಿ ಹಿಂದೆ ಹತ್ತಿ ಕುಳಿತರು. ಡ್ರೈವರ ಶಿವಕುಮಾರನು ಗಾಡಿ ಚಲಾಯಿಸಿಕೊಂಡು ಹೊರಟನು. ಯಾದಗಿರಿ-ಶಹಾಪೂರ ಮೇನ ರೋಡ ಮನಗನಾಳ ಗ್ರಾಮ ದಾಟಿದ ನಂತರ ಕೆಬಿಎನ್ ಹತ್ತಿ ಮಿಲ್ ಹತ್ತಿರ ಡ್ರೈವರನು ತನ್ನ ಮಹಿಂದ್ರಾ ಗಾಡಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟು ರೋಡಿನ ಮೇಲೆ ಒಮ್ಮೆಲೆ ಬಲಕ್ಕೆ ಕಟ್ ಹೊಡೆದಾಗ ಗಾಡಿ ಅವನ ನಿಯಂತ್ರಣ ತಪ್ಪಿ ಬಲ ಮಗ್ಗುಲಾಗಿ ಪಲ್ಟಿಯಾಗಿ ಬಿದ್ದುಬಿಟ್ಟಿತ್ತು. ಅಪಘಾತದಲ್ಲಿ ನನಗೆ ಯಾವುದೇ ಗಾಯಗಳಾಗಲಿಲ್ಲ. ಸದರಿ ಗೂಡ್ಸ ಗಾಡಿಯಲ್ಲಿ ಹಿಂದೆ ಕುಳಿತ್ತಿದ್ದ ನನ್ನ ಹೆಂಡತಿ 1)ಕವಿತಾ ಗಂಡ ವಿನೋದ ಮಿಶ್ರಾ ಇವಳಿಗೆ ಹಣೆಗೆ ಮತ್ತು ಬಲ ತುಟಿ ಹತ್ತಿರ ತರಚಿದ ರಕ್ತಗಾಯವಾಗಿತ್ತು. ಇನ್ನುಳಿದವರಿಗೆ ನೋಡಲಾಗಿ 2)ರವೀಂದ್ರ ತಂದೆ ಕವದು ಮಿಶ್ರಾ ಈತನ ಎಡಗಾಲ ಹಿಮ್ಮಡಕ್ಕೆ ಭಾರಿ ಒಳಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದವು. 3)ಕಲ್ಪನಾ ಗಂಡ ವಸಂತ ಉಕ್ರೆ ಇವಳ ಬಲಗೈ ಮುಂಗೈಗೆ ಭಾರಿ ಹರಿದ ರಕ್ತಗಾಯವಾಗಿದ್ದವು ಹಾಗು 4)ಗೋಪಿಕಾ ಗಂಡ ಭಾವರಾವ ಇವಳಿಗೆ ಬಲ ಹಣೆಗೆ ಮತ್ತು ಬಲ ಮೆಲಕಿಗೆ ತರಚಿದ ಗಾಯಗಳಾಗಿದ್ದವು. 5) ಕವಿತಾ ಗಂಡ ಬಸ್ಸಿಲಾಲ ಚುಲಬುಲೆ, 6)ಲಲಿತಾ ಗಂಡ ವಿಶ್ವನಾಥ ಉಕ್ರೆ, 7)ಮಂಗಳ ಗಂಡ ದೇವದಾಸ ಅಂಬರಕರ, 8)ಸ್ವಾತಿ ಗಂಡ ಸಂದೀಪ ದುಮಾನೆ, 9)ಲತಾ ಗಂಡ ರವಿಂದ್ರ ಭಾವನೆ, 10)ಸಂಗೀತಾ ಗಂಡ ದಿನೇಶ ಕಾಮಡಿ, 11)ಸಾವಿತ್ರಿ ಗಂಡ ಪಾಡುರಂಗ ಮಾರತತ್ತೆ, 12) ದೇವರಾಜ ತಂದೆ ಗಂಗಾರಾಮ ಲಂಜೋರ, 13)ರೋಶಿನಿ ಗಂಡ ಸುನೀಲ ಉಕ್ರೆ, 14)ವಸಂತ ತಂದೆ ತಾವರೂ ಉಕ್ರೆ ಇವರಿಗೆ ಸಹ ರಕ್ತಗಾಯ ಹಾಗು ಗಾಯಗಳಾಗಿದ್ದವು. ಸದರಿ ಮಹೇಂದ್ರ ಗೂಡ್ಸ ಗಾಡಿ ಚಾಲಕ ಶಿವಕುಮಾರ ತಂದೆ ಭೀಮಣ್ಣಗೌಡ ಈತನು ಅಪಘಾತದ ನಂತರ ವಾಹನವನ್ನು ಬಿಟ್ಟು ಓಡಿಹೋಗಿರುತ್ತಾನೆ. ನಂತರ ಅಲ್ಲಿಂದ ಹೋಗುವ ಜನರು ಅಪಘಾತವನ್ನು ನೋಡಿ ನಮಗೆ ಸರಕಾರಿ ಬಸ್ಸಿನಲ್ಲಿ ಯಾದಗಿರಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಕಾರಣ ನಮಗೆ ಅಪಘಾತಪಡಿಸಿ ಓಡಿಹೋದ ಮಹಿಂದ್ರಾ ಗೂಡ್ಸ ಗಾಡಿ ನಂ: ಕೆಎ-33 ಬಿ-1905 ರ ಚಾಲಕ ಶಿವಕುಮಾರ ತಂದೆ ಭೀಮಣ್ಣಗೌಡ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶ.
ಕೊಡೆಕಲ್ಲ ಪೊಲೀಸ್ ಠಾಣೆ;- 10/2022 ಕಲಂ: 143,147,323,504,506,354,498(ಂ) ಖ/ಘ 149 ಕಅ,ಂಓಆ 3,4 ಆಕ ಂಅಖಿ;- ದಿನಾಂಕ:28.01.2022 ರಂದು ರಾತ್ರಿ 21:00 ಗಂಟೆಗೆ ಪಿಯರ್ಾದಿ ಶ್ರೀಮತಿ ನಿರ್ಮಲಾ ಗಂಡ ತಿರುಪತಿ ರಾಠೋಡ ವ|| 22 ವರ್ಷ ಜಾ|| ಲಂಬಾಣಿ ಉ|| ಮನೆ ಕೆಲಸ ಸಾ|| ಸೂರ್ಯನಾಯಕ ತಾಂಡ ತಾ|| ದೇವದುರ್ಗ ಜಿ|| ರಾಯಚೂರ ಹಾ|| ವ|| ಗೆದ್ದಲಮರಿ ತಾಂಡ ತಾ|| ಹುಣಸಗಿ ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ ಮಾಡಿಸಿಕೊಂಡು ತಂದು ಒಂದು ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೇಂದರೆ ನನ್ನ ತಂದೆ ಗ್ಯಾನಪ್ಪ ತಂದೆ ರೇವಪ್ಪ ಜಾದವ ಸಾ|| ಗೆದ್ದಲಮರಿ ತಾಂಡ ಇತನಿಗೆ ಒಟ್ಟು 04 ಜನ ಹೆಣ್ಣುಮಕ್ಕಳಿದ್ದು ಮತ್ತು ಇಬ್ಬರು ಗಂಡು ಮಕ್ಕಳಿದ್ದು ನನ್ನ ತಂದೆಯ ಹೆಸರಿಗೆ ಗೆದ್ದಲಮರಿ ಸಿಮಾಂತರದಲ್ಲಿ 04 ಎಕರೆ ಜಮೀನು ಇರುತ್ತದೆ. ನಾನು ಮೂರನೇ ಮಗಳಾಗಿದ್ದು ನನ್ನ ತಂದೆ ತಾಯಿಯವರು ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸೂರ್ಯನಾಯಕ ತಾಂಡ(ಸಮುಂದ್ರ) ದ ಹಣಮಂತ ತಂದೆ ಶಿವಪ್ಪ ರಾಠೋಡ ಇವರ ಜೇಷ್ಠ ಸುಪುತ್ರನಾದ ತಿರುಪತಿ ಯೋಂದಿಗೆ ನಿಶ್ಚಯಮಾಡಿದ್ದು ಈ ಕಾಲಕ್ಕೆ ನಮ್ಮ ತಾಂಡದ 1)ಪೀರಪ್ಪ ತಂದೆ ರೇವಪ್ಪ ಜಾಧವ 2)ಜಗನಪ್ಪ ತಂದೆ ಕೇಶಪ್ಪ ಚವ್ಹಾಣ 3)ಹಣಮಂತ ತಂದೆ ದೇವಲಪ್ಪ ಪೂಜಾರಿ 4)ಶಿವಪ್ಪ ತಂದೆ ಈಶ್ವರಪ್ಪ ಜಾಧವ 5)ರಾಮಚಂದ್ರಪ್ಪ ತಂದೆ ಪೀರಪ್ಪ ಪೂಜಾರಿ ರವರು ಹಾಗೂ ಸೂರ್ಯನಾಯಕ ತಾಂಡದ ತಿರುಪತಿಯ ಸಂಬಂಧೀಕರು ಇದ್ದು ಮಾತುಕತೆ ಆಡಿದ್ದು ನಮ್ಮ ಮದುವೆಯು ದಿನಾಂಕ 31.05.2019 ರಂದು ಸೂರ್ಯನಾಯಕ ತಾಂಡದ ಅವರ ಸ್ವಗ್ರಹದಲ್ಲಿ ನಮ್ಮ ಗೆದ್ದಲಮರಿ ತಾಂಡದ ಈ ಮೇಲೆ ನಮೂದು ಮಾಡಿದ ಮದುವೆ ನಿಶ್ಚಯ ಮಾಡಿದ್ದ ಹಿರಿಯರು ಹಾಗೂ ಸೂರ್ಯನಾಯಕ ತಾಂಡ ಗುರು ಹಿರಿಯರ ಸಮಕ್ಷಮದಲ್ಲಿ ನಮ್ಮ ಧರ್ಮ ಸಂಪ್ರದಾಯಂದತೆ ಲಗ್ನವಾಗಿರುತ್ತದೆ ನನ್ನ ಲಗ್ನ ವಾದ ಮೇಲೆ ನನ್ನನ್ನು ನನ್ನ ಗಂಡನ ಮನೆಗೆ ಕರೆದುಕೊಂಡ ಹೋದ ಮೇಲೆ ನನ್ನ ಗಂಡ ತಿರುಪತಿ ಅತ್ತೆ ಲಕ್ಷ್ಮೀಬಾಯಿ ಮಾವ, ಹಣಮಂತ ಮೈದುನ ಲೋಕೆಶ ರವರು ಒಳ್ಳೆಯರೀತಿಯಿಂದ ನಡೆಸಿಕೊಂಡಿದ್ದು ನಾನು ನನ್ನ ಗಂಡನ ಮನೆಯಲ್ಲಿ ಸುಮಾರು 05 ತಿಂಗಳದವರೆಗೆ ಇವರೊಂದಿಗೆ ಅತ್ಯಂತ ಸಂತೋಷದಿಂದ ನನ್ನ ತವರು ಮನೆಯನ್ನೆ ಮರೆತು ಇದ್ದು ನಮ್ಮಿಬ್ಬರ ವೈವಾಹಿಕ ಜೀವನದಿಂದ ನನಗೆ ಒಂದು ಹೆಣ್ಣು ಮಗು ಜನಿಸಿದ್ದು ಇಗ ಈ ಮಗು ಎರಡು ವರ್ಷದ್ದು ಇದ್ದು ನನ್ನ ಮಗುವಿನ ಹೆಸರು ಶಾನುಬಾಯಿ ಅಂತಾ ಇರುತ್ತದೆ.
ನನ್ನ ಅತ್ತೆ, ಮಾವ, ಮೈದುನ ರವರು ನನ್ನ ಗಂಡನ ತಲೆಯಲ್ಲಿ ಎರಡು ತೋಲೆ ಬಂಗಾರ, ಒಂದು ಲಕ್ಷ ರೂಪಾಯಿಗಳನ್ನು ನಿನ್ನ ತವರು ಮನೆಯಿಂದ ತರಬೇಕು ಎಂದು ಹೇಳಿದ್ದು ನಾನು ನನ್ನ ತಂದೆ ತಾಯಿ ದೊಡ್ಡ ಜಮೀನುದ್ದಾರಲ್ಲ ಇದ್ದ 04 ಎಕರೆ ಜಮೀನಿನಲ್ಲಿ ಬಿತ್ತಿ ಬೇಳೆದು ಇದೆರಲ್ಲಿಯೇ ಸಂಸಾರ ನಡೆಸಬೇಕು ಇಗಾಗಲೇ ನನ್ನ ಲಗ್ನದಲ್ಲಿ 04 ತೋಲೆ ಬಂಗಾರ, ಒಂದು ಸ್ಪೇಲೆಂಡರ ಪ್ಲಸ್ ಮೋಟರ ಸೈಕಲ, ಹಾಗೂ ನಗದು ಹಣ ಒಂದು ಲಕ್ಷ ರೂಪಾಯಿಗಳನ್ನು ಕೋಟ್ಟಿದ್ದು ಅಲ್ಲದೆ ಸೂರಗಿ ಸಾಮಾನು ಅಂದಾಜು ಎರಡು ಲಕ್ಷ ರೂಪಾಯಿ ರೂಪಾಯಿ ಕೋಡಿಸಿದ್ದಾರೆ ಇದಕ್ಕೆ ಸಾಕಷ್ಟು ಜಮೀನಿನ ಮೇಲೆ ಹಾಗು ಇನ್ನಿತರಲ್ಲಿ ಕೈಗಡ ಸಾಲ ಮಾಡಿದ್ದು ಆ ಸಾಲ ತೀರಿಸದೆ ನನ್ನ ತಂದೆ ತಾಯಿ ದಿನನಿತ್ಯ ಕಷ್ಟ ಪಡುತ್ತಿದ್ದಾರೆ ಎಂದಾಗ ನನ್ನ ಗಂಡ ಮತ್ತು ನನ್ನ ಅತ್ತೆ ಮಾವ ಮೈದನ, ನನ್ನೊಂದಿಗೆ ಸುಮ್ಮನೆ ಜಗಳ ತೆಗೆದು ಅವಾಚ್ಯವಾಗಿ ಬೈದು ಮಾನಸಿಕ, ದೈಹಿಕ, ಚಿತ್ರ ಹಿಂಸೆ ನಿಡುತ್ತಿದ್ದರು ನನ್ನ ಗಂಡ ದಿನಾಲು ನನಗೆ ಹೋಡೆ ಬಡೆ ಮಾಡುವುದು, ಒದೆಯುವುದು ಮಾಡುತ್ತಿದ್ದನು. ಕೊನೆಗೆ ನನ್ನ ಗಂಡ ಅತ್ತೆ ಮಾವ ಮತ್ತು ಮೈದುನ ರವರು ಕೂಡಿ ನನಗೆ ತವರು ಮನೆಯಿಂದ ಬಂಗಾರ ಮತ್ತು ಹಣ ತರದಿದ್ದರೆ ನೀನು ಮನೆಯಲ್ಲಿ ಇರುವುದು ಬೇಡ ಅಂತಾ ಬೈದು ಎಲ್ಲರು ಹೋಡೆ ಬಡೆ ಮಾಡಿ ಮನೆಯಿಂದ ಹೋರ ಹಾಕಿದರು. ನಾನು ನನ್ನ ಗಂಡ ಹಾಗೂ ಕುಟುಂಬದವರಿಗೆ ಕೈಕಾಲು ಹಿಡಿದು ಬೇಡಿಕೊಂಡು ಅಳುತ್ತಿರುವಾಗ ತಾಂಡ ನೆರೆಹೋರೆಯವರು ಬಂದು ಬುದ್ದಿ ಮಾತು ಹೇಳಿ ನನ್ನನ್ನು ಮನೆಯೋಳೆಗೆ ಸೇರಿಸಿದರು. ನನ್ನ ಮೇಲೆ ನಿರಂತರವಾಗಿ ಹೋಡೆ ಬಡೆ ಮಾಡುತ್ತಾ ಕೌಟುಂಬಿಕ ದೌರ್ಜನ್ಯ ಹಾಗೂ ವರದಕ್ಷಣೆ ಕಿರುಕುಳ ನೀಡುತ್ತಾ ಬಂದು ಒಂದು ದಿನ ನನ್ನ ಗಂಡ ಮಾವ ಅತ್ತೆ ಮೈದನ ಕೂಡಿ ಮನೆಯಲ್ಲಿ ನಾನು ಮನೆಯ ಹೋರಗಡೆ ಇದ್ದಾಗ ಎಲ್ಲರು ಕೂಡಿ ನಾನು ಎರಡು ತೋಲೆ ಬಂಗಾರ ಒಂದು ಲಕ್ಷ ರೂಪಾಯಿ ಒಂದು ವೇಳೆ ತರದಿದ್ದರೆ ಕುತ್ತಿಗೆಗೆ ಊರಲು ಹಾಕಿ ಸಾಯಿಸಿ ಬಿಡೊಣಾ ಅಂತಾ ಮಾತಾಡುತ್ತಾಯಿದ್ದರು. ನಾನು ಇದನ್ನು ಕೇಳಿಸಿಕೊಂಡಿದ್ದು ಅವಾಗ ನಾನು ಎಚ್ಚತ್ತುಗೊಂಡು ನನ್ನ ಗಂಡ ಇಂದಲ್ಲ ನಾಳೆ ಸುದಾರಿಸುತ್ತಾನೆ ನನ್ನ ಸಂಸಾರ ಮೊದಲಿನಂತೆ ಆಗಬಹುದೇಂದ ವಿಶ್ವಾಸದಿಂದ ಅವರೆಲ್ಲರು ನನಗೆ ಎಷ್ಟೆ ಕಷ್ಟಕೊಟ್ಟರು ಸಹಿಸುತ್ತಾ ಬಂದಿದ್ದು ಆದರೆ ಇವರು ಆಡಿದ ಮಾತು ಕೇಳಿದ ಮೇಲೆ ಇಂದಲ್ಲ ನಾಳೆ ನನ್ನನ್ನು ಕೋಲೆ ಮಾಡಲು ಹೇಸುವುದಿಲ್ಲಾ ಎಂದು ತಿಳಿದು ನಾನು ನನ್ನ ತಂದೆಗೆ ಪೋನ ಮಾಡಿ ನನ್ನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನನ್ನ ತಂದೆ ಗ್ಯಾನಪ್ಪ ರವರು ನನ್ನ ಗಂಡನ ಮನೆಗೆ ಬಂದು ನನ್ನನ್ನು ಈಗ 5 ತಿಂಗಳ ಹಿಂದೆ ತವರು ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ.ನಾನು ದಿನಾಂಕ 20.01.2022 ರಂದು ನನ್ನ ಗಂಡನಿಗೆ ಪೋನ ಮಾಡಿ ನನ್ನ ಗಂಡನ ಆರೋಗ್ಯ ಹಾಗೂ ಕುಟುಂಬದವರ ಯೋಗಕ್ಷೇಮ ಕೇಳಿದರೆ ನನಗೆ ನನ್ನ ಗಂಡನು ಪೋನಿನಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಲೇ ಬೋಸಡಿ ಸೊಳೆ ರಂಡಿ ಅಂತಾ ಬೈಯುತ್ತಾ ನನ್ನ ಮತ್ತು ನನ್ನ ಮನೆಯವರ ಮಾತುಕೇಳಲಿಲ್ಲ ಅದಕ್ಕಾಗಿ ನಾನು ಇನ್ನೊಂದು ಮದುವೆ ಮಾಡಿಕೊಂಡಿರುವೆನು ನೀನು ಬೇಕಾದರೆ ನಮ್ಮ ಮೇಲೆ ಕೇಸು ಮಾಡು ಅಂತಾ ಅವಾಚ್ಯವಾಗಿ ಬೈದಿದ್ದರಿಂದ ನಾನು ನನ್ನ ಗಂಡನು ಎರಡನೇ ಮದುವೆ ಯಾದದ್ದು ನಿಜವೋ ಅಥವಾ ಸುಳ್ಳೆಂದು ತಿಳಿದುಕೊಳ್ಳಲು ನನ್ನ ತಂದೆಯನ್ನು ಮರುದಿನ ಸೂರ್ಯನಾಯಕ ತಾಂಡಕ್ಕೆ ಕಳಿಸಿದ್ದು ನನ್ನ ತಂದೆಯು ನನ್ನ ಗಂಡನು ಎರಡನೇ ಲಗ್ನವಾಗಿದ್ದು ನಿಜವಿದ್ದ ಬಗ್ಗೆ ತಿಳಿದುಕೊಂಡು ಬಂದಿದ್ದು ಇರುತ್ತದೆ.
ದಿನಾಂಕ 25.01.2022 ರಂದು ನಾನು ನನ್ನ ತಂದೆಯ ಮನೆಯಲ್ಲಿದ್ದಾಗ ನನ್ನ ಗಂಡ ತಿರುಪತಿ, ಮಾವ ಹಣಮಂತ, ಅತ್ತೆ ಲಕ್ಷ್ಮೀಬಾಯಿ, ಮೈದುನ ಲೋಕೆಶ ಮತ್ತು ಅವರ ಸಂಬಂಧಿಕರಾದ ಶಾಂತಿಲಾಲ ತಂದೆ ಶಿವಪ್ಪ ರಾಠೋಡ, ರೇವಪ್ಪ ತಂದೆ ಶಿವಪ್ಪ ರಾಠೋಡ, ರವರು ಕೂಡಿ ಸಾಯಂಕಾಲ 06-00 ಗಂಟೆ ಸುಮಾರಿಗೆ ನಮ್ಮ ಮನೆಯ ಮುಂದೆ ಜೀಪಿನಲ್ಲಿ ಬಂದಿದ್ದು ನನ್ನ ತಂದೆ ತಾಯಿ ಮತ್ತು ಅಣ್ಣ ಲೋಕೇಶ ರವರು ಮನೆಯೋಳಗೆ ಇದ್ದು ನಾನು ಮನೆಯ ಹೋರಗಡೆ ದನಗಳಿಗೆ ಮೇವು ಹಾಕಲು ಬಂದಾಗ ಇವರೇಲ್ಲರು ಕೂಡಿ ಜೀಪನಿಂದ ಕೇಳಗೆ ಇಳಿದವರೆ ನನ್ನ ಹತ್ತಿರ ಬಂದು ನನಗೆ ಬಾಯಿಗೆ ಬಂದಂತೆ ಬೈಯುತ್ತಿರುವಾಗ ನಾನು ಹೋರಗೆ ಯಾಕೇ ಬೈಯುತ್ತಿರಿ ಮನೆಯೋಳಗೆ ಕುಳಿತು ಮಾತಾಡೊಣ ಅಂತಾ ಅನ್ನುವಷ್ಟರಲ್ಲಿ ನನ್ನ ಗಂಡನು ನನಗೆ ಅವಾಚ್ಯ ಬೈದು ತಲೆಯ ಮೇಲಿನ ಕೂದಲು ಹಿಡಿದು ನೆಲಕ್ಕೆ ಕೇಡವಿದನು ಆಗ ನನ್ನ ಅತ್ತೆ ಮಾವ ರವರು ನನಗೆ ಬಾಯಿಗೆ ಬಂದಂತೆ ಬೈದು ಉಳಿದವರಿಗೆ ಏನ್ ನೋಡತಿರಿ ಬೇಕಾದ್ದು ಆಗಲಿ ಅವಳನ್ನ ಖಲಾಸ ಮಾಡಿರಿ ಅಂತಾ ಜೀವದ ಬೇದರಿ ಹಾಕಿದ್ದು ನನ್ನ ಗಂಡನ ತಮ್ಮನಾದ ಲೋಕೆಶ ತಂದೆ ಹಣಮಂತ ಇತನು ನನ್ನ ಸಿರೆ ಹೀಡಿದು ಏಳೆದಾಡಿದಲ್ಲದೆ ನನ್ನ ಕೈ ಹೀಡಿದು ಜಗ್ಗಾಡಿದ್ದು ನನ್ನ ಗಂಡನ ಚಿಕ್ಕಪ್ಪಂದಿರಾದ ಶಾಂತಿಲಾಲ ತಂದೆ ಶಿವಪ್ಪ, ರೇವಪ್ಪ ತಂದೆ ಶಿವಪ್ಪ, ಇವರುಗಳು ನನಗೆ ಈ ಭೋಸಡಿದ್ದು ಬಹಳ ಆಗಿದೆ ಇವಳಿಗೆ ಬಿಡಬೇಡರಿ ಚೆನ್ನಾಗಿ ಹೋಡೆಯಿರಿ ಅಂತಾ ಒದರಾಡಹತ್ತಿದ್ದು ಆಗ ಮನೆಯಲ್ಲಿದ್ದ ನನ್ನ ತಂದೆ ಗ್ಯಾನಪ್ಪ ತಾಯಿ ಯಮನಾಬಾಯಿ ಅಣ್ಣನಾದ ಅಂಬರೇಶ ಹಾಗೂ ನನ್ನ ದೊಡ್ಡಪ್ಪನ ಮಗನಾದ ವಿಜಯ ರವರು ಬಂದು ನೋಡಿ ಹೋಡೆಯುವುದನ್ನು ಬಿಡಿಸಿದ್ದು ಇರುತ್ತದೆ ಅಲ್ಲದೆ ನಮ್ಮ ತಾಂಡದ ಬುದ್ದಿವಂತರು ಬಂದು ಜಗಳ ಬಿಡಿಸಿ ಕಳಿಸಿದರು. ನಾನು ಜಿವಂತ ಇರುವಾಗಲೇ ನನ್ನ ಗಂಡ 1)ತಿರುಪತಿಯು ತನ್ನ ತಂದೆ 2)ಹಣಮಂತ ತಂದೆ ಶಿವಪ್ಪ ರಾಠೋಡ ತಾಯಿ 3)ಲಕ್ಷ್ಮೀಬಾಯಿ ಗಂಡ ಹಣಮಂತ ತಮ್ಮ 4)ಲೋಕೆಶ ತಂದೆ ಹಣಮಂತ ರಾಠೋಡ, ಮತ್ತು ಅವರ ಸಂಬಂಧಿಕರಾದ 5)ಶಾಂತಿಲಾಲ ತಂದೆ ಶಿವಪ್ಪ ರಾಠೋಡ, 6)ರೇವಪ್ಪ ತಂದೆ ಶಿವಪ್ಪ ರಾಠೋಡ, 7) ಚನ್ನಿಬಾಯಿ ಗಂಡ ಶಾಂತಿಲಾಲ ಸಾ|| ಸೂರ್ಯನಾಯಕ ತಾಂಡ, 8) ಮಾನಪ್ಪ ತಂದೆ ಖೇಮಣ್ಣ ಚವ್ಹಾಣ, 9)ಗನ್ನಮ್ಮ ಗಂಡ ಮಾನಪ್ಪ ಚವ್ಹಾಣ, ಸಾ|| ಚನ್ನಾನಾಯಕ ತಾಂಡ ರವರು ಕೂಡಿ ಮಾನಪ್ಪ ತಂದೆ ಖೇಮಣ್ಣ ಚವ್ಹಾಣ ಸಾ|| ಚನ್ನಾನಾಯಕ ತಾಂಡ ಇವರ ಮಗಳಾದ 10)ಅನಿತಾ ಚವ್ಹಾಣ ರವರೊಂದಿಗೆ ಎರಡನೇ ಮದುವೆಮಾಡಿದ್ದು ಇರುತ್ತದೆ. ಇವರೆಲ್ಲರು ನನ್ನ ಗಂಡನು ಎರಡನೇಯ ಲಗ್ನ ಮಾಡಿಕೊಳ್ಳಲಿಕ್ಕೆ ಕಾರಣರಾಗಿದ್ದು ನನಗೆ ಹೋಡೆಬಡೆ ಮಾಡಿ, ವರದಕ್ಷಣೆ ಹಾಗೂ ಕೌಟುಂಬಿಕ ದೌರ್ಜನ್ಯ ಕಿರುಕುಳಕೊಟ್ಟಂತ ಮತ್ತು ನನ್ನ ಗಂಡನಿಗೆ ನಾನು ಜಿವಂತ ಇರುವಾಗಲೇ ಎರಡನೇ ಮದುವೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ನೀಡಲು ವಿನಂತಿ.