ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-09-2021

ಕೊಡೇಕಲ್ ನಗರ ಪೊಲೀಸ್ ಠಾಣೆ
                 ಗುನ್ನೆ ನಂ. 51/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ:- ದಿನಾಂಕ:05.09.2021 ರಂದು 5:00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ಹರಿಶ್ಚಂದ್ರ ತಂದೆ ಈರಪ್ಪ ಪತ್ತಾರ ವ|| 60 ವರ್ಷ ಜಾ|| ಹಿಂದೂ ವಿಶ್ವಕರ್ಮ ಉ|| ನಿವೃತ್ತ ಅಂಚೆ ನೌಕರ ಸಾ|| ರಾಜನಕೋಳೂರ ತಾ|| ಹುಣಸಗಿ ಜಿ|| ಯಾದಗಿರ (ಮೋ.ನಂ.9731191901 ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಶಿಲ್ಪಾ, ವೀರೇಶ, ಶ್ವೇತಾ ಅಂತಾ ಹೆಸರಿನ ಮೂರು ಜನ ಮಕ್ಕಳು ಇದ್ದು ನಾನು ಅಂಚೆ ಇಲಾಖೆಯಲ್ಲಿ ಎಂ.ಟಿ.ಎಸ್ ಅಂತ ಕೆಲಸ ಮಾಡಿ ಇದೇ ವರ್ಷದ ಮೇ ತಿಂಗಳಲ್ಲಿ ವಯೋ ನಿವೃತ್ತಿ ಹೊಂದಿ ಸದ್ಯ ಮನೆಯಲ್ಲಿಯೇ ಇರುತ್ತೇನೆ. ನನ್ನ ಹಿರಿಯ ಮಗಳಾದ ಶಿಲ್ಪಾ ಇವರಿಗೆ ಹುಣಸಗಿಯ ಶಶಿಧರ ಪತ್ತಾರ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ. ಮಗನಾದ ವೀರೇಶನು ಕಕ್ಕೇರಾದಲ್ಲಿ ಆಭರಣಗಳ ಅಂಗಡಿ ಇಟ್ಟುಕೊಂಡು ಪತ್ತಾರಿಕೆ ಕೆಲಸ ಮಾಡಿಕೊಂಡು ಇದ್ದು ದಿನಾಲೂ ನಮ್ಮೂರಿನಿಂದ ಕಕ್ಕೇರಾಕ್ಕೆ ಹೋಗಿ ಬರುವದು ಮಾಡುತ್ತಾನೆ. ನನ್ನ ಹಿರಿಯ ಮಗಳಾದ ಶ್ವೇತಾ ವ:23 ವರ್ಷ ಇವರದೂ ಇನ್ನೂ ಮದುವೆ ಮಾಡಿರುವದಿಲ್ಲ. ಮಗಳಾದ ಶ್ವೇತಾ ಇವಳು ಹುಣಸಗಿಯ ಸಾಯಿ ವಿಜ್ಞಾನ ಶಾಲೆಯಲ್ಲಿ ಈಗ 2 ವರ್ಷಗಳಿಂದ ಶಿಕ್ಷಕಿ ಅಂತ ಕೆಲಸ ಮಾಡುತ್ತಿದ್ದು ಈಗ ಕೊರೊನಾ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಮನೆಯಲ್ಲಿಯೇ ಇರುತ್ತಾಳೆ.
                    ಹೀಗಿದ್ದು ದಿನಾಂಕ:26/08/2021 ರಂದು ಗುರುವಾರ ದಿವಸ ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಶಾಂತಮ್ಮ ಹಾಗೂ ಮಗಳಾದ ಶ್ವೇತಾ ರವರು ನಮ್ಮ ಮನೆಯಲ್ಲಿದ್ದಾಗ ನನ್ನ ಮಗಳಾದ ಶ್ವೇತಾ ಇವಳು ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿದ್ದು ಬಹಳ ಹೊತ್ತಾದರೂ ನನ್ನ ಮಗಳು ಮನೆಗೆ ಬರದೇ ಇದ್ದುದರಿಂದ ಯಾಕೆ ಬರಲಿಲ್ಲ ಅಂತ ನನ್ನ ಹೆಂಡತಿ ಶಾಂತಮ್ಮಳು ನನ್ನ ಮಗಳು ಸಂಡಾಸಕ್ಕೆ ಹೋದ ಜಾಗೆಗೆ ಹೋಗಿ ನೋಡಿದ್ದು ನನ್ನ ಮಗಳು ಅಲ್ಲಿ ಇರಲಿಲ್ಲ ಅಂತ ನನ್ನ ಹೆಂಡತಿಯು ಮರಳಿ ಮನೆಗೆ ಬಂದು ತಿಳಿಸಿದ್ದು, ಇದೇ ವೇಳೆಗೆ ಕಕ್ಕೇರಾದಲ್ಲಿ ಆಭರಣಗಳ ಅಂಗಡಿ ಇಟ್ಟುಕೊಂಡು ಪತ್ತಾರಿಕೆ ಕೆಲಸ ಮಾಡುವ ನನ್ನ ಮಗನಾದ ವೀರೇಶನು ಮನೆಗೆ ಬಂದಿದ್ದು ನಂತರ ನಾನು ಮತ್ತು ನನ್ನ ಹೆಂಡತಿ ಶಾಂತಮ್ಮ ಹಾಗೂ ಮಗ ವೀರೇಶ ಹಾಗೂ ನಮ್ಮ ಅಣ್ಣತಮ್ಮಕಿಯ ಶಿವು ತಂದೆ ಈಶ್ವರಪ್ಪ ಪತ್ತಾರ ಎಲ್ಲರೂ ಕೂಡಿ ನಮ್ಮೂರಲ್ಲಿ ಎಲ್ಲಾ ಕಡೆಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಹೋಗಿ ಹುಡುಕಾಡಲಾಗಿ ನನ್ನ ಮಗಳು ಪತ್ತೆಯಾಗಲಿಲ್ಲ. ರಾತ್ರಿಯಾಗಿದ್ದರಿಂದ ನಂತರ ದಿನಾಂಕ 27.08.2021 ರಿಂದ ಇಲ್ಲಿಯವರೆಗೆ ನಾನು ಮತ್ತು ನನ್ನ ಮಗ ವೀರೇಶ ಹಾಗೂ ನಮ್ಮ ಅಣ್ಣತಮ್ಮಕಿಯವರಾದ ಶಿವು ತಂದೆ ಈಶ್ವರಪ್ಪ ಪತ್ತಾರ ಮತ್ತು ನನ್ನ ಹೆಂಡತಿಯ ತಮ್ಮನಾದ ಈರಣ್ಣ ತಂದೆ ಪಂಪಣ್ಣ ಪತ್ತಾರ ಸಾ:ಕಕ್ಕೇರಾ ಹಾಗೂ ನನ್ನ ದೊಡ್ಡ ಮಗಳ ಗಂಡನಾದ ಶಶಿಧರ ತಂದೆ ಹಣಮಂತ್ರಾಯ ಪತ್ತಾರ ಸಾ:ಹುಣಸಗಿ ರವರು ಎಲ್ಲರೂ ಕೂಡಿ ನಮ್ಮ ಸಂಬಂಧಿಕರ ಊರುಗಳಾದ ಹುಣಸಗಿ, ಕಕ್ಕೇರಾ, ಕೆಂಭಾವಿ, ಸುರಪೂರ, ಶಹಾಪೂರ, ಲಿಂಗಸ್ಗೂರು, ಕಲಬುರಗಿ ಹಾಗೂ ಮುದ್ದೇಬಿಹಾಳ, ತಾಳಿಕೋಟಿ ಮತ್ತು ತಾಳಿಕೋಟಿ ತಾಲೂಕಿನ ಶಿವಪೂರ ಹಾಗೂ ಇತರೆ ಗ್ರಾಮಗಳಿಗೆ ನಾವೆಲ್ಲರು ಕೂಡಿ ಹೋಗಿ ಇಂದಿನವರೆಗೂ ಹುಡುಕಾಡಿದರು ನನ್ನ ಮಗಳಾದ ಶ್ವೇತಾ ತಂದೆ ಹರಿಶ್ಚಂದ್ರ ಪತ್ತಾರ ವ:23 ವರ್ಷ ಉ:ಸಾಯಿ ವಿಜ್ಞಾನ ಶಾಲೆ ಹುಣಸಗಿಯಲ್ಲಿ ಶಿಕ್ಷಕಿ ಇವಳು ಸಿಗಲಿಲ್ಲ. ನಮ್ಮ ಸಂಬಂದಿಕರಿಗೆ ಪೋನ್ ಮಾಡಿ ವಿಚಾರಿಸಿದರು ನನ್ನ ಮಗಳು ಬಂದಿರುವದಿಲ್ಲ ಅಂತ ತಿಳಿಸಿದ್ದು ನನ್ನ ಮಗಳ ಬಗ್ಗೆ ಇಂದಿನವರೆಗೂ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ನನ್ನ ಮಗಳಾದ ಶ್ವೇತಾ ಇವಳು ಸಾಧಾರಣ ಮೈಕಟ್ಟು, ಸಾದುಗಪ್ಪು ಬಣ್ಣ, ಉದ್ದನೆಯ ಮೂಗು, ಕಪ್ಪು ಕೂದಲು ಹೊಂದಿದ್ದು, ಸುಮಾರು 5 ಫೀಟ್ ಎತ್ತರ ಇದ್ದು, ಕಪ್ಪು ಬಣ್ಣದ ನೈಟ್ಪ್ಯಾಂಟ್ ಮತ್ತು ನಾಸಿ ಬಣ್ಣದ ಟೀ ಶರ್ಟ ಧರಿಸಿದ್ದು. ಕನ್ನಡ ಭಾಷೆ ಮಾತನಾಡುತ್ತಿದ್ದು, ಕನ್ನಡ, ಇಂಗ್ಲೀಷ್ ಹಿಂದಿ, ಭಾಷೆ ಓದಲು ಬರೆಯಲು ಬರುತ್ತಿದ್ದು ನಾವು ಇಲ್ಲಿಯವರೆಗೂ ಹುಡುಕಾಡಿದರೂ ನನ್ನ ಮಗಳು ಶ್ವೇತಾ ಇವಳು ಸಿಕ್ಕಿರುವುದಿಲ್ಲ, ನನ್ನ ಮಗಳಾದ ಶ್ವೇತಾ ಇವರು ಕಾಣೆಯಾಗಿದ್ದು ಅವರಿಗೆ ಪತ್ತೆ ಮಾಡಿಕೊಡಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಪಿಯರ್ಾದಿಯ ಹೇಳಿಕೆಯ ಸಾರಾಂಶ.

ಕೊಡೇಕಲ್ ಪೊಲೀಸ್ ಠಾಣೆ
                ಗುನ್ನೆ ನಂ. 52/2021 ಕಲಂ: 341, 323, 355, 504, 506, ಸಂಗಡ 34 ಐಪಿಸಿ:- ದಿನಾಂಕ:05.09.2021 ರಂದು ಸಾಯಂಕಾಲ 7:00 ಗಂಟೆಗೆ ಪಿರ್ಯಾಧಿ ಶ್ರೀ ನಿಂಗಪ್ಪ ತಂದೆ ಪರಮಣ್ಣ ಮ್ಯಾಗೇರಿ ವ||55 ವರ್ಷ ಜಾ||ಹಿಂದೂ ಮಾದರ ಉ|| ಕೂಲಿಕೆಲಸ ಸಾ||ಮಂಜಲಾಪೂರ ತಾ|| ಸುರಪೂರ ಜಿ|| ಯಾದಗಿರ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೇಂದರೆ ನಾನು ಹೆಂಡತಿ ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪ-ಜೀವನ ಸಾಗಿಸುತ್ತಿದ್ದು ಇರುತ್ತದೆ. ನಾನು ಈಗ 5-6 ತಿಂಗಳುಗಳ ಹಿಂದೆ ಹೊಟ್ಟೆಪಾಡಿಗಾಗಿ ಹೆಂಡತಿ ಮಕ್ಕಳೊಂದಿಗೆ ಕೂಲಿಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ನನ್ನ ಅಣ್ಣಂದಿರಾದ ಜಟ್ಟೆಪ್ಪ ಮತ್ತು ಶಾಂತಪ್ಪ ರವರು ಊರಲ್ಲಿಯೇ ಇದ್ದು, ನನ್ನ ಅಣ್ಣ ಜಟ್ಟೆಪ್ಪನ ಹೆಂಡತಿಯಾದ ಕೆಂಚಮ್ಮಳಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಅವರಿಗೆ ಮಾತನಾಡಿಸಲು ನಾನು ಇಂದು ಮುಂಜಾನೆ ಬೆಂಗಳೂರಿನಿಂದ ನಮ್ಮೂರಿಗೆ ಬಂದಿದ್ದು ಇರುತ್ತದೆ. ನಮ್ಮೂರ ಪರಶುರಾಮ ತಂದೆ ಸಂಗಪ್ಪ ಹಾಗೂ ಹುಲಗಪ್ಪ ತಾಯಿ ಪರಮವ್ವ ರವರ ಮತ್ತು ನಮ್ಮ ಮಧ್ಯೆ ನಳದ ನೀರಿನ ಸಂಬಂಧ ವೈಮನಸ್ಸು ಇದ್ದುದು ಇರುತ್ತದೆ.  ಹೀಗಿದ್ದು ಇಂದು ದಿನಾಂಕ 05.09.2021 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ನಾನು ನನ್ನ ಅಣ್ಣನ ಹೆಂಡತಿ ಕೆಂಚಮ್ಮಳಿಗೆ ಮಾತನಾಡಿಸಲು ಹೋಗಬೇಕೆಂದು ಹುಲಗಪ್ಪ ತಾಯಿ ಪರಮವ್ವ ರವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲಿಂದ ಹೋಗುತ್ತಿರುವಾಗ ಅಲ್ಲಿ ಹುಲಗಪ್ಪ ತಾಯಿ ಪರಮವ್ವ ಹೊಸಮನಿ ಮತ್ತು ಅವರ ತಾಯಿ ಪರಮವ್ವ ತಾಯಿ ಹಣಮಂತಿ ಹೊಸಮನಿ ಮತ್ತು ಹುಲಗಪ್ಪನ ಅಣ್ಣತಮ್ಮಕಿಯ ತಮ್ಮನಾಗಬೇಕಾದ ಪರಶುರಾಮ ತಂದೆ ಸಂಗಪ್ಪ ಹೊಸಮನಿ ಇವರುಗಳು ತಮ್ಮ ಮನೆಯ ಮುಂದೆ ಕುಳಿತಿದ್ದು ಅವರೆಲ್ಲರೂ ನನ್ನನ್ನು ನೋಡಿದವರೇ ಅವರಲ್ಲಿಯ ಹುಲಗಪ್ಪ ಇತನು ನನ್ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಬೋಸಡಿ ಮಗನೇ ನಿಂಗ್ಯಾ ನೀನು ನಮ್ಮ ಮನೆಯ ಮುಂದೆ ಯಾಕೆ ಬಂದೇ ನಿನಗೆ ಊರು ಬಿಟ್ಟು ಕಳಿಸಿದ್ದಿವಿ ನಮ್ಮೂರಿಗೆ ಬರುವದಲ್ಲದೇ ನಮ್ಮ ಮನೆಯ ಮುಂದೆ ಹೋಗುತ್ತೀಯಾ ಸೂಳೆ ಮಗನೇ ಅಂತ ಬೈದಿದ್ದು ಆಗ ನಾನು ಅವರಿಗೆ ನಮ್ಮೂರಿಗೆ ನಾನು ಬಂದಿದ್ದೇನೆ ಅದನ್ನೆಲ್ಲಾ ನೀವೇನು ಕೇಳುತ್ತಿರೀ ಅಂತ ಅನ್ನುತ್ತಿರುವಾಗಲೇ ಹುಲಗಪ್ಪ ಇತನು ನನ್ನ ತೆಕ್ಕೆಗೆ ಬಿದ್ದು ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡವಿ ಕೈಯಲ್ಲಿ ಕಲ್ಲು ತೆಗೆದುಕೊಂಡು ನನಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡು ರಸ್ತೆಯ ಮೇಲೆ ಬಿದ್ದಾಗ ಪರಶುರಾಮ ಇತನು ತನ್ನ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದು ಒಳಪೆಟ್ಟು ಮಾಡಿದ್ದು ನಾನು ಎದ್ದು ಕುಳಿತಾಗ ಪರಶುರಾಮ ಇತನು ತನ್ನ ಕಾಲಿನಲ್ಲಿರುವ ಚಪ್ಪಲಿಯನ್ನು ಕೈಯಲ್ಲಿ ತೆಗೆದುಕೊಂಡು ನನ್ನ ಬೆನ್ನಿನ ಮೇಲೆ ಜೋರಾಗಿ ಹೊಡೆದು ಪೆಟ್ಟು ಮಾಡಿದ್ದು ಆಗ ಪರಮವ್ವ ತಾಯಿ ಹಣಮಂತಿ ಇವಳು ನನಗೆ ಈ ಬೋಸಡಿ ಮಗಂದು ಬಾಳ ಆಗಿದೆ ಇವನಿಗೆ ಹೊಡೆಯಿರೀ ಅಂತ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತ ಚೀರಾಡುತ್ತಿರುವಾಗ ಅಲ್ಲಿಯೇ ಇದ್ದ ನನ್ನ ಅಣ್ಣಂದಿರಾದ ಜಟ್ಟೆಪ್ಪ ತಂದೆ ಪರಮಣ್ಣ ಮಾದರ ಹಾಗೂ ಶಾಂತಪ್ಪ ತಂದೆ ಪರಮಣ್ಣ ಮಾದರ ಮತ್ತು ಅಲ್ಲಿಂದಲೇ ಹೋಗುತ್ತಿದ್ದ ಪರಮಣ್ಣ ತಂದೆ ಭೀಮಣ್ಣ ಹಯ್ಯಾಳದವರ ಹಾಗೂ ಸಂಗಣ್ಣ ತಾಯಿ ಶಿವಮ್ಮ ಹಯ್ಯಾಳದವರ ನೋಡಿ ನನಗೆ ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ನನಗೆ ಸೂಳೆ ಮಗನೇ ನಿಂಗ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿದೀ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ವಿಚಾರ ಮಾಡಿ ಈಗ ತಡವಾಗಿ ಬಂದು ದೂರು ಕೊಡುತ್ತಿದ್ದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದ ಹುಲಗಪ್ಪ ತಾಯಿ ಪರಮವ್ವ ಹೊಸಮನಿ ಮತ್ತು ಅವರ ತಾಯಿ ಪರಮವ್ವ ತಾಯಿ ಹಣಮಂತಿ ಹೊಸಮನಿ ಮತ್ತು ಹುಲಗಪ್ಪನ ಅಣ್ಣತಮ್ಮಕಿಯ ತಮ್ಮನಾಗಬೇಕಾದ ಪರಶುರಾಮ ತಂದೆ ಸಂಗಪ್ಪ ಹೊಸಮನಿ ಇವರುಗಳು ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯ ಸಾರಾಂಶ.

ಇತ್ತೀಚಿನ ನವೀಕರಣ​ : 06-09-2021 11:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080