ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 08-09-2021

ಯಾದಗಿರಿ ಗ್ರಾ ಪೊಲೀಸ್ ಠಾಣೆ
ಗುನ್ನೆ ನಂ. 122/2021 ಕಲಂ 279, 338, 304(ಎ) ಐ.ಪಿ.ಸಿ & 187 ಐ.ಎಮ.ವಿ ಕಾಯ್ದೆ:- ದಿನಾಂಕ 07/09/2021 ರಂದು ಸಾಯಂಕಾಲ 4-00 ಪಿ.ಎಮ್ ಸುಮಾರಿಗೆ ಗಾಯಾಳುದಾರಳು ಮತ್ತು ಮೈದುನ ಮೃತ ಮಹಾದೇವಪ್ಪ ಇಬ್ಬರೂ ಕೂಡಿಕೊಂಡು ತಮ್ಮ ಮೊಟಾರು ಸೈಕಲ್ ನಂ ಕೆಎ-33 ಯು-5412 ನೇದ್ದರ ಮೇಲೆ ದವಖಾನೆ ತೋರಿಸುವ ಕುರಿತು ಯಾದಗಿರಿಗೆ ಬಂದು ಶಿವಶಾಯಿ ಸ್ಕ್ಯಾನಿಂಗ ಸೆಂಟರದಲ್ಲಿ ಸ್ಕ್ಯಾನಿಂಗ ಮಾಡಿಸಿಕೊಂಡು ಮರಳಿ ತಮ್ಮ ಊರಿಗೆ ಹೋಗುವಾಗ ಮುಂಡರಗಿ ರಾಮಸಮುದ್ರ ರೊಡಿನ ಮೇಲೆ ಹೈ ವೇ ದಾಭಾದ ಹತ್ತಿರ ರೊಡಿನ ಮೇಲೆ ಹೋಗುತ್ತೀರುವಾಗ ಎದುರುಗಡೆಯಿಂದ ಒಂದು ಕಾರ ನಂ ಕೆಎ-47/5802 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ನಮ್ಮ ಮೋಟಾಡು ಸೈಕಲಗೆ ಡಿಕ್ಕಿ ಪಡಿಸಿದನು. ಸದರಿ ಅಪಘಾತದಲ್ಲಿ ನನಗೆ ಎಡಗಾಲು ಮೊಳಕಾಲಿನ ಮೇಲೆ ಭಾರಿ ಗುಪ್ತಗಾಯವಾಗಿ ಮುರಿದಿರುತ್ತದೆ. ಬಲಪಾದಕ್ಕೆ ಮತ್ತು ಎಡಮೆಲಕಿಗೆ ರಕ್ತಗಾಯ ಮತ್ತು ಮೈ ಕೈ ಮೇಲೆ ಅಲ್ಲಲ್ಲಿ ತರಚುದ ಗಾಯವಾಗಿರುತ್ತದೆ. ಮತ್ತು ನನ್ನ ಮೈದುನಾದ ಮೃತ ಮಹಾದೇವಪ್ಪ ಈತನಿಗೆ ತಲೆಗೆ ಭಾರಿ ಗುಪ್ತಯಾಗ ಮತ್ತು ಹಣೆಗೆ ಭಾರಿ ರಕ್ತಗಾಯ ಮತ್ತು ಮೆಲಕಿಗೆ ಮೇಲೆ ರಕ್ತಗಾಯ ಎರಡು ತೊಡೆಗಳ ಸಂಧಿಗ ಭಾರಿ ರಕ್ತಗಾಯವಾಗಿ ಹರಿದು ಸ್ಥಳದಲ್ಲಿಯೇ ಸತ್ತಿರುತ್ತಾನೆ. ಅಪಘಾತ ಪಡಿಸಿದ ಚಾಲಕನು ತನ್ನ ಕಾರನ್ನು ಅಲ್ಲಿಯೆ ನಿಲ್ಲಿಸಿ ಚಾಲಕನು ಓಡಿ ಹೋಗಿರುತ್ತಾನೆ. ಆತನ ಹೆಸರು ವಿಳಾಸ ಗೊತ್ತಾಗಿರುವದುಲ್ಲ. ಸದರಿ ನಮಗೆ ಅಪಘಾತ ಪಡಿಸಿದ ಕಾರ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿ ಅಂತಾ ಹೇಳಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ
ಗುನ್ನೆ ನಂ. : 123/2021 ಕಲಂ143,147,323,324,504,506 ಸಂ.147 ಐ.ಪಿ.ಸಿ :- ದಿನಾಂಕ: 07/09/2021 ರಂದು ಸಂಜೆ 08.30 ಪಿ.ಎಮ್ ಕ್ಕೆ ಫಿರ್ಯಾಧಿದಾರನಾದ ಬಸವರಾಜ ತಂದೆ ಮಹಾದೇವಪ್ಪಾ ಮಾನೆಗಾರ ವ: 60 ವರ್ಷ ಸಾ: ಯರಗೋಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಿದ ದೂರು ನೀಡಿದ ದೂರಿನ ಸಾರಾಂಶ ಏನೆಂದರೆ ನಾನು ಬಸವರಾಜ ತಂದೆ ಮಹಾದೇವಪ್ಪಾ ಮಾನೆಗಾರ ವ: 60 ವರ್ಷ ಮತ್ತು ನನ್ನ ಮಗ ಗುರುರಾಜ ವಯಸ್ಸು 30 ವರ್ಷ ಆದ ನಾವು ನಮ್ಮ ಯರಗೋಳ ಬಸ ನಿಲ್ದಾಣ ಹತ್ತಿರ ವಿರುವ ಕಿರಾಣಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತ ಇದ್ದೇವು. ನನ್ನ ಮಗನಿಗೆ ಕಿರಾಣಿ ಮಾಲು ತರಲು ಯಾದಗಿರಿಗೆ ಹೊಗಲು 80,000/- ರೂ ಕೊಟ್ಟಿದೆ. ಆಗ ದಿನಾಂಕ 06/09/2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ನನ್ನ ಮಗ ಗುರುರಾಜ ನಮ್ಮ ಟಾಟಾ ಎಸಿ ವಾಹನ ತೆಗೆದುಕೊಂಡು ಯಾದಗಿರಗೆ ಹೊಗುತಿದ್ದ ಸಮಯದಲ್ಲಿ ನಮ್ಮುರಿನ ಬಸವರಾಜ ತಂದೆ ತಿಪ್ಪಣ್ಣ ಮಾನೆಗಾರ ಮತ್ತು ಅವರ ಮಕ್ಕಳಾದ ಭೀಮು ಮತ್ತು ಸುರೇಶ ರವರು ಬಂದಿದ್ದು ಮತ್ತು ಅವರ ಜೊತೆ ಬೆಂಗಳೂರಿನ 5 ಜನ ಅಪರಿಚಿತರು ಬಂದವರೇ ನಮಗೆ ಭೋಸಡಿ ಮಕ್ಕಳೇ ನಿನ್ನೆ ನಮಗೆ ಹೊಡೆದು ಹೊಗಿದ್ದಿರಿ ಇವತ್ತು ನಿಮಗೆ ಬಿಡುವುದಿಲ್ಲಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಭೀಮು ರವರು ಕೈಯಲ್ಲಿರುವ ಖಡ್ಗ ಮುಂದೆ ಮಾಡಿ ನನ್ನ ಮಗ ಗುರುರಾಜನ ಮುಖಕ್ಕೆ ಹೊಡೆದಿದ್ದರಿಂದ ಬಾಯಿ ಮೇಲೆ ಗಾಯವಾಗಿ ಮುಖ ಉಬ್ಬಿರುತ್ತದೆ. ಮತ್ತು ನನಗೆ ಬಸವರಾಜ ಮತ್ತು ಸುರೇಶ ರವರು ಕೈಯಿಂದ ಬಡಿಗೆಯಿಂದ ಹೊಡೆದಿದ್ದರಿಂದ ಕಾಲಿಗೆ ರಕ್ತ ಮತ್ತು ಗುಪ್ತಗಾಯಗೊಳಿಸಿರುತ್ತಾರೆ.ಆಗ ನಮ್ಮೂರಿನ ಜನ ಬಿಡಿಸಲು ಬಂದಾಗ ಅವರಿಗೂ ಮನಬಂದಂತೆ ಹೊಡೆದಿರುತ್ತಾರೆ. ಮತ್ತು ದಬ್ಬಿಕೊಟ್ಟಿರುತ್ತಾರೆ. ಈ ಜಗಳದಲ್ಲಿ ನನ್ನ ಮೊಬೈಲ ಮತ್ತು ನಮ್ಮ ಮಗ ಗುರುರಾಜನ ಹತ್ತಿರ ಇದ್ದ 80 ಸಾವಿರ ಹಣ ಕಳೆದಿರುತ್ತದೆ. ಅವರು ತೆಗೆದುಕೊಂಡು ಹೊಗಿರುವ ಸಾಧ್ಯತೆ ಇದೆ. ಈ ಜಗಳನ್ನು ನಮ್ಮೂರಿನ ಚನ್ನಬಸ್ಸಮ್ಮ ಗಂಡ ಬಸವರಾಜ ಬಾನರ, ಚನ್ನಪ್ಪಾ ತಂದೆ ಶಾಂತಪ್ಪಾ ಕೊಟ್ರಕಿ ಇವರು ನೊಡಿರುತ್ತಾರೆ. ಆದ್ದರಿಂದ ನಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡ ಜನರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಹೇಳಿ ಗಣಕೀಕರಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ 123/2021 ಕಲಂ 143,147,323,324,504,506 ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ. 66/2021 ಕಲಂ 341, 323, 504, 506 ಸಂ 34 ಐಪಿಸಿ:- ದಿನಾಂಕ:07/09/2021 ರಂದು 8.30 ಪಿ.ಎಮ್ಕ್ಕೆ ಪಿಯರ್ಾದಿಯಾದ ಮಹಿಬೂಬ ಅಲಿ ತಂದೆ ಮಶಾಕ ಸಾಬ ಮುನ್ಸಿ ವ|| 39ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಹುಣಸಗಿ ಇವರು ಹುಣಸಗಿ ಪೊಲಿಸ ಠಾಣೆಗೆ ಹಾಜರಾಗಿ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದು, ಸಾರಾಂಶವೆನೆಂದರೇ, ದಿನಾಂಕ:07-09-2021 ರಂದು ಸಾಯಂಕಾಲ 5:30 ಪಿ.ಎಮ್. ಗಂಟೆಗೆ ಪ್ಲಾಟ ನಂ.26-101 ಮತ್ತು ಪ್ಲಾಟ್ ನಂ.26-102ರ ಮುಂದೆ ನಿಂತಿದ್ದು ಸದರಿ ಪ್ಲಾಟಗಳು ನನ್ನ ಅಕ್ಕಳಾದ ಸೈಜಾದಿ ಬೇಗಂ ಗಂಡ ಇಬ್ರಾಹಿಂ ಆಗಾಬಾಯಿ ಸಾ|| ಜಾಲಹಳ್ಳಿ ಇವರಿಗೆ ಸಂಬಂದಿಸಿರುತ್ತದೆ. ಸದರಿ ಪ್ಲಾಟಗಳ ಹತ್ತಿರ ರಸ್ತೆಯ ಮೇಲೆ ನಿಂತಾಗ ಆರೋಪಿತರು ಬಂದು ಮಗನೇ ಇಲ್ಲಿ ಯಾಕೆ ಬಂದು ನಿಂತಿದಿ ಜಾಗ ನಮ್ಮದು ಇದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ತಡೆದು ಮಹ್ಮದಗೌಸ್ ಈತನು ಕೈಯಿಂದ ಕಪಾಳಕ್ಕೆ ಹೊಡೆದಿದ್ದು ಮಹಿಬೂಬಲಿ ಈತನು ಎಡಕೈಯನ್ನು ತಿರುವಿ ಬೆನ್ನಿನ ಮೇಲೆ ಮುಷ್ಠಿಮಾಡಿ ಹೊಡೆದಿದ್ದು ಚೀರಾಡಿದಾಗ ಹುಸೇನಸಾಬ ಟೊಣ್ಣೂರ, ರಾಘವೇಂದ್ರ ಮೇದಾರ ಇವರು ಬಿಡಿಸಲು ಬರುವಷ್ಟರಲ್ಲಿ ಸದರಿಯವರು ಇಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಮಗನೇ ಮಹಿಬ್ಯಾ ಇವತ್ತು ನಮ್ಮ ಕೈಯಲ್ಲಿ ಉಳಿದಿ ಇನ್ನೊಮ್ಮೆ ನಿನಗೆ ನೋಡಿಕೊಳ್ಳುತ್ತೇವೆ ಅಂತಾ ಜೀವಬೇದರಿಕೆ ಹಾಕುತ್ತಾ ಹೋಗಿದ್ದು ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ದೂರು ಅಜರ್ಿಯ ಮೇಲೆ ಕ್ರಮ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ. 67/2021 ಕಲಂ 341, 323, 504, 506 ಸಂ 34 ಐಪಿಸಿ:- ದಿನಾಂಕ:07/09/2021 ರಂದು 9.45 ಪಿ.ಎಮ್ಕ್ಕೆ ಪಿಯರ್ಾದಿಯಾದ ಮಹ್ಮದಗೌಸ ತಂದೆ ಕರೀಮಸಾಬ ಮುನ್ಸಿ ವ|| 36ವರ್ಷ ಜಾ|| ಮುಸ್ಲಿಂ, ಉ|| ವ್ಯಾಪಾರ ಸಾ|| ಹುಣಸಗಿ ಇವರು ಹುಣಸಗಿ ಪೊಲಿಸ ಠಾಣೆಗೆ ಹಾಜರಾಗಿ ಟೈಪ್ ಮಾಡಿದ ಅಜರ್ಿ ಸಲ್ಲಿಸಿದ್ದು, ಸಾರಾಂಶವೆನೆಂದರೇ, ದಿನಾಂಕ:07-09-2021 ರಂದು ಸಾಯಂಕಾಲ 5:30 ಪಿ.ಎಮ್. ಗಂಟೆಯ ಸುಮಾರಿಗೆ ತಾನು & ತನ್ನ ತಮ್ಮನಾದ ರಿಯಾಜ ಇಬ್ಬರೂ ಕೂಡಿ ಅಕ್ಕಳಾದ ಶ್ರೀಮತಿ ಶಮಿನಾ ಗಂಡ ಮೌಲಸಾಬ ತಾಳಿಕೋಟಿ ಸಾ|| ಹುಣಸಗಿ ಇವಳ ಹೆಸರಿನಲ್ಲಿ ಹುಣಸಗಿ ಪಟ್ಟಣದ ರಾಮನಗೌಡರ ಕಾಲೋನಿ ಹತ್ತಿರ ಇರುವ ಖುಲ್ಲಾ ಪ್ಲಾಟ ನಂ.26/105, 26/106 ನೇದ್ದರ ಹತ್ತಿರ ರಸ್ತೆಯ ಮೇಲೆ ನಿಂತಾಗ ಆರೋಪಿತರು ಬಂದು ಲೇ ಮಗನೇ ಗೌಸ್ಯಾ ಸದರಿ ಪ್ಲಾಟಗಳು ನಮ್ಮವು ಇವೆ ನೀವು ಏಕೆ ಇಲ್ಲಿಗೆ ಬಂದಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಲು ಪ್ರಾರಂಬಿಸಿದ್ದು ಆಗ ಪಿಯರ್ಾದಿಯು ಮಹಿಬೂಬ ಈತನಿಗೆ ಈ ಪ್ಲಾಟಗಳು ನನ್ನ ಅಕ್ಕನ ಹೆಸರಿನಲ್ಲಿ ಇರುತ್ತವೆ ನಿಮ್ಮ ಅಕ್ಕನ ಹೆಸರಿನಲ್ಲಿರುವ ಪ್ಲಾಟ್ಗಳು ಕೆಳಗಡೆ ಇರುತ್ತವೆ ನೋಡು ಅಂತಾ ಅಂದಾಗ ಅಷ್ಟಕ್ಕೆ ಮಗನೇ ಗೌಸ್ಯಾ ನಿಮ್ಮ ಸೊಕ್ಕು ಬಹಳ ಆಗಿದೆ ಬೈದಾಡಿದ್ದು ಇವರ ಹತ್ತಿರ ಯಾಕೆ ನಾವು ತಕರಾರು ಮಾಡಬೇಕು ಅಂತಾ ನಾವು ಹೋಗುತ್ತಿದ್ದಾಗ ನನಗೆ ಮಹಿಬೂಬ ಈತನು ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದು ನನ್ನ ತಮ್ಮನಾದ ಮಹಿಬೂಬಲಿ ಈತನಿಗೆ ರಿಯಾಜ ತಂದೆ ಮಶಾಕಸಾಬ ಈತನು ತಡೆದು ಕೈಯಿಂದ ಹೊಡೆದಿದ್ದು ಬಸು ಆದಿಮನಿ ಸಾ|| ಕನಗಂಡನಳ್ಳಿ, ಅಕ್ಬರ ಯಾಳಗಿ ಸಾ|| ಹುಣಸಗಿ ಇವರು ಬಿಡಿಸಿದರು. ಸದರಿಯವರು ಇಬ್ಬರೂ ನಮಗೆ ಹೊಡೆಯುವದನ್ನು ಬಿಟ್ಟು ಮಕ್ಕಳೆ ಇವತ್ತು ನಮ್ಮ ಕೈಯಾಗ ಉಳಿದಿರಿ ಇನ್ನೊಂದು ಸಲ ಈ ಜಾಗದ ಹತ್ತಿರ ಬಂದರೆ ನಿಮಗೆ ಜೀವಂತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋಗಿದ್ದು ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರು ಅಜರ್ಿಯ ಮೇಲೆ ಕ್ರಮ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 130/2021 ಕಲಂ: 143,147,148,323,324,354,427,447,504,506 ಸಂಗಡ 149 ಐಪಿಸಿ:- ದಿನಾಂಕ 07/09/2021 ರಂದು 9.00 ಪಿಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಚನ್ನಮ್ಮ ಗಂಡ ಸಿದ್ದಪ್ಪ ಹಾವಮ್ಮಗಡ್ಡಿ ವ|| 65ವರ್ಷ ಜಾ|| ಕುರುಬರ ಉ|| ಮನೆಗೆಲಸ ಸಾ|| ಅಗ್ನಿ ತಾ|| ಹುಣಸಗಿ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಒಂದು ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನನಗೆ ಎರಡು ಜನ ಗಂಡು ಮಕ್ಕಳಿದ್ದು ಇಬ್ಬರಿಗೂ ಮದುವೆ ಮಾಡಿರುತ್ತೇನೆ. ನನ್ನ ಗಂಡನಾದ ಸಿದ್ದಪ್ಪ ರವರು ಮೃತಪಟ್ಟಿರುತ್ತಾರೆ. ನನ್ನ ಮೊದಲನೇ ಮಗನಾದ ಶಿವಣ್ಣನು ಮದುವೆಯಾದ ಬಳಿಕ ತನ್ನ ಹೆಂಡತಿ ಮಕ್ಕಳೊಂದಿಗೆ ದುಡಿಯಲು ಬಾಂಬೆಗೆ ಹೋಗಿದ್ದು ನನ್ನ ಕಿರಿಯ ಮಗನಾದ ಜಗನ್ನಾಥ ಮತ್ತು ಅವನ ಹೆಂಡತಿಯಾದ ತಿಪ್ಪಮ್ಮ ಇವರು ನನ್ನೊಂದಿಗೆ ವಾಸವಾಗಿದ್ದರು. ಆದರೆ ನನ್ನ ಕಿರಿಯ ಮಗನಾದ ಜಗನ್ನಾಥನು ಈಗ್ಗೆ 2 ವರ್ಷಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದು, ನನ್ನ ಮಗನ ಮರಣದ ನಂತರ ಸೊಸೆಯಾದ ತಿಪ್ಪಮ್ಮ ಮತ್ತು ನಾನು ಹಾಗೂ ನನ್ನ ಮಗಳಾದ ಲಗಮವ್ವ ಗಂಡ ಗುರಪ್ಪ ಮಂಗಿಹಾಳ ಮೂರು ಜನರು ಕೂಡಿ ನಮ್ಮ ಮನೆಯಲ್ಲಿ ವಾಸವಾಗಿರುತ್ತೇವೆ. ನನ್ನ ಸೊಸೆಯಾದ ತಿಪ್ಪಮ್ಮ ಇವಳಿಗೆ ನಮ್ಮೂರ ನಮ್ಮ ಜಾತಿಯ ಶಿವಣ್ಣ ತಂದೆ ಪರಮಣ್ಣ ಹೂಗಾರ ಈತನು ಸುಮಾರು 6 ತಿಂಗಳುಗಳ ಹಿಂದಿನಿಂದ ಚುಡಾಯಿಸುತ್ತಾ ಬಂದಿದ್ದು ತಿಪ್ಪಮ್ಮಳಿಗೆ ಸುಮ್ಮ ಸುಮ್ಮನೆ ಮಾತನಾಡಿಸುವುದು, ನಮ್ಮ ಮನೆಯ ಹತ್ತಿರ ಬಂದು ನಿಲ್ಲುವುದು ಮಾಡುತ್ತಿದ್ದು ನನ್ನ ಸೊಸೆಯು ನನ್ನ ಮುಂದೆ ಹೇಳಿದ್ದು ನಾನು ಮತ್ತು ನನ್ನ ಸೊಸೆಯಾದ ತಿಪ್ಪಮ್ಮ ಇಬ್ಬರೂ ಕೂಡಿ ಒಂದು ವಾರದ ಹಿಂದೆ ಶಿವಣ್ಣನಿಗೆ ಇದು ಸರಿ ಕಾಣಲ್ಲ ಇನ್ನೊಮ್ಮೆ ನಮಗೆ ಮಾತಾಡಿಸುವುದು ನಮ್ಮ ಮನೆಯ ಹತ್ತಿರ ಬರುವುದು ಮಾಡಿದರೆ ನಿನ್ನ ಮೇಲೆ ಕೇಸು ಕೊಡಬೇಕಾಗುತ್ತದೆ ಅಂತಾ ಹೇಳಿದ್ದಕ್ಕೆ ಅವನು ಸಿಟ್ಟಾಗಿ ತಮ್ಮ ಮನೆಯ ಕಡೆಗೆ ಹೋದನು. ನಂತರ ದಿನಾಂಕ 05/09/2021 ರಂದು ಸಂಜೆ 6.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ನಾನು, ನನ್ನ ಮಗಳಾದ ಲಗಮವ್ವ ಮತ್ತು ಸೊಸೆಯಾದ ತಿಪ್ಪಮ್ಮ ಮೂರು ಜನರು ಮಾತನಾಡುತ್ತಾ ಕುಳಿತಿದ್ದಾಗ ನಮ್ಮೂರ 1) ಶಿವಣ್ಣ ತಂದೆ ಪರಮಣ್ಣ ಹೂಗಾರ, 2) ಪರಮಣ್ಣ ತಂದೆ ಬಸಪ್ಪ ಹೂಗಾರ, 3) ಸಿದ್ದಮ್ಮ ಗಂಡ ಪರಮಣ್ಣ ಹೂಗಾರ, 4) ಹವಳಮ್ಮ ತಂದೆ ಪರಮಣ್ಣ ಹೂಗಾರ, 5) ದೇವಪ್ಪ ತಂದೆ ಬನ್ನೆಪ್ಪ ದೊಡ್ಡಮನಿ ಮತ್ತು 6) ನಿಂಗಮ್ಮ ಗಂಡ ಬೀರಪ್ಪ ದೊಡ್ಡಮನಿ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ನಮ್ಮ ಮನೆಯ ಒಳಗಡೆ ಅತಿಕ್ರಮ ಪ್ರವೇಶಿಸಿ ಏನರೆಲೇ ಸೂಳೆರೇ ನಿಮಗೆ ಸೊಕ್ಕು ಜಾಸ್ತಿಯಾಗಿದೆ ಅನ್ನುತ್ತಾ ಪರಮಣ್ಣ ಹೂಗಾರ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಗೈಗೆ ಹೊಡೆದಿದ್ದರಿಂದ ನನ್ನ ಬಲಗೈಗೆ ಒಳಪೆಟ್ಟು ಗಾಯವಾಗಿದ್ದು, ಶಿವಣ್ಣನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಪರಮಣ್ಣನು ನಮ್ಮ ಮನೆಯಲ್ಲಿದ್ದ ಅಂದಾಜು 8000/- ರೂಪಾಯಿ ಕಿಮ್ಮತ್ತಿನ ಟಿವಿಯನ್ನು ಒಡೆದಿದ್ದಾರೆ. ಜಗಳ ಬಿಡಿಸಲು ಬಂದ ನನ್ನ ಸೊಸೆಯಾದ ತಿಪ್ಪಮ್ಮಳಿಗೆ ಶಿವಣ್ಣನು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದನು. ನಂತರ ಸಿದ್ದಮ್ಮ, ಹವಳಮ್ಮ, ದೇವಪ್ಪ ಮತ್ತು ನಿಂಗಮ್ಮ ಇವರು ನನಗೆ ಮತ್ತು ನನ್ನ ಮಗಳಾದ ಲಗಮವ್ವಳಿಗೆ ಕೈಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದರು. ನಮಗೆ ಹೊಡೆಯುತ್ತಿರುವುದರಿಂದ ನಾವು ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ನಾವು ಚೀರುವ ಸಪ್ಪಳ ಕೇಳಿ ಮಲ್ಲಪ್ಪ ತಂದೆ ಕನ್ನಪ್ಪ ಬಂಡೆಪ್ಪನಳ್ಳಿ ಸಾ|| ಅಗ್ನಿ, ಮಾಳಪ್ಪ ತಂದೆ ಹಣಮಂತ್ರಾಯ ಗಂಧೆಗೋಳ ಸಾ|| ಫತೇಪೂರ ಮತ್ತು ಕಾಶಿನಾಥ ತಂದೆ ಹುಲಗಪ್ಪ ಗಂಧೆಗೋಳ ಸಾ|| ಫತೇಪೂರ ಇವರು ಬಂದು ಜಗಳ ಬಿಡಿಸಿದ್ದು ನಂತರ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೆರೆ ಇದೊಂದು ಸಲ ಬಿಟ್ಟೀವಿ ಇನ್ನೊಮ್ಮೆ ನಮ್ಮ ಹುಡುಗನ ತಂಟೆಗೆ ಬಂದ್ರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಆ ದಿನ ನಾನು ಉಪಚಾರ ಕುರಿತು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು, ಇಂದು ದಿನಾಂಕ 07/09/2021 ರಂದು ಇನ್ನೂ ಹೆಚ್ಚಾಗಿ ನೋವು ಆಗುತ್ತಿದ್ದುದರಿಂದ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡಿರುತ್ತೇನೆ. ನಾವು ಆಸ್ಪತ್ರೆಗೆ ತೋರಿಸಿಕೊಂಡು ಉಪಚಾರ ಪಡೆದು ಊರಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ಮೇಲ್ಕಾಣಿಸಿದ ಆರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 130/2021 ಕಲಂ: 143,147,148,323,324,354,427,447,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 08-09-2021 11:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080