ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 13-09-2021

ಯಾದಗಿರಿ ಗ್ರಾ ಪೊಲೀಸ್ ಠಾಣೆ
ಗುನ್ನೆ ನಂ. .ನಂ: 125/2021 ಕಲಂ 379 ಐ.ಪಿ.ಸಿ;- ದಿನಾಂಕ: 12/09/2021 ರಂದು 10.45 ಎ.ಎಮ್ ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಒಂದು ಉಸುಕು ತುಂಬಿದ ಟ್ರ್ಯಾಕ್ಟರನ್ನು ತಮ್ಮ ವರದಿಯೊಂದಿಗೆ ಜಪ್ತ ಪಂಚನಾಮೆಯನ್ನು ಜಪ್ತಿಪಂಚನಾಮೆ ಸಮೇತ ಠಾಣೆಗೆ ಬಂದು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 12/09/2021 ರಂದು ಬೆಳಗ್ಗೆ 07.00 ಎ.ಎಮ್ ಸುಮಾರಿಗೆ ಯಾದಗಿರಿ ಗ್ರಾಮೀಣ ಪೋಲಿಸ್ ಠಾಣಾ ಹದ್ದಿಯಲ್ಲಿ ಹಳ್ಳಿ ಗಸ್ತು ಕುರಿತು ನನ್ನ ಜೊತೆಯಲ್ಲಿ ಶ್ರೀ ಭೀಮಪ್ಪಾ ಪಿಸಿ-33 ಮತ್ತು ಶ್ರೀ ಪ್ರಭುಗೌಡ ಪಿಸಿ-361 ರವರನ್ನು ಕರೆದುಕೊಂಡು ಹಳ್ಳಿ ಗಸ್ತ್ತು ಕರ್ತವ್ಯದಲ್ಲಿದ್ದೇನು. ನಾವು ಯಡ್ಡಳ್ಳಿ ಗ್ರಾಮದಿಂದ ಹತ್ತಿಕುಣಿ ಗ್ರಾಮದ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 07.30 ಎ.ಎಮ್ ಕ್ಕೆ ಯಾದಗಿರಿ-ಸೇಡಂ ರೋಡಿನ ಮೇಲೆ ಹತ್ತಿಕುಣಿ ಗ್ರಾಮದ ಯಾದಗಿರಿ ಕಡೆಗೆ ಬರುವಾಗ ಅದೇ ವೇಳೆಗೆ ಹತ್ತಿಕುಣಿ ಹಳ್ಳದ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಹತ್ತಿಕುಣಿ ಕಡೆಗೆ ಹೊಗುತ್ತಿದ್ದನ್ನು ನೊಡಿ ಕೈ ಸನ್ನೆ ಮಾಡಿ ನಿಲ್ಲಿಸಿ ಅದರಲ್ಲಿದ್ದ ಚಾಲಕನಿಗೆ ವಿಚಾರಿಸಬೆಕೆನ್ನುವಷ್ಟರಲ್ಲಿ ಅವನು ನಮ್ಮ ಕೈಯಿಂದ ತಪ್ಪಿಸಿಕೊಂಡು ಟ್ರ್ಯಾಕ್ಟರದಿಂದ ಇಳಿದು ಓಡಿ ಹೋದನು. ಓಡಿ ಹೋದ ಟ್ರ್ಯಾಕ್ಟರ ಚಾಲಕನ ಹೆಸರು ಸಿದ್ದಪ್ಪ ತಂದೆ ಸಾಬಣ್ಣ ಯಾದಗಿರಿ ಜಾ: ಬೇಡರ ಸಾ: ಹತ್ತಿಕುಣಿ ಅಂತಾ ಗೊತ್ತಾಯಿತು. ಕೂಡಲೇ ಸದರಿ ವಾಹನದ ಜಪ್ತ ಪಂಚನಾಮೆಗಾಗಿ ಇಬ್ಬರೂ ಪಂಚರಾದ 1) ಶ್ರೀ ಮಹಾದೇವ ತಂದೆ ದೊಡ್ಡ ಸೈದಪ್ಪ ವಯಾ:32 ಜಾತಿ: ಕಬ್ಬಲಿಗ ಮತ್ತು 2) ಶ್ರೀ ಭೀಮಪ್ಪ ತಂದೆ ದೇವಿಂದ್ರಪ್ಪ ಹಂಚಿನಾಳ ವಯಾ:30 ಜಾತಿ: ಹರಿಜನ ಸಾ: ಇಬ್ಬರು ಮೈಲಾಪೂರ ಅಗಸಿ ಯಾದಗಿರಿ ಇವರನ್ನು ಬರಮಾಡಿಕೊಂಡು ಸದರಿ ಟ್ರ್ಯಾಕ್ಟರನ್ನು ಪರಿಶೀಲಿಸಲಾಗಿ ಟ್ರ್ಯಾಕ್ಟರ ನಂ. ಕೆ.ಎ-33-ಟಿಎ-9253 ಟ್ರಾಲಿಯಲ್ಲಿ ಉಸುಕು ತುಂಬಿದ್ದು ಟ್ರಾಲಿ ನಂ.ಕೆ.ಎ-33 ಟಿಬಿ-1840. ಅಂತಾ ಗೊತ್ತಾಯಿತು. ಟ್ರ್ಯಾಕ್ರರ ಚಾಲಕನು ಹತ್ತಿಕುಣಿ ಹತ್ತಿರದ ಹಳ್ಳದಿಂದ ಯಾವುದೇ ರಾಯಲ್ಟಿ ಇಲ್ಲದೇ ಹಳ್ಳದಿಂದ ಕಳ್ಳತನ ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೊಗುತ್ತಿದ್ದ ಬಗ್ಗೆ ಗೊತ್ತಾಯಿತು. ಸದರಿ ಟ್ರ್ಯಾಕ್ಟರ ಚಾಲಕ ಸಿದ್ದಪ್ಪ ತಂದೆ ಸಾಬಣ್ಣ ಯಾದಗಿರಿ ಮತ್ತು ಮಾಲೀಕನಾದ ಸಾಬಣ್ಣ ತಂದೆ ಮಲ್ಲಿಕಾಜರ್ುನ ಬೊಳಾರಿ ಸಾ:ಹತ್ತಿಕುಣಿ ಇತನು ಸಕರ್ಾರಕ್ಕೆ ರಾಯಲ್ಟಿ ಕಟ್ಟದೇ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಿಸುತ್ತಿದ್ದ ಬಗ್ಗೆ ದೃಡಪಟ್ಟಿದರಿಂದ ಸದರಿ ಉಸುಕು ತುಂಬಿದ ಟ್ರ್ಯಾಕ್ಟರನ್ನು ವಷಕ್ಕೆ ಪಡೆದುಕೊಂಡಿದ್ದು ಪರಿಶೀಲಿಸಲಾಗಿ ಟ್ರ್ಯಾಕ್ಟರದಲ್ಲಿ ಅಂದಾಜ 2 ಬ್ರಾಸ ಉಸುಕು ಇದ್ದು ಸದರಿ ಉಸುಕಿನ ಅಂದಾಜ ಕಿಮ್ಮತ್ತು ಅ.ಕಿ.2000-00 ರೂಪಾಯಿ ಆಗುತ್ತದೆ. ಸದರ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 12/09/2021 ರಂದು 08.30 ಎ.ಎಮ್ ದಿಂದ 09.30 ಎ.ಎಮ್ ದವರೆಗೆ ಮಾಡಿ ಮುಗಿಸಿ ಜಪ್ತಪಡಿಸಿಕೊಂಡ ಟ್ರ್ಯಾಕ್ಟರದೊಂದಿಗೆ ಇಂದು ದಿನಾಂಕ: 12/09/2021 ರಂದು 10.45 ಎ.ಎಮ್ ಕ್ಕೆ ಯಾದಗಿರಿ ಗ್ರಾಮೀಣ ಠಾಣೆಗೆ ಬಂದು ಕಾನೂನು ಪ್ರಕಾರ ಕೈಗೊಳ್ಳಲು ಎಸ್.ಎಚ್.ಓ ರವರಲ್ಲಿ ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶ.

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 211/2021 ಕಲಂ 87 ಕೆ.ಪಿ ಆಕ್ಟ್ ;- ದಿನಾಂಕ 12/09/2021 ರಂದು, 19-15 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಇಂದು ದಿನಾಂಕ: 12/09/2021 ರಂದು ಸಾಯಂಕಾಲ 17-30 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಠಾಣಾ ವ್ಯಾಪ್ತಿಯ ಹಳಿಸಗರ ಏರಿಯಾದಲ್ಲಿ ಕೆಲವು ಅಪರಿಚಿತ ಜನರು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ, ಠಾಣೆಯ ಎನ್.ಸಿ ನಂಬರ 53/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೆರೆಗೆ, ಮಾನ್ಯ ನ್ಯಾಯಾಲಯವು 19-00 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಜೂಜಾಟ ಆಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ವಿನಂತಿ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 211/2021 ಕಲಂ 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೇನೆ.

ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆನಂ: 143/2021 ಕಲಂ: 143, 147, 148, 323, 326, 307, 506 ಸಂಗಡ 149 ಐಪಿಸಿ;- ದಿನಾಂಕ 12.09.2021 ರಂದು ಸಮಯ ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 4:00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿಯ ಅಣ್ಣನಾದ ಗಾಯಾಳು ಮಹ್ಮದ ರಫೀ ಈತನು ತಮ್ಮ ದೊಡ್ಡಹೊಲದ ಗದ್ದೆಯಲ್ಲಿ ಕೆಲಸ ಮಾಡತ್ತಿದ್ದಾಗ ಅದೇ ಹೊಲದ ಸಂಬಂಧವಾಗಿ ಹಳೆಯ ವೈಶಮ್ಯದಿಂದ ಆರೋಪಿತರೆಲ್ಲಾರು ಕೂಡಿ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಮಹ್ಮದ ರಫಿಯ ಹತ್ತಿರ ಹೋಗಿ ಆತನೊಂದಿಗೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕೈಯಿಂದ ಕಟ್ಟಿಗೆಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯು ನೀಡಿದ ಲಿಖಿತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 143/2021 ಕಲಂ: 143, 147, 148, 323, 326, 307, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 13-09-2021 11:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080