Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 14-09-2021

 

ಶಹಾಪೂರ ಪೊಲೀಸ್ ಠಾಣೆ

ಗುನ್ನೆ ನಂಬರ 213/2021 ಕಲಂ 78 (3) ಕೆಪಿ ಎಕ್ಟ ;- ದಿನಾಂಕ: 13-09-2021 ರಂದು 3:00 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ (ಕಾಸು). ಶಹಾಪುರ ಪೊಲೀಸ ಠಾಣೆ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 13-09-2021 ರಂದು 2:15 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಶ್ರೀ ಪಾಲ್ಕಮ್ಮ ದೇವಿ ದೇವಸ್ಥಾನದ ಹತ್ತಿರ ಯಾರೋ ಒಬ್ಬ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಖಚಿತ ಬಂದಿದ್ದು ಸದರಿ ಅಪರಾಧವು ಅಸಂಜ್ಞೇಯವಾಗಿದ್ದರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 54/2021 ನೇದ್ದನ್ನು ದಾಖಲಿಸಿದ್ದು ಇದೆ ಮತ್ತು ಕಲಂ 78(3)  ಕೆ.ಪಿ. ಆಕ್ಟ ಅಡಿಯಲ್ಲಿ  ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ  ಸದರಿ ಮಟಕಾ ಜೂಜಾಟ ನಡೆಸುವ ವ್ಯಕ್ತಿಯ  ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ. 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 213/2021 ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.. ನಂತರ  ದಾಳಿಗೆ ಹೋಗಿ ದಾಳಿಮಾಡಿ ಒಬ್ಬಬ್ಬಾರೋಪಿ 920/- ನಗದು ಹಣ, ಒಂದು ಮಟಕಾ ಚೀಟಿ  ಮತ್ತು ಒಂದು ಬಾಲ್ ಪೆನ್ ಅ.ಕಿ.00 ಗಳನ್ನು ವಶಪಡಿಸಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ನೀಡಿದ್ದು ಇದೆ.

 

ಯಾದಗಿರಿ ನಗರ ಪೊಲೀಸ್ ಠಾಣೆ

 ಗುನ್ನೆ ನಂ 97/2021 ಕಲಂ. 15(ಎ), 32(3) ಕೆ.ಇ ಆಕ್ಟ್;- ದಿನಾಂಕ; 13/09/2021 ರಂದು 12-30 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿ ಇದ್ದಾಗ ಯಾದಗಿರಿ ನಗರದ ಶಾಸ್ತ್ರಿಚೌಕ ಹತ್ತಿರದ ಗಾಂದಿನಗರ ತಾಂಡಾ ಕ್ರಾಸದಲ್ಲಿ  ಯಾರೋ ಒಬ್ಬಳು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಳೆ ಮತ್ತು ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೋಡುತ್ತಿದ್ದಾಳೆ  ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ, ಕೂಡಲೆ ನಾನು ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು,  1-15 ಪಿಎಮ್ ಕ್ಕೆ ಶಾಸ್ತ್ರಿಚೌಕ ಹತ್ತಿರ ಜೀಪನ್ನು ನಿಲ್ಲಿಸಿ, ಅಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಒಂದು ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ  ಗಾಂಧಿನಗರ ತಾಂಡಾ ಕಡೆಗೆ ಹೋಗುವ ಕ್ರಾಸದಲ್ಲಿ ಇರುವ ರಾಜೇಶ ಚವ್ಹಾಣ ಈತನ ಹೊಟೇಲ್ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಹೆಣ್ಣು ಮಗಳು ಕುಳಿತುಕೊಂಡು ತನ್ನ ಹತ್ತಿರ ಇದ್ದ ಕೈಚೀಲದಲ್ಲಿದ್ದ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಖಚಿತಪಡಿಸಿಕೊಂಡು ದಾಳಿ ಮಾಡಿ  ಹಿಡಿದು ಆರೋಪಿತಳಾದ ಸವಿತಾಬಾಯಿ ಗಂಡ ವಿಠ್ಠಲ ಚವ್ಹಾಣ ಜಾ; ಲಂಬಾಣೀ ಉ; ಕೂಲಿಕೆಲಸ ಸಾ; ಗಾಂಧಿನಗರ ಯಾದಗಿರಿ ಅಂತಾ ತಿಳಿಸಿದಳು ಸದರಿ ಅವಳ ಹತ್ತಿರ  ಓರಿಜಿನಲ್ ಚಾಯ್ಸ್  ವಿಸ್ಕಿಯ 90 ಎಮ್.ಎಲ್.ನ ಒಟ್ಟು 15 ಪೌಚುಗಳು, ಒಂದಕ್ಕೆ 35.13/- ರೂ|| ಗಳು, ಹೀಗೆ ಒಟ್ಟು 526/- ರೂ. ಮತ್ತು ಮೂರು ಪ್ಲಾಸ್ಟೀಕ ಗ್ಲಾಸಗಳು ಅ.ಕಿ .00-00 ಸಿಕ್ಕಿದ್ದು   ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಬಂದು  ಠಾಣೆ ಗುನ್ನೆ ನಂ. 97/2021 ಕಲಂ. 15(ಎ), 32(3) ಕೆ.ಇ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ

ಗುನ್ನೆ ನಂ 98/2021 ಕಲಂ 379 ಐಪಿಸಿ;- ಯಾದಗಿರಿಯ ಸಹರಾ ಕಾಲೋನಿಯಲ್ಲಿ ವಾಸವಿದ್ದು, ನಮ್ಮ ಮನೆಯಲ್ಲಿ 4-5 ದನಕರುಗಳು ಸಾಕಿಕೊಂಡು ಇರುತ್ತೇನೆ. ಸದರಿಯವುಗಳಲ್ಲಿ 04 ದನಕರುಗಳನ್ನು ಪಶು ಸಂಗೋಪನೆ ಇಲಾಖೆಯಲ್ಲಿ ನೊಂದಣಿ ಮಾಡಿಸಿರುತ್ತೇನೆ. ಹೀಗಿದ್ದು ದಿನಾಂಕ 22/08/2021 ರ ರಾತ್ರಿ ವೇಳೆಯಲ್ಲಿ ನನ್ನ ಒಂದು ಕೆಂಪು ಬಣ್ಣದ ಹೋರಿ ಕರು ಅ.ಕಿ 15,000/-ರೂ|| ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕರುವಿನ ಪಶುಸಂಗೋಪಾನೆ ಇಲಾಖೆಯ ನೊಂದಣಿ ಸಂಖ್ಯೆ-100170, 377484 ಅಂತಾ ಕರುವಿನ ಕಿವಿಗೆ ಮೇಲೆ ಬಿಲ್ಲೆ ಹಾಕಿದ್ದು ಇರುತ್ತದೆ. ಸದರಿ ಕರು ಬೇರೆ ಎಲ್ಲಿಯಾದರೂ ಮೇಯಲು ಹೋಗಿರಬಹುದು ಅಂತಾ ನಾನು ಅಲ್ಲಿ ಇಲ್ಲಿ ಹುಡುಕಾಡುತ್ತಾ ಸುಮ್ಮನೆ ಇದ್ದೆನು. ಇದಾದ ನಂತರ ದಿನಾಂಕ 10/09/2021 ರಂದು 09-00 ಗಂಟೆಯ ಸುಮಾರಿಗೆ ನಮ್ಮ ಬಿಳಿ ಅಂಡಾ ಬಣ್ಣದ ಆಕಳು ಹಾಗೂ ಇತರ ದನಗಳ ಸಂಗಡ ಕಟ್ಟಿಹಾಕಿದ್ದು, ಮರು ದಿನ ಮುಂಜಾನೆ ಅಂದರೆ ದಿನಾಂಕ 11/09/2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನೋಡಿದಾಗ ನಮ್ಮ ಮನೆಯ ಮುಂದೆ ಆಕಳು ಇರಲಿಲ್ಲ. ನನ್ನ ಮಗ ಮೋಹನರೆಡ್ಡಿ & ನಾನು ಗಾಬರಿಯಾಗಿ ನಮ್ಮ ಮನೆಯ ಸುತ್ತಾ-ಮತ್ತಾ ನೋಡಿದರು ಆಕಳ ಸುಳಿವು ಕಾಣಲಿಲ್ಲ. ಆಕಳ ಅಂದಾಜು ಕಿಮ್ಮತ್ತು 35,000/- ರೂಪಾಯಿಗಳು. ಸದರಿ ಆಕಳ ಪಶುಸಂಗೋಪಾನೆ ಇಲಾಖೆಯ ನೊಂದಣಿ ಸಂಖ್ಯೆ-100170, 377518 ಅಂತಾ ಆಕಳ ಕಿವಿಯ ಮೇಲೆ ಬಿಲ್ಲೆ ಹಾಕಿದ್ದು ಇರುತ್ತದೆ. ಆಕಳು ನನ್ನ ಹೆಂಡತಿಯಾದ ಗಿರಿಜಮ್ಮ ಗಂಡ ಚೆನ್ನಾರೆಡ್ಡಿ ಇವರ ಹೆಸರಿನಲ್ಲಿ ನೊಂದಣಿ ಮಾಡಿಸಲಾಗಿದೆ. ಈ ಮೊದಲು ಹೋರಿಗರು ಕಳ್ಳತನ ಮಾಡಿದವರೇ ಸದರಿ ಆಕಳು ಕೂಡ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ 22/08/2021 ರ ರಾತ್ರಿ ನಮ್ಮ ಮನೆಯ ಮುಂದೆ ಕಟ್ಟಿ ಹಾಕಿದ ನಾನು ಸಾಕಿದ ಒಂದು ಹೋರಿಗರು ಹಾಗೂ ದಿನಾಂಕ 10/09/2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ 11/09/2021 ರಂದು ಬೆಳಿಗ್ಗೆ 07-00 ಗಂಟೆಯ ಅವಧಿಯಲ್ಲಿ ನನ್ನ ಒಂದು ಬಿಳಿ ಅಂಡಾ ಬಣ್ಣದ ಆಕಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆಕಳು ಮತ್ತು ಕರುವಿನ ಒಟ್ಟು ಅ.ಕಿ 50,000/- ರೂಪಾಯಿಗಳು. ಸದರಿಯವುಗಳನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಇಲ್ಲಿಯ ವರೆಗೆ ನಾವು ನಮ್ಮ ಆಕಳು ಮತ್ತು ಕರುವನ್ನು ಹುಡುಕಾಡಿದರೂ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 98/2021 ಕಲಂ 379 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

 

ಶೋರಾಪೂರ ಪೊಲೀಸ್ ಠಾಣೆ

ಗುನ್ನೆ ನಂ. 140/2021 ಕಲಂ 279 337 338 ಐಪಿಸಿ;- ದಿನಾಂಕ: 13/09/2021 ರಂದು 5:00 ಪಿ.ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಇಮಾಮಸಾಬ ತಂದೆ ದವಲಸಾಬ ಹವಲ್ದಾರ ವ|| 60 ವರ್ಷ ಉ|| ಒಕ್ಕಲುತನ ಜಾ|| ಮುಸ್ಲಿಂ ಸಾ|| ತಿಂಥಣಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ನೀಡಿದರ ಸಾರಾಂಶವೆನಂದರೆ, ದಿನಾಂಕ:11/09/2021 ರಂದು ಬೆಳಿಗ್ಗೆ 10 ಗಂಟೆಗೆ ನಾನು ಮನೆಯಲ್ಲಿರುವಾಗ ನನ್ನ ತಮ್ಮನಾದ ಸೈಫನಸಾಬ ತಂದೆ ದವಲಸಾಬ ಹವಲ್ದಾರ ವ|| 46 ವರ್ಷ ಇತನು ತನ್ನ ಮೋಟರ್ ಸೈಕಲ್ ನಂ. ಕೆಎ-33 ಕ್ಯೂ-3767 ನೇದ್ದನ್ನು ತಗೆದುಕೊಂಡು ಕೆಲಸದ ನಿಮಿತ್ಯ ಕಕ್ಕೇರಾಗೆ ಹೊಗಿ ಬರುತ್ತೆನೆ ಅಂತಾ ಹೇಳಿ ಹೊಗಿದ್ದನು. ಅಂದಾಜು ಮದ್ಯಾಹ್ನ 12:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಊರಿನವರಾದ ಸಲಿಂಸಾಬ ತಂದೆ ಬಂದಗಿಸಾಬ ಕಂಬಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಾನು ನನ್ನ ಕೆಲಸ ನಿಮಿತ್ಯ ಕಕ್ಕೇರಾ ಹೊಗಿ ಕೆಲಸ ಮುಗಿಸಿಕೊಂಡು, ಮರಳಿ ನಮ್ಮೂರಿಗೆ ಬರುವಾಗ ನಿಮ್ಮ ತಮ್ಮನಾದ ಸೈಫನಸಾಬ ಇತನು ತನ್ನ ಕೆಲಸ ಮುಗಿಸಿಕೊಂಡು ಊರಿಗೆ ಹೊಗುತ್ತೇನೆ ಅಂತಾ ತಿಳಿಸಿದಾಗ ನಡೆ ನಾನು ನಿನ್ನ ಹಿಂದೆ ನಾನು ನನ್ನ ಮೋಟರ್ ಸೈಕಲ್ ತಗೆದುಕೊಂಡು ಬರುತ್ತೇನೆ ಅಂತಾ ಹೇಳಿದೇನು. ತನ್ನ ಮೋಟರ್ ಸೈಕಲ್ ಮೇಲೆ ಊರಿಗೆ ಬರುತ್ತಿರುವಾಗ ಅಂದಾಜು ಮದ್ಯಾಹ್ನ 12:30 ಗಂಟೆಗೆ ಕಕ್ಕೇರಾ-ಶಾಂತಪೂರ ಮುಖ್ಯ ರಸ್ತೆಯ ಹುಣಸಿಹೊಳೆ ಗ್ರಾಮ ದಾಟಿ ಸ್ವಲ್ಪ ಮುಂದುಗಡೆ ರಸ್ತೆಯಲ್ಲಿ ತನ್ನ ಎಡ ಸೈಡಿಗೆ ತಾನು ನಿಧಾನವಾಗಿ ಮೋಟರ್ ಸೈಕಲ್ ಚಲಾಯಿಸುತ್ತಾ ಹೊಗುತ್ತಿರುವಾಗ ಶಾಂತಪೂರ ಕಡೆಯಿಂದ ಒಂಡು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸೈಫನಸಾಬ ಇತನ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಇಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದರು. ಹೊಗಿ ಎಬ್ಬಿಸಿ ನೋಡಲಾಗಿ ನಿನ್ನ ತಮ್ಮನಿಗೆ ಕುತ್ತಿಗೆಯ ಹಿಂಬಾಗದ ಬೆನ್ನು ಮೂಳೆ ಮುರಿದಂತಾಗಿ ಭಾರಿಗಾಯವಾಗಿದ್ದಲ್ಲದೆ, ತಲೆಗೆ, ಹಣೆಗೆ ರಕ್ತಗಾಯವಾಗಿರುತ್ತದೆ. ಅಪಘಾತ ಮಾಡಿದ ಮೋಟರ್ ಸೈಕಲ್ ನಂ. ಕೆಎ28 ಇಡಬ್ಲ್ಯೂ-8116 ಇದ್ದು, ಅಪಘಾತ ಪಡಿಸಿದ ಮೊಟರ್ ಸೈಕಲ್ ಸವಾರನಿಗೆ ನೋಡಲು ಅವನ ಕೈ ಬೆರಳಿಗೆ ತರಚಿದಗಾಯವಾಗಿದ್ದವು. ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಮಾಳಪ್ಪ ತಂದೆ ಬಸಪ್ಪ ಜಂಪರ ಸಾ|| ಕಕ್ಕೇರಾ ಅಂತಾ ತಿಳಿಸಿದನು. ನೀವು ಬೇಗ ಒಂದು ವಾಹನವನ್ನು ತಗೆದುಕೊಂಡು ಬನ್ನಿರಿ ಅಂತಾ ತಿಳಿಸಿದಾಗ, ನಾನು ಮತ್ತು ಭೀಮಣ್ಣ ಗಿರಿಣಿ, ನಮ್ಮ ತಮ್ಮ ಸೈಫನಸಾಬ ಇತನ ಮಗನಾದ ಬಾಬಾ ಎಲ್ಲರು ಕೂಡಿ ಒಂದು ಖಾಸಗಿ ವಾಹನ ತಗೆದುಕೊಂಡು ಅಪಘಾತವಾದ ಸ್ಥಳಕ್ಕೆ ಹೊಗಿ ನೋಡಲಾಗಿ ನಮ್ಮ ತಮ್ಮನಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದವು. ನಮ್ಮ ತಮ್ಮ ಸೈಫನಸಾಬ ಇತನಿಗೆ ನಾವು ತಂದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಾಗಲಕೋಟೆಯ ಡಾ|| ಕುಮಾರೇಶ್ವರ ಆಸ್ಪತ್ರೆಗೆ ಹೊಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ತಮ್ಮನಿಗೆ ಬಹಳ ಗಂಭೀರ ಸ್ವರೂಪದ ಗಾಯವಾತದ್ದರಿಂದ ಆಸ್ಪತ್ರೆಯಲ್ಲಿ ಅವರ ಸಂಗಡ ಇದ್ದು ಉಪಚಾರ ಮಾಡಿಸಿ ಇಂದು ಠಾಣೆಗೆ ತಡವಾಗಿ ಬಂದು ದೂರು ಅಜರ್ಿ ನೀಡಿದ್ದು ಇರುತ್ತದ.  ಕಾರಣ ನನ್ನ ತಮ್ಮ ಸೈಫನಸಾಬ ಇತನಿಗೆ ಅಪಘಾತ ಮಾಡಿದ ಮೋಟರ್ ಸೈಕಲ್ ನಂ. ಕೆಎ28 ಇಡಬ್ಲ್ಯೂ-8116 ನೇದ್ದರ ಚಾಲಕನಾದ ಮಾಳಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 140/2021 ಕಲಂ 279 337 338 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ

    ಗುನ್ನೆ ನಂ 132/2021 ಕಲಂ 279, 338, 304(ಎ) ಐಪಿಸಿ ಮತ್ತು 187 ಐಎಂವಿ ಯಾಕ್ಟ್;- ದಿನಾಂಕ 13/09/2021 ರಂದು 6.30 ಪಿ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ನಿಂಗಮ್ಮ ಗಂಡ ರವೀಂದ್ರ ಮನ್ನಾಪೂರ ವಯಾ|| 29 ಜಾತಿ|| ಹಿಂದೂ ಗಾಣಿಗ ಉ|| ಕೂಲಿ ಸಾ|| ಕಾಚಾಪೂರ ತಮ್ಮಲ್ಲಿ ಸಲ್ಲಿಸುವ ಫಿರ್ಯಾದಿ ಅಜರ್ಿ ಏನೆಂದರೆ, ನಾನು ಮತ್ತು ನನ್ನ ಗಂಡನಾದ ರವೀಂದ್ರ ತಂದೆ ರಾವುತಪ್ಪ ಮನ್ನಾಪೂರ ವ|| 32ವರ್ಷ ಜಾ|| ಗಾಣಿಗ ಉ|| ಕೂಲಿ ಸಾ|| ಕಾಚಾಪೂರ ಇಬ್ಬರೂ ಚನ್ನಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ನಮಗೆ 4 ಜನ ಮಕ್ಕಳಿರುತ್ತಾರೆ. ಹೀಗಿದ್ದು ನನ್ನ ಗಂಡನಾದ ರವೀಂದ್ರ ಈತನು ಕೂಲಿ ಕೆಲಸ ಮಾಡಿಕೊಂಡು ನಮ್ಮ ಮನೆಯ ಸಂಸಾರದ ಜವಾಬ್ದಾರಿ ನೋಡಿಕೊಂಡು ಹೋಗುತ್ತಿದ್ದು, ಇಂದು ದಿನಾಂಕ 13/09/2021 ರಂದು ಮುಂಜಾನೆ 11.30 ಗಂಟೆಯ ಸುಮಾರಿಗೆ ನನ್ನ ಗಂಡನು ನಮ್ಮ ಊರಾದ ಕಾಚಾಪೂರದಿಂದ ನಮ್ಮೂರ ಮೈಲಾರಪ್ಪ ತಂದೆ ಹುಲಗಪ್ಪ ಮಾದರ ಇವರೊಂದಿಗೆ ಮೋಟಾರ ಸೈಕಲ್ ನಂ ಕೆಎ 33 ವಿ 6400 ನೇದ್ದರಲ್ಲಿ ಕೆಂಭಾವಿಗೆ ವಾರದ ಸಂತೆ ಮಾಡಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದನು. ನಂತರ ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರ ರುದ್ರಗೌಡ ತಂದೆ ಬಸವರಾಜ ಹೊಸಮನಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ರುದ್ರಗೌಡ ಮತ್ತು ನಮ್ಮೂರ ಸಿದ್ರಾಮಪ್ಪಗೌಡ ತಂದೆ ಹಣಮಂತ್ರಾಯ ಹೊಸಮನಿ ಇಬ್ಬರೂ ಸಂಜೀವನಗರ ಕ್ರಾಸ್ ಹತ್ತಿರ ಮಾತನಾಡುತ್ತಾ ಕುಳಿತಿದ್ದೆವು. ಆಗ ನಿಮ್ಮ ಗಂಡನಾದ ರವೀಂದ್ರನು ಸೈಕಲ್ ಮೋಟಾರ ನಂ ಕೆಎ 33 ವಿ 6400 ನೇದ್ದನ್ನು ನಡೆಸಿಕೊಂಡು ಕೆಂಭಾವಿಯಿಂದ ಕಾಚಾಪೂರ ಕಡೆಗೆ ಹೋಗುತ್ತಿದ್ದನು. ಅವನ ಸೈಕಲ್ ಮೋಟಾರ ಹಿಂದೆ ಮೈಲಾರಪ್ಪನು ಕುಳಿತಿದ್ದು ಇಬ್ಬರೂ ಕೂಡಿ ಕೆಂಭಾವಿ ಪಟ್ಟಣದ ಸಂಜೀವನಗರ ಕ್ರಾಸ್ ದಾಟಿ ಮುಂದೆ ಜಮೀಲಸಾಬನ ಬಜಾಜ್ ಶೋರೂಮ್ ಅಂಗಡಿಯ ಮುಂದೆ ಹೋಗುತ್ತಿದ್ದಾಗ 4.50 ಗಂಟೆಯ ಸುಮಾರಿಗೆ ಹಿಂದಿನಿಂದ ಒಂದು ಟಿಪ್ಪರ್ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ರವೀಂದ್ರ ರವರು ಹೋಗುತ್ತಿದ್ದ ಸೈಕಲ್ ಮೋಟಾರಗೆ ಹಿಂದೆ ಹಾಕಿ ಮುಂದೆ ಹೋಗಬೇಕೆಂದು ಓವರ್ಟೇಕ್ ಮಾಡಲು ಹೋಗಿ ರವೀಂದ್ರ ರವರ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದು ಅಪಘಾತದಿಂದಾಗಿ ರವೀಂದ್ರನ ತಲೆಗೆ ಭಾರೀ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಸೈಕಲ್ ಮೋಟಾರ ಹಿಂದೆ ಕುಳಿತಿದ್ದ ಮೈಲಾರಪ್ಪನಿಗೆ ಭಾರೀ ಗಾಯಗಳಾಗಿ ಬಿದ್ದು ಒದ್ದಾಡುತ್ತಿದ್ದಾನೆ. ನೀವು ತಕ್ಷಣ ಕೆಂಭಾವಿಗೆ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ತಕ್ಷಣ ನಮ್ಮ ದೊಡ್ಡಪ್ಪನಾದ ಸಿದ್ರಾಮಪ್ಪ ತಂದೆ ಬಸವಂತ್ರಾಯ ನಡುವಿನಮನಿ ಮತ್ತು ನಮ್ಮ ಅತ್ತೆಯಾದ ಚಂದ್ರಭಾಗಮ್ಮ ಗಂಡ ರಾವುತಪ್ಪ ಮನ್ನಾಪೂರ ರವರೊಂದಿಗೆ ಕೆಂಭಾವಿ ಪಟ್ಟಣದ ಸಂಜೀವನಗರ ಕ್ರಾಸ್ ಹತ್ತಿರ ಬಂದು ನೋಡಲಾಗಿ ನನ್ನ ಗಂಡನಾದ ರವೀಂದ್ರನು ಹೋಗುತ್ತಿದ್ದ ಸೈಕಲ್ ಮೋಟಾರಗೆ ಟಿಪ್ಪರ್ ಅಪಘಾತ ಮಾಡಿದ್ದರಿಂದಾಗಿ ತಲೆಗೆ ಭಾರೀ ರಕ್ತಗಾಯವಾಗಿ ತಲೆಯು ಚಪ್ಪಟೆಯಾದಂತಾಗಿ ಮೆದುಳು ಹೊರಗೆ ಬಂದಿದ್ದು ಸ್ಥಳದಲ್ಲೇ ಮೃತಪಟ್ಟು ಬಿದ್ದಿರುವುದನ್ನು ನೋಡಿದೆವು. ನಂತರ ಸ್ಥಳದಲ್ಲಿದ್ದ ರುದ್ರಗೌಡರಿಗೆ ವಿಚಾರಿಸಲಾಗಿ ನನ್ನ ಗಂಡನ ಜೊತೆಗೆ ಸೈಕಲ್ ಮೋಟಾರ ಹಿಂದೆ ಕುಳಿತು ಗಾಯ ಹೊಂದಿದ ಮೈಲಾರಪ್ಪನಿಗೆ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಮೈಲಾರಪ್ಪನಿಗೆ ಎಡಗಾಲಿನ ಪಾದಕ್ಕೆ ಭಾರೀ ರಕ್ತಗಾಯ, ಬಲಗಣ್ಣಿನ ಕೆಳಗೆ ರಕ್ತಗಾಯವಾಗಿರುತ್ತದೆ ಅಂತಾ ತಿಳಿಸಿದರು. ಮತ್ತು ಅಪಘಾತ ಮಾಡಿದ ಟಿಪ್ಪರ್ ನಂಬರ ನೋಡಲಾಗಿ ನಂಬರ ಇರಲಿಲ್ಲ. ಅದರ ಚೆಸ್ಸಿ ನಂಬರ ಕೇಳಿ ತಿಳಿದುಕೊಳ್ಳಲಾಗಿ ಅಂತಾ ಅಪಘಾತ ಮಾಡಿದ ಚಾಲಕನ ಹೆಸರು ವಿಚಾರಿಸಲಾಗಿ ರಾಮಚಂದ್ರಪ್ಪ ತಂದೆ ಫಕೀರಪ್ಪ ಮ್ಯಾಗಿನಮನಿ ಸಾ|| ಐನಾಪೂರ ತಾ|| ಸುರಪೂರ ಅಂತಾ ಇದ್ದು ಟಿಪ್ಪರ್ ಚಾಲಕನು ಟಿಪ್ಪರನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದಾಗ ವಿಷಯ ನನಗೆ ಗೊತ್ತಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಟಿಪ್ಪರ್ ನಂ ಕೆಎ 32 ಡಿ 9728 ನೇದ್ದರ ಚಾಲಕನಾದ ರಾಮಚಂದ್ರಪ್ಪ ತಂದೆ ಫಕೀರಪ್ಪ ಮ್ಯಾಗಿನಮನಿ ಸಾ|| ಐನಾಪೂರ ಈತನ ಅತೀವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು ಟಿಪ್ಪರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 132/2021 ಕಲಂ 279, 338, 304(ಎ) ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 14-09-2021 11:28 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080