ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 15-09-2021
ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ನಂ. 144/2021 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ;- ದಿನಾಂಕ 11.09.2021 ರಂದು ಫಿಯರ್ಾದಿ ತಮ್ಮ ಮತ್ತು ಫಿಯರ್ಾದಿ ತಂದೆ ತಮ್ಮ ಮೋಟರ ಸೈಕಲ ನಂಬರ ಖಿಖ-06-ಇಗ-5500 ಹೆಚ್, ಎಫ್, ಡಿಲಕ್ಸ ನೇದ್ದರ ಮೇಲೆ ಹೊಲಕ್ಕೆ ಹೋಗಿ ಮರಳಿ ನಾರಾಯಣಪೇಟ ಕಡೆಗೆ ಬರುವಾಗ ಅನಪೂರ ಗೇಟ ದಾಟಿದ ಮೇಲೆ ಆರೋಪಿ ಕಾರ ನಂ ಏಂ-32-ಕ-3354 ನೇದ್ದರ ಚಾಲಕ ಯಾದಗಿರ ಕಡೆಯಿಂದ ಅತಿ ವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಹೋಗಿದ್ದು ಸದರಿ ಫಿಯರ್ಾದಿ ತಮ್ಮ ಮತ್ತು ತಂದೆಗೆ ಅಪಘಾತದಲ್ಲಿ ಬಾರಿ ಮತ್ತು ಸಾದ ಸ್ವರೂಪದ ಗಾಯಗಳಾದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.ಸ
ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ 97/2021 ಕಲಂ. 15(ಎ), 32(3) ಕೆ.ಇ ಆಕ್ಟ್;- ದಿನಾಂಕ; 13/09/2021 ರಂದು 12-30 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿ ಇದ್ದಾಗ ಯಾದಗಿರಿ ನಗರದ ಶಾಸ್ತ್ರಿಚೌಕ ಹತ್ತಿರದ ಗಾಂದಿನಗರ ತಾಂಡಾ ಕ್ರಾಸದಲ್ಲಿ ಯಾರೋ ಒಬ್ಬಳು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಳೆ ಮತ್ತು ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೋಡುತ್ತಿದ್ದಾಳೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ, ಕೂಡಲೆ ನಾನು ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು, 1-15 ಪಿಎಮ್ ಕ್ಕೆ ಶಾಸ್ತ್ರಿಚೌಕ ಹತ್ತಿರ ಜೀಪನ್ನು ನಿಲ್ಲಿಸಿ, ಅಲ್ಲಿಂದ ಮುಂದೆ ನಡೆದುಕೊಂಡು ಹೋಗಿ ಒಂದು ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ ಗಾಂಧಿನಗರ ತಾಂಡಾ ಕಡೆಗೆ ಹೋಗುವ ಕ್ರಾಸದಲ್ಲಿ ಇರುವ ರಾಜೇಶ ಚವ್ಹಾಣ ಈತನ ಹೊಟೇಲ್ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಹೆಣ್ಣು ಮಗಳು ಕುಳಿತುಕೊಂಡು ತನ್ನ ಹತ್ತಿರ ಇದ್ದ ಕೈಚೀಲದಲ್ಲಿದ್ದ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆರೋಪಿತಳಾದ ಸವಿತಾಬಾಯಿ ಗಂಡ ವಿಠ್ಠಲ ಚವ್ಹಾಣ ಜಾ; ಲಂಬಾಣೀ ಉ; ಕೂಲಿಕೆಲಸ ಸಾ; ಗಾಂಧಿನಗರ ಯಾದಗಿರಿ ಅಂತಾ ತಿಳಿಸಿದಳು ಸದರಿ ಅವಳ ಹತ್ತಿರ ಓರಿಜಿನಲ್ ಚಾಯ್ಸ್ ವಿಸ್ಕಿಯ 90 ಎಮ್.ಎಲ್.ನ ಒಟ್ಟು 15 ಪೌಚುಗಳು, ಒಂದಕ್ಕೆ 35.13/- ರೂ|| ಗಳು, ಹೀಗೆ ಒಟ್ಟು 526/- ರೂ. ಮತ್ತು ಮೂರು ಪ್ಲಾಸ್ಟೀಕ ಗ್ಲಾಸಗಳು ಅ.ಕಿ .00-00 ಸಿಕ್ಕಿದ್ದು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಬಂದು ಠಾಣೆ ಗುನ್ನೆ ನಂ. 97/2021 ಕಲಂ. 15(ಎ), 32(3) ಕೆ.ಇ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 214/2021. ಕಲಂ. 279, 337, 338 ಐ.ಪಿ.ಸಿ.;- ದಿನಾಂಕ: 14/09/2021 ರಂದು ಬೆಳಿಗ್ಗೆ 11-20 ಗಂಟೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ. ಎಂ.ಎಲ್.ಸಿ. ಇದೆ ಅಂತ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 11-30 ಗಂಟೆಗೆ ಹೋಗಿ ಗಾಯಾಳುದಾರನಾದ ಶ್ರೀ ಮಹ್ಮದ ಶೊಹೇಲ್ ತಂದೆ ಮಹ್ಮದ್ ರಫೀಕ್ ಶೇಖ್ ವ|| 22 ಜಾ|| ಮುಸ್ಲಿಂ ಉ|| ಕೂಲಿ ಸಾ|| ಮೋಜಂಪೂರ ಸೂರಪೂರ. ಇವರ ಹೇಳಿಕೆಯನ್ನು 11-30 ಗಂಟೆಯಿಂದ 13-30 ಗಂಟೆಯ ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 14-00 ಗಂಟೆಗೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ. ಇಂದು ದಿನಾಂಕ 14/09/2021 ರಂದು ಬೆಳಿಗ್ಗೆ 9-20 ಗಂಟೆಗೆ ಮನೆಯಿಂದ ನಾನು ಮತ್ತು ನನ್ನ ಚಿಕ್ಕಪ್ಪ ಮಹ್ಮದ್ ರಫೀಕ್ ತಂದೆ ಮಹ್ಮದ್ ಮೀಯಾ ಶೇಖ್ ಮತ್ತು ನನ್ನ ಸಂಬಂದಿಕನಾದ ಮಹ್ಮದ್ ಸಮೀರ್ ತಂದೆ ಮಹ್ಮದ್ ರಫೀಕ್ ಶೇಖ್ ಮೂರೂ ಜನರು ಕೂಡಿಕೊಂಡು ಹೋರಟು, ಸುರಪೂರ ಬಸ್ ನಿಲ್ದಾಣಕ್ಕೆ ಬಂದು ಯಾದಗಿರಿ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸ ನಂ ಕೆಎ-34 ಎಫ್-1160 ನೇದ್ದರಲ್ಲ್ಲಿ ನಾವೂ ಮೂರು ಜನರು ಕುಳಿತುಕೊಂಡು ಯಾದಗಿರಿಗೆ ಹೋಗುತ್ತಿರುವಾಗ ಬೆಳಿಗ್ಗೆ ಅಂದಾಜು 10-20 ಗಂಟೆಯ ಸುಮಾರಿಗೆ ಸುರಪೂರ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಅನವಾರ ಗ್ರಾಮ ದಾಟಿ ಹೈಯಾಳ (ಕೆ) ಕ್ರಾಸ್ ಹತ್ತಿರ ಬಸ್ಸ ಚಾಲಕನು ತನ್ನ ಬಸ್ಸನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೆ ಎಡಕ್ಕೆ ಕಟ್ಟ ಮಾಡಿ ಅಪಘಾತಮಾಡಿ ಬಸ್ ಪಲ್ಟಿ ಮಾಡಿದ್ದು ಸದರಿ ಅಪಘಾತದಲ್ಲಿ 1) ನನಗೆ ತಲೆಗೆ, ಎಡಗೈಗೆ ಗುಪ್ತಗಾಯ, ಬಸ್ಸಿನಲ್ಲಿ ಇದ್ದವರಿಗೆ ನೋಡಿ ಹೆಸರು ವಿಚಾರಿಸಲಾಗಿ 2) ರಂಜಿತಾ ತಂದೆ ಮಲ್ಲರಾವ್ ಕುಲ್ಕಣರ್ಿ ಸಾ|| ಪಾಂಡುರಂಗ ಗುಡಿ ಹತ್ತಿರ ಸುರಪೂರ ಇವರಿಗೆ ಬಲಗಾಲ ಮೊಳಕಾಲ ಹತ್ತಿರ, ಪಾದದ ಬೆರಳುಗಳಿಗೆ ಭಾರಿ ರಕ್ತಗಾಯ, ಎಡಗೈಯಿ ಮೋಳಕೈಗೆ ರಕ್ತಗಾಯ, 3) ಶಿವುಕುಮಾರ ತಂದೆ ಹಣಮಯ್ಯ ಎಲಗಟ್ಟಿ ಸಾ|| ಕೆ.ಇ.ಬಿ ಹತ್ತಿರ ಕಂಪ್ಲಿ ಈತನಿಗೆ ಬಲ ತಲೆಗೆ ರಕ್ತಗಾಯ, ಎರಡು ಮೋಳಕಾಲಿಗೆ ತರಚಿಗ ಗಾಯ, ಎಡಗೈಗೆ ಗುಪ್ತಗಾಯ, 4) ವೆಂಕಟೇಶ ತಂದೆ ಭಿಮಯ್ಯ ನಾಯಕ ಸಾ|| ಗೌಡೂರ ಈತನಿಗೆ, ಸೋಂಟಕ್ಕೆ ಒಳಪೆಟ್ಟು, ಗದ್ದಕ್ಕೆ ರಕ್ತಗಾಯ, 5) ಸಂಜಯ ತಂದೆ ವೆಂಕಟೆಶ ನಾಯಕ ಇವರ ಹೊಟ್ಟೆಗೆ ಗುಪ್ತಗಾಯ, 6) ಬಸಮ್ಮ ಗಂಡ ವೆಂಕಟೇಶ ನಾಯಕ ಇವರಿಗೆ ಹಿಂದಿನ ಬೆನ್ನಿಗೆ ತರಚಿದ ಗಾಯ, 7) ದುರ್ಗಮ್ಮ ಗಂಡ ಬಸಲಿಂಗಪ್ಪ ಲಿಂಗೇರಿ ಸಾ|| ವಾಲ್ಮೀಕಿನಗರ ಯಾದಗಿರಿ ಇವರಿಗೆ ಎದೆಗೆ ಗುಪ್ತಗಾಯ, ತಲೆಗೆ ಗುಪ್ತಗಾಯ, 8) ಪಾರ್ವತಿ ಗಂಡ ಸಾಹೆಬರೆಡ್ಡಿ ನಾಟೇಕಾರ ಸಾ|| ಕಂಚಲಕಾಯಿ ಇವರಿಗೆ ಎಡಗಡೆ ಮೆಲಕಿಗೆ ರಕ್ತಗಾಯ, ಎಡಗಾಲ ಮೋಳಕಾಲಿಗೆ ಗುಪ್ತಗಾಯ, ಸೋಂಟಕ್ಕೆ, ಎಡಗಡೆ ಜುಬ್ಬಕ್ಕೆ, ಹೊಟ್ಟೆಗೆ ಗುಪ್ತಗಾಯ, 9] ಸಾಹೆಬರೆಡ್ಡಿ ತಂದೆ ಕಾಳಪ್ಪ ನಾಟೇಕಾರ ಇವರಿಗೆ ಬಡಗೈ ಜುಬ್ಬಕ್ಕೆ ಗುಪ್ತಗಾಯ, ಹಸ್ತದ ಮೇಲೆ ತರಚಿದ ಗಾಯ, ಎದೆಗೆ ಗುಪ್ತಗಾಯ, 10) ಅಂಬ್ರೀಶ ತಂದೆ ಹಣಮಂತಪ್ಪ ಅಂಗಡಿ ಸಾ|| ಚಿತ್ತಾಪೂರ ತಾ|| ಲಿಂಗಸೂಗೂರ ಇವರಿಗೆ ಎದೆಗೆ, ಸೊಂಟಕ್ಕೆ ಗುಪ್ತಗಾಯ, 11) ಮಲ್ಲಪ್ಪ ತಂದೆ ಶರಣಪ್ಪ ನಾಯಕೋಡಿ ಸಾ|| ಕೌಳೂರ ಇವರಿಗೆ ಸೋಂಟಕ್ಕೆ, ಬಲತೋಡೆಗೆ ಗುಪ್ತಗಾಯ, 12) ಸಾಬಮ್ಮ ಗಂಡ ಮಲ್ಲಪ್ಪ ನಾಯ್ಕೋಡಿ ಇವರಿಗೆ ಹೊಟ್ಟೆಗೆ, ಎರಡು ಪಕ್ಕಿಗೆ ಗುಪ್ತಗಾಯ, 13) ಮಹಾದೇವಿ ಗಂಡ ಲಕ್ಷ್ಮಣ್ಣ ಚಿಲ್ಲಾಳ ಸಾ|| ರುಕ್ಮಾಪೂರ ಇವರಿಗೆ ಕುತ್ತಿಗೆಗೆ, ಬಲಗೈಗೆ ಗುಪ್ತಗಾಯ, ಎಡಗೈಗೆ ತರಚಿದಗಾಯ, 14) ಶ್ರೀದೇವಿ ತಂದೆ ನಾಗರಾಜಸಿಂಗ್ ರಜಪೂತ ಸಾ|| ಕಬಾಡಗೇರಾ ಸುರಪೂರ ಇವರಿಗೆ ಎಡಗಾಲಿಗೆ ರಕ್ತಗಾಯ, ತಲೆಗೆ, ಕುತ್ತಿಗೆಗೆ ಗುಪ್ತಗಾಯ, 15) ಬಾಲರಾಜ ತಂದೆ ರಮೇಶ ಚಂದುಕರ್ ಸಾ|| ಖುರೇಸಿ ಮುಲ್ಲಾ ರಂಗಂಪೇಟ್ ಸುರಪೂರ, ಇವರಿಗೆ ಕುತ್ತಿಗೆಯ ಮೇಲೆ, ಬೆನ್ನಿಗೆ, ಎಡಬುಜಕ್ಕೆ, ಗುಪ್ತಗಾಯ 16) ಮಲ್ಲಿಕಾಜರ್ುನ್ ತಂದೆ ಭಿಮಯ್ಯ ಹಡಪದ ಸಾ|| ಪಟೇಲ್ ಓಣಿ ದೇವದುರ್ಗ ಇವರಿಗೆ ಗದ್ದಕ್ಕೆ ತರಚಿದ ಗಾಯ, ಎದೆಗೆ, ತಲೆಗೆ, ಬಲಗೈಗೆ ಗುಪ್ತಗಾಯ. ನನ್ನ ಚಿಕ್ಕಪ್ಪನಾದ 17) ಮಹ್ಮದ್ ತೊಫೀಕ್ ತಂದೆ ಮಹ್ಮದ್ ಮೀಯಾ ಶೇಖ್ ಸಾ|| ಮೊಜಂಪೂರ ಸುರಪೂರ, ಇವರಿಗೆ ಎಡಗಾಲು ತೋಡಿಗೆ, ಎದೆಗೆ, ಸೊಂಟಕ್ಕೆ ಗುಪ್ತಗಾಯ. ನನ್ನ ಸಂಬಂದಿಕನಾದ 18) ಮಹ್ಮದ್ ಸಮೀರ್ ತಂದೆ ಮಹ್ಮದ್ ಶಫಿ ಶೇಖ್. ಇವರಿಗೆ ಟೊಂಕಕ್ಕೆ, ಬಲಗಾಲ ಮೋಳಕಾಲಿಗೆ ಗುಪ್ತಗಾಯ, 19) ನಿಂಗಮ್ಮ ಗಂಡ ಅಂಬ್ರೀಶ ವಡ್ಡರ, ಸಾ|| ಎಸ್.ಬಿ.ಐ ಬ್ಯಾಂಕ ಹತ್ತಿರ ರಂಗಂಪೇಟ್ ಸುರಪೂರ, ಇವರಿಗೆ ಹೊಟ್ಟೆಗೆ ಗುಪ್ತಗಾಯ, 20) ಭೀರಲಿಂಗ ತಂದೆ ಅಡಿವೆಪ್ಪ ಕೊಡೆಸೂರ ಸಾ|| ದೇವತ್ಕಲ್ ಇವರಿಗೆ ಸೋಂಟಕ್ಕೆ ಗುಪ್ತಗಾಯ. 21) ಶಿವಲಿಂಗಮ್ಮ ಗಂಡ ಶರಣಪ್ಪ ಪ್ರಧಾನಿ ಸಾ|| ಕುರುಬರ ಗಲ್ಲಿ ಸುರಪೂರ ಇವರಿಗೆ ಎದೆಗೆ ಗುಪ್ತಗಾಯ, 22) ಶರಣಪ್ಪ ತಂದೆ ಶಿವಪ್ಪ ಪ್ರಧಾನಿ ಇವರಿಗೆ ಬಲಗೈ ಹಸ್ತಕ್ಕೆ ರಕ್ತಗಾಯ. ಬಲಗೈ ಬುಜಕ್ಕೆ ಗುಪ್ತಗಾಯ. 23) ಪರಶೂರಾಮ ತಂದೆ ನಿಂಗಪ್ಪ ಸಾ|| ಹೈಯಾಳ (ಕೆ) ಇವರಿಗೆ ಬಲಕಿವಿಯ ಹತ್ತಿರ ರಕ್ತಗಾಯ. 24) ಸಾಯಬಣ್ಣ ತಂದೆ ನಿಂಗಪ್ಪ ಸಾ|| ಹೈಯಾಳ (ಕೆ) ಇವರಿಗೆ ಎಡಗೈ ಮೋಳಕೈ ಕೆಳಗೆ ಭಾರಿ ಗುಪ್ತಗಾಯ, 25) ಭೀಮಬಾಯಿ ಗಂಡ ತಿಮ್ಮಣ್ಣ ಕವಲಿ ಸಾ|| ಶಾರದಳ್ಳಿ ಬೆನ್ನಿಗೆ ಗುಪ್ತಗಾಯ, ಬಲಗಲ್ಲಕ್ಕೆ ತರಚಿಗ ಗಾಯ. 26) ನಿಂಗಮ್ಮ ಗಂಡ ಭಿಮಪ್ಪ ಕವಲಿ ಸಾ|| ನಂದಳ್ಳಿ ಇವರಿಗೆ ಬಲತಲೆಗೆ, ಎರಡು ಕೈಗಳಿಗೆ ಗುಪ್ತಗಾಯ, 27) ಸೆಫೀಯಾ ಬೆಗಂ ಗಂಡ ಮಹ್ಮದ್ ವಲಿ ಸುಂಡಿವಾಲೆ ಸಾ|| ದುಳಿಪೇಟ್ ಜಾಮೀಯಾ ಮಸಿದಿ ಹತ್ತಿರ ಸುರಪೂರ ಇವರಿಗೆ ತಲೆಗೆಗೆ ರಕ್ತಗಾಯ. 28) ಭೀಮರೆಡ್ಡಿ ತಂದೆ ಪಿಲ್ಲಪ್ಪ ಬಂಡಾರಿ ಸಾ|| ನಂದೆಳ್ಳಿ (ಜೆ) ಇವರಿಗೆ ಬಲಪಕ್ಕಿಗೆ, ಎದೆಗೆ, ಬಲ ಮೋಳಕೈ ರಟ್ಟೆಗೆ ಗುಪ್ತಗಾಯ. 29) ಸಂಗಾರೆಡ್ಡಿ ತಂದೆ ಭಿಮರೆಡ್ಡಿ ಪೊಲೀಸ್ ಪಾಟೀಲ್ ಸಾ|| ಮುನಮುಟಿಗಿ ಇವರಿಗೆ ಎಡಗೈ ಬುಜಕ್ಕೆ ಗುಪ್ತಗಾಯ, ಬಲಮುಖಕ್ಕೆ, ಎಡಗೈ ಮೋಳಕೈಗೆ ತರಚಿದ ಗಾಯ, ಬಸ್ ನಿವರ್ಾಹಕ (ಕಂಡಕ್ಟರ್ ) ನಾದ 30) ಶರಣಬಸಪ್ಪ ತಂದೆ ನಿಂಗಪ್ಪ ಮಡಿವಾಳ ಯಾದಗಿರಿ ಬಸ್ ಡಿಪೋ ಸಾ|| ವಡಗೇರಾ ಇವರಿಗೆ ಹೊಟ್ಟೆಗೆ, ತಲೆಗೆ, ಎಡಗಡೆ ಕಣ್ಣಿಗೆ ಗುಪ್ತ ಗಾಯವಾಗಿದ್ದು ಇರುತ್ತದೆ. ಬಸ್ಸ ಚಾಲಕ ಪರಮಾನಂದ ತಂದೆ ಪನೇಶಪ್ಪ ಕುರಿ ಉ|| ಚಾಲಕ/ನಿವರ್ಾಹಕ ಯಾದಗಿರಿ ಡಿಪೋ ಸಾ|| ಇಂಗಳಿಗಿ ಇವರಿಗೆ ಬಲಗಾಲ ಪಾದದ ಮೇಲೆ, ಎಡಗಾಲು ಮೋಳಕಾಲು ಕೆಳಗೆ ತರಚಿದ ಗಾಯವಾಗಿದ್ದು ಇರುತರ್ತದೆ, ಸದರಿ ಅಪಘಾತದಲ್ಲಿ ಕೆ.ಆರ್.ಟಿ.ಸಿ.ಬಸ್ ನಂ ಕೆಎ-34 ಎಫ್-1160 ನೇದ್ದು ಜಕಂಗೊಡಿದು ಇರುತ್ತದೆ. ಸದರಿ ಅಪಘಾತವು ಅಂದಾಜು ಬೆಳಿಗ್ಗೆ 10-20 ಗಂಟೆಯ ಸುಮಾರಿಗೆ ಜರುಗಿರುತ್ತದೆ. ಅಪಘಾತ ಸ್ಥಳಕ್ಕೆ 108 ಅಂಬುಲೇನ್ಸ ಬಂದ ನಂತರ ಅರದಲ್ಲಿ ಮತ್ತು ಖಾಸಗಿ ವಾಹನಗಳಲ್ಲಿ ಎಲ್ಲರು ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ,
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ. 141/2021 ಕಲಂ 279,337,338 ಐ.ಪಿ.ಸಿ. ;- ದಿನಾಂಕ:14-09-2021 ರಂದು ಸಾಯಂಕಾಲ 04-45 ಗಂಟೆಗೆ ಠಾಣೆಯಲಿದ್ದಾಗ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ 5 ಪಿ.ಎಂ.ಕ್ಕೆ ಸರಕಾರಿ ಆಸ್ಪತೆಗೆ ಬೇಟಿ ಗಾಯಾಳುದಾರರಾದ ಶ್ರೀ ಡಾ|| ಹರ್ಷವಧನ ತಂದೆ ಗೋರ್ವದನ ರಫಗಾರ ದಂತ ವೈಧ್ಯರು ಕುಂಬಾರಪೇಠ ಸುರಪೂರ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ:14-09-2021 ರಂದು ಸಾಯಂಕಾಲ 3 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಕ್ಲೀನಿಕನಲ್ಲಿ ಕೆಲಸ ಮಾಡುವ ರವಿಚಂದ್ರ ತಂದೆ ಶರಣಪ್ಪ ಅಲ್ಟಿ ಇಬ್ಬರು ಕೂಡಿ ನನ್ನ ಮೋಟಾರ ಸೈಕಲ್ ನಂಬರ ಕೆಎ-33 ಎಲ್-3284 ನೇದ್ದನ್ನು ತಗೆದುಕೊಂಡು ರಂಗಂಪೇಠದಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಅಲ್ಲಿಂದ ಸರಕಾರಿ ಆಸ್ಪತೆಗೆ ಕರ್ತವಕ್ಕೆ ಹೋಗುವ ಕುರಿತು ನನ್ನ ಮೊಟಾರ ಸೈಕಲ್ ತಗೆದುಕೊಂಡು ಹೊರಟಿದ್ದು, ಮೊಟಾರ ಸೈಕಲನ್ನು ರವಿಚಂದ್ರ ಈತನು ನಡೆಸುತ್ತಿದ್ದು, ಮೊಟಾರ ಸೈಕಲ್ ಹಿಂದುಗಡೆ ನಾನು ಕುಳಿತಿದ್ದೆನು. ಅಂದಾಜು ಸಾಯಂಕಾಲ 4 ಗಂಟೆ ಸುಮಾರಿಗೆ ಸುರಪೂರ ರಂಗಂಪೇಠ ಮುಖ್ಯ ರಸ್ತೆಯ ಹನುಮಾನ ದೇವರ ಗುಡಿಯ ಹತ್ತಿರ ರಸ್ತೆಯ ಎಡಬದಿಯಲ್ಲಿ ನಾವು ನಿಧಾನವಾಗಿ ಹೋಗುತ್ತಿರುವಾಗ ಸುರಪೂರ ಕಡೆಯಿಂದ ಒಂದು ಮೊಟಾರ ಸೈಕಲ್ ಚಾಲಕನು ಪೋನ ನೋಡುತ್ತಾ ತನ್ನ ಮೋಟಾರ ಸೈಕಲ್ನ್ನು ಅತೀ ವೇಗ ಮತ್ತು ನಿಷ್ಕಾಳತನದಿಂದ ನಡೆಸಿಕೊಂಡು ಬಂದವನೆ ನಮ್ಮ ಮೊಟಾರ ಸೈಕಲ್ಗೆ ಎದುರಿನಿಂದ ಡಿಕ್ಕಿ ಪಡಿಸಿದಾಗ ಮೊಟಾರ ಸೈಕಲ್ ಸಮೇತ ನಾವು ಕೆಳಗೆ ಬಿದ್ದಿದ್ದು, ನನಗೆ ಬಲಗಾಲಿನ ತೊಡೆಯ ಹತ್ತಿರ ಎಲುಬು ಮುರಿದಂತಾಗಿ ಭಾರಿಗಾಯವಾಗಿದ್ದು, ರವಿಚಂದ್ರ ಈತನಿಗೆ ಬಲಗಾಲ ಹಾಗೂ ಬಲಗೈಗೆ ತೆರಚಿದ ಗಾಯಗಳಾಗಿದ್ದವು. ಅಪಘಾತ ಮಾಡಿದ ಮೊಟಾರ ಸೈಕಲ್ ನೋಡಲು ಒಂದು ಪಲ್ಸರ್ ಕಂಪನಿಯ ಮೊಟಾರ ಸೈಕಲ್ ಇದ್ದು ಅದಕ್ಕೆ ನಂಬರ ಇರುವದಿಲ್ಲ. ಸದರಿ ಮೊಟಾರ ಸೈಕಲ್ ಸವಾರನ ಹೆಸರು ವಿಳಾಸ ವಿಚಾರಿಸಲು ಅವನ ಹೆಸರು ಬಾಗಪ್ಪ ತಂದೆ ಬಸಣ್ಣ ದೊರಿ ವಯಾ:26 ವರ್ಷ ಸಾ:ಬೆಕ್ಕಿಬಾಳ ತಾ:ತಾಳಿಕೊಟೆ ಹಾವ: ಮ್ಯಾಗೇರಿ ಓಣಿ ಸುರಪೂರ ಅಂತಾ ತಿಳಿಯಿತು. ಅಪಘಾತ ಪಡಿಸಿದ ಮೊಟಾರ ಸೈಕಲ್ ಸವಾರನಿಗೆ ಬಲಗಾಲಿನ ಬೆರಳುಗಳಿಗೆ ಹಾಗೂ ಬಲಗಾಲಿನ ಮಂಡೆಯ ಹತ್ತಿರ ತೆರಚಿದ ಗಾಯವಾಗಿರುತ್ತದೆ ನಂತರ ಗಾಯಗೊಂಡ ನಾನು ರವಿಚಂದ್ರ ಇಬ್ಬರು ಒಂದು ಖಾಸಗಿ ಅಟೋದ ಮೂಲಕ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿದ್ದು ಇರುತ್ತದೆ. ಸದರಿ ಘಟನೆಯು ಪಲ್ಸರ ಗಾಡಿ ಸವಾರನಾದ ಬಾಗಪ್ಪ ಈತನು ತನ್ನ ಮೊಟಾರ ಸೈಕಲ್ನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲ್ಗೆ ಎದುರಿನಿಂದ ಡಿಕ್ಕಿ ಪಡಿಸಿದ್ದರಿಂದ ಸಂಬವಿಸಿದ್ದು ಇರುತ್ತದೆ. ಅಪಘಾತ ಪಡಿಸಿದ ಬಾಗಪ್ಪ ಈತನ ಮೇಲೆ ಕಾನೂನು ಕ್ರಮ ಜರುಗಿಸಲ ವಿನಂತಿ. ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 06-15 ಪಿ.ಎಂ.ಕ್ಕೆ ಬಂದು ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಯಾದಗಿರಿ ಗ್ರಾ ಪೊಲೀಸ ಠಾಣೆ
ಗುನ್ನೆ ನಂ. 126/2021 ಕಲಂ 302 ಐ.ಪಿ.ಸಿ;- ದಿನಾಂಕ 14/09/2021 ರಂದು ರಾತ್ರಿ 9-30 ಗಂಟೆಗೆ ಫಿರ್ಯಾಧಿದಾರರಾದ ಶ್ರೀಮತಿ ಶರಣಮ್ಮ ಗಂಡ ಶರಣಪ್ಪ ಮಾನೆಗಾರ ವ|| 52 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಯರಗೋಳ ಇವರು ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ನನ್ನ ಕುಟುಂಬದೊಂದಿಗೆ ಉಪಜೀವನ ಮಾಡುತ್ತೇನೆ. ನನಗೆ 4 ಜನ ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡನಾದ ಶರಣಪ್ಪ ಮಾನೆಗಾರ ಈತನು ಸುಮಾರು 12 ವರ್ಷಗಳ ಹಿಂದೆ ಸತ್ತಿರುತ್ತಾನೆ. ನನ್ನ ಸೋದರಮಾವನ ಮಗನಾದ ಗಂಗಣ್ಣ @ ಗಂಗಪ್ಪ ತಂದೆ ಮರೆಪ್ಪ ಹೊನಗೆನೋರ್ ವ|| 55 ವರ್ಷ ಸಾ|| ಮಲ್ಕಪ್ಪನಳ್ಳಿ ಈತನು ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಸುಮಾರು 20 ವರ್ಷಗಳಿಂದ ನಮ್ಮ ಮನೆಯಲ್ಲಿಯೇ ಇದ್ದು ಆಡುಕಾಯುವ ಕೆಲಸ ಮಾಡಿಕೊಂಡು ನಮ್ಮೊಂದಿಗೆ ಇದ್ದಿರುತ್ತಾನೆ. ನಮ್ಮೂರ ಸೀಮೆಯಲ್ಲಿ ನಮ್ಮ ಹೊಲ ಮತ್ತು ನಮ್ಮ ಮೈದುನನಾದ ಮೋನಪ್ಪ ತಂದೆ ದುರ್ಗಪ್ಪ ಮಾನೆಗಾರ ಇವರ ಹೊಲ ಆಜುಬಾಜು ಇದ್ದು ಒಂದೆ ಡ್ವಾಣಾಕ್ಕೆ ಹೊಂದಿಕೊಂಡು ಇದ್ದಿರುತ್ತದೆ. ನನ್ನ ಮೈದುನ ಮೋನಪ್ಪ ಈತನು ಈ ಹಿಂದಿನಿಂದಲೂ ಇಬ್ಬರ ಹೊಲಗಳ ಮದ್ಯೆ ಇರುವ ಡ್ವಾಣದ ವಿಷಯದಲ್ಲಿ ತಕರಾರು ಮಾಡುತ್ತಾ ನಮ್ಮ ಜೊತೆಗೆ ಆಗಾಗ ಜಗಳ ಮಾಡುತ್ತಾ ಬಂದಿರುತ್ತಾನೆ. ಇದೇ ವಿಷಯದ ಸಂಬಂಧ ಅವರಿಗೂ ಮತ್ತು ನಮಗೂ ವೈಮನಸ್ಸು ಬೆಳೆದಿದ್ದು ಮೋನಪ್ಪನು ನಮ್ಮ ಮೇಲೆ ದ್ವೇಷ ಸಾಧಸುತ್ತಿದ್ದನು. ನೀನು ಗಂಗಣ್ಣನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಿ ರಂಡಿ, ಭೋಸಿಡಿ ಅಂತಾ ನನಗೆ ಅವಾಚ್ಯವಾಗಿ ಬೈಯುತ್ತಿದ್ದನು. ಮತ್ತು ನನ್ನ ಸೋದರಮಾವನ ಮಗನಾದ ಗಂಗಪ್ಪ @ ಗಂಗಣ್ಣ ಈತನೊಂದಿಗೆ ಜಗಳಮಾಡಿ ಏ ಭೋಸಿಡಿ ಮಗನೆ ನೀನು ನಿನ್ನ ಊರು ಬಿಟ್ಟು ನಮ್ಮೂರಿಗೆ ಯಾಕೆ ಬಂದಿದ್ದಿ ಇಲ್ಲಿ ನನ್ನ ಅತ್ತಿಗೆ ಶರಣಮ್ಮಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಿ ಇದರಿಂದ ನಮ್ಮೂರಲ್ಲಿ ನಮ್ಮ ಮನೆತನದ ಮಯರ್ಾದೆ ಹಾಳಾಗಿದೆ, ನೀನು ನಮ್ಮೂರು ಬಿಟ್ಟು ಹೋಗು ಇಲ್ಲದಿದ್ದರೆ ಒಂದಿಲ್ಲ ಒಂದು ದಿವಸ ನಿನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಭಯ ಹಾಕಿ ಅವನ ಜೊತೆಗೆ ಜಗಳ ಮಾಡುತ್ತಿದ್ದನು. ಹೀಗಿರುವಾಗ ಇಂದು ದಿನಾಂಕ: 14/09/2021 ರಂದು ಪ್ರತಿದಿನದಂತೆ ಇಂದು ಕೂಡ ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಗಂಗಣ್ಣನು ನಮ್ಮ ಮನೆಯಲ್ಲಿದ್ದ ಆಡುಗಳನ್ನು ಮೇಯಿಸುವ ಕುರಿತು ಹೊಲದ ಕಡೆಗೆ ಹೊಡೆದುಕೊಂಡು ಹೋದನು. ನಂತರ ನನ್ನ ಮಗ ದಂಡಪ್ಪನು ಸಹ ನಮ್ಮ ಹೊಲದ ಕಡೆಗೆ ಹೋಗಿದ್ದನು. ಸಾಯಂಕಾಲ 5:00 ಸುಮಾರಿಗೆ ನನ್ನ ಮಗ ದಂಡಪ್ಪ ಇತನು ಗಂಗಣ್ಣ @ ಗಂಗಪ್ಪ ಈತನೊಂದಿಗೆ ನಮ್ಮ ಮನೆಗೆ ಬಂದು ನನ್ನ ಮಗ ತಿಳಿಸಿದ್ದೇನೆಂದರೆ, ನಾನು ಹೊಲದಿಂದ ನಮ್ಮ ಮನೆ ಕಡೆಗೆ ಬರುವಾಗ ಪಾತ್ರಬಂಡಿ ಯಲ್ಲಮ್ಮ ಗುಡಿಯ ಹತ್ತಿರ ಊರ ಗದ್ದೆಯಲ್ಲಿ ನಮ್ಮ ಕಾಕ ಗಂಗಣ್ಣ ಈತನು ಆಡುಗಳನ್ನು ಮೇಯಿಸುತ್ತಿದ್ದನು. ಅದೇ ಸಮಯಕ್ಕೆ ಮೋನಪ್ಪ ತಂದೆ ದುರ್ಗಪ್ಪ ಮಾನೆಗಾರ ಈತನು ಬಂದು ನನ್ನ ಕಾಕ ಗಂಗಣ್ಣ ಇವನ ಜೊತೆಗೆ ಜಗಳ ತೆಗೆದು ಕಲ್ಲಿನಿಂದ ಗಂಗಣ್ಣನ ತಲೆಗೆ ಹೊಡೆಯುತ್ತಿದ್ದನು. ಆಗ ನಾನು ಅಲ್ಲಿಗೆ ಹೋಗಿ ಜಗಳ ಬಿಡಿಸಿ ನನ್ನ ಕಾಕ ಗಂಗಣ್ಣನಿಗೆ ವಿಚಾರಿಸಿದಾಗ ಆತನು ತಿಳಿಸಿದ್ದೇನೆಂದರೆ, ಏ ಭೋಸಿಡಿ ಮಗನೆ ಈ ಹಿಂದೆ ನಿನಗೆ ಹಲವಾರು ಬಾರಿ ಹೇಳಿದರು ಕೂಡ ನೀನು ನಮ್ಮ ಊರು ಬಿಟ್ಟು ಹೋಗಿಲ್ಲ ನಿನ್ನಿಂದ ನಮ್ಮೂರಲ್ಲಿ ನಮ್ಮ ಮಯರ್ಾದೆ ಹಾಳಾಗುತ್ತಿದೆ ಇವತ್ತು ನೀನೊಬ್ಬನೆ ಸಿಕ್ಕಿದ್ದಿ ನಿನಗೆ ಜೀವ ಸಹಿತ ಬಿಡುವುದಿಲ್ಲ ಖಲಾಸ್ ಮಾಡಿ ಬಿಡುತ್ತೇನೆ ಅಂತಾ ಅನ್ನುತ್ತಾ ಕಲ್ಲಿನಿಂದ ನನ್ನ ಎಡಗಡೆ ಕಿವಿಯ ಹತ್ತಿರ ಹೊಡೆದು ಭಾರೀ ಒಳಪೆಟ್ಟು ಮಾಡಿರುತ್ತಾನೆ ಅಂತಾ ತಿಳಿಸಿದನು. ನಂತರ ನಾನು ಗಂಗಣ್ಣನನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತೇನೆ. ಈ ಜಗಳವು ಇಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಡೆದಿರುತ್ತದೆ ಅಂತಾ ಹೇಳಿದನು. ನಂತರ ನಾನು ಮತ್ತು ನನ್ನ ಮಗ ದಂಡಪ್ಪ ಇಬ್ಬರು ಕೂಡಿ ಗಂಗಪ್ಪನಿಗೆ ಚಹಾ, ನೀರು ಕುಡಿಸಿ ಮನೆಯಲ್ಲಿಯೇ ಸ್ವಲ್ಪ ಹೊತ್ತು ಕೂಡಿಸಿದೆವು. ಸ್ವಲ್ಪ ಹೊತ್ತಿನ ನಂತರ ಗಂಗಣ್ಣನು ಬೇವಸಾಗಿ ಮಾತಾನಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಆಗ ನಾವು ಗಾಬರಿಯಾಗಿ ನಾನು, ನನ್ನ ಮಗ ದಂಡಪ್ಪ, ನನ್ನ ಅಳಿಯ ದೇವಿಂದ್ರಪ್ಪ ಚೌಡಿಕರ ನಾವು ಮೂವರು ಕೂಡಿಕೊಂಡು ಗಂಗಣ್ಣನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದಕ್ಕೆ ಅಂತಾ ನಮ್ಮೂರ ಬಸ್ಟಾಂಡ ಹತ್ತಿರ ಹೋಗುವಾಗ ಸಾಯಂಕಾಲ 7:00 ಗಂಟೆಗೆ ಸತ್ತಿರುತ್ತಾನೆ. ಮೋನಪ್ಪ ತಂದೆ ದುರ್ಗಪ್ಪ ಮಾನೆಗಾರ ಈತನು ಹಳೆ ದ್ವೇಷದಿಂದ ನಮ್ಮ ಸೋದರಮಾವನ ಮಗ ಗಂಗಣ್ಣನ ಜೊತೆಗೆ ಜಗಳ ತೆಗೆದು ಅವನನ್ನು ಕೊಲೆಮಾಡುವ ಉದ್ದೇಶದಿಂದ ಕಲ್ಲಿನಿಂದ ಅವನ ತಲೆಗೆ, ಎಡಗಡೆ ಕಿವಿಯ ಹತ್ತಿರ ಮತ್ತು ಎಡ ಮೊಂಡಿಗೆ ಹೊಡೆದು ಭಾರೀ ಒಳಪೆಟ್ಟುಮಾಡಿದ್ದರಿಂದ ಸತ್ತಿರುತ್ತಾನೆ. ಕಾರಣ ಮೋನಪ್ಪ ತಂದೆ ದುರ್ಗಪ್ಪ ಮಾನೆಗಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಅಂತಾ ಹೇಳಿಕ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ.