ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 18-09-2021

ಯಾದಗಿರಿ ಗ್ರಾ ಪೊಲೀಸ್ ಠಾಣೆ


 ಗುನ್ನೆ ನಂ. 128/2021 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4 ಮತ್ತು 192 (ಎ) ಸಂ 177 ಐ.ಎಮ.ವಿ ಕಾಯ್ದೆ;- ದಿನಾಂಕ: 16-09-2021 ರಂದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ 11-00 ಗಂಟೆಯಿಂದ ರಾತ್ರಿ ಚೆಕಿಂಗ್ ಕರ್ತವ್ಯ ಇದ್ದುದ್ದರಿಂದ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಸಿಪಿಸಿ-263 ಮತ್ತು ಶ್ರೀ ಅನಂತರೆಡ್ಡಿ ಸಿಪಿಸಿ-168 ರವರ ಜೋತೆಗೆ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಮಾಡುತ್ತಾ ಬಂದಳ್ಳಿ, ಯಡ್ಡಳ್ಳಿ ಗ್ರಾಮಗಳ ಮುಖಾಂತರ ಹತ್ತಿಕುಣಿ ಗ್ರಾಮದ ಕಡೆಗೆ ಹೋಗುವಾಗ ರಾತ್ರಿ 2-30 ಗಂಟೆಗೆ ಪೊಲೀಸ್ ಬಾತ್ಮಿ ಬಂದುದ್ದೆನೆಂದರೆ ಸೌದಾಗರ ತಾಂಡಾದ ಕಡೆಯಿಂದ ಸೆಡಂ ಕಡೆಗೆ ಒಂದು ವಾಹನದಲ್ಲಿ ಅನಧಿಕೃತವಾಗಿ ದನಗಳನ್ನು ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಾಗ ನಾನು ಹಾಗೂ ನಮ್ಮ ಸಿಬ್ಬಂಧಿಯವರು ಕೂಡಿಕೊಂಡು ಸೌದಾಗರ ತಾಂಡಾ ಕ್ರಾಸ್ ಹತ್ತಿರ ಹೋಗಿ ನಿಂತೆವು, ಆಗ ಸೌದಾಗರ ತಾಂಡಾ ಕಡೆಯಿಂದ ಒಂದು ಬೊಲೇರೋ ಪಿಕ್ ಅಪ್ ವಾಹನ ಬರುತ್ತಿದ್ದನ್ನು ಕಂಡು ನಾವು ಕೈ ಮಾಡಿ ರಾತ್ರಿ 3-00 ಗಂಟೆಗೆ ಅದನ್ನು ನಿಲ್ಲಿಸಿದೆವು, ವಾಹನ ಚಾಲಕನನ್ನು ಹಿಡಿಯುವಷ್ಟರಲ್ಲಿ ಅವನು ಓಡಿಹೋದನು, ಮತ್ತು ದನಗಳ ಮಾಲೀಕನನನ್ನು ಹಿಡಿದೆವು, ನಾನು ಮತ್ತು ನಮ್ಮ ಸಿಬ್ಬಂಧಿಯವರು ಸದರಿ ವಾಹನವನ್ನು ಚೆಕ್ ಮಾಡಿ ನೋಡಲಾಗಿ ಅದರಲ್ಲಿ ಎರಡು ಹೋರಿಗಳು ಮತ್ತು ಆರು ಆಕಳುಗಳು ಇದ್ದು, ಬೊಲೇರೋ ಬೊಲೆರೋ ಪಿಕ್ಅಪ್ ವಾಹನ ಕೆಎ-32/ಸಿ-3944 ಅಂತಾ ಇದ್ದು ಅದರಲ್ಲಿ ಎರಡು ಹೋರಿಗಳು ಮತ್ತು ಆರು ಆಕಳುಗಳು ಇದ್ದು ಹಗ್ಗದಿಂದ ಬಿಗಿಯಾಗಿ ಹಿಂಸೆಯಾಗುವ ರೂಪದಲ್ಲಿ ಕಟ್ಟಿದ್ದರು. ಎರಡು ಹೋರಿಗಳ ತಲಾ ಅಂದಾಜು ಕಿಮ್ಮತ್ತು 10 ಸಾವಿರ ರೂಪಾಯಿ ಆಗಬಹುದು. ಮತ್ತು ಆರು ಆಕಳುಗಳ ತಲಾ ಅಂದಾಜ ಕಿಮ್ಮತ್ತು 8000/ರೂ ಆಗಬಹುದು, ಸ್ಥಳದಲ್ಲಿ ವಾಹನದ ಚಾಲಕನು ಇದ್ದು, ನಾವು ಹಿಡಿದುಕೊಂಡವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸದ್ದಾಮ ತಂದೆ ಬಾಬುಮಿಯಾ ಖುರೇಶಿ ಸಾಃ ಬಿಳಾರ ಅಂತಾಯಿದ್ದು, ಎಂಟು ದನಗಳು ನಾನು ಹಳ್ಳಿಗಳಲ್ಲಿ ಖರೀದಿ ಮಾಡಿ ಕಲಬುಗರ್ಿಗೆ ಮಾರಾಟ ಮಾಡಲು ಹೋಗುತ್ತಿದ್ದೆನೆ ಅಂತಾ ಹೇಳಿದನು, ವಾಹನದ ಚಾಲಕನ ಹೆಸರು ಮೋಶಿನ ಸಾಃ ಕಲಬುಗರ್ಿ ಅಂತಾ ಹೇಳಿರುತ್ತಾನೆ, ಈ ವಾಹನದಲ್ಲಿ ದನಗಳು ಸಾಗಾಣಿಕೆ ಮಾಡುವ ಸಲುವಾಗಿ ದಾಖಲಾತಿಗಳು ಇದ್ದರೇ ತೋರಿಸು ಅಂತಾ ಕೇಳಿದಾಗ ಅವನು ದನಗಳಿಗೆ ಸಂಬಂಧಪಟ್ಟ ಮತ್ತು ವಾಹನ ಸಾಗಾಣಿಕೆ ಮಾಡಲು ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ, ಈ ದನಗಳು ಕಸಾಯಿ ಖಾನೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದೆವೆ ಅಂತಾ ತಿಳಿಸಿದನು. ಸದರಿ ಎರಡು ಹೊರಿಗಳು ಮತ್ತು ಆರು ಆಕಳುಗಳು  ವಾಹನದೊಂದಿಗೆ ಮತ್ತು ಒಬ್ಬನು ಆರೋಪಿತರೊಂದಿಗೆ ನನ್ನ ವರದಿಯನ್ನು ತಮ್ಮ ಮುಂದೆ ಹಾಜರುಪಡಿಸಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅದೆ. ಸದರಿ ವರದಿಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 128/2021 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆ 1964 ಕಲಂ: 11, 8, 9, 4 ಮತ್ತು 192 (ಎ) ಸಂ 177 ಐ.ಎಮ.ವಿ ಕಾಯ್ದೆ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ


 ಗುನ್ನೆ ನಂಬರ 216/2021 ಕಲಂ ಮಹಿಳೆ ಕಾಣೆ:- ದಿನಾಂಕ 17/09/2021 ರಂದು 06.00 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ರಾಜೇಸಾಬ ತಂ. ಹುಸೇನಸಾಬ ಮುಲ್ಲಾ ವ|| 50 ವರ್ಷ ಉ|| ವ್ಯವಸಾಯ ಸಾ|| ಹಯ್ಯಾಳ (ಕೆ) ತಾ|| ವಡಗೇರಿ ಇವರು  ಠಾಣೆಗೆ ಹಾಜರಾಗಿ ಕನ್ನಡದಲ್ಲಿ  ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನಗೆ ಗೌಸ ವ-20 ವರ್ಷ, ರುಬಿನಾ- 19 ವರ್ಷದ ಮಕ್ಕಳಿದ್ದು ನನ್ನ ಹೆಂಡತಿ ಮಹೆಬೂಬಿ ಇವರೊಂದಿಗೆ ವ್ಯವಸಾಯ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೇನು ಹೀಗಿದ್ದು ದಿನಾಂಕ 13/09/2021 ರಾತ್ರಿ 10.00 ಸುಮಾರಿಗೆ ನಾನು ನನ್ನ ಹೆಂಡಿ ಮಕ್ಕಳು ಎಲ್ಲರೂ ಊಟ ಮಾಡಿ ಮಲಗಿದೇವು ದಿನಾಂಕ 14/09/2021 ರಂದು ಬೆಳಗಿನ ಜಾವ 5.00 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಎದ್ದು ಮುಖ ತೊಳೆದುಕೊಳ್ಳುತ್ತಿರುವಾಗ ನನ್ನ ಮಗಳು ರುಬಿನಾ ಕೂಡಾ ಎದ್ದು ಹೊರಗಡೆ ಸಂಡಾಸಕ್ಕೆ (ಮಲ-ಮೂತ್ರ ವಿಸರ್ಜನೆ) ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವಳು ಅರ್ದ ಗಂಟೆಯಾದರೂ ಬರಲೇ ಇಲ್ಲ ನನ್ನ ಆಗ ನನ್ನ ಹೆಂಡತಿ ಮಹೆಬೂಬಿ ಇವಳು ಕೂಡಾ ಹೊರಗಡೆ ಹೋಗಿ ನೋಡಿ ಬಂದಳು ನನ್ನ ಮಗಳು ಕಾಣಲಿಲ್ಲ  ಅಷ್ಟರಲ್ಲಿ ಬೆಳಗಾಯಿತು ನಂತರ ನಾನು ನನ್ನ ಹೆಂಡತಿ ಮತ್ತು ನನ್ನ ಮಗ ನಮ್ಮ ಊರಿನ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ಮಗಳು ಕಾಣಲಿಲ್ಲ ನಂತರ ನಮ್ಮ ಸಂಬಂದಿಕರು ಇರುವ ಊರುಗಳಿಗೆ ಪೋನ ಮೂಲಕ ವಿಚಾರಿಸಲಾಗಿ ಎಲ್ಲಿಯೂ ನನ್ನ ಮಗಳು ಕಾಣಲಿಲ್ಲ ಅಲ್ಲದೇ ನಮ್ಮ ಸಂಬಂದಿಕರು ಇರುವ ಊರುಗಳಿಗೆ ಹೋಗಿ ವಿಚಾರಿ ತಡವಾಗಿ ಇಂದು ಠಾಣೆಗೆ ಬಂದು ಪಿಯರ್ಾದಿ ನೀಡಿದ್ದು ಇರುತ್ತದೆ ಕಾರಣ ಮನೆಯಿಂದ ಕಾಣೆಯಾದ ನನ್ನ ಮಗಳ ಕುರಿತು ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.


ಗೋಗಿ ಪೊಲೀಸ್ ಠಾಣೆ


ಗುನ್ನೆ ನಂ. 90/2021 ಕಲಂ: 279 ಐಪಿಸಿ;- ದಿನಾಂಕ: 17/09/2021 ರಂದು 10.30 ಎ.ಎಂ ಕ್ಕೆ ಶ್ರೀ. ಶರಣಗೌಡ ತಂದೆ ಗುರಪ್ಪಗೌಡ ಪೊಲೀಸ್ ಪಾಟೀಲ ವಯಾ: 31 ವರ್ಷ ಉ: ಖಾಸಗಿ ವೈದ್ಯ ಜಾ: ಹಿಂದೂ ರೆಡ್ಡಿ ಸಾ: ನಗನೂರ ತಾ: ಸುರಪೂರ ಹಾ:ವ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಅದರ ಸಾಂರಂಶ ಏನಂದರೆ, ದಿನಾಂಕ: 16/09/2021 ರಂದು ರಾತ್ರಿ 09.45 ಪಿಎಂ ಸುಮಾರಿಗೆ ಚಾಮನಾಳದಲ್ಲಿನ ನನ್ನ ಖಾಸಗಿ ಕ್ಲೀನಿಕ್ ಬಂದ ಮಾಡಿಕೊಂಡು ನಮ್ಮ ಸಹೋದರ ಸಂಬಂದಿಕರಾದ ಮಹಾಂತಗೌಡ ತಂದೆ ಶಂಕರಗೌಡ ಪೊಲೀಸ್ ಪಾಟೀಲ, ಮತ್ತು ಬಸವರಾಜ ತಂದೆ ಶಾಂತಾನಂದ ಲಕ್ಕುಂಡಿ ಇಬ್ಬರು ಸಾ: ನಗನೂರ ಇವರೊಂದಿಗೆ ಶಹಾಪೂರ ಪಟ್ಟಣದಲ್ಲಿನ ನಮ್ಮ ಮನೆಗೆ ಹೊಗುವ ಕುರಿತು ನನ್ನ ಇನೋವಾ ಕ್ರೀಷ್ಟಾ ವಾಹನ ನಂ: ಕೆಎ-33-ಎಂ-5921 ನೇದ್ದರಲ್ಲಿ ಹೊಗುತ್ತಿದ್ದಾಗ ಸಮಯ 10.05 ಪಿಎಂ ಸುಮಾರಿಗೆ ಶಹಾಪೂರ-ಸಿಂದಗಿ ಮುಖ್ಯ ರಸ್ತೆಯ ಗೋಗಿ ಕೆ ಗ್ರಾಮದ ಹತ್ತಿರ ಇರುವ ಗಂಗಾ ರೈಸ್ ಮಿಲ್ ದಾಟಿದ ಕೂಡಲೆ ಹಳ್ಳದ ಬ್ರೀಡ್ಜ ಇನ್ನು ಅಂದಾಜು 30 ಪೀಟ ಇರುವಾಗ ಎದುರಿನಿಂದ ಅಂದರೆ ಶಹಾಪುರ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಇನೋವಾ ಕ್ರೀಷ್ಟಾ ವಾಹನ ನಂ: ಕೆಎ-33-ಎಂ-5921 ನೇದ್ದಕ್ಕೆ ಬಲ ಸೈಡಿನಿಂದ ಡಿಕ್ಕಿಪಡೆಸಿ ಅಪಘಾತ ಮಾಡಿದನು. ಕೂಡಲೆ ನಾನು ಮತ್ತು ಮಹಾಂತಗೌಡ, ಬಸವರಾಜ ಎಲ್ಲರೂ ಕೆಳಗೆ ಇಳಿದು ನೋಡಲಾಗಿ ಅಪಘಾತದ ಪರಿಣಾಮವಾಗಿ ನನ್ನ ವಾಹನದ ಬಲಭಾಗದಲ್ಲಿ ವಾಹನ ನುಜ್ಜು-ಗುಜ್ಜಾಗಿರುತ್ತದೆ. ಅಪಘಾತ ಮಾಡಿದ ಲಾರಿ ನಂಬರ ನೊಡಲಾಗಿ ನಂ: ಎಪಿ-07-ಟಿಡಬ್ಲೂ-9955 ಅಂತಾ ಇತ್ತು ಅದರ ಚಾಲಕನಿಗೆ ವಿಚಾರಿಸಿದಾಗ ಆತನು ತನ್ನ ಹೆಸರು, ರಾಮಕೃಷ್ಣ ತಂದೆ ಈರಯ್ಯ ತುಮಾಟಿ ವಯಾ:43 ವರ್ಷ ಉ; ಡ್ರೈವರ ಜಾ: ಕಮ್ಮಾ ಸಾ: ಇಂಕೂಲ್ಲು ತಾ: ಇಂಕೂಲ್ಲು ಜಿ: ಪ್ರಕಾಶಂ ರಾಜ್ಯ: ಆಂದ್ರಪ್ರದೇಶ ಅಂತಾ ತಿಳಿಸಿರುತ್ತಾನೆ. ಅಪಘಾತದಿಂದ ನನಗೆ ಗಾಬರಿ ಆಗಿದ್ದರಿಂದ ಮಹಾಂತಗೌಡ ಇವರು ನನಗೆ ಬೇರೆ ವಾಹನದಲ್ಲಿ ನಮ್ಮ ಮನೆಗೆ ಕರೆದುಕೊಂಡು ಹೋದರು, ಆದ್ದರಿಂದ ತಡವಾಗಿ ಇಂದು ದಿನಾಂಕ: 17/09/2021 ರಂದು 10.30 ಎಎಂ ಕ್ಕೆ ಪೊಲೀಸ್ ಠಾಣೆೆಗೆ ಬಂದು ಈ ಅಜರ್ಿ ನೀಡಿರುತ್ತೇನೆ.

ಗುರಮಿಠಕಲ ಪೊಲೀಸ್ ಠಾಣೆ


ಗುನ್ನೆ ನಂ: 149/2021  ಕಲಂ 143, 147, 323, 324, 354,  504, 506 ಸಂ 149 ಐ.ಪಿ.ಸಿ.;- ದಿನಾಂಕ: 16.09.2021 ರಂದು 07.30 ಗಂಟೆ ಸುಮಾರಿಗೆ ಫಿಯರ್ಾದಿ ಮನೆಗೆ ಹೋದಲು ದಾರಿ ಬಿಡುವವಿಷಯಕ್ಕೆ  ಜಗಳ ತೆಗೆದು ಫಿಯರ್ಾದಿ ಮತ್ತು ಫಿಯರ್ಾದಿ ಮಗ ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲು ಗುಂಪು ಕಟ್ಟಿಕೊಂಡು ಬಂದು ಫಿಯರ್ಾದಿ  ಮತ್ತು ಫಿಯರ್ಾದಿ ಮಗನಿಗೆ ಆವಾಚ್ಚ ಶಬ್ದಗಳಿಂದ ಬೈದು ಹೊಡೆಬಡೆಮಾಡಿ ಫಿಯರ್ಾದಿಗೆ ಮಾನ ಭಂಗ ಮಾಡಲು ಪ್ರಯತ್ನಿಸಿ ಫಿಯರ್ಾಧಿ ಮತ್ತು ಪಿಯರ್ಾದಿ ಮಗನಿಗೆ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.
 

ಇತ್ತೀಚಿನ ನವೀಕರಣ​ : 18-09-2021 10:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080