ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-09-2021

 ವಡಗೇರಾ ಪೊಲೀಸ್ ಠಾಣೆ


            ಗುನ್ನೆ ನಂ: 120/2021 ಕಲಂ: 504, 354, 323, 506 ಸಂ 34 ಐಪಿಸಿ ಮತ್ತು ಕಲಂ: 3(1)(ಆರ್)(ಎಸ್),(ಡಬ್ಲ್ಯೂ) 2(ತ-ಚಿ) ಎಸ್.ಸಿ/ಎಸ್.ಟಿ ಪಿ.ಎ ಎಕ್ಟ್ 1989;- ದಿನಾಂಕ:20/09/2021 ರಂದು 1-45 ಪಿಎಮ್ ಕ್ಕೆ ಶ್ರೀಮತಿ ರಂಗಮ್ಮ ಗಂಡ ಭೀಮರಾಯ ವಡ್ಡರ, ವ:28, ಜಾ:ಭೋವಿ ವಡ್ಡರ, ಉ:ಹೊಲಮನೆ ಕೆಲಸ ಸಾ:ಹುಲಕಲ್ (ಜೆ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಗಂಡ ಮಕ್ಕಳೊಂದಿಗೆ ಹೊಲಮನೆ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ದಿನಾಂಕ:18/09/2021 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮೂರ 1) ಬಾಷಾ ಪಟೇಲ್ ತಂದೆ ಮಹಿಬೂಬ ಪಟೇಲ್, 2) ಮಹಿಬೂಬ ಪಟೇಲ್ ತಂದೆ ಹುಸೇನ ಪಟೇಲ್, 3) ಹುಸೇನ ಪಟೇಲ್ ತಂದೆ ಮಹಿಬೂಬ ಪಟೇಲ್ ಮತ್ತು ಇತರರು ಸೇರಿ ನನ್ನ ಮನೆಗೆ ಬಂದು ನನಗೆ ಲೇ ಭೋಸುಡಿ ನಿನ್ನ ಗಂಡ ಭೀಮರಾಯ ನಮ್ಮ ಹೆಣ್ಣು ಮಗಳಿಗೆ ಕೈ ಹಿಡಿದು ಜಗ್ಗ್ಯಾಡಿ ಅವಮಾನ ಮಾಡಿ, ಎಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಕರಿ ಅವನಿಗೆ ಇವತ್ತು ಖಲಾಸ ಮಾಡೆ ಬಿಡುತ್ತೇವೆ ಎಂದು ಅವಾಚ್ಯ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗಡೆ ಬಂದು ಏನಾಯಿತು, ನನ್ನ ಗಂಡ ಹೊರಗಡೆ ಹೋಗಿದ್ದಾನೆ ಮನೆಗೆ ಬಂದಿಲ್ಲ ಎಂದು ಹೇಳುತ್ತಿದ್ದಾಗ ಅವರೆಲ್ಲರೂ ನಮ್ಮ ಮನೆ ಅಂಗಳದಲ್ಲಿ ನನಗೆ ತಡೆದು ನಿಲ್ಲಿಸಿ, ಈ ಸೂಳಿ ತನ್ನ ಗಂಡನಿಗೆ ಬಚ್ಚಿಟ್ಟುಕೊಂಡು ಸುಳ್ಳು ಹೇಳುತ್ತಿದ್ದಾಳೆ ಹೊಡೆಯಿರಿ ಈಕೆಗೆ ಎಂದು ಹುಸೇನ ಪಟೇಲನು ಅಂದಾಗ ಬಾಷಾ ಪಟೇಲ್ ಈತನು ನನಗೆ ಕೈಯಿಂದ ತೆಲೆಗೆ ಹೊಡೆದನು. ಮಹಿಬೂಬ ಪಟೇಲನು ನನ್ನ ಕೂದಲು ಹಿಡಿದು ಜಗ್ಗಾಡಿದನು. ಆಗ ಅಲ್ಲಿಯೇ ಇದ್ದ ನಮ್ಮ ಮನೆ ಆಜು ಬಾಜುದವರಾದ ಈಶಪ್ಪ ತಂದೆ ಸಾಬಯ್ಯ ನರಸಯ್ಯನೋರ, ಸಂಗಪ್ಪ ತಂದೆ ಹಣಮಂತ ಸಣ್ಣ ಪೂಜಾರಿ, ಶಿವಕುಮಾರ ತಂದೆ ನಾಗಪ್ಪ ಗುಡ್ಡದಮನಿ ಮತ್ತು ಜಾವೀದಸಾಬ ತಂದೆ ಖಾಸಿಂಸಾಬ ಇವರೆಲ್ಲರೂ ಸೇರಿ ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿದಿ ವಡ್ಡರ ಸೂಳಿ ಇವತ್ತು ನಿನಗೆ ಮತ್ತು ನಿನ್ನ ಗಂಡ ಇಬ್ಬರಿಗೂ ಖಲಾಸ ಮಾಡುತ್ತೇವೆ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ಏಕಾ ಏಕಿ ನನ್ನ ಮೇಲೆ ಕೈ ಮಾಡಿದ್ದರಿಂದ ನನಗೆ ದಿಕ್ಕು ತೋಚದಂತಾಗಿ ಅಲ್ಲಿಂದ ನಾನು ನನ್ನ ತವರು ಮನೆ ಶಹಾಪೂರ ತಾಲೂಕಿನ ಶಾರದಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಈ ದಿವಸ ವಡಗೇರಾ ಪೊಲೀಸ್ ಠಾಣೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ವಿನಾಕಾರಣ ನನ್ನ ಗಂಡನು ಅವರ ಕಡೆ ಹೆಣ್ಣು ಮಗಳಿಗೆ ಕೈ ಹಿಡಿದು ಜಗ್ಗ್ಯಾಡಿ ಅವಮಾನ ಮಾಡಿರುತ್ತಾನೆ ಎಂದು ಬಂದು ನನ್ನ ಗಂಡನಿಗೆ ಹುಡುಕಾಡಿ ಅವನು ಸಿಗದಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶ.

ಶಹಾಪೂರ ಪೊಲೀಸ್ ಠಾಣೆ


 ಗುನ್ನೆ ನಂಬರ 217/2021 ಕಲಂ 279, 338  .ಐ.ಪಿ.ಸಿ.;- ದಿನಾಂಕ: 20-09-2021 ರಂದು 4:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಸೋಪಮ್ಮ ಗಂಡ ಬಸನಗೌಡ ದೇಸಾಯಿ ವಯ: 35 ವರ್ಷ ಜಾ: ಗಾಣಿಗ ಉ: ಮನೆಗೆಲಸ ಸಾ: ಸಗರ ಬಿ ತಾ: ಶಹಾಪುರ  ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನನ್ನ ಗಂಡನಾದ ಬಸನಗೌಡ ತಂದೆ ಅಮರೇಗೌಡ ದೇಸಾಯಿ ರವರು ನಮ್ಮೂರಿನಲ್ಲಿ ಫೋಟೊಗ್ರಾಫರ ಕೆಲಸ ಮಾಡುತ್ತಾರೆ. ಮತ್ತು ನಮ್ಮೂರಿನಲ್ಲಿ ಎರಡು ಎಕರೆ ಜಮೀನು ಲೀಜ ಹಾಕಿ ಕೊಂಡು ಒಕ್ಕಲುತನ ಕೂಡಾ ಮಾಡುತ್ತಾರೆ. ಹೀಗಿದ್ದು  ದಿನಾಂಕ: 16-09-2021 ರಂದು ಸಾಯಂಕಾಲ ಹೊಲಕ್ಕೆ  ಹೋಗಿದ್ದು  ರಾತ್ರಿ  ಮರಳಿ ಮನೆಗೆ ಹೊರಟ ಬಗ್ಗೆ ನನಗೆ ಮೊಬೈಲನಲ್ಲಿ ತಿಳಿಸಿದ್ದರು. ಹೀಗಿದ್ದು 10:15 ಗಂಟೆ ಸುಮಾರಿಗೆ ನನಗೆ ನಮ್ಮೂರ ಭೀಮಾಶಂಕರ ತಂದೆ ಕಲ್ಲಪ್ಪ ಸಿದ್ರಾ ವಯ: 27 ವರ್ಷ ಜಾ: ಗಾಣಿಗ ಉ: ಒಕ್ಕಲುತನ ಸಾ: ಸಗರ ಬಿ  ತಾ: ಶಹಾಪುರ ರವರು ತಿಳಿಸಿದ್ದೇನಂದರೆ, ನಾನು ಮತ್ತು  ನಿಮ್ಮ ಗಂಡನಾದ ಬಸನಗೌಡ ರವರು ರಾತ್ರಿ 10:00 ಪಿ.ಎಮ್. ಕ್ಕೆ ನಮ್ಮೂರ ಮೊಹಲ ರೋಜಾ ರಸ್ತೆಯ ರೈಸ ಮಿಲ್ ಹತ್ತಿರ ರಸ್ತೆಯ ಪಕ್ಕದಲ್ಲಿ ಮನೆಯ ಕಡೆ ಹೊರಟಾಗ ಬಸನಗೌಡ ರವರಿಗೆ ಒಂದು ಕರೆ ಬಂದಿದ್ದು ಅವರು ಮೊಬೈಲ ಫೋನನಲ್ಲಿ ಮಾತನಾಡುತ್ತಾ ನಿಂತುಕೊಂಡಾಗ ಹಿಂದಿನಿಂದ  ನಮ್ಮೂರ ಮಲ್ಲಣ್ಣ ತಂದೆ ತಿಪ್ಪಣ್ಣ ಸೇರಿ ರವರು ತನ್ನ ಮೊಟಾರ ಸೈಕಲ್ ನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು  ಬಸನಗೌಡ ರವರಿಗೆ ಡಿಕ್ಕಿಪಡಿಸಿದ್ದು ಆಗ ಬಸನಗೌಡ ರವರು ಕೆಳಗೆ ಬಿದ್ದು ತಲೆಗೆ ಭಾರಿ ಒಳಪೆಟ್ಟಾಗಿ ಎರಡೂ ಕಿವಿಗಳಲ್ಲಿ  ರಕ್ತ ಬರುತ್ತಿದೆ. ನೀವು ಬನ್ನಿ ಎಂದು ಹೇಳಿದನು. ಆಗ ನಾನು ಮತ್ತು ನಮ್ಮೂರ ಗಿರೀಶ ತಂದೆ  ಸಾಯಬಣ್ಣ ಸಿದ್ರಾ  ಇಬ್ಬರೂ ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಎರಡೂ ಕಿವಿಯಲ್ಲಿ ರಕ್ತ ಬರುತ್ತಿದ್ದು ಮಾತನಾಡುತ್ತಿರಲಿಲ್ಲ. ಅಫಘಾತಪಡಿಸಿದ ಮಲ್ಲಣ್ಣನು ಅಲ್ಲೇ ಇದ್ದು ಆತನ ಮೊಟಾರ ಸೈಕಲ್ ನಂ. ಕೆ.ಎ.33-ಇ.ಬಿ 0781 ಇರುತ್ತದೆ. ನಾವು ತಕ್ಷಣ ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಚಿಕಿತ್ಸೆ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರಗೆ ಕರೆದುಕೊಂಡು ಹೋಗಿ  ಸೇರಿಕೆ ಮಾಡಿದ್ದೇವೆ. ನನ್ನ ಗಂಡನು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾನು ಇಲ್ಲಿಯ ವರೆಗೆ ನನ್ನ ಗಂಡನೊಂದಿಗೆ ಉಪಚಾರಕ್ಕಾಗಿ ಇದ್ದು ಇಂದು ದಿನಾಂಕ: 20-09-2021 ರಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡುತ್ತಿದ್ದೇನೆ

ಭೀ-ಗುಡಿ ಪೊಲೀಸ್ ಠಾಣೆ

ಗುನ್ನೆ ನಂ. 69/2021 ಕಲಂ 279, 338 ಐಪಿಸಿ;- ದಿನಾಂಕ:15/09/2021 ರಂದು 6 ಪಿ.ಎಮ್. ಸುಮಾರಿಗೆ ಫಿಯರ್ಾದಿ, ಅವನ ಅತ್ತೆತಿಪ್ಪಮ್ಮ, ಫಿಯರ್ಾದಿಯತಾಯಿ ಶರಣಮ್ಮಕೂಡಿ ಅರಳಹಳ್ಳಿ ಕ್ರಾಸ್ ಹತ್ತಿರ ಶಹಾಪುರ-ಕಲಬುರಗಿ ಮುಖ್ಯರಸ್ತೆಯಎಡಬದಿಯಲ್ಲಿ ನಡೆದುಕೊಂಡುತಮ್ಮ ಹೊಸ ಮನೆಯಕಡೆಗೆ ಹೊರಟಾಗಅವರ ಹಿಂದಿನಿಂದಆರೋಪಿತನುತನ್ನ ಮೋಟರ ಸೈಕಲ್ ನಂ:ಕೆಎ-32, ವೈ-0803 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದುತಿಪ್ಪಮ್ಮ ಇವಳಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಸದರಿಅಪಘಾತದಲ್ಲಿತಿಪ್ಪಮ್ಮ ಇವಳ ತಲೆಯ ಹಿಂಭಾಗದಲ್ಲಿ ಭಾರಿರಕ್ತಗಾಯವಾಗಿದ್ದು, ಎಡಗಾಲ ತೊಡೆಗೆ ಭಾರಿ ಒಳಪೆಟ್ಟಾಗಿದ್ದು, ಬಾಯಿಗೆ ಮತ್ತುಗಲ್ಲಕ್ಕೆತರಚಿದ ರಕ್ತಗಾಯಗಳಾದ ಬಗ್ಗೆ ದೂರು.

ಶೋರಾಪೂರ ಪೊಲೀಸ್ ಠಾಣೆ


       ಗುನ್ನೆ ನಂ. 146/2021 ಕಲಂ 279, 338 ಐ.ಪಿ.ಸಿ. ;- ದಿನಾಂಕ:20-09-2021 ರಂದು 3 ಪಿ.ಎಂ.ಕ್ಕೆ ಠಾಣೆಯ ಎಸ.ಹೆಚ್.ಡಿ. ಕರ್ತವ್ಯದಲ್ಲ್ಲಿದ್ದಾಗ ಠಾಣೆಯ ಫಿಯರ್ಾದಿ ಶ್ರೀ ಭೀಮರಾಯ ತಂದೆ ಕಾಮಣ್ಣ ಬಾವಿಹೊಲ ಸಾ|| ದೇವತ್ಕಲ್ ಇವರು ಠಾಣೆಗೆ ಬಂದು ಹೇಳಿಕೆ ನೀಡಿದ ಸಾರಾಂಶವೆನೆಂದರೆ, ದಿನಾಂಕ:18-09-2021 ರಂದು ಸಾಯಾಂಕಾಲ 5:20 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿರುವಾಗ ನಮ್ಮ ಅಣ್ಣತಮಕಿಯವನಾದ ನಾಗರಾಜ ತಂದೆ ಬಸವರಾಜ ಬಾವಿಹೊಲ ಈತನು ನನಗೆ ಪೋನ್ ಮೂಲಕ ವಿಷಯ ತಿಳಿಸಿದ್ದೇನೆಂದರ, ಸಾಯಾಂಕಾಲ 5:15 ಗಂಟೆ ಸುಮಾರಿಗೆ ನಿಮ್ಮ ಅಣ್ಣನಾದ ಈರಣ್ಣ ತಂದೆ ಕಾಮಣ್ಣ ಇತನು ತನ್ನ ಮೋಟರ್ ಸೈಕಲ್ ನಂಬರ್ ಟಿ.ಎನ್-29. ಕ್ಯೂ-4564 ನೇದ್ದರ ಮೇಲೆ ಮೇವಿನ ಹೊರೆಯನ್ನು ಕಟ್ಟಿಕೊಂಡು ಹುಣಸಗಿ-ದೇವಾಪೂರ ಮುಖ್ಯ ರಸ್ತೆಯ ಮುಖಾಂತರ ದೇವತ್ಕಲ್ ಸೀಮಾಂತರದ ವೆಂಕಟೇಶ ಮಾರಲಬಾವಿ ಇವರ ಹೊಲದ ಹತ್ತಿರ ದೇವತ್ಕಲ್ ಕಡೆಗೆ ಹೋಗುತ್ತಿರುವಾಗ ದೇವಾಪುರ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ಈರಣ್ಣನ ಮೋಟರ್ ಸೈಕಲಗೆ ಹಿಂದಿನಿಂದ ಡಿಕ್ಕಿಪಡಿಸಿದನು. ಡಿಕ್ಕಿಪಡಿಸಿದ ರಭಸಕ್ಕೆ ಈರಣ್ಣ ಈತನು ಮೋಟರ್ ಸೈಕಲ್ ಸಮೇತ ನೆಲಕ್ಕೆ ಬಿದ್ದನು. ಆಗ ಅಲ್ಲೇ ಹೋಗುತ್ತಿದ್ದ ನಾನು ಘಟನೆಯನ್ನು ಕಣ್ಣಾರೆ ಕಂಡು ಈರಣ್ಣ ಈತನ ಹತ್ತಿರ ಹೋಗಿ ಈರಣ್ಣನಿಗೆ ಎಬ್ಬಿಸಿ ನೋಡಲಾಗಿ ಅವನಿಗೆ ತಲಗೆ ಬಾರೀ ರಕ್ತಗಾಯವಾಗಿದ್ದು, ಎಡಗಾಲಿಗೆ ಗುಪ್ತಪೆಟ್ಟು ಮತ್ತು ತರಚಿದ ಗಾಯಗಳಾಗಿದ್ದು, ಎಡಗೈ ಮೊಳಕೈ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಬೇಗ ಬಾ ಅಂತಾ ವಿಷಯ ತಿಳಿಸಿದ ಕೂಡಲೇ ನಾನು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನಿಗೆ ಈ ಮೇಲೆ ಹೇಳಿದಂತೆ ಗಾಯಗಳಾಗಿದ್ದವು. ಅಪಘಾತ ಪಡಿಸಿದ ಕಾರ್ ಅಲ್ಲೇ ನಿಂತಿದ್ದು, ಅದರ ನಂಬರ್ ಕೆಎಲ್-07, ಬಿಜಿ-9092 ಇದ್ದು, ಅದರ ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿ ಸೋಮಪ್ಪ ತಂದೆ ನಿಂಗಪ್ಪ ಹೊಸಮನಿ ಸಾ|| ಶೆಳ್ಳಗಿ ತಾ|| ತಾಳಿಕೋಟಿ ಜಿ|| ವಿಜಯಪೂರ ಅಂತಾ ತಿಳಿಯಿತು. ಸದರಿ ಕಾರ ಚಾಲಕನಿಗೆ ಯಾವುದೇ ಗಾಯಗಳಾಗಿರುವದಿಲ್ಲ. ನಂತರ ಗಾಯಗೊಂಡ ಈರಣ್ಣ ಈತನನ್ನು ನಾನು, ನಾಗರಾಜ ತಂದೆ ಬಸವರಾಜ ಬಾವಿಹೊಲ, ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಅಣ್ಣತಮಕಿಯವರಾದ ಕಾಮಣ್ಣ ತಂದೆ ಮಲ್ಲಪ್ಪ ಬಾವಿಹೊಲ ಮತ್ತು ಕರೆಪ್ಪ ತಂದೆ ನಾಗಪ್ಪ ಬಾವಿಹೊಲ ಎಲ್ಲರೂ ಕೂಡಿ 108 ಅಂಬುಲೇನ್ಸ್ ವಾಹನಕ್ಕೆ ಪೋನ್ ಮಾಡಿ ಸ್ಥಳಕ್ಕೆ ಕರೆಸಿ ನಮ್ಮ ಅಣ್ಣನಿಗೆ ಚಿಕಿತ್ಸೆ ಕುರಿತು ಹುಣಸಗಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು, ಅಲ್ಲಿ ವೈಧ್ಯರ ಸಲಹೇಯ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಭಾಗ್ಯವಂತಿ ಆಸ್ಪತ್ರೆ ವಿಜಯಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಈರಣ್ಣ ಈತನಿಗೆ ಉಪಚಾರ ಮಾಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಸದರಿ ಅಪಘಾತವು ಕಾರ್ ಚಾಲಕನಾದ ಸೋಮಪ್ಪ ಈತನು ತನ್ನ ಕಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿದ್ದರಿಂದ ಸಂಭವಿಸಿದ್ದು, ಕಾರ್ ಚಾಲಕ ಸೋಮಪ್ಪ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ಹೇಳಿಕೆ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.      
 

ಇತ್ತೀಚಿನ ನವೀಕರಣ​ : 21-09-2021 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080