ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 26-09-2021

                                                                             ಯಾದಗಿರಿ ಗ್ರಾ ಪೊಲೀಸ್ ಠಾಣೆ
ಗುನ್ನೆ .ನಂ: 129/2021 ಕಲಂ 380,457. ಐ.ಪಿ.ಸಿ;- ದಿನಾಂಕ 25-09-2021 ರಂದು 10-30 ಎ.ಎಮ್ ಕ್ಕೆ ಫಿರ್ಯಾಧಿದಾರರಾದ ಚಂದ್ರಶೇಖರ ತಂದೆ ಹುಲಿಯಪ್ಪ ವಯಾ:28 ಉ: ಬಿಜಿನೆಸ್ ಜಾ: ಹರಿಜನ ಸಾ: ಅರಿಕೇರಾ(ಬಿ) ಇವರು ಠಾಣೆಗೆ ಹಾಜರಾಗಿ ಫಿರ್ಯಾಧಿ ಸಲ್ಲಿಸಿದ್ದ್ದ ಸಾರಾಂಶವೆನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ನಮ್ಮ ಕುಟುಂಬದವರೊಂದಿಗೆ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಉಪಜೀವನ ಸಾಗಿಸುತ್ತೆನೆ. ನಾನು ಅರಿಕೇರಾ (ಬಿ) ಗ್ರಾಮದ ವಾಸಿಯಾಗಿದ್ದು ಸುಮಾರು ಎರಡು ವರ್ಷಗಳಿಂದ ಕಿರಾಣಿ ಅಂಗಡಿ ವ್ಯಾಪಾರ ಮಾಡಿಕೊಂಡು ಇರುತ್ತೆನೆ. ಹೀಗಿರುವಾಗ ದಿನಾಂಕ:21/09/2021 ರಂದು ಪ್ರತಿನಿತ್ಯದಂತೆ ಇಂದು ಕೂಡಾ ಬೆಳಿಗ್ಗೆ 06:00 ಗಂಟೆಗೆ ನನ್ನ ಕಿರಾಣಿ ಅಂಗಡಿಯನ್ನು ತೆರೆದು ಬೆಳಗ್ಗೆಯಿಂದ ರಾತ್ರಿ 9:00 ಗಂಟೆಯವರೆಗೆ ಕಿರಾಣಿ ವ್ಯಾಪಾರ ಮಾಡಿದೆನು, ನಂತರ ವ್ಯಾಪಾರ ಮುಗಿದ ನಂತರ ರಾತ್ರಿ 9:00 ಗಂಟೆಗೆ ನನ್ನ ಕಿರಾಣಿ ಅಂಗಡಿಯನ್ನು ಮುಚ್ಚಿಕೊಂಡು ಎಂದಿನಂತೆ ಮನೆಗೆ ಹೊಗಿರುತ್ತೆನೆ. ಮರುದಿನ ಬೆಳಿಗ್ಗೆ 06:00. ಗಂಟೆಗೆ ನನ್ನ ತಂದೆಯಾದ ಹುಲಿಯಪ್ಪ ಇವರು ಕಿರಾಣಿ ಅಂಗಡಿಯನ್ನು ತೆರೆಯುತ್ತೆನೆ ಅಂತಾ ನನಗೆ ಹೇಳಿ ಮನೆಯಿಂದ ಹೋದರು, ಸ್ವಲ್ಪ ಸಮಯದ ನಂತರ ನನ್ನ ತಂದೆಯವರು ನನಗೆ ಪೋನ್ಮಾಡಿ ತಿಳಿಸಿದ್ದೆನೆಂದರೆ ಇಂದು ನಾನು ನಮ್ಮ ಕಿರಾಣಿ ಅಂಗಡಿ ಬಾಗಿಲು ತೆರೆದು ನೋಡಲಾಗಿ ಅಂಗಡಿಯಲ್ಲಿದ್ದ ಕಿರಾಣಿ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಮೇಲೆ ನೊಡಲಾಗಿ ತಗಡಿನ ಪತ್ರಾಸ್ಗಳನ್ನು ಮುರಿದಿದ್ದು, ಇರುತ್ತದೆ ನೀನು ಬೇಗನೆ ಬಾ ಅಂತ ಹೇಳಿದ್ದರಿಂದ ಆಗ ನಾನು ಮತ್ತು ನಮ್ಮೂರಿನ 1) ಸಿದ್ದುಗೌಡ ತಂದೆ ಸುಭಾಸರೆಡ್ಡಿ ಮತ್ತು 2) ಅಜರುದ್ದಿನ್ ತಂದೆ ಅಬ್ದುಲ್ ಸಾಬ ಸಾ: ಇಬ್ಬರೂ ಅರಕೇರಾ(ಬಿ) ನಾವು ಮೂವರು ಕೂಡಿಕೊಂಡು ನಮ್ಮ ಕಿರಾಣಿ ಅಂಗಡಿ ಹತ್ತಿರ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದಿದ್ದು, ದಿನಾಂಕ:21/09/2021 ರ ರಾತ್ರಿ 9:00 ಗಂಟೆಯಿಂದ ದಿನಾಂಕ:22/09/2021 ರ ಬೇಳಗ್ಗೆ 06:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಅಪರಿಚಿತ ಕಳ್ಳರು ನಮ್ಮ ಅಂಗಡಿಯ ಮೇಲಿನ ತಗಡಿನ ಪತ್ರಾಸನ್ನು ಮುರಿದು ಮೇಲಿಂದ ಅಂಗಡಿ ಒಳಗೆ ಪ್ರವೇಶ ಮಾಡಿ ಬೀಯರ್ ಕುಡಿದು ಅಂಗಡಿಯಲ್ಲಿಯ ಸಾಮಾನುಗಳನ್ನು ಚಲ್ಲಾಪಿಲ್ಲಿ ಮಾಡಿ ಅಂದಿನ ವ್ಯಾಪಾರದಿಂದ ಬಂದ ಹಣ ಮತ್ತು ಅಂಗಡಿ ಸಾಮಾನುಗಳನ್ನು ತರಲು ಇಟ್ಟಿದ್ದ ಹದಿನೈದು ಸಾವಿರ ರೂಪಾಯಿ (15,000/-) ಮತ್ತು ಎರಡು ಆರ್.ಎಮ್.ಡಿ. ಗುಟ್ಕಾದ ಬಾಕ್ಸ್ಗಳು ಅಂದಾಜು ಕೀಮ್ಮತ್ತು 1200/- ರೂಪಾಯಿ.ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಈ ವಿಷಯದ ಬಗ್ಗೆ ನಾವು ಮನೆಯಲ್ಲಿ ವಿಚಾರಿಸಿಕೊಂಡು ಮತ್ತು ಕಾನೂನಿ ಬಗ್ಗೆ ತಿಳಿದು ಕೊಂಡು ತಡವಾಗಿ ಇಂದು ದಿನಾಂಕ:25/09/2021 ರಂದು.ಬೇಳಗ್ಗೆ 10:30 ಕ್ಕೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಕಳ್ಳತನವಾದ ವಸ್ತುಗಳು ಹಾಗೂ ನಗದು ಹಣವನ್ನ ದೊರಕಿಸಿಕೊಟ್ಟು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ

                                                                              ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 139/2021 ಕಲಂ: 341, 323, 324, 504, 506 ಸಂ 34 ಐಪಿಸಿ;- ದಿನಾಂಕ 25/09/2021 ರಂದು 12.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶರಣಪ್ಪ ಭಂಟನೂರ ವ|| 60 ಜಾ|| ಮಾದಿಗ ಉ|| ಕೂಲಿ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ, ನನಗೆ 2 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳಿದ್ದು, 2 ಜನ ಹೆಣ್ಣು ಮಕ್ಕಳದು ಮದುವೆ ಮಾಡಿಕೊಟ್ಟಿದ್ದು ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ. 2 ಜನ ಗಂಡು ಮಕ್ಕಳದು ಮದುವೆಯಾಗಿದ್ದು 1ನೇಯವನು ಅಂಬ್ರೇಶ ಇದ್ದು ಅಂಬ್ರೇಶ ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ದುಡಿಯಲು ಬೆಂಗಳೂರಿಗೆ ಹೋಗಿ ಅಲ್ಲಿಯೇ ಇರುತ್ತಾನೆ. 2ನೇಯವನು ಸಂತೋಷಕುಮಾರ ತಂದೆ ಶರಣಪ್ಪ ಭಂಟನೂರ ವ|| 25ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಕೆಂಭಾವಿ ಈತನು ತನ್ನ ಹೆಂಡತಿ ಮಗಳೊಂದಿಗೆ ನನ್ನ ಹತ್ತಿರ ವಾಸವಾಗಿರುತ್ತಾನೆ. ಹೀಗಿದ್ದು ದಿನಾಂಕ 19/09/2021 ರಂದು ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಕೆಂಚಮ್ಮಾಯಿ ಗುಡಿಯ ಹತ್ತಿರ ಯಾರೀ ಬಾಯಿ ಮಾಡುವ ಸಪ್ಪಳ ಕೇಳಿ ನಾನು ಮತ್ತು ನಮ್ಮ ಮಗಳಾದ ವಿಜಯಲಕ್ಷ್ಮೀ ಗಂಡ ಚಂದಪ್ಪ ಗೋಗಿ ಇಬ್ಬರೂ ಕೂಡಿ ಕೆಂಚಮ್ಮಾಯಿ ಗುಡಿಯ ಹತ್ತಿರ ಹೋಗಿ ನೋಡಲಾಗಿ ನಮ್ಮೂರ ನಮ್ಮ ಜಾತಿಯವನೇ ಆದ ದೇವಪ್ಪ ತಂದೆ ಹಣಮಂತ ಮಾಲಗತ್ತಿ ಈತನು ನಮ್ಮ ಮಗನಾದ ಸಂತೋಷಕುಮಾರ ಈತನೊಂದಿಗೆ ವಿನಾಕಾರಣ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈಯುತ್ತಿದ್ದನು. ಆಗ ನಾವು ಹೋಗಿ ಜಗಳ ಬಿಡಿಸಿಕೊಂಡು ಸಂತೋಷನಿಗೆ ಮನೆಗೆ ಕರೆದುಕೊಂಡು ಬಂದೆವು. ನಮ್ಮ ಮಗನಾದ ಸಂತೋಷನು ಕಿರಾಣಿ ಸಾಮಾನು ತರಲು ಬಜಾರಕ್ಕೆ ಹೋಗಿದ್ದನು. ನಂತರ ನಾವು ಮನೆಯಲ್ಲಿದ್ದಾಗ ಅದೇ ದಿನ ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ನನ್ನ ಮೊಮ್ಮಗನಾದ ಪರಶುರಾಮನು ಮನೆಗೆ ಓಡುತ್ತಾ ಬಂದು ತಿಳಿಸಿದ್ದೇನೆಂದರೆ, ಸಂತೋಷನಿಗೆ ದೇವಪ್ಪ ಮಾಲಗತ್ತಿ ಮತ್ತು ಅವರ ತಾಯಿಯಾದ ಬೋರಮ್ಮ ಇಬ್ಬರೂ ಕೂಡಿ ಮೇನ ಬಜಾರನಲ್ಲಿನ ಶಾಂತಪ್ಪ ಸಾಹುಕಾರ ಹೊಟೇಲ್ ಮುಂದೆ ರಸ್ತೆಯ ಮೇಲೆ ತಡೆದು ನಿಲ್ಲಿಸಿ ಜಗಳ ಮಾಡಿ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಸಂತೋಷನಿಗೆ ಗುಪ್ತಗಾಯ ಮಾಡಿದ್ದು ಜಗಳ ಮಾಡುವಾಗ ಶರಣಪ್ಪ ಮುತ್ಯಾ ಮತ್ತು ಅಂಬ್ರೇಶ ತಂದೆ ಸಾಯಬಣ್ಣ ಬಾಚಿಮಟ್ಟಿ, ನಾಗಪ್ಪ ತಂದೆ ಭೀಮಪ್ಪ ದೊಡ್ಮನಿ ಹಾಗೂ ಪರಶುರಾಮ ತಂದೆ ಮುದಕಪ್ಪ ಮಳಕೇರಿ ಇವರು ಜಗಳ ಬಿಡಿಸಿಕೊಂಡರು. ಆಗ ದೇವಪ್ಪ ಮಾಲಗತ್ತಿ ಮತ್ತು ಅವರ ತಾಯಿ ಬೋರಮ್ಮ ಇವರು ಸಂತೋಷನಿಗೆ ಇದೊಂದು ಸಲ ಉಳಿದಿದಿ ಮಗನೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಬೈಯುತ್ತಾ ಅಲ್ಲಿಂದ ಹೋದರು ಅಂತಾ ಮನೆಗೆ ಬಂದು ತಿಳಿಸಿದ್ದು, ನಂತರ ನನ್ನ ಗಂಡನಾದ ಶರಣಪ್ಪನು ನನ್ನ ಮಗನಾದ ಸಂತೋಷನಿಗೆ ಕರೆದುಕೊಂಡು ಮನೆಗೆ ಬಂದಿದ್ದು ನಾವು ಮನೆಯಲ್ಲಿದ್ದಾಗ ನಮ್ಮ ಮಗನಾದ ಸಂತೋಷನು ದೇವಪ್ಪನು ಹೊಡೆದಿರುವ ಭಯದಿಂದ ಮನೆಯಲ್ಲಿ ಕ್ರಿಮಿನಾಶಕ ಔಷಧಿ ಕುಡಿದು ಬಿದ್ದು ಒದ್ದಾಡುತ್ತಿದ್ದಾಗ ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿ ಸಂತೋಷನಿಗೆ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ತೋರಿಸಿ ಹೆಚ್ಚಿನ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದಿದ್ದು ಇರುತ್ತದೆ. ನನ್ನ ಮಗನಾದ ಸಂತೋಷನಿಗೆ ದೇವಪ್ಪ ಮಾಲಗತ್ತಿ ಮತ್ತು ಅವರ ತಾಯಿಯಾದ ಬೋರಮ್ಮ ಇಬ್ಬರೂ ಕೂಡಿ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ, ಬಡಿಗೆಯಿಂದ ಹೊಡೆದು ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು ದೇವಪ್ಪ ಮತ್ತು ಬೋರಮ್ಮ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿಯಾದಿ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 139/2021 ಕಲಂ 341,323,324,504,506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                ಕೋಡೇಕಲ ಪೊಲೀಸ್ ಠಾಣೆ
ಗುನ್ನೆ ನಂ. 58/2021 ಕಲಂ: 379 ಐಪಿಸಿ;- ದಿನಾಂಕ:25.09.2021 ರಂದು ಮದ್ಯಾಹ್ನ 3:30 ಗಂಟೆಗೆ ಪಿಯರ್ಾದಿ ಶ್ರೀ ನರಸಪ್ಪ ತಂದೆ ಭೀಮಪ್ಪ ಗುಡ್ಲಾ ವ:26 ವರ್ಷ ಜಾ:ಹಿಂದೂ ಕಬ್ಬಲಿಗ ಉ:ನೀಸಾ ಕಂಪನಿಯಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಯಾದಗಿರಿ ಸಾ:ಮಾದ್ವಾರ ತಾ:ಗುರುಮಿಠಕಲ್ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದುಕೊಂಡು ಬಂದ ಲಿಖಿತ ಪಿಯರ್ಾದಿ ಅಜರ್ಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಏನೆಂದರೆ ನಾನು ನೀಸಾ ಕಂಪನಿಯಲ್ಲಿ ಈಗ ಒಂದು ವರ್ಷದಿಂದ ಸೆಕ್ಯೂರಿಟಿ ಸೂಪರ್ ವೈಸರ್ ಅಂತಾ ಕೆಲಸಮಾಡುತ್ತಿದ್ದು, ನನ್ನ ವ್ಯಾಪ್ತಿಗೆ ಇಂಡಸ್ ಟವರ್ನ ಯಾದಗಿರಿ ಜಿಲ್ಲೆಯ ಎಲ್ಲಾ ಟವರ್ಗಳು ಬರುತ್ತಿದ್ದು. ಬರದೇವನಾಳ ಗ್ರಾಮದ ಹೊರವಲಯದಲ್ಲಿ ಶ್ರೀಮತಿ ಲೀಲಾಬಾಯಿ ಗಂಡ ಭೀಮರಾವ್ ದೇಶಪಾಂಡೆ ರವರ ಜಮೀನಿನಲ್ಲಿ ಇಂಡಸ್ ಟವರ್ ಐಡಿ ನಂ:1598485 ಈ ಟವರ್ನ್ನು ಲೀಜಿಗೆ ಪಡೆದು ಹೊಸದಾಗಿ 2021 ನೇ ಸಾಲಿನ ಮಾರ್ಚ ತಿಂಗಳಲ್ಲಿ ಇನ್ಸ್ಟಾಲ್ ಮಾಡಿದ್ದು 2021 ನೇ ಸಾಲಿನ ಏಪ್ರೀಲ್ ತಿಂಗಳ 6 ನೇ ತಾರೀಖಿನಿಂದ ಈ ಇಂಡಸ್ ಟವರಗೆ ಪರಶುರಾಮ ರವರಿಗೆ ಸೈಟ್ ಇಂಜಿನೀಯರ ಅಂತಾ ನೇಮಿಸಿ ಉಸ್ತುವಾರಿ ಒಪ್ಪಿಸಿದ್ದು ಈ ಟವರ್ ಹೊಸದಾಗಿ ಇದ್ದುದರಿಂದ ಯಾವುದೇ ಅಲಾರಾಂ ಬರುವುದಿಲ್ಲ. ಹೀಗಿರುವಾಗ ದಿನಾಂಕ:16.09.2021 ರಂದು 4:00 ಪಿಎಮ್ಕ್ಕೆ ಪರಶುರಾಮ ಸೈಟ್ ಇಂಜಿನೀಯರ್ ರವರು ತಮ್ಮ ಮೊ.ನಂ:7760983382 ರಿಂದ ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದೆ, ನಾನು ಬರದೇವನಾಳ ಗ್ರಾಮದ ನಮ್ಮ ಇಂಡಸ್ ಟವರ ಹತ್ತಿರದಿಂದ ಹೋಗುವಾಗ ಟವರ್ನ ಹೊರಗಡೆ ಶೆಲ್ಗಳ ಕ್ಯಾಪ್ ಬಿದ್ದಿದ್ದನ್ನು ನೋಡಿ ಹೋಗಿ ಟವರನ ರ್ಯಾಕ್ ತೆರೆದು ನೋಡಿದಾಗ ಅಮರಾಜ್ ಕಂಪನಿಯ 600 ಎಹೆಚ್ನ 24 ಬ್ಯಾಟರಿ ಶೆಲ್ಗಳು ಇದ್ದಿರುವುದಿಲ್ಲ. ಅವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ನಂತರ ನಾನು ದಿನಾಂಕ:18.09.2021 ರಂದು ಶನಿವಾರ ಬರದೇವನಾಳಕ್ಕೆ ಬಂದು ಇಂಡಸ್ ಟವರನ ನೋಡಲಾಗಿ ಪರಶುರಾಮ ರವರು ತಿಳಿಸಿದಂತೆ ನಮ್ಮ ಇಂಡಸ್ ಟವರಗೆ ಕೂಡಿಸದ 24 ಬ್ಯಾಟರಿ ಶೆಲ್ಗಳು ಇರಲಿಲ್ಲ. ಅವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ನಾನು ಯಾದಗಿರಿಗೆ ಹೋಗಿ ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದು ಅವರು ನನಗೆ ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಲು ಇಂದು ತಿಳಿಸಿದ್ದು ನಾನು ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು

ಇತ್ತೀಚಿನ ನವೀಕರಣ​ : 26-09-2021 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080