ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 27-09-2021

                                                                                                       ಸೈದಾಪೂರ ಪೊಲೀಸ್ ಠಾಣೆ
146/2021 ಕಲಂ 295, 420, 341, 506 ಸಂಗಡ 34 ಐಪಿಸಿ;- ದಿನಾಂಕ: 26-09-2021 ರಂದು ಮದ್ಯಾಹ್ನ 02-30 ಗಂಟೆಗೆ ದಿನಾಂಕ: 26-09-2021 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಬಸಲಿಂಗಪ್ಪನ ಮನೆಗೆ ಕೆಲಸದ ನಿಮಿತ್ತ ಹೋಗಿ ಬಸಲಿಂಗಪ್ಪನ ಮನೆಯಲ್ಲಿ ಮಾತಾಡುತ್ತ ಕುಳಿತುಕೊಂಡಿರುವಾಗ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಬಸಲಿಂಗಪ್ಪನ ಮನೆಗೆ 1) ಜೇಮ್ಸ ತಂದೆ ಡೇವಿಡ್ ದಾಸ್ ವ|| 52 ವರ್ಷ ಜಾ|| ಕ್ರೀಶ್ಚನ ಸಾ|| ಮಾದ್ವಾರ 2) ಶಾಂತರಾಜ ತಂದೆ ಜೇಮ್ಸ ದಾಸ್ ವ|| 27 ವರ್ಷ ಜಾ|| ಕ್ರೀಶ್ಚನ್ 3) ನೀಲಮ್ಮ ಗಂಡ ಜೇಮ್ಸ ದಾಸ್ ವ|| 40 ವರ್ಷ ಜಾ|| ಕ್ರೀಶ್ಚನ್ ಸಾ|| ಮಾದ್ವಾರ 4) ಮಾಳಮ್ಮ ಗಂಡ ರಾಘವೇಂದ್ರ ಚೀಗನೂರ ವ|| 35 ವರ್ಷ ಸಾ|| ಕಲಬುರಗಿ ಹಾ|| ವ|| ನೀಲಹಳ್ಳಿ ಇವರೆಲ್ಲರು ಕೂಡಿಕೊಂಡು ಮನೆಗೆ ಬಂದರು ಆಗ ಅವರನ್ನು ಮನೆಯ ಮುಂದೆ ಕುಳಿರಿಸಿ ಬಸಲಿಂಗಪ್ಪ ಮತ್ತು ಆತನ ಹೆಂಡತಿ ಅವರಿಗೆ ಪೂಜೆ ಮಾಡಿ ಬರುತ್ತೇವೆ ಇಲ್ಲೆ ಕುಳಿತುಕೊಳ್ಳಿರಿ ಅಂತಾ ಹೇಳಿ ಮನೆಯಲ್ಲಿ ಹೋಗಿ ಪೂಜೆ ಮಾಡುತ್ತ ಜಗಲಿ ಮುಂದೆ ಗಂಟೆ ಬಾರಿಸುತ್ತಿರುವಾಗ ಅವರೆಲ್ಲರು ಕೂಡಿಕೊಂಡು ಬಂದು ಹೇ ಘಂಟೆ ಬಾರಿಸಬಾರದು ಕುಂಕುಮ ಹಚ್ಚಬಾರದು ಕೈಯಲ್ಲಿ ಬಳಿ ಹಾಕಿಕೊಳ್ಳಬಾರದು ಅಂತಾ ಪೂಜಕ್ಕೆ ಅಡ್ಡಿಪಡಿಸಿ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿ ಹಿಂದೂ ಧರ್ಮದ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ, ನಾನು ಇದನ್ನು ಈ ರೀತಿ ಯಾಕೆ ಮಾಡುತ್ತಿರಿ ಅಂತಾ ಕೇಳಿದ್ದಕ್ಕೆ ಹೇ ನಾನು ಜನರನ್ನು ಕ್ರೈಸ್ತ ಧರ್ಮಕ್ಕೆ ಬರುವಂತೆ ಮಾಡುತ್ತೇನೆ ನೋಡು ನನಗೆ ಎನು ಕೇಳುತ್ತಿ ನನ್ನ ಹತ್ತಿರ ಸರಕಾರದ ಪಮರ್ಿಷನ್ ಇದೆ ನೀನು ನನಗೆ ಏನ ಕೇಳುತಿ ಅಂತಾ ಏನ ಮಾಡಿಕೊತಿ ಮಾಡಿಕೊ ನನ್ನ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಮಗನೆ ಅಂತಾ ಜೀವದ ಬೇದರಿಕೆ ಹಾಕಿ ದಲಿತ ಜನರಿಗೆ ಕೈಸ್ತ ಧರ್ಮಕ್ಕೆ ಬಂದರೆ ನಿಮಗೆ ಹಣ ಕೊಡುತ್ತೇವೆ, ಬಟ್ಟೆ ಕೊಡುತ್ತೇವೆ, ಸೌಲಭ್ಯ ಕೊಡುತ್ತೇವೆ ಅಂತಾ ಆಸೆ ಆಮೀಷ ತೋರಿಸಿ ಹಿಂದೂ ಧರ್ಮದ ಜನರಿಗೆ ಮತಾಂತರ ಮಾಡಿ ಮೋಸ ಮಾಡಿದ ಬಗ್ಗೆ

                                                                                                         ಭೀ-ಗುಡಿ ಪೊಲೀಸ್ ಠಾಣೆ
ಗುನ್ನೆ ನಂ. 70/2021 ಕಲಂ 32, 34 ಕೆ.ಇ ಎಕ್ಟ್;- ದಿನಾಂಕ: 26/09/2021 ರಂದು 10.15 ಎ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಹುರಸಗುಂಡಗಿ ಸೀಮಾಂತರದ ಸನ್ನತ್ತಿ ಬ್ರಿಜ್ ಕಂ ಬ್ಯಾರೇಜಕ್ರಾಸ್ ಹತ್ತಿರತನ್ನ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10.30 ಎ.ಎಮ್ ಕ್ಕೆ ದಾಳಿ ಮಾಡಿಆರೋಪಿತನಿಗೆ ಹಿಡಿದುಆತನಿಂದ1)180 ಎಮ್.ಎಲ್.ನ 28 ಓರಿಜಿನಲ್ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 1967.28/- ರೂ, ಮೌಲ್ಯದ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

                                                                                                          ಭೀ-ಗುಡಿ ಪೊಲೀಸ್ ಠಾಣೆ
ಗುನ್ನೆ ನಂ. 71/2021 ಕಲಂ 32, 34 ಕೆ.ಇ ಎಕ್ಟ್;- ದಿನಾಂಕ: 26/09/2021 ರಂದು 01.00 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಹುರಸಗುಂಡಗಿ ಸೀಮಾಂತರದ ಸನ್ನತ್ತಿ ಬ್ರಿಜ್ ಕಂ ಬ್ಯಾರೇಜ ಹತ್ತಿರತನ್ನ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 01.10 ಪಿ.ಎಮ್ ಕ್ಕೆ ದಾಳಿ ಮಾಡಿಆರೋಪಿತನಿಗೆ ಹಿಡಿದುಆತನಿಂದ1)180 ಎಮ್.ಎಲ್.ನ 25 ಓರಿಜಿನಲ್ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 1756.50/- ರೂ, ಮೌಲ್ಯದ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 27-09-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080